ಪಾಕಿಸ್ತಾನದಲ್ಲಿನ ಹಿಂದುಗಳ ಬಗ್ಗೆ ಅಮೇರಿಕ ಎಂದಾದರು ಕನಿಕರ ತೋರಿಸಿದೆಯೇ ? – ಅಮೇರಿಕಾದಲ್ಲಿನ ಹಿಂದೂ ಸಂಘಟನೆಗಳಿಂದ ಪ್ರತ್ಯುತ್ತರ !
ವಾಷಿಂಗ್ಟನ್ (ಅಮೇರಿಕಾ) – ವಿವಾದಿತ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಜಾರಿಗೊಳಿಸಿರು ಭಾರತ ಸರಕಾರದ ನಿರ್ಣಯದಿಂದ ನನಗೆ ಬಹಳ ತೊಂದರೆ ಆಯಿತು. ವಿಶೇಷವಾಗಿ ನನಗೆ ಭಾರತದಲ್ಲಿ ವಾಸಿಸುವ ಮುಸಲ್ಮಾನ ಜನಾಂಗದ ಮೇಲೆ ಈ ಕಾನೂನಿನ ಪ್ರಭಾವದ ಬಗ್ಗೆ ಕಾಳಜಿ ಅನಿಸುತ್ತದೆ. (ಈ ಕಾನೂನಿನಲ್ಲಿ ಮುಸಲ್ಮಾನರು ಹೆದರುವ ಹಾಗೆ ಏನೂ ಇಲ್ಲ, ಇದನ್ನು ಭಾರತದಲ್ಲಿನ ಮುಸಲ್ಮಾನರೆ ಈಗ ಹೇಳುತ್ತಿರುವಾಗ ಅಮೇರಿಕಾ ಈ ರೀತಿಯ ಹಾಸ್ಯಾಸ್ಪದ ಹೇಳಿಕೆ ನೀಡಬಾರದು ! – ಸಂಪಾದಕರು) ರಮಝಾನ್ ಪವಿತ್ರ ತಿಂಗಳಲ್ಲಿ ಅದರ ಕಾರ್ಯಾಚರಣೆ ಮಾಡುತ್ತಿರುವುದರಿಂದ ಪ್ರಕರಣ ಹೆಚ್ಚು ಹುಣ್ಣಾಗಿಸುತ್ತಿದೆ, ಎಂದು ಅಮೆರಿಕಾದ ಆಢಳಿತಾರೂಢ ಡೆಮೋಕ್ರೊಟಿಕ್ ಪಕ್ಷದ ಸಂಸದ ಮತ್ತು ‘ಹೌಸ್ ಫಾರಿನ್ ಅಫೇರ್ಸ್ ಕಮಿಟಿ’ ಯ ಅಧ್ಯಕ್ಷ ಬೀನ್ ಕಾರ್ಡಿನ್ ಇವರು ಹೇಳಿಕೆ ನೀಡಿದರು. (‘ಪವಿತ್ರ’ ರಮಝಾನ್ ಸಮಯದಲ್ಲಿ ಕೂಡ ಭಾರತದ ನೆರೆಯ ಇಸ್ಲಾಮಿ ದೇಶದಲ್ಲಿ ಹಿಂದುಗಳ ಮೇಲೆ ಮತಾಂಧದಿಂದ ದೌರ್ಜನ್ಯ ನಡೆಯುತ್ತದೆ, ಇದು ಕಾರ್ಡಿನ ಇವರಿಗೆ ಕಾಣುವುದಿಲ್ಲವೇ ? – ಸಂಪಾದಕರು) ಅವರು ಮಾತು ಮುಂದುವರೆಸುತ್ತಾ, ಅಮೇರಿಕಾ ಮತ್ತು ಭಾರತದಲ್ಲಿನ ಆತ್ಮೀಯ ಸಂಬಂಧದಿಂದ ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರ ಮಾನವ ಹಕ್ಕುಗಳ ರಕ್ಷಣೆ ಮಾಡುವಲ್ಲಿ ಸಮಾನ ಮೌಲ್ಯಾಧಾರಿತದ ಕುರಿತು ನಮ್ಮ ಸಹಕಾರ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
We are astonished at the lack of empathy by the @StateDept and @USAmbIndia in opposing India’s #CAAImplemented. Instead of upholding the American values of compassion and human rights of the persecuted, they have chosen a side of political expediency pic.twitter.com/pFZGcgHlDF
— HinduPACT (@HinduPACT) March 17, 2024
೧. ಕಾರ್ಡಿನ ಇವರ ಹೇಳಿಕೆಯ ಕುರಿತು ಅಮೇರಿಕಾದಲ್ಲಿನ ಹಿಂದೂ ಸಂಘಟನೆ ‘ಹಿಂದೂ ಫ್ಯಾಕ್ಟ್’ ದ ಸಂಸ್ಥಾಪಕ ಮತ್ತು ಸಹ ಸಂಯೋಜಕ ಅಜಯ ಶಹಾ ಇವರು, ಸಿಎಎದಿಂದ ಭಾರತದಲ್ಲಿನ ಯಾವುದೇ ನಾಗರೀಕರ ಮೇಲೆ ಪರಿಣಾಮ ಬೀರುವುದಿಲ್ಲ. ಭಾರತದ ನೆರೆಯ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರೊಂದಿಗೆ ಭೇದ ಭಾವ ಮಾಡುತ್ತಾರೆ ಮತ್ತು ಅವರಿಗೆ ಕಿರುಕುಳ ನೀಡುತ್ತಾರೆ. ಅಮೇರಿಕಾ ಹೇಳಿಕೆಯಿಂದ ನಮಗೆ ನಿರಾಸೆ ಆಗಿದೆ, ಅತ್ಯಾಚಾರಿ ಜನರ ಮಾನವ ಹಕ್ಕುಗಳ ಬೆಂಬಲಕ್ಕೆ ನಿಲ್ಲುವ ಬದಲು ನಮ್ಮ ಸರಕಾರವು ಈ ಮಾನವಿಯತೆ ಪ್ರಯತ್ನಗಳಿಗೆ ವಿರೋಧಿಸುವುದನ್ನು ಆಯ್ಕೆ ಮಾಡಿ ಕೊಂಡಿದೆ ಎಂದು ಹೇಳಿದರು.
೨. ‘ಹಿಂದೂ ಫ್ಯಾಕ್ಟ್’ ದ ಸಹ ಸಂಯೋಜಕ ದೀಪ್ತಿ ಮಹಾಜನ್ ಇವರು ಮಾತನಾಡಿ, ಪಾಕಿಸ್ತಾನದಲ್ಲಿನ ಹಿಂದೂ, ಸಿಖ್ ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯದಲ್ಲಿನ ಚಿಕ್ಕ ಮಕ್ಕಳ ದುರಾವಸ್ತೆಯ ಬಗ್ಗೆ ಸಹಾನುಭೂತಿ ಇಲ್ಲದಿರುವುದು, ಇದು ಆಘಾತಕಾರಿಯಾಗಿದೆ. ‘ಯುನೈಟೆಡ್ ನೇಶನ್ ಹ್ಯೂಮನ್ ರೈಟ್ಸ್ ಕಮಿಷನ್’ ನ ಹೇಳಿಕೆಯ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿವರ್ಷ ಸರಾಸರಿ ೧೦ ವರ್ಷದ ಕೆಳಗಿನ ೧ ಸಾವಿರ ಹೆಣ್ಣು ಮಕ್ಕಳ ಅಪಹರಣ ಮಾಡಿತ್ತಾರೆ, ಅವರ ಮತಾಂತರ ಮಾಡಿ ಬಲವಂತವಾಗಿ ವಿವಾಹ ಮಾಡುತ್ತಾರೆ. ಈ ಹೃದಯವೀದ್ರಾವಕ ಅಪರಾಧದಲ್ಲಿ ಸಹಭಾಗಿ ಆಗಿರುವ ಬಗ್ಗೆ ಪಾಕಿಸ್ತಾನ ಸರಕಾರದ ನಿಷೇಧ ಮಾಡುವ ಬದಲು ವಿದೇಶಾಂಗ ಸಚಿವಾಲಯ ಈ ಅಮಾಯಕ ಸಂತ್ರಸ್ತರಿಗೆ ಸಹಾಯ ಮಾಡುವ ಭಾರತ ಸರಕಾರದ ಪ್ರಯತ್ನದ ಬಗ್ಗೆ ಟೀಕಿಸುತ್ತಿದ್ದಾರೆ’, ಎಂದು ಹೇಳಿದರು.
೩. ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ ನ ವಿ.ಎಸ್. ನಾಯಪಾಲ್ ಇವರು ಮಾತನಾಡಿ, ಸಿಎಎ ಕಾನೂನು ಜಾತ್ಯತೀತತೆ, ಶಾಂತಿ ಮತ್ತು ಮಾನವೀಯತೆ ಅಪಾಯದಲ್ಲಿರುವ ನಮ್ಮ ನೆರೆಯ ಇಸ್ಲಾಮಿ ದೇಶದಲ್ಲಿ ಅಮಾನುಷ, ಕಿರುಕುಳ, ಬಲವಂತದ ಮತಾಂತರ, ಹತ್ಯೆ, ಬಲತ್ಕಾರ ಮತ್ತು ಎಲ್ಲಾ ರೀತಿಯ ದೌರ್ಜನ್ಯಗಳು ಎದುರಿಸುತ್ತಿರುವ ಅಲ್ಪಸಂಖ್ಯಾತರ ದುರಾವಸ್ತೆಯ ಕಡೆಗೆ ಗಮನ ನೀಡುತ್ತದೆ. ಎಂದು ಹೇಳಿದರು.
ಸಂಪಾದಕೀಯ ನಿಲುವುಅಮೇರಿಕಾ ಮತ್ತು ಅಲ್ಲಿನ ಸಂಸದರು ಭಾರತದಲ್ಲಿನ ಕಾನೂನಿನ ಬಗ್ಗೆ ಮೂಗು ತೂರಿಸಬಾರದು. ಭಾರತವು ಈ ಹಿಂದೆ ಕೂಡ ಅಮೆರಿಕಾಗೆ ಇದನ್ನು ಹೇಳಿದ್ದರೂ ಅಮೆರಿಕಾಗೆ ತಿಳಿಯದಿದ್ದರೇ ಭಾರತ ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕು ! |