‘ತನಿಷ್ಕಕ್ಕೆ ಬಹಿಷ್ಕಾರದ ಪಾಠ !

‘ತನಿಷ್ಕ ಇದು ‘ಲವ್ ಜಿಹಾದ್ಗೆ ಪ್ರೋತ್ಸಾಹ ನೀಡುವ ಜಾಹೀರಾತನ್ನು ಪ್ರಸಾರ ಮಾಡಿದ ನಂತರ ಹಿಂದೂಗಳು ಟ್ವಿಟರ್ ಮೂಲಕ ‘ತನಿಷ್ಕದ ವಿರುದ್ಧ ತೀವ್ರ ಆಂದೋಲನ ನಡೆಸಿದರು. ಇದರ ಪರಿಣಾಮದಿಂದಾಗಿ, ‘ತನಿಷ್ಕದವರು ಈ ಜಾಹೀರಾತನ್ನು ಹಿಂಪಡೆಯಬೇಕಾಯಿತು. ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಿರುವ ವಿರೋಧವನ್ನು ನೋಡಿ ಭಯಭೀತರಾದ ‘ತನಿಷ್ಕದವರು ವ್ಯಾವಹಾರಿಕ ಬುದ್ಧಿವಂತಿಕೆಯನ್ನು ತೋರಿಸಿದರು. ಈ ಜಾಹೀರಾತನ್ನು ವಿರೋಧಿಸುವವರು ಹೆಚ್ಚಿನವರು ಹಿಂದೂಗಳಾಗಿದ್ದಾರೆ; ಏಕೆಂದರೆ ಹಿಂದೂಗಳಿಗೆ ‘ಲವ್ ಜಿಹಾದ್ನ ಬಿಸಿ ಮುಟ್ಟಿದೆ. ‘ಮುಂಬರುವ ದಸರಾ-ದೀಪಾವಳಿಯ ಉತ್ಸವಕಾಲದಲ್ಲಿ ವ್ಯಾಪಾರದಲ್ಲಿ ಹಾನಿಯಾಗಬಾರದೆಂದು, ಬಹುಶಃ ಈ ಕಂಪನಿ ಹೀಗೆ ವಿಚಾರ ಮಾಡಿರಬಹುದು. ಜಾಹೀರಾತನ್ನು ಹಿಂಪಡೆಯುವಾಗ ಕಂಪನಿಯು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಅದರಲ್ಲಿ ‘ನಮ್ಮ ಸಹೋದ್ಯೋಗಿಗಳ ಮತ್ತು ಸಿಬ್ಬಂದಿಗಳ ಹಿತವನ್ನು ಗಮನದಲ್ಲಿಟ್ಟು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ, ಎಂದು ಹೇಳಿದೆ. ಸಂಕ್ಷಿಪ್ತದಲ್ಲಿ ತಮ್ಮ ಸಿಬ್ಬಂದಿಗಳಿಗೆ ನೋವಾಗಬಾರದೆಂದು ಅಥವಾ ಅಂಗಡಿಯ ಮೇಲೆ ಹಲ್ಲೆಯಾಗುವ ಭಯದಿಂದ ಕಂಪನಿಯು ಈ ನಿರ್ಣಯವನ್ನು ತೆಗೆದುಕೊಂಡಿದೆ. ಇದರಲ್ಲಿಯೂ ಈ ಕಂಪನಿಯ ಹಿಂದೂದ್ವೇಷವು ಎದ್ದು ಕಾಣುತ್ತದೆ.

ಈ ರೀತಿಯ ಪ್ರಕಟಣೆಯನ್ನು ಹೊರಡಿಸಿ ಅದು ತೆರೆಮರೆಯಲ್ಲಿ ಹಿಂದೂಗಳನ್ನು ‘ಕಟ್ಟರ್‌ವಾದಿ, ‘ಮೂಲಭೂತವಾದಿ ಮತ್ತು ‘ಆಕ್ರಮಕ ಇತ್ಯಾದಿಯಾಗಿ ಬಣ್ಣಿಸುವ ಪ್ರಯತ್ನ ಮಾಡಿದೆ. ‘ತನಿಷ್ಕದ ವಿರುದ್ಧ ಹಿಂದೂಗಳು ಹಮ್ಮಿಕೊಂಡಿರುವ ‘ಆನ್‌ಲೈನ್ ಚಳುವಳಿಯು ಹಿಂದೂಗಳ ಅಭಿವ್ಯಕ್ತಿಯಾಗಿತ್ತು. ಧಾರ್ಮಿಕ ಭಾವನೆಯು ಸಂವೇದನಾಶೀಲ ವಿಷಯವಾಗಿದೆ. ಅದರಲ್ಲಿಯೂ ಇತ್ತೀಚೆಗಿನ ಘಟನೆಗಳನ್ನು ಅವಲೋಕಿಸಿದರೆ ‘ಲವ್ ಜಿಹಾದ್ನ ಪ್ರಮಾಣವು ಹೆಚ್ಚಾಗಿದ್ದು ಹಿಂದೂ ಹುಡುಗಿಯರನ್ನು ಮತಾಂಧರು ನಿರಂತರ ಗುರಿ ಮಾಡುತ್ತಾರೆ. ಈ ಕೃತ್ಯವನ್ನು ತಡೆಗಟ್ಟಲು ಪೊಲೀಸ್, ಆಡಳಿತ ಇತ್ಯಾದಿ ವ್ಯವಸ್ಥೆ ಉದಾಸೀನವಾಗಿದೆ. ಆದ್ದರಿಂದ ಹಿಂದೂಗಳೇ ತಮ್ಮ ಪದ್ಧತಿಯಲ್ಲಿ ಈ ವಿಷಯದಲ್ಲಿ ಜಾಗೃತರಾಗಿ ಇಂತಹ ಕುತೃತ್ಯಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿಯೂ ‘ತನಿಷ್ಕವು ಮುಸಲ್ಮಾನ ಯುವಕನೊಂದಿಗೆ ವಿವಾಹವಾಗಿರುವ ಹಿಂದೂ ಯುವತಿಯ ಸೀಮಂತ ವಿಧಿಯ ವಿಷಯವನ್ನು ಜಾಹೀರಾತಿಗಾಗಿ ಆಯ್ದು ಕೊಂಡಿದೆ. ಇದರಲ್ಲಿಯೇ ‘ತನಿಷ್ಕದ ಬೇಜವಾಬ್ದಾರಿತನ ಹಾಗೂ ಸಾಮಾಜಿಕ ಕಳಕಳಿಯ ವಿಚಾರದ ಅಭಾವ ಇರುವುದು ಕಂಡು ಬರುತ್ತದೆ.

‘ತನಿಷ್ಕಗೆ ಜಾಹೀರಾತಿನ ಮೂಲಕ ‘ಐಕ್ಯತೆಯನ್ನು ತೋರಿಸಲಿಕ್ಕಿತ್ತಂತೆ !

ಜಾಹೀರಾತಿನಲ್ಲಿ ಮುಸಲ್ಮಾನ ಅತ್ತೆ ಹಿಂದೂ ಸೊಸೆಯನ್ನು ಪ್ರೀತಿಸುವ ದೃಶ್ಯ ಕಾಣಿಸುತ್ತದೆ. ವಾಸ್ತವದಲ್ಲಿ ‘ಲವ್ ಜಿಹಾದ್ನ ಅನೇಕ ಪ್ರಕರಣಗಳಲ್ಲಿ ಮುಸಲ್ಮಾನ ಅತ್ತೆಯರು ಹಿಂದೂ ಸೊಸೆಯಂದಿರನ್ನು ಹಿಂಸಿಸಿದ ಘಟನೆಗಳು ಬೆಳಕಿಗೆ ಬಂದಿವೆ. ಆದ್ದರಿಂದ ಈ ಜಾಹೀರಾತು ಸಮಾಜವನ್ನು ವಾಸ್ತವಿಕತೆಯಿಂದ ದೂರ ಒಯ್ಯುವುದಾಗಿದೆ. ಆದ್ದರಿಂದ ಹಿಂದೂಳಿಗೆ ಅದು ಇಷ್ಟವಾಗಲಿಲ್ಲ. ‘ತನಗೆ ಬೇಕಾದ ಹಾಗೆ ಜಾಹೀರಾತನ್ನು ತಯಾರಿಸಿ ಅದನ್ನು ಹಿಂದೂಗಳ ತಲೆಗೆ ಮೆತ್ತುವುದು ಹಾಗೂ ಹಿಂದೂಗಳು ಅದನ್ನು ಸಹಿಸಿಕೊಳ್ಳುವುದು ಈ ವಿಚಾರಸರಣಿಯೇ ಸಮಾಜಕ್ಕೆ ಘಾತಕವಾಗಿದೆ. ಜಾಹೀರಾತು, ಚಲನಚಿತ್ರ, ಮಾಲಿಕೆಗಳ ಮೂಲಕ ಸಮಾಜದ ಮೇಲೆ ವ್ಯಾಪಕ ಪರಿಣಾಮವಾಗುತ್ತಿದೆ. ಆದ್ದರಿಂದ ತನ್ನ ತಪ್ಪಿನ ಬಗ್ಗೆ ಆತ್ಮಚಿಂತನೆ ಮಾಡುವ ಬದಲು ಪುನಃ ಹಿಂದೂಗಳ ದೋಷಾರೋಪಣೆ ಮಾಡುವ ಈ ವೃತ್ತಿಯು ನಿಂದನೀಯವಾಗಿದೆ. ವಿವಿಧ ಮಾಧ್ಯಮಗಳ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ ನಂತರ ಹಿಂದೂಗಳು ಕಾನೂನು ಮಾರ್ಗದಲ್ಲಿಯೇ ಅದನ್ನು ವಿರೋಧಿಸಿದ್ದಾರೆ. ಇತರ ಪಂಥೀಯರು ಮಾತ್ರ ಇಂತಹ ಕೃತಿಗಳ ಬಗ್ಗೆ ಮಾಡುತ್ತಿರುವುದು ಕಾಣಿಸುತ್ತದೆ. ಹೀಗಿರುವಾಗ ಹಿಂದೂಗಳನ್ನೇ ಕೆರಳಿಸುವ ಪ್ರಯತ್ನವು ಆಕ್ರೋಶಕಾರಿಯಾಗಿದೆ. ಹಿಂದೂಗಳ ವಿರೋಧದ ನಂತರ ‘ತನಿಷ್ಕಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹಾನಿಯಾಗಿರುವುದು ಬೆಳಕಿಗೆ ಬಂದಿದೆ. ‘ತನಿಷ್ಕ ಇದೇ ಪದ್ಧತಿ ಅನ್ವಯಿಸಿದರೆ ಮಾತ್ರ ಸರಿದಾರಿಗೆ ಬರುವುದಾದರೆ ಹಿಂದೂಗಳು ಆರ್ಥಿಕ ಬಹಿಷ್ಕಾರದ ಶಸ್ತ್ರವನ್ನು ಹಿಡಿದು ಇಂತಹವರಿಗೆ ಪಾಠ ಕಲಿಸುವರು !