ರಾಜ್ಯದಲ್ಲಿ ೫ ಬಾಂಗ್ಲಾದೇಶ ನಿರಾಶ್ರಿತ ಹಿಂದುಗಳಿಗೆ CAA ಮೂಲಕ ಭಾರತೀಯ ಪೌರತ್ವ !

ರಾಯಚೂರು – ಇಲ್ಲಿಯ ಆರ್.ಎಚ್. ಕ್ಯಾಂಪಿನಲ್ಲಿ ಸುಮಾರು ೨೦ ಸಾವಿರ ಬಾಂಗ್ಲಾದೇಶಿ ನಿರಾಶ್ರಿತರಿದ್ದಾರೆ. ಅವರ ಪೂರ್ವಜರು ತಲತಲಾಂತರದ ಹಿಂದೆ ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಸ್ಥಳಾಂತರವಾಗಿದ್ದರು ಮತ್ತು ಈಗ ಅವರು ರಾಯಚೂರಿನಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿನ ೫ ಜನರಿಗೆ ಪೌರತ್ವ ತಿದ್ದುಪಡಿ ಕಾನೂನಿನ (ಸಿಎಎ) ಅಂತರ್ಗತ ಭಾರತೀಯ ಪೌರತ್ವ ನೀಡಲಾಗಿದೆ. ಸಿಎಎ ಅಂತರ್ಗತ ಪೌರತ್ವ ದೊರೆತಿರುವ ರಾಜ್ಯದಲ್ಲಿನ ಇದು ಮೊದಲ ಪ್ರಕರಣವಾಗಿದೆ.

ಪ್ರಧಾನಮಂತ್ರಿ ಮೋದಿ ಇವರು ರಾಯಚೂರಕ್ಕೆ ಭೇಟಿ ನೀಡಿದಾಗ ಭಾಜಪದ ಮಾಜಿ ಸಂಸದ ವಿರುಪಾಕ್ಷಪ್ಪ ಇವರ ಮಾಧ್ಯಮದಿಂದ ನಿರಾಶ್ರಿತ ಭಾರತೀಯ ಪೌರತ್ವಕ್ಕಾಗಿ ವಿನಂತಿಸಿದ್ದರು ಮತ್ತು ಅವರ ಅಡಚಣೆಗಳನ್ನು ಮಂಡಿಸಿದ್ದರು. ಅದರ ನಂತರ ಈಗ ಅವರಿಗೆ ಪೌರತ್ವ ನೀಡಲಾಗಿದೆ. ರಾಮಕೃಷ್ಣ ಅಭಿಕರಿ, ಸುಕುಮಾರ ಮೊಂಡಲ್, ಬಿಪ್ರವಾಸ, ಜಯಂತ ಮೊಂಡಲ್ ಮತ್ತು ಅದ್ವಿತ ಎಂದು ಇವರ ಹೆಸರುಗಳಾಗಿವೆ.