ಕ್ರಿಶ್ಚಿಯಾನಿಟಿಯ ಕಡೆಗೆ ವೇಗವಾಗಿ ಸಾಗುತ್ತಿರುವ ಶ್ರೀಲಂಕಾ ಮತ್ತು ಭಾರತ ಸರಕಾರವು ಅದರ ಅಪಾಯವನ್ನು ಗುರುತಿಸಬೇಕಾದ ಆವಶ್ಯಕತೆ !

‘ಸಾಮ್ರಾಜ್ಯವಾದಿ, ಮತಾಂತರವಾದಿ ಪರಕೀಯ ಕ್ರೈಸ್ತ ಚರ್ಚ್‌ಗಳು ಮತ್ತು ಶ್ರೀಲಂಕಾದಲ್ಲಿ ಸಿಂಹಳಿ-ತಮಿಳು ಸಂಘರ್ಷದಿಂದ ಜಿಹಾದಿ ಇಸ್ಲಾಮ್‌ಗೆ ಲಾಭವಾಗದಂತೆ ಶ್ರೀಲಂಕಾ ಸರಕಾರವು ಎಚ್ಚರ ವಹಿಸಬೇಕು. ಈ ಹಿನ್ನೆಲೆಯಲ್ಲಿ ಚೆನ್ನೈಯ ಓರ್ವ ಅಧ್ಯಯನಶೀಲ ಪತ್ರಕರ್ತನು ‘ತಮಿಳು ಇಸ್ಲಾಮ್-ಕ್ರಿಶ್ಚಿಯನ್ ಅಜೆಂಡಾ ಎಂಬ ವಿಷಯದಲ್ಲಿ ಸವಿಸ್ತಾರವಾಗಿ ಒಂದು ಲೇಖನವನ್ನು ಬರೆದು ಚರ್ಚ್‌ನ ಹಸ್ತಕ್ಷೇಪದ ಬಗ್ಗೆ ಬೆಳಕು ಚೆಲ್ಲಿದ್ದಾನೆ. ಈ ಪತ್ರಕರ್ತರ ಅಧ್ಯಯನಕ್ಕನುಸಾರ ಚರ್ಚ್‌ನವರು ಪ್ರಾರಂಭದಿಂದಲೇ ಎಲ್‌ಟಿಟಿಈ ಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದರು. ಅದೇ ಸಮಯದಲ್ಲಿ ಶ್ರೀಲಂಕಾದ ಆಡಳಿತದಲ್ಲಿ ಸಿಂಹಳಿ ಕ್ರೈಸ್ತರ ಗುಂಪನ್ನು ಹೆಚ್ಚಿಸುವುದರಲ್ಲಿ ಚರ್ಚ್‌ಗಳು ಯಶಸ್ವಿಯಾದವು. ಸಂಬಂಧಪಟ್ಟವರು ಇದುವರೆಗೆ ಈ ಲೇಖನಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೊಲೊಮನ್ ಬಂದರನಾಯಕೆ, ಡಾನ್ ಸ್ಟೀಫನ್ ಸೇನಾನಾಯಕೆ, ಜಾನ್ ಕಾಟೆಲವಲ್, ಸಿರಿಮಾವೋ ಬಂದರನಾಯಕೆ, ಇಯುಡಲೀ ಸೇನಾನಾಯಕೆ, ಜ್ಯೂನಿಸ್ ರಿಚರ್ಡ್, ಜಯವರ್ಧನೆ, ಪ್ರೇಮದಾಸಾ, ರಾನೀಲ ವಿಕ್ರಮಸಿಂಘೆ, ಚಂದ್ರಿಕಾ ಬದರನಾಯಕೆ ಕುಮಾರತುಂಗೆ, ಪರ್ಸೀ ಮಹೀಂದ್ರಾ ರಾಜಪಕ್ಷೆ ಮುಂತಾದ ಶ್ರೀಲಂಕಾದ ರಾಷ್ಟ್ರಪ್ರಮುಖರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕ್ರಿಶ್ಚಿಯಾನಿಟಿಯೊಂದಿಗೆ ನಂಟಿದೆ ಎಂಬ ಚರ್ಚೆ ನಡೆಯುತ್ತಿದೆ. ಇವರೆಲ್ಲರ ಮೇಲೆ ಚರ್ಚ್‌ನ ವರ್ಚಸ್ಸಿದೆ, ಎಂಬ ಮಾತುಗಳು ಶ್ರೀಲಂಕಾದಲ್ಲಿ ಕೇಳಿ ಬರುತ್ತವೆ. ಇವರ ಸಹಚರರು ಕ್ರೈಸ್ತರೇ ಆಗಿದ್ದಾರೆ.

೧. ಜನಾಂಗೀಯ ಭಾಷಾ ವಿವಾದದಿಂದ ಶ್ರೀಲಂಕಾದಲ್ಲಿ ಹಿಂದೂಗಳಲ್ಲಿ ಬಿರುಕುಂಟು ಮಾಡುವಲ್ಲಿ ಯಶಸ್ವಿಯಾದ ಚರ್ಚ್ !

ಶೇ. ೮೫ ರಷ್ಟು ಹಿಂದೂಗಳಿರುವ ಶ್ರೀಲಂಕಾದಲ್ಲಿ ಎಲ್‌ಟಿಟಿಈ ಮೂಲಕ ‘ಸಿಂಹಳೀಯರು ಮತ್ತು ತಮಿಳರು ಎಂಬ ಜನಾಂಗೀಯ ಭಾಷೆ ವಿವಾದದಿಂದ ಬಿರುಕನ್ನುಂಟು ಮಾಡಿದೆ. ಈ ಬಿರುಕು ಚರ್ಚ್‌ನ ಸ್ವಾರ್ಥಕ್ಕಾಗಿಯೇ ಇತ್ತು.

೨. ತಮಿಳುನಾಡು ಮತ್ತು ಶ್ರೀಲಂಕಾದಲ್ಲಿ ಮತಾಂತರ ಮಾಡಿ ‘ಸ್ವತಂತ್ರ ಕ್ರೈಸ್ತ ರಾಷ್ಟ್ರ ರಚನೆಯೇ ಚರ್ಚ್‌ನ ಸಂಚಾಗಿದೆ !

ಇಡೀ ದೇಶವನ್ನು ಕ್ರೈಸ್ತೀಕರಣಗೊಳಿಸುವ ಯೋಜನೆಯ ಚರ್ಚ್‌ನ ಅಜೆಂಡಾವನ್ನು ಶ್ರೀಲಂಕಾದಲ್ಲಿ ರಹಸ್ಯವಾಗಿ ನಡೆಸಲಾಗುತ್ತಿದೆ. ಇವೆಲ್ಲ ಕಾರ್ಯಗಳನ್ನು ತಮಿಳುನಾಡಿನಲ್ಲಿಯೂ ಮಾಡಲಾಗುತ್ತಿದೆ. ಜಯಲಲಿತಾ ಮತ್ತು ಕರುಣಾನಿಧಿ ಈ ತಮಿಳು ನೇತಾರರು ತಮ್ಮ ಅನುಕೂಲಕ್ಕಾಗಿ ಎಲ್‌ಟಿಟಿಈಯ ಅಂಶವನ್ನು ಉಪಯೋಗಿಸಿದರು. ಚರ್ಚ್ ಅತ್ಯಂತ ಚಾಣಾಕ್ಷತೆಯಿಂದ ಈ ಇಬ್ಬರೂ ರಾಜಕಾರಣಿಗಳನ್ನು ಉಪಯೋಗಿಸಿಕೊಂಡಿತು. ಚರ್ಚ್‌ಗೆ ಶ್ರೀಲಂಕಾ ಮತ್ತು ತಮಿಳುನಾಡಿನಲ್ಲಿ ಕ್ರೈಸ್ತರ ಜನಸಂಖ್ಯೆಯನ್ನು ಹೆಚ್ಚಿಸಿ ‘ಸ್ವತಂತ್ರ ತಮಿಳು ಕ್ರಿಶ್ಚಿಯನ್ ಲ್ಯಾಂಡ್ ರಚಿಸಲಿಕ್ಕಿದೆ. ಇದಕ್ಕಾಗಿ ಎಲ್‌ಟಿಟಿಈಯಲ್ಲಿ ತಮಿಳು-ಕ್ರೈಸ್ತ ಗುಂಪು ಮತ್ತು ಶ್ರೀಲಂಕಾ ಸರಕಾರದಲ್ಲಿ ಸಿಂಹಳೀ ಕ್ರೈಸ್ತ ಗುಂಪಿನ ಮಹತ್ವವನ್ನು ಹೆಚ್ಚಿಸಿ ಯಶಸ್ವಿಯಾಗಿ ಸಿಂಹಳೀ-ತಮಿಳರಲ್ಲಿ ಬಿರುಕುಂಟು ಮಾಡಲಾಯಿತು. ಈ ಬಿರುಕಿನಿಂದಾಗಿಯೇ ಶ್ರೀಲಂಕಾದಲ್ಲಿ ನಿರಂತರವಾಗಿ ಅಶಾಂತಿ ಇತ್ತು. ಇಂತಹ ದಿನನಿತ್ಯದ ಸಂಘರ್ಷದಲ್ಲಿ ಸಮಾಜ ಜೀವನವು ಅಸ್ತವ್ಯಸ್ತವಾಗಿತ್ತು. ಈ ರೀತಿಯಲ್ಲಿ ಅಸ್ತವ್ಯಸ್ತವಾಗಿರುವ ಸಮಾಜ ಜೀವನವನ್ನು ಸುಧಾರಿಸಲು ಚರ್ಚ್ ಮುಂದೆ ಬಂದಿತು. ಚರ್ಚ್ ಗಳು ಸೇವೆಯ ನೆಪದಲ್ಲಿ ಜನರನ್ನು ಮತಾಂತರಗೊಳಿಸಿತು.

೩. ಶ್ರೀಲಂಕಾದಲ್ಲಿ ಮತಾಂತರವನ್ನು ವಿರೋಧಿಸುವ ಹಿಂದೂ ನೇತಾರರನ್ನು ಹತ್ಯೆ ಮಾಡುವ ಹಿಂಸಾತ್ಮಕ ಧರ್ಮಸಂಸ್ಥೆ !

ಹಿಂದೂ ಅಫೇಯರ್ಸ್ ವಿಭಾಗದ ಸಚಿವ ಟಿ. ಮಹೇಶ್ವರನ್ ಇವರು ಶ್ರೀಲಂಕಾದಲ್ಲಿ ಮತಾಂತರನಿಷೇಧ ಕಾನೂನು ತರಲು ಮುಂದಾಳತ್ವವನ್ನು ವಹಿಸಿದ್ದರು. ಈ ಕಾನೂನಿನ ಪ್ರಸ್ತಾಪವನ್ನು ಸಿದ್ಧಪಡಿಸಲು ಶ್ರೀಲಂಕಾದಲ್ಲಿ ಬುದ್ಧಿಸ್ಟ್-ಹಿಂದೂ ನೇತಾರರು ಒಟ್ಟಿಗೆ ಬಂದಿದ್ದರು; ಆದರೆ ಈ ಕಾನೂನು ಬರಬಾರದೆಂದು ಶ್ರೀಲಂಕಾ ಸರಕಾರದ ಮೇಲೆ ಚರ್ಚ್ ಒತ್ತಡ ಹೇರಿತ್ತು. ಮತಾಂತರದ ವಿರುದ್ಧ ಬೌದ್ಧ ಅಲ್ಪಸಂಖ್ಯಾತರು ಮತ್ತು ಹಿಂದೂ ಬಹುಸಂಖ್ಯಾತರು ಒಟ್ಟಾಗುತ್ತಿರುವುದನ್ನು ನೋಡಿ ಚರ್ಚ್ ದೊಡ್ಡ ಚಾತುರ್ಯದಿಂದ ‘ಇಂಟರ್ ರಿಲಿಜನ್ಸ್ ಕೌನ್ಸಿಲ್ನ (ಅಂತರ ಧಾರ್ಮಿಕ ಪರಿಷತ್ತು) ಸ್ಥಾಪನೆಗೆ ಒತ್ತು ಕೊಟ್ಟಿತು. ಇಂತಹ ಕೌನ್ಸಿಲನ್ನು ನಿರ್ಮಾಣ ಮಾಡುವುದೆಂದರೆ, ಇದು ಕ್ರಿಶ್ಚಿಯನೇತರರ ದೇಶದಲ್ಲಿ ಚರ್ಚ್‌ಬೆಂಬಲಿತ ‘ಇಂಟರ್‌ಫೇಥ್ ಡೈಲಾಗ್ನ ಭಾಗವಾಗಿದೆ. ಟಿ. ಮಹೇಶ್ವರನ್ ಇವರು ರಾನೀಲ ವಿಕ್ರಮ ಸಿಂಘೆಯವರ ಮಂತ್ರಿ ಮಂಡಳದಲ್ಲಿ ಸಚಿವರಾಗಿದ್ದರು. ೨೦೦೪ ರಲ್ಲಿ ಅವರ ಹತ್ಯೆಯ ಪ್ರಯತ್ನ ವಿಫಲವಾಗಿತ್ತು; ಆದರೆ ಜನವರಿ ೨೦೦೮ ರಲ್ಲಿ ಅವರು ಶಿವಮಂದಿರದಲ್ಲಿ ಪೂಜೆಯನ್ನು ಮಾಡುತ್ತಿರುವಾಗ ಅವರನ್ನು ಹತ್ಯೆ ಮಾಡಲಾಯಿತು. ಶ್ರೀಲಂಕಾ ಸರಕಾರವು ಎಲ್‌ಟಿಟಿಈ ಮತ್ತು ಈಪಿಡಿಪಿ ಪಕ್ಷದ ಡಗ್ಲಸ್ ದೇವನಂದಾ ಇವರನ್ನು ಅಪರಾಧಿಗಳೆಂದು ನಿರ್ಧರಿಸಿತು.

‘ಬಿಬಿಸಿ ಸಿಂಹಳಾ ಡಾಟ್ ಕಾಮ್ ಜಾಲತಾಣದ ವಾರ್ತೆ ಗನುಸಾರ ಡಿ.ಎನ್.ಎ. ಪರೀಕ್ಷಣೆಯ ವರದಿಯಲ್ಲಿ ಅವರ ಹತ್ಯೆಯ ವಿಷಯದಲ್ಲಿ ಒಂದು ಕಡೆ ಸಂದೇಹ ವ್ಯಕ್ತಪಡಿಸುತ್ತದೆ ಹಾಗೂ ಇನ್ನೊಂದೆಡೆಗೆ ಅದರೊಂದಿಗೆ ಹೊಂದಿಕೆಯಾಗುತ್ತದೆ. ಶ್ರೀಲಂಕನ್ ಜ್ಯುಡೀಶಿಯರಿಗನುಸಾರ ಭದ್ರತಾರಕ್ಷಕನು ಹತ್ಯೆಗೈದ ಆಕ್ರಮಣಕರ್ತನ ಹೆಸರು ಜಾನ್ಸನ್ ಕಾಲೀನ ವಸಂಯನ್ ವ್ಯಾಲೆಂಟಿನ್ ಎಂದಾಗಿತ್ತು. ಒಟ್ಟಾರೆ ಟಿ. ಮಹೇಶ್ವರನ್ ಇವರ ಹತ್ಯೆಯ ಈ ಘಟನೆಯು ಗೊಂದಲವುಂಟು ಮಾಡುತ್ತದೆ. ಸಿಂಹಳೀ-ತಮಿಳು ವಿವಾದವು ಮುಂದುವರಿಯಬೇಕೆಂದು ಇಂತಹ ಅನೇಕ ಘಟನೆಗಳನ್ನು ಹುಟ್ಟುಹಾಕಲಾಯಿತು, ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.

೪. ಹಿಂದೂಗಳ ಮತಾಂತರಕ್ಕಾಗಿ ಚರ್ಚ್‌ಸಂಸ್ಥೆಗಳ ಧೂರ್ತತನ !

ಪೋರ್ತುಗೀಸ್, ಡಚ್ ಮತ್ತು ಬ್ರಿಟೀಷ ಆಳ್ವಿಕೆಯಲ್ಲಿ ಶ್ರೀಲಂಕಾದಲ್ಲಿ ಕ್ರಿಶ್ಚಿಯಾನಿಟಿಯ ಪ್ರವೇಶವಾಯಿತು. ವಸಾಹತು ಶಾಹಿಗಳ ರಾಜ್ಯ ಹೋದರೂ ಚರ್ಚ್‌ಗಳು ಸ್ಥಳೀಯರ ಸಹಾಯ ದಿಂದ ತಮ್ಮ ಪ್ರಭುತ್ವವನ್ನು ಹೆಚ್ಚಿಸಲು ಆರಂಭಿಸಿದವು. ಒಂದು ಮಾಹಿತಿಗನುಸಾರ ‘ಮೇನ್‌ಸ್ಟ್ರೀಮ್ ಚರ್ಚಗಳು ‘ನ್ಯೂ ಕ್ರಿಶ್ಚನ್ ಚರ್ಚ್‌ಗಳಿಂದ ಅಂತರವನ್ನಿಡಲು ಆರಂಭಿಸಿವೆ. ‘ಮೇನ್‌ಸ್ಟ್ರೀಮ್ ಚರ್ಚಗಳಲ್ಲಿ ಶ್ರೀಲಂಕಾದಲ್ಲಿ ಕೆಥೋಲಿಕ್ ಹಾಗೂ ಆಂಗ್ಲೋನ್ಸ್ ಇವರ ಸಮಾವೇಶವಾಗುತ್ತದೆ. ಇದಕ್ಕೆ ‘ಓಲ್ಡ್ ಚರ್ಚಸ್ ಎಂದು ಕೂಡ ಹೇಳಲಾಗುತ್ತದೆ. ಈ ಚರ್ಚ್‌ಗಳು ಬೌದ್ಧ ಮತ್ತು ಹಿಂದೂ ಧರ್ಮೀಯರೊಂದಿಗೆ ಸೌಹಾರ್ದತೆಯ ಸಂಬಂಧವನ್ನಿಡುತ್ತವೆ. ಜಗತ್ತಿನಾದ್ಯಂತದ ಕ್ರಿಶ್ಚಿಯನೇತರ ದೇಶಗಳಲ್ಲಿ ನಡೆಯುತ್ತಿರುವ ಚರ್ಚ್‌ಗಳ ಕಾರ್ಯಗಳು ಮತ್ತು ಅಜೆಂಡಾಗಳು ತಿಳಿಯುವ ಮೊದಲೇ ಅವುಗಳ ಉದ್ದೇಶವು ಗುರಿಮುಟ್ಟಿರುತ್ತದೆ, ಎಂಬುದು ಇತಿಹಾಸವಿದೆ.

– ಶ್ರೀ. ಮಕರಂದ ಮುಳೆ (ಆಧಾರ : ವಿವೇಕಾನಂದ ಕೇಂದ್ರದ ಸಾಂಸ್ಕೃತಿಕ ಮಾಸಿಕ, ‘ವಿವೇಕ ವಿಚಾರ, ಜೂನ್ ೨೦೦೯)