ಡಿ.ಎಡ್. ಪಠ್ಯಕ್ರಮದಲ್ಲಿ ಶೇ. ೫೦ ಸ್ಥಳಗಳನ್ನು ಮುಸಲ್ಮಾನರಿಗೆ ಕಾಯ್ದಿರಿಸಿದ್ದರಿಂದ ವಿಎಚ್‌ಪಿಯಿಂದ ಮೇವಾತ್ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್

ಹರಿಯಾಣದಲ್ಲಿ ಬಿಜೆಪಿ ಸರಕಾರ ಇರುವಾಗ ವಿಎಚ್‌ಪಿಗೆ ಇಂತಹ ನೋಟಿಸ್ ಏಕೆ ನೀಡಬೇಕಾಗುತ್ತದೆ ? ಸರಕಾರ ಈ ಮೀಸಲಾತಿಯನ್ನು ತೆಗೆದುಹಾಕಿ ಹಿಂದೂಗಳಿಗೆ ನ್ಯಾಯ ಒದಗಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ನವ ದೆಹಲಿ – ಹರಿಯಾಣದ ಮೇವಾತ್‌ನಲ್ಲಿನ ‘ಮೇವಾತ್ ವಿಕಾಸ್ ಪ್ರಾಧಿಕಾರ’ವು ಡಿ.ಎಡ್.ನ ಪಠ್ಯಕ್ರಮದಲ್ಲಿ ೫೦ ರಲ್ಲಿ ೨೫ ಸ್ಥಾನಗಳನ್ನು ಮುಸಲ್ಮಾನರಿಗೆ ಮೀಸಲಿಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮೇವಾತ್ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನುಂಹ್ ಜಿಲ್ಲೆಯ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ. ಪ್ರಾಧಿಕಾರವು ಪ್ರಕಟಿಸಿದ ಜಾಹೀರಾತಿನಲ್ಲಿ ಈ ಮಾಹಿತಿಯನ್ನು ನೀಡಲಾಗಿತ್ತು.

(ಚಿತ್ರ ಸೌಜನ್ಯ : ಆಪ್ ಇಂಡಿಯಾ)

೧. ವಿಎಚ್‌ಪಿಯ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇದ್ರ ಜೈನ್ ಇವರು, ಪ್ರಾಧಿಕಾರ ಮತ್ತು ಸರಕಾರ ಮೀಸಲಾತಿಯನ್ನು ಹಿಂತೆಗೆದುಕೊಳ್ಳಬೇಕು, ಇದು ಮುಸಲ್ಮಾನರ ತುಷ್ಟೀಕರಣದ ಅತಿರೇಕವಾಗಿದೆ ಎಂದರು.

೨. ಜೈನ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಒಂದು ಸರಕಾರಿ ಸಂಸ್ಥೆಯಲ್ಲಿ ಧರ್ಮಾಧಾರಿತ ಮೀಸಲಾತಿ ಸಂಪೂರ್ಣವಾಗಿ ಅಯೋಗ್ಯ ಮತ್ತು ಕಾನೂನುಬಾಹಿರವಾಗಿದೆ, ಹಾಗೆಯೇ ಹಿಂದೂ ವಿರೋಧಿ ಎಂದು ಹೇಳಿದ್ದಾರೆ. ಮೇವಾತ್‌ನಲ್ಲಿ ಹಿಂದೂಗಳು ಮೊದಲಿನಿಂದಲೇ ಮತಾಂಧರಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ಅವರು ಪಲಾಯನ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮುಸಲ್ಮಾನರಿಗೆ ಪ್ರಾಧಿಕಾರವು ಆದ್ಯತೆ ನೀಡಿದರೆ, ಹಿಂದೂಗಳ ಸ್ಥೈರ್ಯದ ಮೇಲೆ ಅಯೋಗ್ಯ ಪರಿಣಾಮ ಬೀರುತ್ತದೆ. ಮೇವತ್‌ನಲ್ಲಿರುವ ಹಿಂದೂಗಳ ಮಕ್ಕಳು ಈಗ ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕೇ ? ಎಂದು ಕೇಳಿದ್ದಾರೆ.