ಪೊಲೀಸರ ಇಂತಹ ಪರಿಸ್ಥಿತಿಗೆ ಕಾರಣ ಹಾಗೂ ಅದನ್ನು ಹಾಗೆಯೇ ಇಟ್ಟುಕೊಳ್ಳಲು ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಆಡಳಿತ ಜವಾಬ್ದಾರಿಯಾಗಿದೆ ! ಅದನ್ನು ತಿದ್ದುಪಡಿ ಮಾಡಲು ನ್ಯಾಯಾಲಯವು ಮುಂದಾದರೆ, ಅದರಲ್ಲಿ ಏನಾದರೂ ಬದಲಾವಣೆಯಾಗುತ್ತದೆ ಎಂದು ಜನರಿಗೆ ಅನಿಸುತ್ತದೆ !
ಮದುರೈ (ತಮಿಳುನಾಡು) – ಪೊಲೀಸ್ ಪಡೆ ದೈಹಿಕ ಮತ್ತು ಮಾನಸಿಕ ಒತ್ತಡದಲ್ಲಿದೆ. ಮಕ್ಕಳ ಜನ್ಮದಿನಕ್ಕೆ ಅಥವಾ ವಿವಾಹಗಳಿಗೆ ಕೆಲಸಕ್ಕೆ ರಜೆ ನಿರಾಕರಿಸಲಾಗುತ್ತದೆ. ಪರಿಣಾಮವಾಗಿ ಅನೇಕ ಜನರು ಆತ್ಮಹತ್ಯೆಯಂತಹ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲಿಯವರೆಗೆ ಪೊಲೀಸರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗಿಲ್ಲ, ಅವರ ಕಲ್ಯಾಣವನ್ನು ನೋಡಿಕೊಳ್ಳಲಾಗುವುದಿಲ್ಲ, ಅವರ ಸ್ಥೈರ್ಯವನ್ನು ಹೆಚ್ಚಿಸುವುದಿಲ್ಲ, ಅಲ್ಲಿಯ ವರೆಗೆ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧವನ್ನು ತಡೆಯುವುದು ಅಥವಾ ಅಪರಾಧವನ್ನು ಬಹಿರಂಗಪಡಿಸುವುದು ಬಹಳ ಕಷ್ಟ ಎಂದು ಮದ್ರಾಸ ಉಚ್ಚ ನ್ಯಾಯಾಲಯ ವ್ಯಕ್ತಪಡಿಸಿದೆ. ಪೊಲೀಸ್ ಸಿಬ್ಬಂದಿ ಮತ್ತು ಇನ್ಸ್‌ಪೆಕ್ಟರ್‌ಗಳ ವೇತನ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ಮಧ್ಯಂತರ ಆದೇಶ ನೀಡುವಾಗ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅದೇರೀತಿ ನ್ಯಾಯಾಲಯ ಸರಕಾರಕ್ಕೆ ೧೮ ಅಂಶಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದೆ, ಅದೇರೀತಿ ಕಳೆದ ೧೦ ವರ್ಷಗಳಲ್ಲಿ ಎಷ್ಟು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಬಗ್ಗೆ ಡಿಸೆಂಬರ ೧೭ ರ ತನಕ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶ ನೀಡಿದೆ.
Police Force Under Stress Both Physically & Psychologically: Madras High Court Voices Concern, Poses Series Of Questions To State https://t.co/UsPqVS5bqw
— Live Law (@LiveLawIndia) December 10, 2020
ನ್ಯಾಯಾಲಯವು ಪೊಲೀಸರ ಸಂಘಟನೆ ಇಲ್ಲದ ಕಾರಣ ಅವರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ, ಪೊಲೀಸ್ ಸಿಬ್ಬಂದಿಗೆ ಪ್ರಾಥಮಿಕ ಶಿಕ್ಷಕರಿಗಿಂತ ಕಡಿಮೆ ಸಂಬಳ ನೀಡಲಾಗುತ್ತದೆ. ಕೆಲವೊಮ್ಮೆ ಪೊಲೀಸರು ದಿನದ ೨೪ ಗಂಟೆ ಕೆಲಸ ಮಾಡಬೇಕಾಗುತ್ತದೆ. ಇತರ ಸರಕಾರಿ ನೌಕರರು ವಾರದಲ್ಲಿ ೫ ದಿನ ಕೆಲಸ ಮಾಡುತ್ತಾರೆ; ಆದರೆ ಪೊಲೀಸರಿಗೆ ಎಷ್ಟೋ ದಿನ ರಜೆ ಕೂಡ ಸಿಗುವುದಿಲ್ಲ. ಪೊಲೀಸರಲ್ಲಿ ಒತ್ತಡ ನಿರ್ವಹಣೆಗೆ ಯಾವುದೇ ಯೋಜನೆ ಇಲ್ಲ. ಇದರಿಂದಾಗಿ ಪೊಲೀಸರು ತಮ್ಮ ಕೆಲಸವನ್ನು ತ್ಯಜಿಸುತ್ತಾರೆ ಅಥವಾ ಆತ್ಮಹತ್ಯೆಯಂತಹ ಹೆಜ್ಜೆಯನ್ನು ಇಡುತ್ತಾರೆ ಎಂದು ನ್ಯಾಯಾಲಯವು ಹೇಳಿದೆ.