ಉತ್ತರಪ್ರದೇಶ, ಹರ್ಯಾಣಾ, ಮಧ್ಯಪ್ರದೇಶ ಹಾಗೂ ಈಗ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳು ‘ಲವ್ ಜಿಹಾದ್ನ ವಿರುದ್ಧ ಕಾನೂನು ರಚಿಸುವುದಾಗಿ ಘೋಷಿಸಿದ್ದಾರೆ. ಹಿಂದೂಗಳ ಲಕ್ಷಗಟ್ಟಲೆ ಕನ್ಯೆಯರ ಜೀವನ ಧ್ವಂಸವಾದ ಮೇಲಾದರೂ, ಈಗ ಕೆಲವು ರಾಜ್ಯಗಳಲ್ಲಿಯಾದರೂ ಅವರಿಗೆ ನ್ಯಾಯ ಸಿಗುವಂತಹ ಚಿಹ್ನೆ ಕಂಡುಬರುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯು ೧೫ ವರ್ಷಗಳ ಹಿಂದೆಯೇ ‘ಲವ್ ಜಿಹಾದ್ನ ವಿರುದ್ಧ ತೀವ್ರ ಧ್ವನಿಯೆತ್ತಿ ದೊಡ್ಡ ಪ್ರಮಾಣದಲ್ಲಿ ಆಂದೋಲನವನ್ನು ಆರಂಭಿಸಿತು ಹಾಗೂ ಅದರ ಗಾಂಭೀರ್ಯವನ್ನು ಜನರಿಗೆ ಮನದಟ್ಟು ಮಾಡಲು ಆರಂಭಿಸಿತು. ಕ್ರಮೇಣ ಇತರ ಹಿಂದುತ್ವನಿಷ್ಠರು ಸಹ ಜಾಗರೂಕರಾದರು ಹಾಗೂ ನೋಡನೋಡುತ್ತಿದ್ದಂತೆ ಇಂತಹ ಸಾವಿರಾರು ಅಲ್ಲ, ಲಕ್ಷಗಟ್ಟಲೆ ಪ್ರಕರಣಗಳು ದೇಶದಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿತು. ಆದ್ದರಿಂದ ಇದು ನಿಯೋಜನಾಬದ್ಧವಾಗಿತ್ತು, ಎಂಬುದನ್ನು ಎಲ್ಲರೂ ಸಹಜವಾಗಿ ಗುರುತಿಸಬಹುದು. ಕೇರಳದ ನ್ಯಾಯಾಲಯವೇ ‘ಲವ್ ಜಿಹಾದ್ನ ಗಾಂಭೀರ್ಯವನ್ನು ಹೇಳಿದರೂ, ‘ಎಲ್ಲಿದೆ ‘ಲವ್ ಜಿಹಾದ್ ? ಎಂದು ಪ್ರಶ್ನಿಸುವ ಜನಪ್ರತಿನಿಧಿಗಳು ಈ ದೇಶಕ್ಕೆ ಲಭಿಸಿರುವುದು ನಮ್ಮ ದೌರ್ಭಾಗ್ಯ. ಆದರೆ ೪ ರಾಜ್ಯಗಳು ಈಗ ಜಾಗರೂಕವಾಗಿರುವುದರಿಂದ ‘ಲವ್ ಜಿಹಾದ್ ಎಷ್ಟು ಗಂಭೀರವಾಗಿದೆ, ಎಂಬುದು ಸಿದ್ಧವಾಗಿದೆ. ಇದರಿಂದ ತಥಾಕಥಿತ ಪ್ರಗತಿಪರರಿಗೆ ಬಡಬಡಾಯಿಸಲು ಅವಕಾಶ ಸಿಗುವುದು ಎಂಬುದರಲ್ಲಿ ಸಂದೇಹವಿಲ್ಲ. ಇಷ್ಟು ವರ್ಷಗಳಿಂದ ಸ್ತ್ರೀಮುಕ್ತಿಯನ್ನು ಪುರಸ್ಕರಿಸುವ ಸಾಮಾಜಿಕ ಕಾರ್ಯಕರ್ತೆಯರು, ಲೇಖಕಿಯರು, ಪ್ರಾಧ್ಯಾಪಕಿಯರು, ಚಲನಚಿತ್ರ ನಟಿಯರು, ಇವರಲ್ಲಿ ಯಾರಿಗೂ ‘ಲವ್ ಜಿಹಾದ್ನ ಘಟನೆಗಳು ಕಾಣಿಸಲೇ ಇಲ್ಲವೇ ? ‘ಯಾವ ವಿಷಯಗಳ ಒಳಸಂಚು ಮಸೀದಿಗಳಲ್ಲಿ ಬಹಿರಂಗವಾಗಿ ರಚಿಸಲ್ಪಡುತ್ತಿತ್ತೋ, ಆ ವಿಷಯವು ಇತರ ಪಂಥದ ಗಣ್ಯರಿಗೆ ತಿಳಿಯುತ್ತಿರಲಿಲ್ಲ, ಎಂದು ಹೇಳಿದರೆ ಯಾರು ನಂಬುವರು ? ಪ್ರೇಮದ ಹೆಸರಿನಲ್ಲಿ ಹಿಂದೂ ಹುಡುಗಿಯರ ಮಾನವನ್ನು ಬಹಿರಂಗವಾಗಿ ಹರಾಜು ಮಾಡಲಾಯಿತು. ಇಷ್ಟೇ ಅಲ್ಲದೇ, ಅವರನ್ನು ಉಗ್ರವಾದಿಗಳನ್ನಾಗಿ ಮಾಡಲು ಕಳುಹಿಸಲಾಯಿತು. ಪ್ರೇಮದ ಈ ಬಣ್ಣವು ಗುಲಾಬಿಯಾಗಿರಲಿಲ್ಲ, ಅದು ಕೆಂಪು ಮತ್ತು ಹಸಿರಾಗಿತ್ತು. ಆರ್ಥಿಕ, ಲೈಂಗಿಕ, ದೈಹಿಕ ಹಾಗೂ ಮಾನಸಿಕ ಹಿಂಸೆ, ಧರ್ಮಪರಿವರ್ತನೆ, ಗೋಮಾಂಸ ಭಕ್ಷಣ ಏನೇನ್ನೆಲ್ಲವನ್ನು ಈ ಹುಡುಗಿಯರು ಸಹಿಸಿದರು, ಎಂಬುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಹಿಂದುತ್ವನಿಷ್ಠರು ಅನೇಕ ವರ್ಷಗಳಿಂದ ಅತ್ಯಂತ ತಳಮಳದಿಂದ ಹಾಗೂ ಜೀವದ ಹಂಗನ್ನು ತೊರೆದು ಇದರ ವಿರುದ್ಧ ಧ್ವನಿಯೆತ್ತಿದ್ದರು. ಅನೇಕ ವರ್ಷಗಳ ಈ ಹೋರಾಟದಲ್ಲಿ ‘ಸುದರ್ಶನ ನ್ಯೂಸ್ ವಾಹಿನಿಯು ಕೊನೆಯ ಪೆಟ್ಟು ನೀಡಿತು ಹಾಗೂ ಈಗ ಇದರ ವಿರುದ್ಧ ಕಾನೂನು ಮಾಡುವ ಘೋಷಣೆ ಆಗಿರುವುದು ಹಿಂದೂಗಳ ಗಾಯಕ್ಕೆ ಮುಲಾಮು ಹಚ್ಚುವುದಾಗಿದೆ. ಆದರೂ ಅದರಿಂದ ಹಿಂದೂ ವಂಶವಿಚ್ಛೇದನೆಯ ಹಾಗೂ ಮೋಸಕ್ಕೊಳಗಾದ ಕನ್ಯೆಯರಿಗಾದ ಹಾನಿಯನ್ನು ಭರಿಸಲು ಸಾಧ್ಯವಿಲ್ಲ; ಇದು ಹಿಂದೂಗಳ ಇತಿಹಾಸದಲ್ಲಿ ಒಂದು ಕರಾಳ ಪುಟವಾಗಿದೆ; ಆದರೆ ಏನಿಲ್ಲವೆಂದರೂ ಈ ಮೇಲಿನ ರಾಜ್ಯಗಳಲ್ಲಿಯಾದರೂ ಮುಂದಿನ ಪ್ರಕರಣಗಳನ್ನು ಸ್ವಲ್ಪ ಪ್ರಮಾಣದಲ್ಲಿಯಾದರೂ ತಡೆಗಟ್ಟಲು ಸಹಾಯ ವಾಗಬಹುದು, ಎಂದು ಹೇಳಬಹುದು. ಹಿಂದೂ ರಾಷ್ಟ್ರದಲ್ಲಿ ಹಿಂದೂ ಹುಡುಗಿಯರಿಗೆ ಮೋಸ ಮಾಡುವ ಧೈರ್ಯ ಯಾರಿಗೂ ಬರಲಿಕ್ಕಿಲ್ಲ; ಅಷ್ಟರವರೆಗಾದರೂ ಈ ತಾಳ್ಮೆ ಇರಲಿ !