ಟ್ರಂಪ್‌ನ ಬಂಡಾಯ !

ಡೊನಾಲ್ಡ್ ಟ್ರಂಪ್

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯ ತೀರ್ಪು ಬಂದಿತು ಹಾಗೂ ಜೋ ಬಾಯಡೆನ್ ಇವರು ೨೦೨೧ ರ ಜನವರಿ ೨೦ ರಂದು ಅಮೇರಿಕಾದ ೪೬ ನೇ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ; ಆದರೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಡಾಯದ ಸಂದೇಶವನ್ನು ನೀಡಿದ್ದರಿಂದ ಅಮೇರಿಕಾದಲ್ಲಿ ಕೋಲಾಹಲವೆದ್ದಿದೆ. ಅಮೇರಿಕಾದಂತಹ ಹಳೆಯ ಮತ್ತು ದೊಡ್ಡ ಪ್ರಜಾ ಪ್ರಭುತ್ವ ದೇಶದಲ್ಲಿ ಈ ರೀತಿ ನಡೆಯುವುದು ಆಶ್ಚರ್ಯಕರವಾಗಿದೆ ಎಂದು ಹೇಳಬಹುದು. ಈ ಹಿಂದೆ ಯುರೋಪ್ ಮತ್ತು ಇತರ ದೇಶಗಳಲ್ಲಿ ಇಂತಹ ಘಟನೆಗಳು ಸಂಭವಿಸಿವೆ. ಈಗ ಮಹಾಶಕ್ತಿ ಅಮೇರಿಕಾದಲ್ಲೂ ಇದೇ ಆಗುವ ಸಾಧ್ಯತೆ ಇದೆ. ಇದು ಮೂರನೇ ಮಹಾಯುದ್ಧದ ಪ್ರಾರಂಭ ಎಂದು ಹೇಳಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಟ್ರಂಪ್ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಯಾದಾಗಲೇ ಒಂದು ಭವಿಷ್ಯಕ್ಕನುಸಾರ ‘ಡೊನಾಲ್ಡ್ ಟ್ರಂಪ್ ಅಮೇರಿಕಾದ ಕೊನೆಯ ರಾಷ್ಟ್ರಾಧ್ಯಕ್ಷರಾಗಲಿದ್ದಾರೆ ಎಂದು ಒಂದು ಮುನ್ಸೂಚನೆಯನ್ನು ನೀಡಲಾಗಿತ್ತು. ಆದರೆ ಈಗ ಅವರ ಪರಾಜಯವಾಗಿ ಬಾಯಡೆನ್ ಗೆದ್ದಿದ್ದಾರೆ, ‘ಬಾಯಡೆನ್ ಮುಂದಿನ ರಾಷ್ಟ್ರಾಧ್ಯಕ್ಷರಾಗಲಿದ್ದಾರೆ, ಎಂಬುದು ಸ್ಪಷ್ಟವಾದ ನಂತರ ಈ ಭವಿಷ್ಯ ಸುಳ್ಳಾಯಿತು, ಎಂದು ಅನಿಸುತ್ತಿರುವಾಗ ಟ್ರಂಪ್ ಇವರು ಬಂಡಾಯವೇಳಲು ಪ್ರಾರಂಭಿಸಿದ್ದಾರೆ. ಆದ್ದರಿಂದ ‘ಈ ಭವಿಷ್ಯ ನಿಜವಾಗಬಹುದೇ ? ಹಾಗೂ ಭವಿಷ್ಯದಲ್ಲಿ ಅಮೇರಿಕಾ ಹಾಗೂ ಜಗತ್ತಿನೆದುರು ಯಾವ ಗಂಡಾಂತರ ಕಾದಿದೆ ಎಂಬುದರ ಬಗ್ಗೆ ವಿಚಾರ ಮಾಡುವ ಆವಶ್ಯಕತೆಯು ಉಂಟಾಗಿದೆ.

ಡೊನಾಲ್ಡ್ ಟ್ರಂಪ್ ಅವರು ಆರಂಭದಿಂದಲೇ ಬಾಯಡನ್ ಇವರು ಮತ ಏಣಿಕೆಯ ಸಮಯದಲ್ಲಿ ಅಕ್ರಮವಾಗಿ ಜಯ ಸಾಧಿಸಿದ್ದಾರೆ ಎಂದು ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಅವರು ನ್ಯಾಯಾಲಯಕ್ಕೂ ಹೋದರು; ಆದರೆ ಅಲ್ಲಿ ಅವರು ವಿಫಲರಾದರು. ಈಗ ಅವರು ಹೊಸ ಆಟವನ್ನು ಆಡುತ್ತಾ ಅಮೆರಿಕದ ಅಧಿಕಾರವನ್ನು ತನ್ನಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಅಮೇರಿಕಾದ ರಕ್ಷಣಾ ವಿಭಾಗ ಪೆಂಟಗನ್‌ನಲ್ಲಿ ಹಲವಾರು ಪ್ರಮುಖ ಸ್ಥಾನಗಳಲ್ಲಿದ್ದ ವ್ಯಕ್ತಿಗಳನ್ನು ವರ್ಗಾಯಿಸಿ ಅಲ್ಲಿ ತಮ್ಮ ಹತ್ತಿರದವರನ್ನು ಕೂರಿಸಲು ಆರಂಭಿಸಿದ್ದಾರೆ. ಪೆಂಟಗನ್ ಸೈನ್ಯ ಕಾರ್ಯಾಚರಣೆಗೆ ಸಂಬಂಧಿಸಿದ್ದರಿಂದ ಆ ಮೂಲಕ ಅವರು ಅಮೇರಿಕಾವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇಚ್ಛಿಸುತ್ತಿರುವುದು ಗಮನಕ್ಕೆ ಬರುತ್ತದೆ. ಅದಕ್ಕಾಗಿ ಅವರು ರಕ್ಷಣಾ ಸಚಿವ ಮಾರ್ಕ್ ಆಸ್ಪರ್ ಅವರನ್ನು ಸಹ ವಜಾ ಮಾಡಿದ್ದಾರೆ. ಅದೇ ಸಮಯದಲ್ಲಿ ಅಮೇರಿಕಾದ ನಿಯಮಗಳ ಅಡಿಯಲ್ಲಿ ಆಡಳಿತಾತ್ಮಕ ಭಾಗವನ್ನು ಹೊಸದಾಗಿ ನೇಮಕಗೊಂಡ ಅಧ್ಯಕ್ಷರ ಹಸ್ತಾಂತರ ತಂಡಕ್ಕೆ ಹಸ್ತಾಂತರಿಸಲು ಅವರು ನಿರಾಕರಿಸಿದ್ದಾರೆ. ಇದು ದೊಡ್ಡ ಘಟನೆಯಾಗಿದೆ. ಅದೇ ಸಮಯದಲ್ಲಿ, ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು, ‘ಅಧಿಕಾರದ ಹಸ್ತಾಂತರ ಶಾಂತಿಯುತವಾಗಿ ಆಗಲಿದೆ; ಆದರೆ ಡೊನಾಲ್ಡ್ ಟ್ರಂಪ್ ಇವರೇ ರಾಷ್ಟ್ರಾಧ್ಯಕ್ಷರಾಗಲಿದ್ದಾರೆ. ಹೊಸ ಸರಕಾರ ರಚನೆಯ ಹಂತದಲ್ಲಿದೆ, ಎಂದಿದ್ದಾರೆ. ಇದರಿಂದ ಇದು ಬಹಿರಂಗವಾಗಿ ಬಂಡಾಯವೇ ಆಗಿದೆ, ಎಂಬುದು ಸ್ಪಷ್ಟವಾಗುತ್ತದೆ. ‘ಅಮೇರಿಕಾದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂದು ಗಮನದಲ್ಲಿಡಬೇಕು. ಟ್ರಂಪ್ ಮೂಲತಃ ತೀವ್ರವಾದಿ ಮತ್ತು ಆಕ್ರಮಣಕಾರಿಯೂ ಆಗಿದ್ದಾರೆ. ಆದ್ದರಿಂದ ಅವರು ಮುಂದೆ ಏನು ನಿರ್ಧರಿಸುವರು, ಎಂಬುದರಿಂದ ಭಯದ ವಾತಾವರಣವನ್ನೂ ಸೃಷ್ಟಿಸಿದೆ. ಮುಂದಿನ ಅಧಿಕಾರ ತಮ್ಮಲ್ಲಿಯೇ ಇರಬೇಕು; ಆದ್ದರಿಂದ ಟ್ರಂಪ್ ಮೂರನೇ ಮಹಾಯುದ್ಧವನ್ನು ಸಹ ನಡೆಸಬಹುದು ಎಂದು ಹೇಳಲಾಗುತ್ತಿದೆ. ಒಮ್ಮೆ ಯುದ್ಧ ಪ್ರಾರಂಭವಾದರೆ, ಅದರ ಹೆಸರಿನಲ್ಲಿ ಅಧಿಕಾರವನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಅದು ಸಂಭವಿಸಿದಲ್ಲಿ ಅದು ಜಗತ್ತನ್ನು ಬಹುದೊಡ್ಡ ಅಪಾಯಕ್ಕೆ ಹಾಗೂ ಸಂಕಷ್ಟಕ್ಕೀಡು ಮಾಡಲಿದೆ.

ಮೂಲತಃ ಮೂರನೆಯ ಮಹಾಯುದ್ಧವು ವಿಧಿಲಿಖಿತವಾಗಿರುವುದರಿಂದ, ಅದನ್ನು ಯಾರು ಪ್ರಾರಂಭಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಟ್ರಂಪ್ ಅವರ ಮನಸ್ಥಿತಿಯನ್ನು ಗಮನಿಸಿದರೆ, ಚೀನಾದೊಂದಿಗೆ ನೇರ ಯುದ್ಧದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಾಯಡೆನ್ ಚೀನಾದ ಆಪ್ತರಾಗಿದ್ದು ಬಾಯಡೆನ್ ಆಯ್ಕೆಯಾದರೆ ಚೀನಾ ಅಮೇರಿಕಾವನ್ನು ಆಳಬಹುದು ಎಂದು ಅವರು ಈ ಹಿಂದೆ ಆರೋಪಿಸಿದ್ದರು. ಟ್ರಂಪ್ ಅಂತಹದ್ದೇನಾದರೂ ಮಾಡಬಹುದು ಎಂದು ಹೇಳಿದರೆ ತಪ್ಪಾಗಲಾರದು.