ಮೇವಾತಿ ಹಿಂದೂಗಳಿಗೆ ಆಶ್ರಯದಾತರು ಯಾರು ?

ಕೆಲವು ದಿನಗಳ ಹಿಂದೆ ಹರಿಯಾಣದಲ್ಲಿ ನಿಕಿತಾ ತೋಮರ ಈ ಹಿಂದೂ ಯುವತಿಯನ್ನು ತೌಸಿಫ ಎಂಬ ಯುವಕನು ಗುಂಡಿಕ್ಕಿ ಕೊಂದಿದ್ದನು. ತೌಸಿಫನು ಎರಡು ವರ್ಷಗಳ ಹಿಂದೆ ನಿಕಿತಾಳನ್ನು ಅಪಹರಿಸಿದ್ದನು ಮತ್ತು ಅಂದಿನಿಂದ ಅವಳಿಗೆ ಮತಾಂತರವಾಗಲು ಒತ್ತಾಯಿಸುತ್ತಿದ್ದನು. ಈ ಪ್ರಕರಣವು ಲವ್-ಜಿಹಾದ್‌ನ ಪ್ರಕರಣವೇ ಆಗಿದೆ; ಆದರೆ ಅದಕ್ಕಿಂತಲೂ ಮುಂದುವರಿದು ಈ ಪ್ರಕರಣದ ಬೇರುಗಳು ತುಂಬಾ ದೂರದವರೆಗೆ ಹರಡಿವೆ. ತೌಸಿಫನು ಮೇವಾತದ ನಿವಾಸಿಯಾಗಿದ್ದಾನೆ ಹಾಗೂ ಅವನು ಮೇವಾತದಲ್ಲಿ ಕಾಂಗ್ರೆಸ್ ಶಾಸಕ ಅಫ್ತಾಬ ಅಹಮ್ಮದನ ಸಂಬಂಧಿಕನಾಗಿದ್ದಾನೆ. ಮೇವಾತ ಕಳೆದ ಕೆಲವು ವರ್ಷಗಳಿಂದ ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ, ಅವರ ಮತಾಂತರ ಮತ್ತು ಅಪಹರಣ ಇತ್ಯಾದಿಗಳಿಂದ ಚರ್ಚೆಯಲ್ಲಿದೆ. ಇವೆಲ್ಲ ದೌರ್ಜನ್ಯಗಳನ್ನು ಮೇವಾತದ ಮತಾಂಧರೇ ಮಾಡಿದ್ದಾರೆ. ವಿಶೇಷವೆಂದರೆ, ಈ ಮತಾಂಧರ ದೌರ್ಜನ್ಯಗಳಿಗೆ ಬಲಿಯಾಗಿರುವ ಎಲ್ಲ ಹುಡುಗಿಯರು ೧೪ ರಿಂದ ೧೮ ವರ್ಷ ವಯಸ್ಸಿನರಾಗಿದ್ದರು. ಕೆಲವು ಹುಡುಗಿಯರನ್ನು ಅನೇಕ ದಿನಗಳವರೆಗೆ ಒತ್ತೆಯಿಟ್ಟುಕೊಂಡು ಅವರ ಮೇಲೆ ಅತ್ಯಾಚಾರ ಮಾಡಲಾಗಿದೆ. ಅವರಲ್ಲಿ ಕೆಲವು ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇವಾತದ

ಶಾಲೆಗಳಲ್ಲಿ ಹಿಂದೂ ಮಕ್ಕಳಿಂದ ನಮಾಜು ಪಠಣ ಮಾಡಿಸು ವುದು, ಮತಾಂತರವಾಗಲು ಒತ್ತಡ ಹೇರುವುದು, ಇತ್ಯಾದಿ ಪ್ರಕರಣಗಳು ನಡೆಯುತ್ತಿರುವ ಆಘಾತಕಾರಿ ವಾರ್ತೆಗಳು ೩ ವರ್ಷಗಳ ಹಿಂದೆ ಬೆಳಕಿಗೆ ಬಂದಿತ್ತು. ೨೦೧೮ ರಲ್ಲಿ ಮೇವಾತದಿಂದ ಅಲ್-ಕಾಯದಾದ ಇಬ್ಬರನ್ನು ಬಂಧಿಸಲಾಗಿತ್ತು. ಮತಾಂಧರು ಮೇ ೨೦೨೦ ರಲ್ಲಿ ಮಹಂತ ರಾಮದಾಸ ಇವರ ಮೇಲೆ ಹಲ್ಲೆ ಮಾಡಿದ್ದರು. ಇಲ್ಲಿ ಗೋಕಳ್ಳರ ದೊಡ್ಡ ಜಾಲವಿದೆ. ಮೇವಾತದ ನೂಹದಲ್ಲಿ ಕೆಲವು ಮನೆ ಮತ್ತು ಗೋದಾಮುಗಳಲ್ಲಿ ಅಡಗಿಸಿಟ್ಟಿದ್ದ ೨ ಸಾವಿರದ ೫೭೨ ಗೋವುಗಳ ಚರ್ಮಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಲ್ಲಿ ಪದೇ ಪದೇ ಪೊಲೀಸರ ಮೇಲೆ ಆಕ್ರಮಣವಾಗುತ್ತಿರುತ್ತದೆ. ಇಲ್ಲಿನ ಪೊಲೀಸರು ನಾವು ಕರ್ತವ್ಯ ನಿರ್ವಹಿಸುವಾಗ ನಮ್ಮ ಜೀವಕ್ಕೆ ಅಪಾಯವಿರುತ್ತದೆ, ಎಂದು ನ್ಯಾಯಾಲಯದಲ್ಲಿ ಪ್ರಮಾಣಪತ್ರವನ್ನು ದಾಖಲಿಸಿದ್ದಾರೆ. ಮೇವಾತ ಆಧುನಿಕ ನಗರವಾದ ಗುಡ್ಗಾವ್‌ನಿಂದ ಕೇವಲ ೬೦ ಕಿಲೋಮೀಟರ್ ದೂರದಲ್ಲಿದ್ದರೂ ಅದು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಸರಕಾರವು ಸಾಕಷ್ಟು ಹಣವನ್ನು ಖರ್ಚು ಮಾಡಿಯೂ ಅದರಿಂದ ಏನೂ ಪ್ರಯೋಜನವಾಗಿಲ್ಲ. ಮೇವಾತದಲ್ಲಿ ಶೇ. ೭೯ ರಷ್ಟು ಮುಸಲ್ಮಾನರಿದ್ದಾರೆ. ಮೇವಾತಿ ಅಥವಾ ಮೇವೂ ಇದು ಮುಸಲ್ಮಾನರ ಪ್ರದೇಶವಾಗಿದೆ. ಅವರ ಪೂರ್ವಜ ದರ್ಯಾಖಾನ್ ಎಂಬವನು ಶಶೀ ಬದಾನಿ ಎಂಬ ಮೀನಾ ಸಮುದಾಯದ ಹಿಂದೂ ಯುವತಿಯೊಂದಿಗೆ ವಿವಾಹವಾಗಿ ಅವಳನ್ನು ಮತಾಂತರಿಸಿದ್ದನು. ಈ ವಿವಾಹದಲ್ಲಿ ಹಿಂದೂ ಮೀನಾ ಸಮಾಜ ಮತ್ತು ಮುಸಲ್ಮಾನ ಮೇವೂ ಇವರಲ್ಲಿ ಯುದ್ಧವಾಗಿತ್ತು. ಅದರಲ್ಲಿ ಮುಸಲ್ಮಾನರಿಗೆ ಗೆಲುವಾಗಿತ್ತು. ಈ ಕಥೆಯನ್ನು ಇಲ್ಲಿ ಪಾರಂಪರಿಕ ಪ್ರೇಮಕಥೆಯೆಂದು ಹೇಳಲಾಗುತ್ತದೆ. ಹಿಂದೂ ಯುವತಿಯರನ್ನು ಮತಾಂತರಗೊಳಿಸಲು ಈ ಕಥೆಯನ್ನು ಪ್ರೇರಣೆಯೆಂದು ಉಪಯೋಗಿಸಲಾಗುತ್ತದೆ.

ಮೇವಾತಿ ಮತಾಂಧರ ಇತಿಹಾಸ

ಸ್ವಾತಂತ್ರ್ಯಪೂರ್ವದ ಮೇವಾತಿ ಮತಾಂಧರ ಇತಿಹಾಸವನ್ನು ನೋಡಿದರೆ, ಅವರು ದರೋಡೆ, ಅಪಹರಣ ಇತ್ಯಾದಿಗಳಿಗೆ ಕುಪ್ರಸಿದ್ಧರಾಗಿದ್ದರು. ೧೮೭೧ ರಲ್ಲಿ ಅಂದಿನ ಭಾರತ ಸರಕಾರವು ಮೇವೂಗಳನ್ನು ‘ಅಪರಾಧಿ ಪಂಗಡದವರೆಂದು ಘೋಷಣೆ ಮಾಡಿ ಅವರ ಮೇಲೆ ತೀವ್ರ ನಿಗಾ ಇಟ್ಟಿತ್ತು. ೧೯೪೭ ರಲ್ಲಿ ಮೇವಾತವು ಅಲವರದ ಮಹಾರಾಜರ ಆಧೀನದಲ್ಲಿತ್ತು. ಅವರು ಭಾರತದೊಂದಿಗೆ ವಿಲೀನವಾಗಲು ನಿರ್ಧರಿಸಿದ್ದರು; ಆದರೆ ಮೇವಾತಿಗಳಲ್ಲಿ ಯಾರಿಗೆ ಪಾಕಿಸ್ತಾನಕ್ಕೆ ಹೋಗಲಿಕ್ಕಿತ್ತೋ, ಅವರು ಬಂಡಾಯವೆಬ್ಬಿಸಿ ಹತ್ಯೆ, ಲೂಟಿ, ಬಲಾತ್ಕಾರ ಹಾಗೂ ಅಪಹರಣ ಇತ್ಯಾದಿಗಳನ್ನು ಆರಂಭಿಸಿದರು. ಹಿಂದೂ ಮಂದಿರಗಳ ಮೇಲೆ ಹಲ್ಲೆಗಳಾಯಿತು. ಅವರು ಸ್ವತಂತ್ರ ‘ಮೇವೂಸ್ತಾನದ ಘೋಷಣೆ ಮಾಡಿದರು. ಮೇವೂಗಳು ತಿಜಾರದಲ್ಲಿ ಶ್ರೀಮಂತ ಹಿಂದೂಗಳ ಹತ್ಯೆ ಮಾಡಿದರು. ಇದನ್ನು ನೋಡಿ ಅಲವರದ ಮಹಾರಾಜರು ಮೇವೂಗಳ ವಿರುದ್ಧ ಹೋರಾಟವನ್ನೇ ಆರಂಭಿಸಿದರು, ಆಗ ಅವರೆಲ್ಲ ಪಲಾಯನಗೈದು ಗಡಿಪ್ರದೇಶದಲ್ಲಿ ಆಶ್ರಯಪಡೆದರು. ಅವರು ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆಯೆಂದು ಬೊಬ್ಬೆ ಹೊಡೆಯುತ್ತಾ

ಗಾಂಧಿ, ನೆಹರು, ಜಿನ್ಹಾ ಇವರಲ್ಲಿ ಸುಳ್ಳು ಆರೋಪ ಮಾಡಿದರು. ಹಿಂದೂಗಳು ಕೂಡ ಮೇವೂಗಳ ವಿರುದ್ಧ ಪ್ರತಿಭಟನೆ ಮಾಡಿದರು. ಆದ್ದರಿಂದ ಕೆಲವರು ಪಾಕಿಸ್ತಾನಕ್ಕೆ ಹೋಗಿ ಆಶ್ರಯ ಪಡೆದರು. ಕಾಂಗ್ರೆಸ್ ಇದನ್ನು ಗಮನಿಸಿತು ಹಾಗೂ ಗಾಂಧಿಯವರು ‘ಅಪರಾಧಿಗಳಿಗೆ ಶಿಕ್ಷೆ ಅಲ್ಲ, ಅವರನ್ನು ಸುಧಾರಣೆ ಮಾಡಬೇಕು, ಎಂದು ಹೇಳಿದರು. ನೆಹರೂರವರ ಬಲಗೈ ಬಂಟರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಇವರು ಅಲವರದ ಪ್ರಮುಖರಿಗೆ ಎಲ್ಲ ಮೇವೂಗಳನ್ನು ಭಾರತಕ್ಕೆ ಕರೆ ತರಬೇಕೆಂದು ವಿನಂತಿಸಿದರು. ಆಗ ಅಂದಿನ ಪ್ರಮುಖರು ‘ಮೇವೂಗಳು ಕಾನೂನು ವ್ಯವಸ್ಥೆಗೆ ಸ್ಪಂದಿಸುವುದಿಲ್ಲ, ಅವರು ಅಪರಾಧಗಳನ್ನು ಮಾಡುತ್ತಾರೆ, ಎಂದು ಹೇಳಿದರು. ಅಲವರದ ಪ್ರಮುಖರ ಈ ನಿಲುವು ಕಾಂಗ್ರೆಸ್ಸಿಗೆ ಇಷ್ಟವಾಗಲಿಲ್ಲ. ಅವರು ಅಲವರದ ಮಹಾರಾಜರಿಗೆ ಬೆದರಿಕೆ ನೀಡಲು ಆರಂಭಿಸಿದರು. ಸೇನಾ ಕಾರ್ಯಾಚರಣೆ ಮಾಡುತ್ತೇವೆಂದು ಬೆದರಿಸಿದರು. ಗಾಂಧಿಯವರು ಮೇವೂಗಳನ್ನು ಪುನಃ ಹಿಂದೆ ಕರೆತರಲು ಒತ್ತಡ ಹೇರಿದರು. ಅದರ ಪರಿಣಾಮವೆಂದು ಪಾಕಿಸ್ತಾನಕ್ಕೆ ಓಡಿ ಹೋಗಿರುವ ಮೇವೂಗಳು ಪುನಃ ಭಾರತಕ್ಕೆ ಬಂದರು. ಈ ಮೇವಾತಿಗಳು ಇಂದು ಕೂಡ ಗಾಂಧಿಯವರನ್ನು ಕೊಂಡಾಡುತ್ತಾರೆ. ಅಂದರೆ ಒಂದು ಅಪರಾಧಿ ಸಮಾಜಕ್ಕೆ ಪುನಃ ಆಶ್ರಯ ನೀಡಿದಂತಾಯಿತು. ಈ ವಿಷಯವನ್ನು ‘ಟ್ರೂ ಇಂಡಾಲಾಜೀ ಈ ‘ಟ್ವಿಟರ್ ಹ್ಯಾಂಡಲ್ನಲ್ಲಿಯೂ ಸಾಕ್ಷಿಯೊಂದಿಗೆ ಪ್ರಸಿದ್ಧಪಡಿಸಲಾಗಿದೆ. ಮೇವಾತಿಯರ ಇತಿಹಾಸವನ್ನು ನೋಡಿದರೆ, ಇಂದು ಅದನ್ನು ‘ಮಿನಿ ಪಾಕಿಸ್ತಾನವೆಂದು ಏಕೆ ಹೇಳುತ್ತಾರೆ, ಎಂಬುದು ಕೂಡ ಅರಿವಾಗುವುದು. ಹಿಂದೂಗಳ ಮೇಲಿನ ದೌರ್ಜನ್ಯಗಳು ದಿನನಿತ್ಯ ನಡೆಯುತ್ತಿರುವುದರಿಂದ ಮೇವಾತದಿಂದ ಅನೇಕ ಹಿಂದೂ ಕುಟುಂಬಗಳು ಪಲಾಯನಗೈದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಅದೇ ರೀತಿ ಕೆಲವರು ಪಲಾಯನ ಮಾಡುವ ಸ್ಥಿತಿಯಲ್ಲಿದ್ದಾರೆ.

ಮೇವಾತಿ ಹಿಂದೂಗಳಿಗೆ ಆಶಾಕಿರಣ

ಬಹುಸಂಖ್ಯಾತ ಹಿಂದೂಗಳ ಭಾರತದಲ್ಲಿ ಒಂದು ಪ್ರದೇಶದ ಹಿಂದೂಗಳು ಇಷ್ಟು ವರ್ಷಗಳಿಂದ ದೌರ್ಜನ್ಯವನ್ನು ಸಹಿಸುತ್ತಿರುವುದು ನಿಜವಾಗಿಯೂ ಚಿಂತಾಜನಕವಾಗಿದೆ. ಇತರ ದೇಶಗಳಲ್ಲಿ ಈ ರೀತಿಯಾಗಬಹುದೇ ? ಹಿಂದೂಗಳ ಇಂತಹ ದುರವಸ್ಥೆಗೆ ಭಾರತದಲ್ಲಿ ೫೦ ವರ್ಷಗಳಿಗಿಂತ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೇ ಹೊಣೆಯಾಗಿದೆ. ಹಿಂದೂ-ಮುಸಲ್ಮಾನರ ಐಕ್ಯತೆಯ ಲೋಲಿಪಾಪ್ ತೋರಿಸುವುದು, ಹಿಂದೂಗಳು ಇತರ ಪಂಥೀಯರೊಂದಿಗೆ ರೋಟಿ-ಬೇಟಿ ಎನ್ನುವ ವ್ಯವಹಾರ ಮಾಡುವುದು ಹಾಗೂ ಹಿಂದೂಗಳ ಮೇಲೆ ದೌರ್ಜನ್ಯವಾದಾಗ ಧಾರ್ಮಿಕ ವಿಷಯವೆಂದಲ್ಲ, ಪರಸ್ಪರ ವಿವಾದ, ಭೂಮಿಯ ವಿವಾದ ಇತ್ಯಾದಿ ‘ಲೇಬಲ್ ಅಂಟಿಸಿ ಆ ವಿಷಯಗಳನ್ನು ಕಡೆಗಣಿಸಲಾಗಿದೆ. ಕಾಶ್ಮೀರದಲ್ಲಿ ನಡೆದಿರುವ ಹಿಂದೂಗಳ ನರಮೇಧ ಮತ್ತು ಹಿಂದೂಗಳ ವಲಸೆಯ ಸಮಯದಲ್ಲಿಯೂ ಕಾಂಗ್ರೆಸ್ ನಿಷ್ಕ್ರಿಯವಾಗಿತ್ತು. ರಾಜಕೀಯ ಪಕ್ಷ ನಿಷ್ಕ್ರಿಯವಾಗಿದ್ದರೂ ಹಿಂದೂ ಸಮಾಜ ನಿಷ್ಕ್ರಿಯವಾಗಿರಲು ಸಾಧ್ಯವಿಲ್ಲ. ಈ ವಿಷಯದಲ್ಲಿ ‘ಸುದರ್ಶನ ನ್ಯೂಸ್ ವಾಹಿನಿಯು ಸತ್ಯ ವಾರ್ತೆಯನ್ನು ಪ್ರಸಾರ ಮಾಡಿ ಮೇವಾತವನ್ನು ಬೆಳಕಿಗೆ ತಂದಿತ್ತು. ಶ್ರೀಕೃಷ್ಣಜನ್ಮಭೂಮಿಯ ಮುಕ್ತಿಗಾಗಿ ಕಾನೂನು ಹೋರಾಟ ಮಾಡುವ ನ್ಯಾಯವಾದಿ ವಿಷ್ಣುಶಂಕರ ಜೈನ್ ಇವರು ಮೇವಾತದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳ ವಿಚಾರಣೆ ಮಾಡಲು ವಿಶೇಷ ತನಿಖಾ ದಳವನ್ನು ಸ್ಥಾಪಿಸಲು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ದ್ದಾರೆ. ಹಿಂದೂ ಸಂಘಟನೆಗಳು ಮತ್ತು ಸಾಮಾಜಿಕ ಪ್ರಸಾರ ಮಾಧ್ಯಮಗಳು ಈ ವಿಷಯಗಳನ್ನು ಎತ್ತಿಹಿಡಿಯುತ್ತಿವೆ. ಇವುಗಳ ಒತ್ತಡದಿಂದ ಹಾಗೂ ಜನಜಾಗೃತಿಯಿಂದ ಸರಕಾರಕ್ಕೆ ಈಗ ಹಿಂದೂಗಳತ್ತ ಕಡೆಗೆ ಕಣ್ಣೆತ್ತಿ ನೋಡಬೇಕಾಗಬಹುದು, ಎನ್ನುವ ಅಪೇಕ್ಷೆಯನ್ನಿಡೋಣ !