೧೪ ತಿಂಗಳ ನಂತರ ಗೃಹಬಂಧನದಿಂದ ಮುಕ್ತರಾಗಿರುವ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇವರು ‘ದೆಹಲಿ ಕಸಿದುಕೊಂಡಿರುವುದನ್ನು ಹಿಂತಿರುಗಿ ಪಡೆದುಕೊಳ್ಳುವೆವು, ಎನ್ನುವ ದರ್ಪವನ್ನು ತೋರಿಸಿದ್ದಾರೆ. ಕಳೆದ ವರ್ಷ ೩೭೦ ಕಲಮ್ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಬಾರದೆಂದು ಅಲ್ಲಿನ ವಿವಿಧ ನೇತರಾರು, ಪ್ರತ್ಯೇಕತಾವಾದಿಗಳನ್ನು ಗೃಹಬಂಧನದಲ್ಲಿಡಲಾಗಿತ್ತು. ಈ ೧೪ ತಿಂಗಳಲ್ಲಿ ಅವರ ಸಾಮಾಜಿಕ ಖಾತೆಗಳಿಂದ ಮುಫ್ತಿಯವರ ಮಗಳು ನಿಯಮಿತವಾಗಿ ದ್ವೇಷ ಕಾರುತ್ತಿದ್ದಳು. ಆದ್ದರಿಂದ ‘ಮೆಹಬೂಬಾ ಮುಫ್ತಿ ಗೃಹಬಂಧನದಿಂದ ಹೊರಗೆ ಬಂದನಂತರ ಹೀಗೆಯೆ ಏನಾದರೂ ವಿಷ ಕಕ್ಕುವರು, ಎಂಬುದು ಮೊದಲೇ ತಿಳಿದಿತ್ತು. ಅದೇ ರೀತಿ ಅವರು ಮಾತನಾಡಿದರು. ಒಟ್ಟಾರೆ ೩೭೦ ಕಲಮ್ ರದ್ದುಪಡಿಸಿ ಹಾಗೂ ವಿರೋಧಿಗಳನ್ನು ಗೃಹಬಂಧನದಲ್ಲಿಟ್ಟು ಕಾಶ್ಮೀರದಲ್ಲಿನ ಪರಿಸ್ಥಿತಿ ಬದಲಾಗಲಿಲ್ಲ. ಮೆಹಬೂಬಾ, ಫಾರೂಖ ಅಬ್ದುಲ್ಲಾ ಅಥವಾ ಓಮರ್ ಅಬ್ದುಲ್ಲಾ ಇವರ ಹೇಳಿಕೆಗಳನ್ನು ಕೇಳುವಾಗ ಅವರು ಕಾಶ್ಮೀರದಲ್ಲಿ ಮತಾಂಧರನ್ನು ಉದ್ರೇಕಿಸುವ ಏಕೈಕ ಕಾರ್ಯಕ್ರಮವನ್ನು ಮುಂದುವರಿಸುವರು, ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳ ಮತ್ತು ಅವುಗಳ ನೇತಾರರ ವಿಷಯದಲ್ಲಿ ಕೇಂದ್ರ ಸರಕಾರವು ಯೋಗ್ಯವಾದ ಕ್ರಮ ತೆಗೆದುಕೊಳ್ಳಲೇ ಬೇಕಾಗುವುದು. ಇತ್ತೀಚೆಗಷ್ಟೆ ನ್ಯಾಶನಲ್ ಕಾನ್ಫರೆನ್ಸ್‌ನ ನೇತಾರ ಫಾರೂಖ ಅಬ್ದುಲ್ಲಾ ಇವರು ‘ಕಾಶ್ಮೀರದಲ್ಲಿ ೩೭೦ ಕಲಮ್ ಅನ್ವಯಗೊಳಿಸಲು ಚೀನಾ ಸಹಾಯ ಮಾಡಬಹುದು, ಎಂದು ಹೇಳಿಕೆ ನೀಡಿದ್ದರು. ಇದರಿಂದ ಭಾರತದಲ್ಲಿದ್ದು ಭಾರತದ ಕಟ್ಟರ್ ಶತ್ರು ಆಗಿರುವ ಚೀನಾದೊಂದಿಗೆ ಸಂಧಾನ ನಡೆಸುವ ಈ ಪಕ್ಷದ ತಂತ್ರ ಎದ್ದು ಕಾಣುತ್ತದೆ. ಇದು ಬಹಿರಂಗ ದೇಶದ್ರೋಹವಾಗಿದೆ.
ಮೆಹಬೂಬಾ ಮುಫ್ತಿ
ನಾಳೆ ಭಾರತ-ಚೀನಾ ಯುದ್ಧವಾದರೆ ಅಬ್ದುಲ್ಲಾರಂತಹ ಅಂತರಿಕ ಶತ್ರುಗಳು ಚೀನಾದ ಜೊತೆಗಿದ್ದು ಭಾರತಕ್ಕೆ ಹಾನಿಯನ್ನುಂಟು ಮಾಡಲು ಪ್ರಯತ್ನಿಸುವರು. ಇದು ನಮಗೆ ನುಂಗಲಾರದ ತುತ್ತಾಗಲಿಕ್ಕಿಲ್ಲವೆ ? ಕಾಶ್ಮೀರದಲ್ಲಿ ಅಧಿಕಾರಕ್ಕೆ ಬರಬೇಕಾದರೆ, ಮತಾಂಧರನ್ನು ಓಲೈಸಬೇಕಾಗುತ್ತದೆ. ಮತಾಂಧರನ್ನು ಓಲೈಸಬೇಕಾದರೆ, ಉಗ್ರವಾದಿಗಳನ್ನು, ದೇಶದ್ರೋಹಿಗಳನ್ನು ಮತ್ತು ಪಾಕಿಸ್ತಾನವನ್ನು ಓಲೈಸಬೇಕಾಗುತ್ತದೆ. ಮೆಹಬೂಬಾ ಮುಫ್ತಿ ಅಥವಾ ಫಾರುಖ ಅಬ್ದುಲ್ಲಾ ಇವರಿಬ್ಬರಿಗೂ ಇದು ತಿಳಿದಿದೆ. ಆದ್ದರಿಂದ ಅವರನ್ನು ಸಂತುಷ್ಟಗೊಳಿಸಲು ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಲಾಗುತ್ತದೆ. ಆದರೂ ‘ಅವರ ವಿರುದ್ಧ ಕೇಂದ್ರ ಸರಕಾರ ಏಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ?, ಎಂಬುದು ಸಾಮಾನ್ಯ ಭಾರತೀಯರಲ್ಲಿ ಉದ್ಭವಿಸುವ ಪ್ರಶ್ನೆಯಾಗಿದೆ. ಕಾಶ್ಮೀರದಲ್ಲಿ ಜನಸಾಮಾನ್ಯರ ಸಹಾಯದ ಹೊರತು ಉಗ್ರವಾದಿಗಳ ವಿರುದ್ಧ ಅಲ್ಲಿ ಕಾರ್ಯಾಚರಣೆ ಮಾಡುವುದು ಸಾಧ್ಯವಿಲ್ಲ. ಈಗ ಭಾರತೀಯ ಸೈನ್ಯ ಕಠಿಣ ನಿಲುವನ್ನು ಅವಲಂಬಿಸಿರುವುದರಿಂದ ಅಲ್ಲಿನ ಜನರು ಸುಮ್ಮನಿದ್ದಾರೆ; ಆದರೆ ಅವಕಾಶ ಸಿಕ್ಕಿದಾಗ ಮತಾಂಧರು ಪುನಃ ತಲೆಯೆತ್ತುವರು. ಅವರನ್ನು ಸರಿದಾರಿಗೆ ತರಬೇಕಾದರೆ, ಮೊದಲು ಮೆಹಬೂಬಾ ಮುಫ್ತಿ ಮತ್ತು ಇತರ ಪ್ರತ್ಯೇಕತಾವಾದಿಗಳ ಹೆಡೆಮುರಿ ಕಟ್ಟಬೇಕು. ಅದಕ್ಕಾಗಿ ಅವರನ್ನು ಕೇವಲ ಗೃಹಬಂಧನದಲ್ಲಿಟ್ಟರೆ ಸಾಕಾಗದು. ಭವಿಷ್ಯದಲ್ಲಿ ಕಾಶ್ಮಿರದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸರಕಾರ ನಿರ್ಬಂಧ ಹೇರಬೇಕು. ಅದರೊಂದಿಗೆ ಅವರು ಇಂದಿನವರೆಗೆ ಮಾಡಿದ ಎಲ್ಲ ರಾಷ್ಟ್ರವಿರೋಧಿ ಹೇಳಿಕೆಗಳು ಮತ್ತು ಕೃತಿಗಳನ್ನು ಗಮನಿಸಿ ಅವುಗಳ ಹಿರಿಯ ನೇತಾರರನ್ನು ಸೆರೆಮನೆಗೆ ತಳ್ಳಬೇಕು. ಹಾಗೆ ಮಾಡಿದರೆ ಅಲ್ಲಿನ ಮತಾಂಧರಲ್ಲಿ ಭಯ ಉದ್ಭವಿಸಬಹುದು. ಕಾಶ್ಮೀರದಲ್ಲಿ ಪುನಃ ಶಾಂತಿ ನೆಲೆಸಲು ಹಾಗೂ ಉಗ್ರವಾದಿಗಳನ್ನು ಸಂಪೂರ್ಣ ಸದೆಬಡಿಯಲು ಕೇಂದ್ರ ಸರಕಾರ ಹೀಗೆ ಮಾಡುವ ಆವಶ್ಯಕತೆಯಿದೆ.