೨೦೧೮ ರಲ್ಲಿ ಆಗ್ರಾದಲ್ಲಿ ಓರ್ವ ಮತಾಂಧನು ಪ್ರಮಿಳಾ ಸಜ್ಜನ ಎಂಬವರ ಮಗಳು ಸಂಜನಾಳೊಂದಿಗೆ ಅಂತರ್ಜಾತಿಯ ವಿವಾಹ ಮಾಡಿಕೊಂಡನು. ಪ್ರಮಿಳಾ ಇವರು ‘ನಾನು ಒಂದು ದಿನ ಮನೆಗೆ ಹಿಂದಿರುಗಿ ಬಂದು ನೋಡಿದರೆ, ಅವನು ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದನು, ಎಂದು ಹೇಳಿದರು. ಸಂಜನಾಳು ‘ತಾನು ವಿವಾಹ ಮಾಡಿಕೊಂಡು, ಅವನೊಂದಿಗೆ ಇರುವುದರ ಬಗ್ಗೆ ಹೇಳಲು, ಮನೆಗೆ ಕೇವಲ ಒಂದು ಬಾರಿ ದೂರವಾಣಿ ಮಾಡಿದ್ದಳು. ಪ್ರಮಿಳಾ ಇವರು, “ಅವಳು ತಾನು ಇನ್ನು ಮನೆಗೆ ವಾಪಾಸು ಬರುವುದಿಲ್ಲ, ಎಂದು ಹೇಳಿದ್ದನ್ನು ಸಹ ಹೇಳಿದರು. ಪ್ರಮೀಳಾ ಇವರ ಅಭಿಪ್ರಾಯದಂತೆ, ‘ಅವರ ಮಗಳ ಬುದ್ಧಿಭೇದವನ್ನು (ಬ್ರೆನ್‌ವಾಶ್) ಮಾಡಲಾಗಿತ್ತು. ಈ ಘಟನೆಗೆ ‘ಲವ್ ಜಿಹಾದ್ನ ಪ್ರಕರಣ ಎಂದು ಹೇಳಬಹುದು. ಈ ಘಟನೆಯು ೧೯೨೦ ರ ಘಟನೆಗಳಿಗೆ ಸಾಮ್ಯವನ್ನು ತೋರಿಸುತ್ತದೆ.
೧೯೨೦ ರ ದಶಕದಲ್ಲಿ ‘ಲವ್ ಜಿಹಾದ್ನ ಘಟನೆಗಳು
ದೆಹಲಿ ವಿದ್ಯಾಪೀಠದ ಇತಿಹಾಸಕಾರರಾದ ಚಾರು ಗುಪ್ತಾ ಇವರು ೨೦೦೨ ರಲ್ಲಿ ಒಂದು ಸಂಶೋಧನೆಯನ್ನು ಮಾಡಿದರು. ಆ ಕಾಲದಲ್ಲಿ ಸಾರ್ವಜನಿಕ ಸ್ವರೂಪದಲ್ಲಿ ‘ಲವ್ ಜಿಹಾದ್ನ ಚರ್ಚೆಗಳು ಆಗುತ್ತಿರಲಿಲ್ಲ. ಗುಪ್ತಾ ಇವರು ‘ಟೈಮ್ಸ್ ಆಫ್ ಇಂಡಿಯಾಗೆ ‘ಹಿಂದೂ ಸುಧಾರಕರು ೧೯೨೦ ನೇ ದಶಕದ ಪ್ರಾರಂಭದಲ್ಲಿ ಅಪಹರಣಗಳ ಯಾವ ಪ್ರಕರಣಗಳನ್ನು ಬೆಳಕಿಗೆ ತಂದರೋ, ಅವು ‘ಲವ್ ಜಿಹಾದ್ಗೆ ಹೋಲುತ್ತವೆ. ಯಾವ ಹೆಣ್ಣು ಮಕ್ಕಳು ಓಡಿಹೋಗಿ ಮತಾಂತರಗೊಂಡರೋ, ಅವರಲ್ಲಿನ ಹೆಚ್ಚಿನವರು ನಿರಾಶ್ರಿತರಾಗಿದ್ದರು, ಎಂದು ಹೇಳಿದರು. ಗುಪ್ತಾ ಇವರ ಅಧ್ಯಯನಕ್ಕನುಸಾರ –
೧. ೧೯೨೭ ರಲ್ಲಿ ಪ್ರತಾಪಗಡದ ಓರ್ವ ಹಿಂದೂ ಮಹಿಳೆಯು ಓಡಿಹೋಗಿ ಮತಾಂಧನೊಂದಿಗೆ ವಿವಾಹ ಮಾಡಿಕೊಂಡಿದ್ದಳು.
೨. ೧೯೨೪ ರಲ್ಲಿ ಬನಾರಸದಲ್ಲಿನ ಓರ್ವ ಹಿಂದೂ ಮಹಿಳೆಯು ಮತಾಂಧನಿಗಾಗಿ ತನ್ನ ಪತಿಯನ್ನು ಬಿಟ್ಟಿದ್ದಳು.
೩. ೧೯೨೭ ರಲ್ಲಿ ಮುಝಫ್ಫರನಗರನಲ್ಲಿ ಓರ್ವ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಮತಾಂಧನೊಂದಿಗೆ ವಿವಾಹ ಮಾಡಿದ ಬಗ್ಗೆ ಹಿಂದೂಗಳಿಗೆ ತಿಳಿಯಿತು. ಈ ಮಾಹಿತಿ ಸಿಗುತ್ತಲೇ ಹಿಂದೂಗಳ ಒಂದು ದೊಡ್ಡ ಸಮೂಹವು ಮತಾಂಧನ ಮನೆಗೆ ಹೋಗಿತ್ತು, ಆಗ ಆ ಹುಡುಗಿಯು ಶಾಶ್ವತವಾಗಿ ಮುಸ್ಲಿಮ್ ಆಗಿ ಮತಾಂತರವಾಗಿದ್ದಾಳೆ, ಎಂಬುದು ತಿಳಿಯಿತು.
೪. ಎಪ್ರಿಲ್ ೧೯೨೭ ರಲ್ಲಿ ಝಾನ್ಸಿಯಲ್ಲಿ ಓರ್ವ ಮತಾಂಧನು ವೇಶ್ಯೆಯನ್ನು ಇಟ್ಟುಕೊಂಡ ಬಗ್ಗೆ ಕೋಲಾಹಲವೆದ್ದಿತ್ತು. ಅವಳು ಮೂಲದಲ್ಲಿ ಹಿಂದೂ ಆಗಿದ್ದಳು; ಆದರೆ ನಂತರ ಅವಳು ಇಸ್ಲಾಮ್ ಪಂಥವನ್ನು ಸ್ವೀಕರಿಸಿದ್ದಳು.
೨೧ ನೇ ಶತಕದಲ್ಲಿ ‘ಲವ್ ಜಿಹಾದ್ ನ ಬಗ್ಗೆ ಸಂಪೂರ್ಣ ದೇಶದಲ್ಲಿ ಚರ್ಚೆ ನಡೆಯುತ್ತಿದೆ !
ಜರ್ಮನಿಯಲ್ಲಿ ನೆಲೆಸಿರುವ ವಿದ್ಯಾವಾಚಸ್ಪತಿ (ಪಿ.ಎಚ್.ಡಿ.) ವಿಚಾರವಂತರಾದ ಆಸ್ಥಾ ತ್ಯಾಗಿ ಇವರ ಅಭಿಪ್ರಾಯದಂತೆ, ಈ (‘ಲವ್ ಜಿಹಾದ್) ಘಟನೆಗಳು ಗುಜರಾತನಲ್ಲಿ ೯೦ ನೇ ದಶಕದ ಕೊನೆಗೆ ಮತ್ತು ೨೧ ನೇ ಶತಮಾನದ ಪ್ರಾರಂಭದಿಂದ ನಡೆಯುತ್ತಿವೆ. ಆಗ ‘ಲವ್ ಜಿಹಾದ್ನ ಅರ್ಥ ಹೇಗಿತ್ತೆಂದರೆ, ಮತಾಂಧ ಹುಡುಗರು ಹಿಂದೂ ಹುಡುಗಿಯರನ್ನು ವಿಶೇಷವಾಗಿ ನವರಾತ್ರಿಯ ದಾಂಡಿಯಾ ಕಾರ್ಯಕ್ರಮಗಳಲ್ಲಿ ಪ್ರೇಮಜಾಲದಲ್ಲಿ ಸೆಳೆದು ನಂತರ ಅವರನ್ನು ಮತಾಂತರಗೊಳಿಸುತ್ತಾರೆ. ಗುಪ್ತಾ ಇವರ ಹೇಳಿಕೆಗನುಸಾರ ೨೧ ನೇ ಶತಮಾನದ ಪ್ರಾರಂಭದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳ ಮೂಲಕ ದೇಶದಾದ್ಯಂತ ‘ಲವ್ ಜಿಹಾದ್ನ ಚರ್ಚೆಯಾಗತೊಡಗಿತು. ದೇಶದಾದ್ಯಂತ ಈ ಚರ್ಚೆಯಾಗುವುದರ ಹಿಂದೆ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಇವರ ಪಾತ್ರ ಮಹತ್ವದ್ದಾಗಿದೆ.
(ಆಧಾರ : ನವಭಾರತ ಟೈಮ್ಸ್, ೨೧.೧೦.೨೦೨೦)