ಪಾಣಿನಿ ಋಷಿಗಳು ಸಂಸ್ಕಾರ ಮಾಡಿದ ಭಾಷೆಯೆಂದರೆ, ಸಂಸ್ಕೃತ ಭಾಷೆ. ಸ್ವತಃ ಪಾಣಿನಿಯವರು ಅವರಿಗಿಂತ ಮೊದಲಿನ ವ್ಯಾಕರಣಕಾರರನ್ನು ಉಲ್ಲೇಖಿಸಿದ್ದಾರೆ. ಇದರ ಮೇಲೆ ಇಂದು ಅನೇಕ ಸಂಶೋಧಾನಾತ್ಮಕ ಸಾಹಿತ್ಯವೂ ಲಭ್ಯವಿದೆ. ಇದನ್ನು ಇಲ್ಲಿ ಹೇಳುವ ಉದ್ದೇಶವೆಂದರೆ, ನಮ್ಮ ಧರ್ಮ ಸಂಕಲ್ಪನೆ ಮತ್ತು ಅದಕ್ಕೆ ಸಂಬಂಧಿಸಿದ ದೇವಶಾಸ್ತ್ರಗಳಿಂದ ಪೂಜಾರ್ಚನೆಗಳವರೆಗೆ ವಿಕಾಸವಾಗಿದೆ. ಈ ಧರ್ಮವು ಸಾವಿರಾರು ವರ್ಷಗಳದ್ದಾಗಿದೆ.
೧. ಹಿಂದೂ ಧರ್ಮದ ತತ್ತ್ವಜ್ಞಾನದ ಮಹತ್ವ !
ಕಳೆದ ಮೂರುನೂರು-ನಾಲ್ಕುನೂರು ವರ್ಷಗಳಲ್ಲಿ ಹಿಂದೂ ತತ್ತ್ವಜ್ಞಾನ, ಹಿಂದೂಗಳ ಜೀವನಪದ್ಧತಿ ಹಾಗೂ ಅವರ ಪ್ರಾಚೀನತೆಯ ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡುವ ಸ್ಪೂರ್ತಿಯು ಜಗತ್ತಿನಲ್ಲಿ ಅನೇಕ ಧರ್ಮಪ್ರಚಾರಕರಿಗೆ ಮತ್ತು ಧರ್ಮದ ಅಧ್ಯಯನಶೀಲರಿಗೆ ಸಿಕ್ಕಿತು. ಈ ಜಿಜ್ಞಾಸೆಯು ಹಿಂದೂಗಳು ಗೋಮಾಂಸವನ್ನು ಭಕ್ಷಣೆ ಮಾಡುತ್ತಾರೋ ಇಲ್ಲವೋ, ಹಿಂದೂಗಳ ಮೂರ್ತಿಪೂಜೆ, ಹೋಮಹವನ ಇತ್ಯಾದಿಗಳಿಗಿಂತ, ಅವರ ತತ್ತ್ವಜ್ಞಾನದ ಗ್ರಂಥಗಳಿಂದ ಅಂದರೆ, ಉಪನಿಷತ್ತುಗಳು ಮತ್ತು ದಾರ್ಶನಿಕ ಗ್ರಂಥಗಳಿಂದ ಉತ್ಪನ್ನವಾಯಿತು.
೨.ಯುರೋಪಿಯನ್ ವಿಚಾರಸರಣಿಯನ್ನು ಸ್ತುತಿಸುವ ಜಾತ್ಯತೀತವಾದಿಗಳು ಈ ಸತ್ಯವನ್ನು ಗಮನದಲ್ಲಿಡುವರೇ ?
೧೬-೧೭ ನೆಯ ಶತಮಾನದಿಂದ ಯುರೋಪಿಯನ್ ವಸಾಹತುವಾದ ಆರಂಭವಾಯಿತು ಮತ್ತು ಭಾರತೀಯ ಜೀವನಶೈಲಿ ಮಾತ್ರವಲ್ಲ, ಭಾರತದ ಭೌತಿಕ ಹಾಗೂ ಆದಿಭೌತಿಕ ವಿಚಾರಗಳನ್ನು ಪಾಶ್ಚಾತ್ಯರು ಆಳವಾಗಿ ಅಧ್ಯಯನ ಮಾಡಲು ಆರಂಭಿಸಿದರು. ಆರಂಭದಲ್ಲಿ ಫ್ರೆಂಚ್ ಅಧ್ಯಯನಕಾರರು ಮುಂಚೂಣಿಯಲ್ಲಿದ್ದರು. ಫ್ರಾನ್ಸ್‌ನ ೧೫ ನೇಯ ರಾಜ ಲುಯಿ ಇವರ ಗ್ರಂಥಪಾಲಕನು ೧೮ ನೆಯ ಶತಮಾನದ ಆರಂಭದಲ್ಲಿ ಭಾರತದಲ್ಲಿ ಧರ್ಮಪ್ರಚಾರಕ್ಕಾಗಿ ಬಂದಿರುವ ಜೆಜುಯಿಟ್ ಧರ್ಮಪ್ರಚಾರಕರಿಗೆ ಸಂಸ್ಕೃತ ಹಸ್ತಲಿಖಿತಗಳನ್ನು ಸಂಗ್ರಹಿಸಿ ತರಲು ಹೇಳಿದ್ದರು. ಇದನ್ನು ಯುರೋಪಿನ ಸಂಸ್ಕೃತದ ಶಾಸ್ತ್ರಬದ್ಧ ಹಸ್ತಲಿಖಿತ ಸಂಗ್ರಹದ ಪ್ರಾರಂಭವೆಂದು ಹೇಳಬಹುದು. ಬಂಗಾಲದ ಚಂದ್ರನಗರದ ಫ್ರೆಂಚ್ ವಸತಿಯಲ್ಲಿನ ಧರ್ಮಪ್ರಚಾರಕ ಜೀನ್- ಫ್ರಾನ್‌ಕೊಯೀಸ್ ಪೋನ್ಸ್ (Jean-Francois Pons) ಇವರು ಅನೇಕ ವಿಷಯಗಳಲ್ಲಿ ಸಂಸ್ಕೃತದ ಹಸ್ತಲಿಖಿತಗಳನ್ನು ಸಂಗ್ರಹಿಸಿ ಅವುಗಳನ್ನು ವರ್ಗೀಕರಣ ಮಾಡಿ ಫ್ರಾನ್ಸ್‌ನ ಗ್ರಂಥಾಲಯದಲ್ಲಿ ಒಟ್ಟುಮಾಡಿದರು. ಎನ್ತೋನ್ ಲಿಓನಾರ್ದ ಛೆಝೀ (Antoine Leonard Chezy) ಇವರು ಫ್ರಾನ್ಸ್ ಮತ್ತು ಯುರೋಪಿನಲ್ಲಿ ಮೊದಲ ಸಂಸ್ಕೃತ ಶಿಕ್ಷಕರಾಗಿದ್ದರು. ಪೋನ್ಸ್‌ನು ಸಂಗ್ರಹ ಮಾಡಿರುವ ಸಂಸ್ಕೃತ ಹಸ್ತಲಿಖಿತಗಳಿಂದ ಅವರು ಸಂಸ್ಕೃತವನ್ನು ಕಲಿತರು. ಈ ಪರಂಪರೆಯ ಅನೇಕ ಫ್ರೆಂಚ್ ಸಂಸ್ಕೃತ ಅಧ್ಯಯನಕಾರರು ಭಾರತೀಯ ಖಗೋಲಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವನಶೈಲಿಯ ಮೇಲೆ ಅನೇಕ ಅಧ್ಯಯನಪೂರ್ಣ ಗ್ರಂಥಗಳನ್ನು ಬರೆದರು. ಫ್ರೆಂಚ್‌ರ ಈ ಪರಂಪರೆಯು ಇಂದು ಕೂಡ ಮುಂದುವರಿದಿದೆ. ಜರ್ಮನಿಯವರ ಪರಂಪರೆಯು ಇದಕ್ಕಿಂತಲೂ ದೊಡ್ಡದಾಗಿದೆ, ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಲಂಡ್‌ನಿಂದ ರಶ್ಯಾದವರೆಗೆ ಹೆಚ್ಚಿನ ಎಲ್ಲ ದೇಶಗಳು ಭಾರತೀಯ ತತ್ತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿವೆ. ಅವರು ದೇವತಾ ಶಾಸ್ತ್ರದ ಅಧ್ಯಯನವನ್ನೂ ದೊಡ್ಡ ಪ್ರಮಾಣದಲ್ಲಿ ಮಾಡಿದ್ದರೂ, ವೇದ, ಉಪನಿಷತ್ತು ಮತ್ತು ಭಾರತೀಯ ದರ್ಶನಶಾಸ್ತ್ರ ಇವೆಲ್ಲವೂ ಮೂಲದಲ್ಲಿ ಅವರಿಗೆ ಆಕರ್ಷಣೆಯ ವಿಷಯಗಳಾಗಿದ್ದವು.
೩. ಭಾರತೀಯ ಅಧ್ಯಾತ್ಮಶಾಸ್ತ್ರದ ಮಹತ್ವ !
ಭಾರತೀಯ ಅಧ್ಯಾತ್ಮದ ಮೌಲ್ಯ ಮತ್ತು ಆವಶ್ಯಕತೆಯು ಪೇಟೆಯಲ್ಲಿನ ವಸ್ತುಗಳ ಮೌಲ್ಯಕ್ಕಿಂತ ಎಷ್ಟೋಪಟ್ಟು ಹೆಚ್ಚಿದೆ. ಭಾರತೀಯ ಜೀವನಶೈಲಿ, ದೇವತಾಶಾಸ್ತ್ರಗಳಿಂದ ವಾಸ್ತುಶಾಸ್ತ್ರದವರೆಗೆ ಆಳವಾದ ಸಂಶೋಧನೆಯಾಗಿದ್ದರೂ, ಅನೇಕ ಶತಮಾನಗಳಿಂದ ಉಪನಿಷತ್ತು ಮತ್ತು ದಾರ್ಶನಿಕ ತತ್ತ್ವಜ್ಞಾನ ಜಗತ್ತಿನ ಎಲ್ಲ ಪ್ರಜ್ಞಾವಂತರಿಗೆ ಹೊಸ ವಿಚಾರಗಳನ್ನು ಮಾಡಲು ಉತ್ತೇಜಿಸಿದೆ.
೪. ಹಿಂದೂಗಳ ಹಬ್ಬಗಳ ವ್ಯಾಪಾರೀಕರಣ
ಇಂದು ನಾವು ನಮ್ಮ ಹಬ್ಬಗಳಿಂದ ಹಿಡಿದು ದೇವತೆಗಳವರೆಗೆ ಎಲ್ಲವನ್ನೂ ವ್ಯಾಪಾರೀಕರಣ ಮಾಡಿದ್ದೇವೆ. ಮೊಸರುಕುಡಿಕೆಯಿರಲಿ, ಗಣೇಶೋತ್ಸವವಿರಲಿ ಅಥವಾ ದೀಪಾವಳಿಯಿರಲಿ, ಇಂದು ಇಲ್ಲಿನ ರಾಜಕಾರಣಿಗಳು ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ವ್ಯಾಪಾರೀಕರಣ ಮಾಡಿದ್ದಾರೆ. ಇಂದು ನಾವೇ ನಮ್ಮ ತತ್ತ್ವಜ್ಞಾನದಿಂದ ದೂರ ಹೋಗಿದ್ದೇವೆ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದ ದಿವಾಳಿಕೋರತನವೇ ಇದಕ್ಕೆ ಕಾರಣವಾಗಿದೆ. ಭಕ್ತರು ಶ್ರದ್ಧೆಯಿಂದ ಅರ್ಪಣೆ ಮಾಡಿದ ದಾನವನ್ನು ದೊಡ್ಡ ದೊಡ್ಡ ದೇವಸ್ಥಾನಗಳಿಂದ ದೊಡ್ಡ ಪ್ರಮಾಣದಲ್ಲಿ ಕೊಳ್ಳೆಹೊಡೆಯುವುದು ಕೇವಲ ಲಜ್ಜಾಸ್ಪದ ಮಾತ್ರವಲ್ಲ, ದುಃಖದಾಯಕವೂ ಆಗಿದೆ. ಇದರಿಂದಲೇ ಚಾರಿತ್ರ್ಯಾ ಶೂನ್ಯ, ದಿಶಾಹೀನ, ಜಡತ್ವವಾದಿ ಸಮಾಜ ತಯಾರಾಗುತ್ತದೆ. ಸಮಾಜದ ಪ್ರೇರಣಾಸ್ಥಾನಗಳೇ ನಾಶವಾದಾಗ ಎಲ್ಲ ವಿಷಯಗಳ ಮೇಲಿನ ವಿಶ್ವಾಸವೇ ಕಡಿಮೆಯಾಗುತ್ತದೆ.
ಹಿಂದೂ ತತ್ತ್ವಜ್ಞಾನದ ಗಂಧಗಾಳಿಯೂ ಇಲ್ಲದ ಮತ್ತು ಕಂಠಪೂರ್ತಿ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜಕಾರಣಿಗಳು, ವ್ಯಾವಹಾರಿಕ ಢಾಂಬಿಕ ಬಾಬಾಗಳು ಮತ್ತು ಮಹಂತರ ಧರ್ಮಪ್ರೇಮ ಮತ್ತು ಧರ್ಮರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಾರಾಷ್ಟ್ರದಲ್ಲಿಯಂತೂ ಹಿಂದೂಗಳ ಹಬ್ಬಗಳ ಮೇಲೆ ರಾಜಕಾರಣಿಗಳು ತೆಗೆದುಕೊಂಡಿರುವ ನಿಯಂತ್ರಣ ಮತ್ತು ಅವರು ನಡೆಸಿರುವ ವ್ಯಾಪಾರೀಕರಣಕ್ಕೆ ಮತ್ತು ಧರ್ಮರಕ್ಷಣೆಗೆ ಸ್ವಲ್ಪವೂ ಸಂಬಂಧವಿಲ್ಲ. ಆದುದರಿಂದ ಇದನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. (ಆಧಾರ: ತ್ರೈಮಾಸಿಕ ‘ಸದ್ಧರ್ಮ, ಎಪ್ರಿಲ್ ೨೦೧೮)