ಔಷಧಂ ಜಾನ್ಹವೀತೋಯಮ್ |

ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿ.ಎಚ್.ಯು.) ನ್ಯೂರೋಲಾಜಿ ವಿಭಾಗದ ತಂಡದವರು ‘ಗಂಗಾನದಿಯ ನೀರನ್ನು ಸೇವಿಸುವ ಶೇ. ೯೦ ರಷ್ಟು ಜನರಿಗೆ ಕೊರೋನಾ ಸೋಂಕು ತಗಲುವುದಿಲ್ಲ’, ಎಂಬುದನ್ನು ಸಂಶೋಧನೆ ಮಾಡಿ ಅದರ ವರದಿಯನ್ನು ‘ಮೆಡಿಕಲ್ ಸೈನ್ಸ್ ಎಥಿಕಲ್ ಸಂಸ್ಥೆಗೆ ಕಳುಹಿಸಿದ್ದಾರೆ. ಅದರ ಒಪ್ಪಿಗೆ ಸಿಕ್ಕಿದ ನಂತರ ಗಂಗಾಜಲ ಮತ್ತು ಸಾಮಾನ್ಯ ನೀರನ್ನು ಪರಿಶೀಲನೆ ಮಾಡಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದ ಲೇಖನವನ್ನು ಪ್ರಖ್ಯಾತ ‘ಮೈಕ್ರೊಬಯೋಲಾಜಿ ಈ ಅಮೇರಿಕಾದ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಗಂಗಾಮಹಾತ್ಮೆ

‘ಔಷಧಂ ಜಾನ್ಹವೀತೋಯಮ್ ಅಂದರೆ ‘ಗಂಗಾ ಜಲವು ನಿಜವಾದ ಔಷಧಿಯಾಗಿದೆ. ಹಿಮಾಲಯದ ಹಾಗೂ ಗಂಗೆಯ ಮಾರ್ಗದಲ್ಲಿನ ಅಕ್ಷರಶಃ ನೂರಾರು ಔಷಧಿ ವನಸ್ಪತಿಗಳು ಹಾಗೂ ಪರ್ವತಸಾಲಿನಲ್ಲಿರುವ ಬಂಡೆಕಲ್ಲುಗಳು ತಮ್ಮಲ್ಲಿರುವ ಔಷಧದ ಗುಣಧರ್ಮವನ್ನು ನೀರಿನಲ್ಲಿ ಮಿಶ್ರಣ ಮಾಡುತ್ತವೆ. ಇವುಗಳಲ್ಲಿ ಲೋಳೆಸರದಿಂದ ಹಿಡಿದು ಆಡುಸೋಗೆಯವರೆಗೆ ಹಾಗೂ ನೀಲಗಿರಿಯಿಂದ ದೇವದಾರದವರೆಗೆ ಅಂದರೆ ವನಸ್ಪತಿಗಳಿಂದ ಹಿಡಿದು ವೃಕ್ಷಗಳವರೆಗೆ ಮಿಶ್ರಣವಾಗಿರುವ ಸತ್ತ್ವವು ಅದನ್ನು ಆರೋಗ್ಯದಾಯಕವನ್ನಾಗಿಸುತ್ತವೆ. ಚರಕಸಂಹಿತೆಯಲ್ಲಿ ಗಂಗಾಜಲವನ್ನು ಔಷಧಿಯೆಂದು ವರ್ಣಿಸಲಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಜೀರ್ಣ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸುವುದು, ‘ಮಲ್ಟಿರೆಸಿಸ್ಟೇಂಟ್ ಅಂದರೆ ವಿವಿಧ ರೀತಿಯ ಔಷಧಿಗಳಿಂದ ಗುಣವಾಗದಂತಹ ರೋಗಿಗಳ ಸ್ಥಿತಿ ಸುಧಾರಿಸುವುದು, ಗಾಯಗಳು ಗುಣವಾಗುವುದು ಇಂತಹ ಅಸಾಧಾರಣ ವೈಶಿಷ್ಟ್ಯಗಳಿರುವ ಗಂಗಾಜಲವು ಪ್ರಾಣದಾಯಿನಿಯಾಗಿದೆ.

ವಾರಣಾಸಿಯ ಗಂಗಾಜಲವು ಶೇ. ೮೦ ರಷ್ಟು ವಿಷಯುಕ್ತ ರಾಸಾಯನಿಕ ಮಾಲಿನ್ಯವನ್ನು ದೂರಗೊಳಿಸುತ್ತದೆ. ಗಂಗೆಯಲ್ಲಿ ಪ್ರಾಣವಾಯು ಹೆಚ್ಚು ಪ್ರಮಾಣದಲ್ಲಿರುವುದರಿಂದ ಶೀಘ್ರಗತಿಯಲ್ಲಿ ಮಲಿನ ಜಲದಲ್ಲಿನ ಪ್ರಾಣವಾಯುವಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಮೇರಿಕಾದ ‘ಸ್ಟೇಟ್ಸ್‌ಮನ್ ಈ ಸುಪ್ರಸಿದ್ಧ ನಿಯತ ಕಾಲಿಕೆಯು ೧೯೮೧ ರಲ್ಲಿಯೇ ಈ ಸಂಶೋಧನೆಗೆ ಪ್ರಸಿದ್ಧಿಯನ್ನು ನೀಡಿತ್ತು. ಅಮೇರಿಕಾದ ವಿಚಾರವಂತ ಹಾಗೂ ನಟ ಮಾರ್ಕ್ ಟ್ವೇನ್ ಇವರು ‘ಗಂಗೆಯ ಅಶುದ್ಧ ನೀರು ಕೂಡ ೬ ಗಂಟೆಗಳಲ್ಲಿ ಜಂತುರಹಿತವಾಗುತ್ತದೆ, ಎಂದು ಸಂಶೋಧನೆ ಮಾಡಿ ಅದು ಪ್ರಭಾವಿ ಜಂತುನಾಶಕ ಹಾಗೂ ಶುದ್ಧಿಕಾರಕವಾಗಿದೆಯೆಂದು ಸಿದ್ಧಪಡಿಸಿದ್ದಾರೆ. ‘ಮಲಿನ ಗಂಗಾಜಲದಲ್ಲಿ ಲಕ್ಷಗಟ್ಟಲೆ ಜನರು ಸ್ನಾನ ಮಾಡಿಯೂ ಅವರಿಗೆ ಕಾಲರಾ ಬರುವುದಿಲ್ಲ, ಇದೊಂದು ದೊಡ್ಡ ಚಮತ್ಕಾರವಾಗಿದೆ, ಎಂದು ಕೆನಡಾದ ಸಂಶೋಧಕ ಹ್ಯಾರಿಸನ್ ಇವರು ಹೇಳಿದ್ದಾರೆ. ಇದು ಪಾಶ್ಚಾತ್ಯರ ದಾಖಲೆಯಾಯಿತು; ಆದರೆ ‘ಪಾಚಿ ಮತ್ತು ಕೆಸರು ಇರುವ ನಿನ್ನ ನೀರು ನನ್ನ ಪಾಪವನ್ನು ದೂರ ಮಾಡುತ್ತಾ ಇರಲಿ, ಎನ್ನುವ ಶಬ್ದಗಳಲ್ಲಿ ‘ಗಂಗಾಲಹರಿ ಈ ಸ್ತೋತ್ರದಲ್ಲಿ ಅದರ ವರ್ಣನೆಯನ್ನು ಏಕೆ ಮಾಡಲಾಗಿದೆ, ಎಂಬುದು ಇದರಿಂದ ಅರಿವಾಗುತ್ತದೆ. (ಅಸಾಧ್ಯ ರೋಗಗಳಾಗುವುದರ ಹಿಂದಿನ ಕಾರಣಗಳಲ್ಲಿ ಪಾಪವು ಮುಖ್ಯ ಕಾರಣವೆಂದು ಹಿಂದೂ ಧರ್ಮದ ನಂಬಿಕೆಯಾಗಿದೆ.) ಧರ್ಮ ಶಾಸ್ತ್ರದಲ್ಲಿ ಮಂಡಿಸಿರುವ ಸಿದ್ಧಾಂತಗಳು ಹೇಗೆ ಸತ್ಯವಾಗಿರುತ್ತವೆ, ಎಂಬುದು ಈಗ ವಿಜ್ಞಾನದಿಂದಲೂ ದೃಢವಾಗುತ್ತದೆ. ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೇನು ಬೇಕು ?

ಐ.ಸಿ.ಎಮ್.ಆರ್. ಇದನ್ನು ಗಮನಿಸಬಹುದೇ ?

ಕೇಂದ್ರ ಸರಕಾರವು ‘ನಮಾಮಿ ಗಂಗೆ ಈ ಗಂಗಾಶುದ್ಧೀಕರಣದ ಬಹುದೊಡ್ಡ ಆಂದೋಲನವನ್ನು ಕೈಗೆತ್ತಿಕೊಂಡು ಅದನ್ನು ಶುದ್ಧೀ ಕರಣ ಮಾಡುತ್ತಿದೆ, ಗಂಗೆಯ ಮಹತ್ವದ ಅರಿವಿದ್ದ ಕಾರಣವೇ ಆಗಿದೆ. ಗಂಗೆಯ ತೀರದಲ್ಲಿರುವ ೪೫ ಜಿಲ್ಲೆಗಳ ತುಲನೆಯಲ್ಲಿ ಕೊರೋನಾದ ರೋಗಿಗಳ ಸಂಖ್ಯೆ ಕಡಿಮೆ ಇದೆ ಹಾಗೂ ರೋಗಿಗಳು ತ್ವರಿತಗತಿಯಲ್ಲಿ ಗುಣಮುಖರಾಗುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತಿದೆ. ‘ಸರಕಾರವು ಈ ಹೊಸ ಸಂಶೋಧನೆಯ ಕಡೆಗೆ ಗಂಭೀರವಾಗಿ ಗಮನಹರಿಸಿ ಅದರಲ್ಲಿನ ಮುಂದಿನ ಸಂಶೋಧನೆಗೆ ಚಾಲನೆ ಹೇಗೆ ಸಿಗಬಹುದು, ಎಂಬುದರ ಕಡೆಗೆ ಗಮನ ಹರಿಸಬೇಕು, ಎಂದು ಇದಕ್ಕೆ ಸಂಬಂಧಿಸಿದ ಅನೇಕ ಸಂಶೋಧಕರಿಗೆ ಮನಸ್ಸಿನಿಂದ ಅನಿಸುತ್ತದೆ. ‘ಕೊರೋನಾದ ಮಹಾಮಾರಿಗೆ ಗಂಗಾಜಲದಿಂದ ಸ್ವಲ್ಪ ಪ್ರಮಾಣದಲ್ಲಿಯಾದರೂ ಪರಿಣಾಮವಾಗುತ್ತಿದೆ ಮತ್ತು ಪ್ರತಿಬಂಧನಾತ್ಮಕ ಉಪಾಯವೆಂದು ಗಂಗಾಜಲವನ್ನು ಹೇಗೆ ಉಪಯೋಗಿಸಬಹುದು, ಎಂಬುದು ಅದರ ಪ್ರಾಥಮಿಕ ಸಂಶೋಧನೆಯಿಂದ ಮುಂದೆ ಬರುತ್ತಿದೆ. ಈ ಗಂಗಾಶುದ್ಧೀಕರಣದಿಂದ ಗಂಗೆಯಲ್ಲಿನ ಸಾತ್ತ್ವಿಕತೆ ಮತ್ತು ಔಷಧ ತತ್ತ್ವವು ಹೆಚ್ಚಾಗಿರಬಹುದು. ಈ ವಿಪುಲ ಗಂಗಾಜಲವನ್ನು ಔಷಧೀಯ ರೂಪದಲ್ಲಿ ಉಪಯುಕ್ತಗೊಳಿಸುವ ಪ್ರಯತ್ನವು ನೈಸರ್ಗಿಕ ಹಾಗೂ ಕಡಿಮೆ ಖರ್ಚಿನದ್ದಾಗಬಹುದು; ಆದರೆ ಐ.ಸಿ.ಎಮ್.ಆರ್. (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಇದನ್ನು ಸ್ವೀಕರಿಸಿದರೆ ಮಾತ್ರ ಮುಂದಿನ ವಿಷಯವನ್ನು ಸಾಧಿಸಬಹುದು. ‘ಅತುಲ್ಯ ಗಂಗಾ ಈ ಸಾಮಾಜಿಕ ಸಂಸ್ಥೆಯ ಹೇಳಿಕೆಗನುಸಾರ ಗಂಗೆಯಲ್ಲಿರುವ ವಿಶಿಷ್ಟ ತರಹದ ವೈರಾಣುಗಳಲ್ಲಿ ಕೊರೋನಾ ವೈರಾಣುವನ್ನು ಪ್ರತಿಬಂಧಿಸುವ ಶಕ್ತಿಯಿದೆ ಹಾಗೂ ಅದು ನಮ್ಮನ್ನು ರಕ್ಷಿಸಬಹುದು. ಈ ಸಂಸ್ಥೆ ಮತ್ತು ಇತರ ಕೆಲವು ಸಂಶೋಧಕ ಸಂಸ್ಥೆಗಳು ಗಂಗೆಯ ವಿಷಯದಲ್ಲಿ ಜಲಶಕ್ತಿ ಸಚಿವಾಲಯಕ್ಕೆ ಪತ್ರಗಳನ್ನು ಕಳುಹಿಸಿವೆ. ಅದು ಅವುಗಳನ್ನು ಐ.ಸಿ.ಎಮ್.ಆರ್. ಗೆ ಕೊಟ್ಟಿವೆ. ಕೆಲವು ಆಸ್ಪತ್ರೆಗಳು ಮತ್ತು ಆಧುನಿಕ ವೈದ್ಯರು ಈ ಸಂಶೋಧನೆಗೆ ಸಹಕರಿಸಲು ಸಿದ್ಧರಿದ್ದಾರೆ.

ಸ್ವಚ್ಛ ಗಂಗಾ ಸಚಿವಾಲಯ ಮತ್ತು ‘ನಮಾಮಿ ಗಂಗಾ ಯೋಜನೆಯ ವತಿಯಿಂದಲೂ ಐ.ಸಿ.ಎಮ್.ಆರ್. ಗೆ ಪತ್ರ ಹೋಗಿದೆ; ಆದರೆ “ಸದ್ಯಕ್ಕಂತೂ ನಾವು ಈ ವಿಷಯದಲ್ಲಿನ ಅಧ್ಯಯನದಲ್ಲಿ ಸಮಯ ಕೊಡಲು ಇಚ್ಛಿಸುವುದಿಲ್ಲ. ಈ ಸಂಶೋಧನೆಯು ಅತ್ಯಂತ ಪ್ರಾಥಮಿಕ ಹಂತದಲ್ಲಿದೆ. ಮುಂದಿನ ಕೃತಿಗಳ ವಿಷಯದಲ್ಲಿ ಏನೂ ಮಾಡಿಲ್ಲ. ಅದರ ಸಂಶೋಧನೆಗೆ ಅನೇಕ ವರ್ಷಗಳೇ ಬೇಕಾಗುವವು; ಆದರೆ ಸರಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡೋಣ, ಎಂದು  ಐ.ಸಿ.ಎಮ್.ಆರ್. ಸರಕಾರಕ್ಕೆ ತಿಳಿಸಿದೆ. ಆದರೂ ಐ.ಸಿ.ಎಮ್.ಆರ್. ಸಂಶೋಧನೆಗೆ ಸಂಬಂಧಿಸಿ ಸರಕಾರದೊಂದಿಗೆ ಚರ್ಚೆ ಮಾಡಿ ಏನಾದರೂ ಮಾರ್ಗವನ್ನು ಕಂಡು ಹಿಡಿಯಲು ಪ್ರಯತ್ನ ಮಾಡಬಹುದು. ಕೊರೋನಾದ ಗಂಭೀರ ಮಹಾಮಾರಿಗೆ ಪ್ರಾರಂಭದಲ್ಲಿಯೇ ಪ್ರತಿಬಂಧನಾತ್ಮಕ ಉಪಾಯವೆಂದು ಗಂಗಾಜಲವನ್ನು ಸೇವನೆ ಮಾಡಿದರೆ ಸ್ವಲ್ಪಮಟ್ಟಿಗಾದರೂ ಲಾಭವಾಗಬಹುದು, ಎಂಬುದು ಇದರಿಂದ ಅರಿವಾಗುತ್ತದೆ. ಈಗ ಇದಕ್ಕೆ ಬೇರೆ ಯಾರೂ ಪ್ರಮಾಣಪತ್ರ ಕೊಡುವ ಆವಶ್ಯಕತೆಯಿಲ್ಲ. ಸದ್ಯದ ಸ್ಥಿತಿಯಲ್ಲಿ ರಶ್ಯಾ ಕಂಡು ಹಿಡಿದ ಲಸಿಕೆಯ ದುಷ್ಪರಿಣಾಮಗಳು ಕಂಡು ಬರುತ್ತಿವೆ. ಭಾರತದಲ್ಲಿನ ಸಂಸ್ಥೆಗಳು ಕೂಡ ಲಸಿಕೆಗಳನ್ನು ತಯಾರಿಸುವ ಕೆಲಸವನ್ನು ನಿಲ್ಲಿಸಿವೆ ಹಾಗೂ ಅಮೇರಿಕಾ ಕೂಡ ಇದುವರೆಗೆ ಲಸಿಕೆಯ ವಿಷಯದಲ್ಲಿ ಯಾವುದೇ ವಿಶ್ವಾಸಾರ್ಹವಾದ ಹೇಳಿಕೆ ನೀಡಿಲ್ಲ. ಮಹಾಶಕ್ತಿಶಾಲಿಯಾಗಿರುವ ಅಮೇರಿಕಾ ಕೂಡ ನಿಸರ್ಗದ ಮುಂದೆ ಈ ವಿಷಯದಲ್ಲಿ ಹತಾಶವಾಗಿದೆ. ಕೊರೋನಾದ ಸಂಕಟವನ್ನು ತಡೆಗಟ್ಟುವ ಬಗ್ಗೆ ಮಾತನಾಡದಿರುವಾಗ ಭಾರತದಲ್ಲಿ ಮಾತ್ರ ಅನೇಕ ಪಾರಂಪರಿಕ ಪ್ರತಿಬಂಧ ನಾತ್ಮಕ ಉಪಾಯಗಳನ್ನು ಸಮಾಜದ ಜನರು ಮಾಡುತ್ತಿರುವುದು ಕಾಣಿಸುತ್ತಿದೆ. ಈ ನಿಮಿತ್ತದಲ್ಲಿ ಸಮಾಜ ಆಯುರ್ವೇದದ ಕಡೆಗೆ ತಿರುಗಿದೆ ಹಾಗೂ ಒಂದಲ್ಲ ಒಂದು ಉಪಾಸನೆಯನ್ನು ಮಾಡುವ ಬಗ್ಗೆಯೂ ಅವರ ಒಲವು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗಂಗಾ ನೀರಿನ ವಿಷಯದಲ್ಲಿ ಇಂದಿನವರೆಗೆ ಆಗಿರುವ ಸಂಶೋಧನೆಗಳು ಅಂತಿಮ ಹಂತದ್ದಾಗಿರದಿದ್ದರೂ, ದುರ್ಲಕ್ಷ ಮಾಡುವ ಹಾಗಿಲ್ಲ. ‘ಮೇಲಿಂದ ಮಲಿನವಾಗಿ ಕಾಣಿಸುವ ಈ ಚೈತನ್ಯಮಯ ಜಲದಲ್ಲಿ ವೈರಾಣುಗಳು ನಾಶವಾಗಿ ರೋಗಮುಕ್ತಗೊಳಿಸುವ ಶಕ್ತಿಯಿರುವುದು, ಇದು ಅದರ ಅಲೌಕಿಕತೆಯ ಪ್ರತ್ಯಕ್ಷ ಪ್ರಮಾಣವಾಗಿದೆ. ಭಾರತೀಯರ ಸೌಭಾಗ್ಯದಿಂದ ಅವರಿಗೆ ಚೈತನ್ಯದಾಯಕ ಜಲ, ಭೂಮಿ, ಔಷಧಶಾಸ್ತ್ರ ಇತ್ಯಾದಿ ಎಲ್ಲವೂ ಪ್ರಾಪ್ತಿಯಾಗಿದೆ. ಭಾರತೀಯರು ಹೆಚ್ಚಿನವರು ಶ್ರದ್ಧಾವಂತ ಮನೋಭಾವದವರಾಗಿದ್ದಾರೆ ಹಾಗೂ ಶ್ರದ್ಧೆಯ ಬಲದಿಂದ ಪಂಚಮಹಾಭೂತಗಳ ಸಹಾಯದಿಂದ ಅವರು ಪ್ರತಿಯೊಂದು ಸಂಕಟವನ್ನು ಜಯಿಸುವರು, ಎಂಬುದರಲ್ಲಿ ಸಂಶಯವಿಲ್ಲ.