ಪಾಕಿಸ್ತಾನದ ಮೇಲಿನ ಆಕ್ರಮಣದ ನೀತಿಯನ್ನು ನಿರ್ಧರಿಸುವುದು ಆವಶ್ಯಕ !

ಪಾಕಿಸ್ತಾನವು ಜಮ್ಮು-ಕಾಶ್ಮೀರದ ಗುರೇಝದಿಂದ ಉರಿ ಕ್ಷೇತ್ರದ ಗಡಿ ನಿಯಂತ್ರಣ ರೇಖೆಯ ಹತ್ತಿರ ಕದನವಿರಾಮವನ್ನು ಉಲ್ಲಂಘಿಸಿ, ಶೆಲ್ ದಾಳಿ ನಡೆಸಿದ್ದರಿಂದ ಕೆಲವು ಭಾರತೀಯ ನಾಗರಿಕರ ಸಹಿತ ಸೈನಿಕರೂ ಹುತಾತ್ಮರಾದರು. ಇದಕ್ಕೆ ಭಾರತೀಯ ಸೈನಿಕರು ತಕ್ಕಪ್ರತ್ಯುತ್ತರ ನೀಡಿ ಪಾಕಿಸ್ತಾನದ ೧೧ ಜನ ಸೈನಿಕರ ಹತ್ಯೆ ಹಾಗೂ ಅವರ ಸೈನಿಕರ ಅನೇಕ ಬಂಕರ್‌ಗಳನ್ನು ಮತ್ತು ಭಯೋತ್ಪಾದಕರ ನೆಲೆಗಳನ್ನು ನಾಶಗೊಳಿಸಿರುವುದು ಅಭಿನಂದನಾರ್ಹವಾಗಿದೆ. ಹೀಗಿದ್ದರೂ, ಪಾಕಿಸ್ತಾನದ ಈ ಆಕ್ರಮಣದಲ್ಲಿ ಇತ್ತೀಚೆಗೆ ಸಾಮಾನ್ಯ ನಾಗರಿಕರು  ಬಲಿಯಾಗುತ್ತಿರುವುದು ಚಿಂತಾಜನಕವಾಗಿದೆ. ಪಾಕಿಸ್ತಾನವು ಜನವಸತಿ ಪ್ರದೇಶಗಳನ್ನು ಮಾತ್ರ ಗುರಿಯಾಗಿಸಿ ಕೊಂಡಿದೆ, ಎಂದು ರಕ್ಷಣಾ ದಳದ ಶ್ರೀನಗರದ ವಕ್ತಾರರಾದ ಕರ್ನಲ್ ರಾಜೇಶ ಕಾಲಿಯಾ ಇವರು ಮಾಹಿತಿ ನೀಡಿದ್ದಾರೆ. ಇದರಿಂದ ಕೇವಲ ತಕ್ಕ ಪ್ರತ್ಯುತ್ತರವೆಂದು ಕೈಗೊಂಡ ಕ್ರಮವು ಪಾಕಿಸ್ತಾನವನ್ನು ಸ್ವಲ್ಪ ಕಾಲಾವಧಿಗಾಗಿ ಆಕ್ರಮಣದಿಂದ ವಿಮುಖಗೊಳಿಸಿದರೂ ಅದು ಶಾಶ್ವತ ಪರಿಹಾರವಾಗಲಾರದು, ಎಂಬುದು ತಿಳಿಯುತ್ತದೆ.

ಅಲ್ಪಸಂತುಷ್ಟಿ ಬೇಡ !

ಉತ್ತರ ಕಾಶ್ಮೀರದ ಕುಪ್ವಾಡಾ ಜಿಲ್ಲೆಯ ಕೇರನ್ ಕ್ಷೇತ್ರದ ಗಡಿ ನಿಯಂತ್ರಣ ರೇಖೆಯ ಬಳಿ ನಡೆದ ಸಂಶಯಾಸ್ಪದ ಚಟುವಟಿಕೆಗಳನ್ನು ಸೈನಿಕರು ಸದೆಬಡಿದರು. ಈ ವಾರದಲ್ಲಿ ಇದು ನುಸುಳುವಿಕೆಯ ಎರಡನೇಯ ಪ್ರಯತ್ನವಾಗಿದೆ. ಈ ಹಿಂದೆ ೭ ಮತ್ತು ೮ ನವೆಂಬರ್‌ದಂದು ರಾತ್ರಿ ಮಚಿಲ್‌ನಲ್ಲಿ ನುಸುಳಲು ಪ್ರಯತ್ನಿಸುತ್ತಿದ್ದ ಮೂವ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು. ಪಾಕಿಸ್ತಾನವು ಯಾವಾಗಲೂ ಗಡಿರೇಖೆಯ ಬಳಿ ಎಲ್ಲ ಸ್ಥಳಗಳಲ್ಲಿಯೂ ಈ ರೀತಿಯ ಉದ್ವಿಗ್ನ ಸ್ಥಿತಿ ಉಂಟು ಮಾಡುತ್ತದೆ. ಈ ವಾತಾವರಣವೆಂದರೆ ಭಾರತೀಯ ಸೈನ್ಯದ ಮೇಲಷ್ಟೇ ಅಲ್ಲ, ಗಡಿರೇಖೆಯಲ್ಲಿರುವ ಊರುಗಳಲ್ಲಿರುವ ಜನರ ಮತ್ತು ಸಂಪೂರ್ಣ ಭಾರತೀಯರ ಮೇಲಿನ ತೂಗುಗತ್ತಿಯೇ ಆಗಿದೆ. ಒಂದು ಕಡೆಯಿಂದ ಗೋಲಿಬಾರ ಅಥವಾ ಶೆಲ್ ದಾಳಿ ನಡೆಸಿ ಭಾರತೀಯ ಸೈನಿಕರ ಗಮನ ಸೆಳೆದರೆ ಇನ್ನೊಂದು ಕಡೆಯಿಂದ ಭಯೋತ್ಪಾದಕರಿಗೆ ಗಡಿರೇಖೆಯೊಳಗೆ ನುಸುಳಲು ಸಾಧ್ಯವಾಗುತ್ತದೆ. ಇದು ಪಾಕಿಸ್ತಾನದ ಹಳೆಯ ಕುತಂತ್ರವಾಗಿದೆ. ಇದು ಭಾರತಕ್ಕೆ ತಿಳಿದಿದ್ದರೂ, ಅದರ ಮೇಲೆ ನಿರ್ದಿಷ್ಟ ಪರಿಹಾರವನ್ನು ಇದುವರೆಗೂ ಕಂಡು ಹಿಡಿದಿಲ್ಲ. ಉರಿ ಮತ್ತು ಪುಲ್ವಾಮಾದಲ್ಲಿ ಭಾರತೀಯ ಸೇನಾ ನೆಲೆಗಳ ಮೇಲೆ ಭಯೋತ್ಪಾದಕರ ಆಕ್ರಮಣವಾದ ಬಳಿಕ ಭಾರತವು ‘ಸರ್ಜಿಕಲ್ ಸ್ಟ್ರೈಕ್ ಮತ್ತು ‘ಏರ್ ಸ್ಟ್ರೈಕ್ ನಡೆಸಿತು. ಅದರಲ್ಲಿ ಪಾಕಿಸ್ತಾನದ ಗಡಿರೇಖೆ ಯಲ್ಲಿರುವ ಊರುಗಳಲ್ಲಿದ್ದ ಭಯೋತ್ಪಾದಕರ ನೆಲೆಗಳನ್ನು ನಾಶಗೊಳಿಸಿ ಭಾರತೀಯ ಸೈನ್ಯವು ತನ್ನ ಸಾಮರ್ಥ್ಯವನ್ನು ತೋರಿಸಿತು. ತದನಂತರ ಭಾರತೀಯರ ಎದೆ ಅಭಿಮಾನದಿಂದ ಉಬ್ಬಿತ್ತು. ನಂತರ ‘ಸರ್ಜಿಕಲ್ ಸ್ಟ್ರೈಕ್ನ ಮೇಲೆ ಒಂದು ಚಲನಚಿತ್ರ ಮೂಡಿ ಬಂದಿತು ಮತ್ತು ಅದನ್ನೂ ಭಾರತೀಯರು ಹೆಮ್ಮೆಯಿಂದ ವೀಕ್ಷಿಸಿದರು. ನಾವು ಪ್ರತಿದಿನ ಪಾಕಿಸ್ತಾನದೊಂದಿಗೆ ಚಿಕ್ಕಪುಟ್ಟ ಯುದ್ಧವನ್ನು ಮಾಡುತ್ತಿರುವುದು, ಪಾಕಿಸ್ತಾನವು ನಾಗರಿಕರ ವಸತಿಗಳ ಮೇಲೆ ಆಕ್ರಮಣ ನಡೆಸಿದಾಗ, ನಾವು ಭಯೋತ್ಪಾದಕರ ಒಂದು ನೆಲೆಯನ್ನು, ಕೆಲವು ಬಂಕರ್ಸಗಳನ್ನು ನಾಶಗೊಳಿಸಿ ಸಮಾಧಾನ ಪಟ್ಟುಕೊಳ್ಳುವುದು ಬಳಿಕ ಯಾರಾದರೂ ಚಲನಚಿತ್ರವನ್ನು ನಿರ್ಮಿಸಿದಾಗ ಅದನ್ನು ಹೊಗಳುತ್ತ ವೀಕ್ಷಿಸುವುದು ಮತ್ತು ಕಾಲ್ಪನಿಕ ವಿಜಯದ ಸುಖವನ್ನು ಅನುಭವಿಸುವುದು, ಹೀಗೆಯೇ ಮಾಡುತ್ತಿರುವುದೇ ?

ಪಾಕಿಸ್ತಾನವನ್ನು ಸಂಪೂರ್ಣ ನಿರ್ನಾಮ ಮಾಡಲು ಕೂಟನೀತಿಯನ್ನು ಅವಲಂಬಿಸಬೇಕು !

ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ಇಸ್ರೇಲ್, ಫ್ರಾನ್ಸ್ ಮುಂತಾದ ದೇಶಗಳ ಸಹಾಯ ಸಿಗಬಹುದು, ಆದರೆ ಅಂತರರಾಷ್ಟ್ರೀಯ ಸ್ತರದಲ್ಲಿ ಭಾರತಕ್ಕೆ ಹಾನಿಯಾಗ ಬಹುದು, ಹಾಗೆಯೇ ದೇಶದಲ್ಲಿ ಗೃಹಯುದ್ಧ ಭುಗಿಲೇಳ ಬಹುದು ಎಂದು ಒಂದು ರಾಜಕೀಯ ಮಟ್ಟದ ಮತ್ತು ಈ ಕ್ಷೇತ್ರದ ತಜ್ಞರ ಲೆಕ್ಕಾಚಾರವಿದೆ. ಅದು ಸತ್ಯವೇ ಆಗಿದೆ, ಆದರೆ ಗಡಿರೇಖೆಯಲ್ಲಿ ಕಳೆದ ಎಷ್ಟೋ ವರ್ಷಗಳಿಂದ ತೆರೆಮರೆಯಲ್ಲಿ ನಡೆದಿರುವ ಯುದ್ಧವು ಇಂದಲ್ಲ ನಾಳೆಯಾದರೂ ಅಂತ್ಯವಾಗಲೇ ಬೇಕು. ಭಾರತವು ತನ್ನನ್ನು ಸಂರಕ್ಷಿಸಿಕೊಳ್ಳುವ ಸಿದ್ಧತೆಯನ್ನು ಮಾಡಲೇಬೇಕು. ಅದರ ಜೊತೆಗೆ ಆ ಅಕ್ಕಪಕ್ಕದ ರಾಷ್ಟ್ರಗಳು ಸಹ ಭಾರತದೊಂದಿಗೆ ಶಾಂತಿಯ ಧೋರಣೆ ಅವಲಂಬಿಸಬೇಕೆಂಬ ಮಾನಸಿಕತೆಯನ್ನು ಇಟ್ಟುಕೊಳ್ಳುವಂತಹ ಅನಿವಾರ್ಯತೆಯನ್ನು ಸಹ ಮೂಡಿಸಬೇಕು. ಇತ್ತೀಚೆಗೆ ನೇಪಾಳವು ಚೀನಾ ದೇಶದ ಆಕ್ರಮಣಕಾರಿ ನಡುವಳಿಕೆಯನ್ನು ನೋಡಿ ತಾನೂ ಭಾರತದೆಡೆಗೆ ವಕ್ರದೃಷ್ಟಿ ಬೀರಲು ಪ್ರಯತ್ನಿಸುತ್ತಿತ್ತು. ತದನಂತರ ಭಾರತದ ಭೂಸೇನೆಯ ಮುಖ್ಯಸ್ಥರು ನೇಪಾಳಕ್ಕೆ ಭೇಟಿ ನೀಡಿದ ಬಳಿಕ ಚಿತ್ರಣ ಬದಲಾಯಿತು ಮತ್ತು ಚೀನಾ ದೇಶವೇ ನೇಪಾಳದಲ್ಲಿ ನುಸುಳಿದೆಯೆಂದು ನೇಪಾಳವು ಒಪ್ಪಿಕೊಂಡಿತು. ಈ ರೀತಿಯ ಕೂಟನೀತಿಯನ್ನು ಉಪಯೋಗಿಸಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಬ್ರಹ್ಮದೇಶ (ಮ್ಯಾನ್ಮಾರ) ಇತ್ಯಾದಿ ಅಕ್ಕಪಕ್ಕದ ಚಿಕ್ಕ ರಾಷ್ಟ್ರಗಳು ಭಾರತದೊಂದಿಗೆ ಶಾಂತಿಯ ಸಂಬಂಧ ಕಾಪಾಡುವಂತೆ ಮಾಡಬಹುದು; ಆದರೆ ಪಾಕಿಸ್ತಾನದಂತಹ ಭಯೋತ್ಪಾದಕರನ್ನು ಪೋಷಿಸುವ ದೇಶವನ್ನು ಸರಿದಾರಿಗೆ ತರಲೇ ಬೇಕು ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣವನ್ನು ಮಾಡಲು ಸಾಧ್ಯವಾಗುವಂತಹ ಅಂತರರಾಷ್ಟ್ರೀಯ ಸ್ತರದ ವಾತಾವರಣವನ್ನು ಮೂಡಿಸುವ ಕೂಟನೀತಿಯನ್ನು  ಅವಲಂಬಿಸಬೇಕಾಗುವುದು.

ಪಾಕಿಸ್ತಾನದ ಸಹಾಯಕರ ಮೇಲೆ ಯಾವಾಗ ಕ್ರಮ ತೆಗೆದುಕೊಳ್ಳುವುದು?

ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ಭಾರತದಲ್ಲಿ ಗೃಹಯುದ್ಧದ ಸ್ಥಿತಿ ಉದ್ಭವಿಸುತ್ತದೆ ಎಂದರೆ ಇದು ನಮ್ಮ ದೇಶಕ್ಕೆ ನಾಚಿಕೆಗೇಡಿನ ವಿಷಯವಾಗಿದೆ. ಇದರರ್ಥ ಪಾಕಿಸ್ತಾನದ ಸಮರ್ಥಕರು ಮತ್ತು ಅವರ ಬೆಂಬಲಿಗರು ಭಾರತದಲ್ಲಿದ್ದಾರೆ ಎಂದು ಹೇಳಿದರೆ ಅದರಲ್ಲಿ ತಪ್ಪೇನಿಲ್ಲ. ಪಾಕಿಸ್ತಾನದ ಬೆಂಬಲಿಗರು ಭಾರತದಲ್ಲಿದ್ದಾರೆ ಎನ್ನುವುದು ಇತ್ತೀಚೆಗಷ್ಟೇ ಮತ್ತೊಂದು ಘಟನೆಯಿಂದ ಸಿದ್ಧವಾಯಿತು. ೨೦೦೮ ನೇ ಇಸ್ವಿಯಲ್ಲಿ ೨೬/೧೧ರ ಹೆಸರಿನಿಂದ ಗುರುತಿಸಲಾಗುವ ಮುಂಬಯಿಯ ಮೇಲಿನ ಭಯೋತ್ಪಾದಕ ದಾಳಿಯ ಸಮಯದಲ್ಲಿ ಪೊಲೀಸ ಕಾನ್ಸಟೇಬಲ್ ತುಕಾರಾಮ ಓಂಬಳೆ ತನ್ನ ಜೀವವನ್ನು ಪಣಕ್ಕಿಟ್ಟು ಅಜ್ಮಲ್ ಕಸಬನನ್ನು ಜೀವಂತ ಸೆರೆಹಿಡಿದು ಕೊಟ್ಟಿದ್ದರಿಂದಲೇ ಈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಸಾಬೀತಾಯಿತು; ಆದರೆ ಮಾಜಿ ಪೊಲೀಸ್ ಮಹಾನಿರೀಕ್ಷಕ ಎಸ್.ಎಮ್. ಮುಶ್ರೀಫ್ ಇವರು ‘ಹೂ ಕಿಲ್ಡ್ ಕರಕರೆ? ಈ ಪುಸ್ತಕವನ್ನು ಬರೆಯುವಾಗ ‘ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯು ಹಿಂದುತ್ವನಿಷ್ಠರು ಆಗಿನ ಭಯೋತ್ಪಾದನಾ ನಿಗ್ರಹ ದಳದ ಪ್ರಮುಖರಾದ ಹೇಮಂತ ಕರಕರೆ ಇವರನ್ನು ಕೊಲ್ಲಲು ರಚಿಸಿದ ಷಡ್ಯಂತ್ರವಾಗಿತ್ತು, ಎಂದು ಸುಳ್ಳು ಹೇಳಿ ತಮ್ಮ ಪಾಕ್ ಪ್ರೇಮ ಮತ್ತು ಹಿಂದೂ ದ್ವೇಷವನ್ನು ತೋರಿಸಿಕೊಟ್ಟರು. ಇತ್ತೀಚೆಗಷ್ಟೇ ಪಾಕಿಸ್ತಾನವು ‘ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನವೇ ಮಾಡಿತ್ತು, ಎಂದು ಒಪ್ಪಿಕೊಂಡಿದೆ. ಈ ಒಪ್ಪಿಗೆಯು ಮುಶ್ರೀಫ ಮತ್ತು ಅವರ ಬೆಂಬಲಿಗರು ಸುಳ್ಳು ಮಾತನಾಡುತ್ತಿದ್ದಾರೆ ಎಂದು ಸಾಬೀತು ಪಡಿಸಲು ಸಾಕಾಗಿದೆ; ಆದರೆ ದುರ್ದೈವದ ವಿಷಯವೆಂದರೆ, ಇಂತಹ ಹೇಳಿಕೆಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ‘ಹೂ ಕಿಲ್ಡ್ ಕರಕರೆ ? ಅಥವಾ ‘ಶಾಡೋ ಆರ್ಮಿ, ಈ ಹಿಂದೂದ್ವೇಷಿ ಪುಸ್ತಕಗಳನ್ನು ನಮ್ಮ ದೇಶದಲ್ಲಿ ನಿಷೇಧಿಸುತ್ತಿಲ್ಲ. ಈ ಪುಸ್ತಕಗಳು ರಾಷ್ಟ್ರ ವಿರೋಧಿ ಮತ್ತು ಪಾಕಿಸ್ತಾನ ಪರವಾಗಿವೆ ಎಂದು ಯಾರಿಗೂ ಅನಿಸುತ್ತಿಲ್ಲವೇ ? ಕೆಲವು ಜನರಿಗೆ ಈ ರೀತಿ ಅನಿಸುತ್ತಿದ್ದರೂ, ಇಂತಹ ಜನರ ರಾಷ್ಟ್ರವಿರೋಧವನ್ನು ಸಾಬೀತುಪಡಿಸಲು ಯಾರೂ ಮುಂದಾಳತ್ವವನ್ನು ತೆಗೆದುಕೊಂಡು ಕೃತಿ ಮಾಡುವುದು ಕಂಡು ಬರುವುದಿಲ್ಲ.  ಮುಶ್ರೀಫ್ ಇವರು ಪುಸ್ತಕದಲ್ಲಿ ೨೬/೧೧ ಆಕ್ರಮಣಕ್ಕಾಗಿ ಹಿಂದೂಗಳನ್ನು ಜವಾಬ್ದಾರರನ್ನಾಗಿ ಮಾಡಿ ಪಾಕಿಸ್ತಾನದ ಪರ ವಹಿಸಿಕೊಂಡಿಲ್ಲವೇ ? ಹೀಗಿರುವಾಗ ಅವರಂತೆ ಪಾಕಿಸ್ತಾನ ಸಮರ್ಥಕರ, ರಾಷ್ಟ್ರವಿರೋಧಿ ಜನರ ವಿರುದ್ಧ ಏಕೆ ಕ್ರಮ ಕೈಕೊಳ್ಳಲಾಗುತ್ತಿಲ್ಲ ? ಈ ಕಾರಣದಿಂದಲೇ ಭಾರತದಲ್ಲಿ ಪಾಕಿಸ್ತಾನ ಬೆಂಬಲಿಗರು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಮುಶ್ರೀಫರಂತಹ  ಪೊಲೀಸ್ ಮಹಾನಿರೀಕ್ಷಕರ ಹುದ್ದೆಯಲ್ಲಿರುವ ವ್ಯಕ್ತಿ ಪಾಕಿಸ್ತಾನ ಸಮರ್ಥಕರಾಗಿದ್ದಾರೆ. ಮುಶ್ರೀಫ್‌ರಂತಹ ಪಾಕಿಸ್ತಾನ ಸಮರ್ಥಕರು, ಭಯೋತ್ಪಾದನೆಯ ಆರೋಪವಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ, ಐಸಿಸ್ ಬಾವುಟಗಳನ್ನು ಹಿಡಿದು ಮೋರ್ಚಾಗಳನ್ನು ತೆಗೆಯುವವರು, ಭಯೋತ್ಪಾದನೆಯನ್ನು ವಿರೋಧಿಸುವ ಫ್ರಾನ್ಸ್ ದೇಶದ ವಿರುದ್ಧ ಸಭೆಗಳನ್ನು ನಡೆಸುವ ಕಾಂಗ್ರೆಸ್‌ನ ಮತಾಂಧ ರಾಜಕಾರಣಿಗಳಂತಹ ಭಯೋತ್ಪಾದನೆಯನ್ನು ಸಮರ್ಥಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಇದರಿಂದಲೇ ಪಾಕಿಸ್ತಾನದ ಮೇಲೆ ಆಕ್ರಮಣ ನಡೆಸಿದಾಗ ಭಾರತದಲ್ಲಿ ಗೃಹಯುದ್ಧ ಭುಗಿಲೇಳುವ ಸಾಧ್ಯತೆಯಿದೆ ಮತ್ತು ಅದು ಹೆಚ್ಚಾಗುತ್ತಿದೆ. ಒಂದಲ್ಲ ಒಂದು ದಿನ ಪಾಕಿಸ್ತಾನದ ಮೇಲೆ ಯುದ್ಧವನ್ನು ಸಾರಬೇಕಾಗುವುದು ಮತ್ತು ಅದರೊಂದಿಗೆ ದೇಶದಲ್ಲಿ ಪಾಕಿಸ್ತಾನ ಬೆಂಬಲಿಗರು ಭುಗಿಲೇಳುವರು, ಇದು ಕಪ್ಪು ಕಲ್ಲಿನ ಮೇಲಿನ ಕೊರೆದ ಗೆರೆಯಾಗಿದೆ. ಆ ದಿನವು ಹೇಳಿ ಕೇಳಿ ಬರುವುದಿಲ್ಲ, ಆದುದರಿಂದ ಭಾರತೀಯರು ಅದಕ್ಕಾಗಿ ಈಗಿನಿಂದಲೇ ಎಲ್ಲ ಸ್ತರದಲ್ಲಿಯೂ ಸಿದ್ಧತೆಗಳನ್ನು ಮಾಡುವುದು ಆವಶ್ಯಕವಾಗಿದೆ.