ಲವ್-ಜಿಹಾದ್ : ಒಂದು ಜಾಗತಿಕ ಷಡ್ಯಂತ್ರ !

ಶ್ರೀ. ರಮೇಶ ಶಿಂದೆ

‘ಇಸ್ಲಾಮ್‌ನಲ್ಲಿ ‘ಜಿಹಾದ್’ ಶಬ್ದವನ್ನು ಪವಿತ್ರವೆಂದು ತಿಳಿಯುತ್ತಾರೆ; ಆದರೆ ಪ್ರಸ್ತುತ ಜಗತ್ತಿನಾದ್ಯಂತ ಜಿಹಾದ್‌ನ ಹೆಸರಿನಲ್ಲಿ ಆಗುತ್ತಿರುವ ಭಯೋತ್ಪಾದನೆ, ನಿರಪರಾಧ ನಾಗರಿಕರ ಹತ್ಯೆ ಮತ್ತು ಆರ್ಥಿಕ ಇವೆಲ್ಲವನ್ನು ನೋಡಿದಾಗ ಜಿಹಾದ್ ಶಬ್ದದ ಬಗ್ಗೆಯೇ ಸಂದೇಹ ಮೂಡುತ್ತದೆ. ಭಯೋತ್ಪಾದಕರ ಜಿಹಾದ್ ಸ್ಪಷ್ಟವಾಗಿ ಕಾಣಿಸುತ್ತದೆ. ಅವರೊಂದಿಗೆ ಹೋರಾಡಲು ನಮ್ಮ ಸೈನ್ಯ ಮತ್ತು ಸರಕಾರವು ಸಕ್ಷಮವಿದೆ; ಆದರೆ ಪ್ರೇಮದಂತಹ ಶುದ್ಧ ಭಾವನೆಯನ್ನು ಬಳಸಿ ಲವ್ ಜಿಹಾದ್ ಮಾಡಿದರೆ ಅದರ ವಾಸ್ತವಿಕತೆಯನ್ನು ತಿಳಿದುಕೊಳ್ಳಲು ಮುಗ್ಧಸ್ವಭಾವದ ಹಿಂದೂ ಸಮಾಜಕ್ಕೆ ಕಠಿಣವಾಗುತ್ತದೆ. ಒಂದು ವೇಳೆ ‘ಅವರ ಪ್ರೀತಿಯು ನಿಜವಾಗಿದೆ’, ಎಂದು ಒಪ್ಪಿಕೊಂಡರೂ, ಹಿಂದೂ ಹೆಣ್ಣುಮಕ್ಕಳನ್ನು ಪರಿಚಯಿಸಿಕೊಳ್ಳುವಾಗ ಹಿಂದೂ ಹೆಸರು ಹೇಳುವುದು, ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಳ್ಳುವುದು ಮುಂತಾದ ಕೃತಿಗಳು ಏಕೆ ಬೇಕು ? ಅವರಿಗೆ ತಮ್ಮ ಇಸ್ಲಾಮ್ ಧರ್ಮದ ಮೇಲೆ ವಿಶ್ವಾಸವಿಲ್ಲವೇನು ? ಇನ್ನು ಮುಂದಿನ ಹಂತದಲ್ಲಿ ಹಿಂದೂ ಯುವತಿಯರಿಗೇ ಇಸ್ಲಾಮ್ ಸ್ವೀಕರಿಸಲು ಏಕೆ ಒತ್ತಾಯ ಮಾಡಲಾಗುತ್ತದೆ ? ಯಾವುದೇ ಮುಸಲ್ಮಾನ ಯುವಕನು ತನ್ನ ಪ್ರೀತಿಗಾಗಿ ಹಿಂದೂ ಧರ್ಮವನ್ನು ಏಕೆ ಸ್ವೀಕರಿಸುವುದಿಲ್ಲ ?

೧. ಹಿಂದೂ ಸಹೋದರಿಯರು ಲವ್ ಜಿಹಾದ್‌ಗೆ ಬಲಿಯಾಗುವುದರ ಕಾರಣಗಳು

ಜಗತ್ತಿನಲ್ಲಿ ಇಸ್ಲಾಮಿ ರಾಜ್ಯವನ್ನು ತರುವುದು ಇಸ್ಲಾಮ್‌ನ ಕನಸಾಗಿದೆ ! ಅಂದರೆ ಸಂಪೂರ್ಣ ಜಗತ್ತನ್ನು ‘ದಾರ್-ಉಲ್ ಇಸ್ಲಾಮ್’ ಮಾಡುವುದು ! ಇದಕ್ಕಾಗಿ ಜಿಹಾದ್‌ನ ಯಾವ ಹಂತಕ್ಕೆ ಬೇಕಾದರೂ ಹೋಗಿ ಏನೂ ಬೇಕಾದರೂ ಮಾಡುವ ಸಿದ್ಧತೆ ಅವರಲ್ಲಿದೆ ಇದನ್ನೆಲ್ಲ ಮಾಡಿದರೆ ಸ್ವರ್ಗದ ಅಪ್ಸರೆಯರು ಸಿಗುತ್ತಾರೆ ಎಂಬ ಕನಸನ್ನೂ ಅವರಿಗೆ ಮೌಲ್ವಿಗಳು ತೋರಿಸುತ್ತಾರೆ. ಇವುಗಳಲ್ಲಿ ಲವ್ ಜಿಹಾದ್ ಅತ್ಯಂತ ಸುಲಭ ಮಾರ್ಗವಾಗಿದೆ. ಹಿಂದೂ ಸಹೋದರಿಯರನ್ನು ಯುವವಯಸ್ಸಿನಲ್ಲಿ ಪ್ರೇಮಜಾಲದಲ್ಲಿ ಸಿಲುಕಿಸಲು ಕಷ್ಟವಿಲ್ಲ; ಏಕೆಂದರೆ ಅವರ ತಾಯಿ-ತಂದೆಯರು ಮೊದಲೇ ಧರ್ಮನಿರಪೇಕ್ಷರಾಗಿರುತ್ತಾರೆ. ಹೆತ್ತವರೇ ‘ಗಂಗಾ-ಜಮುನಾ ತಹಜೀಬ್’ ಮತ್ತು ‘ಸರ್ವಧರ್ಮ ಸಮಭಾವ’ ಎಂಬ ಸುಳ್ಳು ಸಂಕಲ್ಪನೆಯನ್ನು ಮನೆಯಲ್ಲಿ ಹೇಳಿರುತ್ತಾರೆ.

ಹಿಂದೂಗಳ ಮನೆಗಳಲ್ಲಿ ಧರ್ಮಾಚರಣೆಗಳೆಲ್ಲ ಮೂಲೆಗುಂಪಾಗಿದೆ. ಈಗ ನಾವು ಪಾಶ್ಚಾತ್ಯ ಪ್ರಗತಿಪರರ ಪರಂಪರೆಯ ಗುಲಾಮರಾಗಿದ್ದೇವೆ. ಹುಟ್ಟುಹಬ್ಬದಂದು ಕೇಕ್ ಕತ್ತರಿಸುವುದು, ಹೊಸ ವರ್ಷವನ್ನು ಡಿಸೆಂಬರ್ ೩೧ ರಂದು ರಾತ್ರಿ ಆಚರಿಸುವುದು ಮುಂತಾದ ಕ್ರೈಸ್ತ ಪದ್ಧತಿಗಳ ಕೃತಿಗಳನ್ನ ಮಾಡುವುದು, ಹಿಂದೂಗಳಿಗೆ ಅಯೋಗ್ಯವೆನಿಸುವುದಿಲ್ಲ. ಅಷ್ಟು ಮಾತ್ರವಲ್ಲದೇ ನಾವು ಇಸ್ಲಾಮ್‌ನ ನಿಜವಾದ ಇತಿಹಾಸದಿಂದ ಅಪರಿಚಿತರಾಗಿದ್ದೇವೆ. ಆದ್ದರಿಂದ ಹಿಂದೂಗಳು ಇದೇ ಧರ್ಮನಿರಪೇಕ್ಷ ವಿಚಾರಸರಣಿಗಳಿಗನುಸಾರ ವಿಚಾರ ಮಾಡುತ್ತಾರೆ ಮತ್ತು ಮೋಸ ಹೋಗುತ್ತಾರೆ. ಇದರಲ್ಲಿ ಹಿಂದಿ ಸಿನೆಮಾ ಸೃಷ್ಟಿಯದ್ದು ಸಹ ದೊಡ್ಡ ಪ್ರಭಾವವಿದೆ. ಎಷ್ಟು ಜನ ‘ಖಾನ್’ ನಟರಿದ್ದಾರೆಯೋ, ಅವರೆಲ್ಲರ ಪತ್ನಿಯರು ಹಿಂದೂಗಳಾಗದ್ದಾರೆ. ಇದರಿಂದಾಗಿಯೂ ಸಾಮಾನ್ಯ ಹಿಂದೂ ಕುಟುಂಬಗಳ ಹೆಣ್ಣುಮಕ್ಕಳು ಮೋಸ ಹೋಗುತ್ತಾರೆ. ಹಿಂದೂ ಸಹೋದರಿಯರನ್ನು ಎಚ್ಚರಿಸಿದಾಗ ಅವರು, ‘ನನ್ನ ಪ್ರಿಯಕರನು ಎಲ್ಲ ಮುಸಲ್ಮಾನರಂತೆ ಅಲ್ಲ ಒಳ್ಳೆಯವನಿದ್ದಾನೆ’ ಎಂದು ಹೇಳುತ್ತಾರೆ; ಆದರೆ ಕೆಲವು ತಿಂಗಳುಗಳಲ್ಲಿಯೇ ಅವರ ನಿಜವಾದ ಪರಿಚಯ ಬೆಳಕಿಗೆ ಬರುತ್ತದೆ ಮತ್ತು ಬಡಪಾಯಿ ದುಃಖಿಯಾಗುತ್ತಾಳೆ. ಅದರ ನಂತರ ಅವರಿಗೆ ಜೀವನದಲ್ಲಿ ಪಶ್ಚಾತ್ತಾಪಪಡುವ ಹೊರತು ಬೇರೆ ಯಾವುದೇ ಪರ್ಯಾಯ ಉಳಿಯುವುದಿಲ್ಲ.

೨. ಲವ್ ಜಿಹಾದ್‌ನ ಹಿಂದಿನ ಇನ್ನೊಂದು ಕಾರಣ – ಅನುವಂಶಿಕ ರೋಗಗಳಿಂದ ಮುಸಲ್ಮಾನರ ಮಕ್ಕಳನ್ನು ಕಾಪಾಡುವುದು

ಲವ್ ಜಿಹಾದ್‌ನ ವಿವಿಧ ಕಾರಣಗಳ ಬಗ್ಗೆ ಚರ್ಚೆಯಾಗುತ್ತದೆ.ಆದರೆ ಅದರಲ್ಲಿ ಚರ್ಚೆಗೆ ಬರದಿರುವ, ಆದರೆ ಮಹತ್ವದ ಒಂದು ಕಾರಣವೆಂದರೆ, ‘ಕ್ಯಾನ್ಸೆಂಗ್ಯುನಿಯಸ್ ನಿಕಾಹ’ದಿಂದಾಗಿ (‘ಕುಟುಂಬದ ವ್ಯಕ್ತಿಗಳೊಂದಿಗಿನ ವಿವಾಹ’ದಿಂದಾಗಿ) ಮುಸಲ್ಮಾನ ಮಕ್ಕಳಲ್ಲಾಗುವ ಅನುವಂಶಿಕ ರೋಗಗಳಿಂದ ಅವರನ್ನು ಕಾಪಾಡುವುದು. ‘ದಾರ-ಉಲ್-ಇಸ್ಲಾಮ್’ನ ಕನಸನ್ನು ಸಾಕಾರಗೊಳಿಸಲು ಮುಸಲ್ಮಾನರಿಗೆ ತಮ್ಮ ಜನಸಂಖ್ಯೆಯನ್ನು ಶೀಘ್ರಗತಿಯಲ್ಲಿ ಹೆಚ್ಚಿಸಬೇಕಾಗಿದೆ. ಮುಸಲ್ಮಾನ ಕುಟುಂಬಗಳಲ್ಲಿ ‘ಕಾನ್ಸೆಂಗ್ಯುನಿಯಸ್ ನಿಕಾಹ್’ ಅಂದರೆ ಚಿಕ್ಕಪ್ಪ/ದೊಡ್ಡಪ್ಪ ಮತ್ತು ತಾಯಿಯ ತಂಗಿ/ಅಕ್ಕನ ಮಗಳೊಂದಿಗೆ ವಿವಾಹ ಮಾಡಿಕೊಳ್ಳುವ ರೂಢಿ ಆರಂಭವಾಯಿತು, ಆದರೆ ಪರಿಣಾಮಸ್ವರೂಪ ಅವರ ಮಕ್ಕಳು ಅನುವಂಶಿಕ ರೋಗಗಳಿಂದ ಪೀಡಿತರಾಗುತ್ತಿದ್ದಾರೆ.

ಬ್ರಿಟನ್‌ನಲ್ಲಿ ಒಂದು ಅಧ್ಯಯನ ಮಾಡಲಾಗಿತ್ತು. ಬ್ರ್ಯಾಡಫೋರ್ಡ್‌ನಲ್ಲಿ ಮೂಲ ಪಾಕಿಸ್ತಾನಿ ಜನರು ಬಹುಸಂಖ್ಯೆಯಲ್ಲಿರುವ ಒಂದು ಪ್ರದೇಶವಿದೆ. ಅಲ್ಲಿ ಶೇ. ೧೭ ರಷ್ಟು ಪಾಕಿಸ್ತಾನಿ ಮುಸಲ್ಮಾನರಿದ್ದಾರೆ. ಇವರಲ್ಲಿನ ಶೇ. ೭೫ ರಷ್ಟು ಮುಸಲ್ಮಾನರು ತಮ್ಮ ಸಮಾಜದಲ್ಲಿನ ಅಂದರೆ ಚಿಕ್ಕಪ್ಪ/ದೊಡ್ಡಪ್ಪನ ಮಕ್ಕಳು, ತಾಯಿಯ ತಂಗಿ/ಅಕ್ಕನ ಮಕ್ಕಳೊಂದಿಗೆ ನಿಕಾಹವನ್ನು (ವಿವಾಹವನ್ನು) ಮಾಡಿಕೊಳ್ಳುತ್ತಾರೆ. ಅಲ್ಲಿ ಅವರ ಮಕ್ಕಳಲ್ಲಿ ಅನೇಕ ಪ್ರಕಾರದ ಅನುವಂಶಿಕ ರೋಗಗಳು ಕಂಡುಬಂದಿವೆ. ತದನಂತರ ಒಟ್ಟು ಅಧ್ಯಯನದಲ್ಲಿ, ಬ್ರಿಟನ್ ನಲ್ಲಿ ಅನುವಂಶಿಕ ರೋಗಗಳಿಂದ ಪೀಡಿತ ಮಕ್ಕಳಲ್ಲಿ ಶೇ. ೧೩ ರಷ್ಟು ಮಕ್ಕಳು ಮೂಲ ಪಾಕಿಸ್ತಾನದವರಾಗಿದ್ದಾರೆ. ಅಲ್ಲಿನ ೨೦೦ ಕುಟುಂಬಗಳ ಅಭ್ಯಾಸ ಮಾಡಿದಾಗ ಅವರಲ್ಲಿ ಶೇ. ೯೭ ಕುಟುಂಬಗಳಲ್ಲಿ ಮಕ್ಕಳು ಅನುವಂಶಿಕ ರೋಗಗಳಿಂದ ಪೀಡಿತರಾಗಿರುವುದು ಕಂಡುಬಂದಿತು. ಇದೇ ರೀತಿಯ ನಿರೀಕ್ಷಣೆಯನ್ನು ಇಸ್ಲಾಮಿ ದೇಶಗಳಲ್ಲಿಯೂ ಮಾಡಲಾಯಿತು. ಅಲ್ಲಿಯೂ ಇದೇ ರೀತಿಯ ನಿಷ್ಕರ್ಷವು ಕಂಡು ಬಂದಿದೆ. ಸದ್ಯ ಮುಸಲ್ಮಾನ ಜನಸಂಖ್ಯೆಯು ಶೀಘ್ರಗತಿಯಲ್ಲಿ ಹೆಚ್ಚಾಗುತ್ತಿದೆ; ಆದರೆ ಅವರ ಮಕ್ಕಳು ಅನುವಂಶಿಕ ರೋಗಗಳಿಂದ ಪೀಡಿತರಾಗುತ್ತಿದ್ದಾರೆ. ಆದ್ದರಿಂದ ಅವರ ‘ಧ್ಯೇಯ’ ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಭಾರತದಲ್ಲಿ ಹಿಂದೂ ಋಷಿ-ಮುನಿಗಳು ಮೊದಲೇ ಒಂದು ಗೋತ್ರದವರು ಮತ್ತು ಒಂದು ಕುಟುಂಬದವರ ನಡುವೆ ವಿವಾಹ ವರ್ಜ್ಯವೆಂದು ಹೇಳಿದ್ದಾರೆ. ಆದ್ದರಿಂದ ಹಿಂದೂ ಮಕ್ಕಳಲ್ಲಿ ಈ ರೀತಿಯ ದೋಷಗಳು ಕಂಡು ಬರುವುದಿಲ್ಲ. ‘ಹಿಂದೂ ಯುವತಿಯರೊಂದಿಗೆ ವಿವಾಹ ಮಾಡಿಕೊಂಡರೆ ಇಂತಹ ಸಂಕಟಗಳಿಂದ ಪಾರಾಗಬಹುದು ಮತ್ತು ಮುಸಲ್ಮಾನರ ವಂಶವೂ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ’, ಇತರ ಧರ್ಮದ ಯುವತಿಯರೊಂದಿಗೆ ಲವ್ ಜಿಹಾದ್ ಮಾಡಿಕೊಳ್ಳಲು ಇದೂ ಒಂದು ಕಾರಣವಾಗಿದೆ.

೩. ಲವ್ ಜಿಹಾದ್‌ನಿಂದಾಗಿ ಆಗುವ ಹಾನಿ

ಭಾರತದಲ್ಲಿ ಕಳೆದ ೬೦೦ ವರ್ಷಗಳ ಇಸ್ಲಾಮಿ ಆಕ್ರಮಣಗಳಲ್ಲಿ ನಾವು ದೇವಸ್ಥಾನಗಳನ್ನು ಮತ್ತು ಸಂಪತ್ತನ್ನು ಕಳೆದುಕೊಂಡೆವು. ಇದೇ ಅವಧಿಯಲ್ಲಿ ಅನೇಕರನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಮತಾಂತರಿಸಲಾಯಿತು ಮತ್ತು ಅನೇಕ ಹಿಂದೂ ಸ್ತ್ರೀಯರನ್ನು ಗುಲಾಮರನ್ನಾಗಿಸಿ ಮುಸಲ್ಮಾನ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಯಿತು. ಇದರಲ್ಲಿಯೂ ಕೆಲವು ಹಿಂದೂ ರಾಜರು ತಮ್ಮ ಪರಾಕ್ರಮದ ಪರಿಚಯವನ್ನು ನೀಡುತ್ತಾ ತಮ್ಮ ರಾಜ್ಯದಲ್ಲಿ ಹಿಂದೂ ಪ್ರಜೆಗಳ ರಕ್ಷಣೆ ಮಾಡಿದರು. ತದನಂತರ ಹಿಂದೂ ಧರ್ಮದ ಸಂಸ್ಕಾರಶೀಲ ಪರಂಪರೆಯ ಪ್ರವಾಹವು ನಮ್ಮ ವಂಶವೃದ್ಧಿಯ ಮಾಧ್ಯಮದಿಂದ ನಡೆದಿದೆ. ಇಂತಹ ಸ್ಥಿತಿಯಲ್ಲಿ ನಮ್ಮ ಓರ್ವ ಹಿಂದೂ ಸಹೋದರಿಯು ಮುಸಲ್ಮಾನನೊಂದಿಗೆ ನಿಕಾಹಮಾಡಿಕೊಳ್ಳುವುದೆಂದರೆ, ಅವಳ ಸಂಸ್ಕಾರಿ ಹಿಂದೂ ವಂಶವನ್ನು ಉತ್ಪನ್ನ ಮಾಡುವ ಕ್ಷಮತೆಯು ನಾಶವಾಗಿ ಅವಳಿಂದ ಇಸ್ಲಾಮೀ ವಂಶ ಪ್ರಾರಂಭ ಮಾಡುವುದಾಗಿದೆ. ಆಮೀರ ಖಾನ್ ತನ್ನನ್ನು ದೊಡ್ಡ ಆಧುನಿಕ ಧರ್ಮನಿರಪೇಕ್ಷ ನಟನೆಂದು ತೋರಿಸಿಕೊಳ್ಳುತ್ತಾನೆ; ಆದರೆ ಅವನೂ ತನ್ನ ಒಂದು ಸಂವಾದದಲ್ಲಿ ಸ್ಪಷ್ಟವಾಗಿ, ‘ನನ್ನ ಪತ್ನಿಯು ಹಿಂದೂ ಇರಬಹುದು; ಆದರೆ ನನ್ನ ಮಕ್ಕಳು ಮುಸಲ್ಮಾನರೇ ಆಗಿರುವರು !’ ಎಂದಿದ್ದಾನೆ. ಇದರಿಂದ ಹಿಂದೂ ಯುವತಿಯರು ಲವ್ ಜಿಹಾದ್‌ನಲ್ಲಿ ಮೋಸ ಹೋಗಿ ನಿಕಾಹ ಮಾಡಿಕೊಂಡಿದ್ದರಿಂದ ಹಿಂದೂಗಳ ಸಂಸ್ಕಾರಿ ‘ಜೀನ್ ಬ್ಯಾಂಕ್’ ನಾಶವಾಗುತ್ತಿದೆ.

೪. ಲಂಡನ್‌ನಿಂದ ಪ್ರಾರಂಭವಾದ ಲವ್ ಜಿಹಾದ್

೨೯ ಸೆಪ್ಟೆಂಬರ್ ೨೦೦೯ ರಂದು ಲಂಡನ್‌ನ ಪೊಲೀಸ್ ಆಯುಕ್ತ ಸರ್ ಇಯಾನ್ ಬ್ಲೆರ್ ಇವರು ಜಗತ್ತಿನಲ್ಲಿ ಮೊಟ್ಟ ಮೊದಲು ಕೆಲವು ಕುಟುಂಬದವರಿಗೆ, ಅಲ್ಲಿನ ಮುಸಲ್ಮಾನ ಸಮಾಜದ ಯುವಕರು ಷಡ್ಯಂತ್ರದಿಂದ ಹಿಂದೂ, ಸಿಕ್ಖ್ ಮತ್ತು ಕ್ರೈಸ್ತ ಯುವತಿಯರನ್ನು ತಮ್ಮ ಪ್ರೇಮಜಾಲದಲ್ಲಿ ಸಿಲುಕಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಲ್ಲಿ ಕೆಲವು ಯುವತಿಯರನ್ನು ಅವರು ಪಾಕಿಸ್ತಾನಕ್ಕೆ ಕರೆದುಕೊಂಡು ಹೋದರು ಮತ್ತು ಅಲ್ಲಿ ಮುಂದೆ ಅವರ ಸ್ಥಿತಿ ಏನಾಯಿತು, ಎಂದು ಯಾರಿಗೂ ಗೊತ್ತಿಲ್ಲ’, ಎಂದು ಹೇಳಿದ್ದರು. ಆ ಅವಧಿಯಲ್ಲಿ ಲವ್ ಜಿಹಾದ್‌ಗೆ ‘ರೊಮಿಯೋ ಜಿಹಾದ್’ ಎಂದು ಹೇಳಲಾಗುತ್ತಿತ್ತು. ಪಾಕಿಸ್ತಾನದಂತಹ ಮುಸಲ್ಮಾನರು ದೇಶದಲ್ಲಿ ಪ್ರತಿದಿನ ಅಪ್ರಾಪ್ತ ಹಿಂದೂ ಹೆಣ್ಣು ಮಕ್ಕಳನ್ನು ಅವರ ಮನೆಯಿಂದ ಅಪಹರಿಸಿಕೊಂಡು ಹೋಗಿ ಬಲವಂತದಿಂದ ಮತಾಂತರ ಮಾಡಲಾಗುತ್ತದೆ; ಆದರೆ ಎಲ್ಲಿ ಮುಸಲ್ಮಾನ ಅಲ್ಪಸಂಖ್ಯಾತರಾಗಿರುತ್ತಾರೆಯೋ, ಆ ದೇಶಗಳಲ್ಲಿ ಹೀಗೆ ಮಾಡುವುದು ಕಠಿಣವಾಗಿದೆ. ಆದ್ದರಿಂದ ಅಲ್ಲಿ ಪ್ರೇಮದ ಜಾಲದಲ್ಲಿ ಸೆಳೆದು ಜಿಹಾದ್ ಮಾಡುವುದು ನಡೆದಿದೆ.

೫. ಲವ್ ಜಿಹಾದ್ ಮತ್ತು ಉಗ್ರವಾದದ ನಡುವಿನ ನಂಟು

ವರ್ಷ ೨೦೧೪ ರಲ್ಲಿ ಚುನಾವಣೆಯ ಪ್ರಚಾರದ ಸಮಯದಲ್ಲಿ ಗುಜರಾತಿನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾಟಣಾ (ಬಿಹಾರ) ದಲ್ಲಿನ ಸಭೆಯಲ್ಲಿ ಬಾಂಬ್‌ಸ್ಫೋಟ್ ಆಗಿತ್ತು. ಈ ಸ್ಫೋಟಕ್ಕೆ ಬೇಕಾಗುವ ಅರ್ಥಸಹಾಯವನ್ನು ಮಂಗಳೂರಿನ ಆಯೇಶಾ ಬಾನೊಳ ಹೆಸರಿನಲ್ಲಿ ಮಾಡಲಾಗಿತ್ತು. ಅವಳ ನಿಜವಾದ ಹೆಸರು ‘ಆಶಾ’ ಎಂದಿದೆ. ಈ ಸಾಮಾನ್ಯ ಕುಟುಂಬದ ಹಿಂದೂ ಹುಡುಗಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮೊದಲು ಅವಳನ್ನು ಮತಾಂತರಿಸಲಾಯಿತು. ಅನಂತರ ಅವಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ೩೦ ಖಾತೆಗಳನ್ನು ತೆರೆಯಲಾಯಿತು. ಈ ಖಾತೆಗಳನ್ನು ತೆರೆಯುವಾಗ ಅವಳಿಂದ ಕೇವಲ ಹಸ್ತಾಕ್ಷರವನ್ನು ಮಾಡಿಸಿಕೊಳ್ಳಲಾಯಿತು. ತದನಂತರ ಈ ಖಾತೆಗಳ ‘ಎಟಿಮ್’ ಡೆಬಿಟ್ ಕಾರ್ಡ್‌ಗಳನ್ನು ಭಯೋತ್ಪಾದನೆಯ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಮುಸಲ್ಮಾನ ಯುವಕರಿಗೆ ಹಂಚಲಾಯಿತು, ಇದರ ಬಗ್ಗೆ ಅವಳಿಗೆ ಏನೂ ಗೊತ್ತಿರಲಿಲ್ಲ.

ನಂತರ ಆ ಖಾತೆಗಳಲ್ಲಿ ಸ್ಫೋಟ್ ಮಾಡುವ ಭಯೋತ್ಪಾದಕರಿಗಾಗಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದಿಂದ ಸುಮಾರು ೫ ಕೋಟಿ ರೂಪಾಯಿಗಳನ್ನು ಜಮೆ ಮಾಡಲಾಗಿತ್ತು. ಈ ಹಣ ವನ್ನು ಬೇರೆ ನಗರಗಳಲ್ಲಿ ಎಟಿಮ್ ಕಾರ್ಡ್‌ಗಳ ಮೂಲಕ ತೆಗೆಯಲಾಗುತ್ತಿತ್ತು. ಬಾಂಬ್‌ಸ್ಫೋಟ್ ನಂತರ ಕೆಲವು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದರು, ಮತ್ತು ಕೆಲವು ಭಯೋತ್ಪಾದಕರು ಪಲಾಯನಗೈದರು. ನಿರಪರಾಧಿ ಆಯೇಶಾ ಮಾತ್ರ ಭಯೋತ್ಪಾದಕರಿಗೆ ಅರ್ಥಸಹಾಯ ಮಾಡಿದ ಅಪರಾಧದಡಿಯಲ್ಲಿ ಸೆರೆಮನೆಯಲ್ಲಿದ್ದಾಳೆ.

ಇದೇ ರೀತಿ ಕೇರಳದ ಕೆಲವು ತರುಣ-ತರುಣಿಯರು ಲವ್ ಜಿಹಾದ್‌ನಿಂದಾಗಿ ಮತಾಂತರಗೊಂಡು ಮುಸಲ್ಮಾನರಾದರು. ನಂತರ ಅವರು ‘ಐ ಎಸ್ ಐ’ನ ಖಿಲಾಫತ್ ಯುದ್ಧದಲ್ಲಿ ಪಾಲ್ಗೊಳ್ಳಲು ಸಿರಿಯಾ ಮತ್ತು ಅಫಘಾನಿಸ್ತಾನ್ ದೇಶಗಳಿಗೆ ಕಳುಹಿಸಲಾಯಿತು.

೬. ವ್ಯಾಪಾರದ ಹೆಸರಿನಲ್ಲಿ ಬಾಂಗ್ಲಾದೇಶಿ ಯುವಕರ ಲವ್‌ಜಿಹಾದ್ !

ಆಸ್ಸಾಂನ ಶಾಸಕ ಶಿಲಾದಿತ್ಯ ದೇವ ಇವರು, ‘ಬಾಂಗ್ಲಾದೇಶಿ ಯುವಕರು ಆಸ್ಸಾಂಗೆ, ವ್ಯಾಪಾರದ ಉದ್ದೇಶದಿಂದ ಬರುತ್ತಾರೆ ಮತ್ತು ಸ್ಥಳೀಯ ಯುವತಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ಕರೀಮಜಂಗಮ ನಲ್ಲಿನ ಮೌಸುಮಿ ದಾಸ ಈ ಹಿಂದೂ ತರುಣಿಯು ಪಾಸ್ ಪೋರ್ಟ್ (ಪಾರಪತ್ರ) ಮತ್ತು ವ್ಹೀಸಾ ಇಲ್ಲದಿರುವಾಗಲೂ ಬಾಂಗಲಾದೇಶಿಯ ಲವ್ ಜಿಹಾದಿಯೊಂದಿಗೆ ಬಾಂಗ್ಲಾದೇಶಕ್ಕೆ ಓಡಿ ಹೋದಳು. ನಂತರ ಅಲ್ಲಿಂದ ಅವಳು ಬುರಖಾ ಹಾಕಿಕೊಂಡು ಆ ಯುವಕನ ಒತ್ತಾಯದ ಮೇರೆಗೆ ಇಸ್ಲಾಮ್ ಸ್ವೀಕರಿಸಿದ ಬಗ್ಗೆ ಧ್ವನಿಸುರುಳಿಯನ್ನು ಕಳುಹಿಸಿದಳು. ಪ್ರಶ್ನೆ ಯೇನೆಂದರೆ, ಪಾಸ್‌ಪೋರ್ಟ್ ಮತ್ತು ವ್ಹೀಸಾ ಇಲ್ಲದಿರುವಾಗ ಅವಳಿಗೆ ಬಾಂಗ್ಲಾದೇಶದಲ್ಲಿ ಹೇಗೆ ಪ್ರವೇಶ ಸಿಕ್ಕಿತು ?

೭. ಮ್ಯಾನಮಾರದಲ್ಲಿನ ರೋಹಿಂಗ್ಯಾ ಮುಸಲ್ಮಾನರ ಸಮಸ್ಯೆಗಳ ಹಿಂದೆಯೂ ಲವ್‌ಜಿಹಾದ್ !

ಲವ್‌ಜಿಹಾದ್‌ವು ಯಾವುದಾದರೊಂದು ಸ್ವರೂಪದಲ್ಲಿ ಸಂಪೂರ್ಣ ಜಗತ್ತಿನಾದ್ಯಂತ ನೋಡಲು ಸಿಗುತ್ತದೆ. ಮ್ಯಾನಮಾರದಲ್ಲಿನ ಬೌದ್ಧ ನೇತಾರರಾದ ಅಶೀನ ವಿರಾಥೂ ಇವರು, ‘ಮುಸಲ್ಮಾನ ಯುವಕರು ಬೌದ್ಧರ ಹೆಣ್ಣು ಮಕ್ಕಳನ್ನು ಪ್ರೇಮ ಜಾಲದಲ್ಲಿ ಸಿಲುಕಿಸಿ ವಿವಾಹ ಮಾಡಿಕೊಳ್ಳುತ್ತಿದ್ದರು ಮತ್ತು ಹೆಚ್ಚು ಮಕ್ಕಳನ್ನು ಹೆತ್ತು ಜನಸಂಖ್ಯೆಯ ಸಮತೋಲನವನ್ನು ಹಾಳು ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಬೌದ್ಧ ಸಮಾಜವನ್ನು ಜಗತ್ತಿನಾದ್ಯಂತ ಅತ್ಯಂತ ಅಹಿಂಸಕ ಮತ್ತು ಶಾಂತ ಸ್ವಭಾವದ ಸಮಾಜವೆಂದು ತಿಳಿಯಲಾಗುತ್ತದೆ; ಆದರೆ ಇದೇ ಸಮಾಜವು ಮ್ಯಾನಮಾರನಲ್ಲಿ ವಿರಾಥೂ ಇವರ ನೇತೃತ್ವದಡಿ ರೋಹಿಂಗ್ಯಾ ಮುಸಲ್ಮಾನರ ವಿರುದ್ಧ ಹಿಂಸಕ ಆಕ್ರಮಣಗಳನ್ನು ಮಾಡುತ್ತಿದೆ. ಯುರೋಪನಲ್ಲಿಯೂ ನಿಷ್ಠಾವಂತ ಕ್ರೈಸ್ತ ಸಂಘಟನೆಗಳು ಮುಸಲ್ಮಾನರ ಮೇಲೆ ಇದೇ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ.

೮. ಲವ್ ಜಿಹಾದ್‌ನ ಮಾಧ್ಯಮದಿಂದ ಭಯೋತ್ಪಾದಕದ ಪ್ರಚಾರವಾಗುತ್ತಿರುವ ಬಗ್ಗೆ ಕ್ಯಾಥೋಲಿಕ್ ಚರ್ಚ್‌ನ ಆರೋಪ

‘ಕೇರಳ ರಾಜ್ಯದಲ್ಲಿನ ಕ್ರೈಸ್ತ ಮಹಿಳೆಯರನ್ನು ದೊಡ್ಡ ಸಂಖ್ಯೆಯಲ್ಲಿ ಮೋಸಗೊಳಿಸಿ ಇಸ್ಲಾಮಿಕ್ ಸ್ಟೇಟ್ ಮತ್ತು ಭಯೋತ್ಪಾದನೆಯ ಕಾರ್ಯಾಚರಣೆಗಳಲ್ಲಿ ನೂಕಲಾಗುತ್ತಿದೆ’ ಎಂದು ಕ್ಯಾಥೊಲಿಕ್ ಚರ್ಚ್ ಹೇಳಿದೆ. ಪಾದ್ರಿಗಳ ಒಂದು ಸಂಘಟನೆಯ ಅಧ್ಯಕ್ಷರಾಗಿರುವ ಕಾರ್ಡಿನಲ್ ಜಾರ್ಜ್ ಎಲನಚೈರಿ ಇವರು ಕೇರಳ ಸರಕಾರದ ಮೇಲೆ, ‘ಅದು ಲವ್‌ಜಿಹಾದ್‌ನ ಪ್ರಕರಣಗಳನ್ನು ಗಾಂಭೀರ್ಯದಿಂದ ನೋಡುವುದಿಲ್ಲ’ ಎಂದು ಆರೋಪಿಸಿದೆ. ಸಿರೋ-ಮಾಲಾಬಾರ್ ಚರ್ಚ್ ತಮ್ಮ ಹೇಳಿಕೆಯಲ್ಲಿ, ಕೇರಳದಲ್ಲಿ ಲವ್ ಜಿಹಾದ್‌ನ ಹೆಸರಿನಲ್ಲಿ ಕ್ರೈಸ್ತ ಹೆಣ್ಣು ಮಕ್ಕಳನ್ನು ಹತ್ಯೆಗೈದ ಅನೇಕ ಪ್ರಕರಣಗಳು ಬಹಿರಂಗಗೊಂಡಿವೆ ಎಂದು ಹೇಳಿದೆ. ಕೇರಳದಲ್ಲಿ ಸುನಿಯೋಜಿತ ಪದ್ಧತಿಯಿಂದ ಲವ್‌ಜಿಹಾದ್‌ಗಾಗಿ ಕ್ರೈಸ್ತ ತರುಣಿಯರನ್ನು ಗುರಿ ಮಾಡಲಾಗುತ್ತಿದೆ, ಎಂದು ಅವರು ಆರೋಪಿಸಿದ್ದಾರೆ. ಪಾದ್ರಿಗಳ ಧರ್ಮಸಭೆಯು ಪೊಲೀಸ್ ನೋಂದಣಿಗಳ ಉದಾಹರಣೆಯನ್ನು ನೀಡಿ, ‘ಯಾವ ೨೧ ಜನರನ್ನು ‘ಐಎಎಸ್’ ನಲ್ಲಿ ಭರ್ತಿ ಮಾಡಲಾಗಿತ್ತೋ, ಅದರಲ್ಲಿ ಅರ್ಧದಷ್ಟು ಮಂದಿ ಮತಾಂತರಿತ ಕ್ರೈಸ್ತರಾಗಿದ್ದರು. ಈ ಘಟನೆಯಿಂದ ಸಂಪೂರ್ಣ ಸಮಾಜದ ಕಣ್ಣುಗಳು ತೆರೆಯಬೇಕು, ಎಂದು ಹೇಳಿತು. ಲವ್ ಜಿಹಾದ್‌ನ ಮಾಧ್ಯಮದಿಂದ ಅನೇಕ ಹೆಣ್ಣು ಮಕ್ಕಳನ್ನು ಭಯೋತ್ಪಾದನೆಯ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದೆ. ಇದು ಒಂದು ಗಂಭೀರ ಪ್ರಕರಣವಾಗಿದೆ. ಆದ್ದರಿಂದ ಲವ್ ಜಿಹಾದ್‌ವು ಕಾಲ್ಪನಿಕವಲ್ಲ.’ ಚರ್ಚ್‌ಗಳು ಸಹ ಲವ್‌ಜಿಹಾದ್‌ನಲ್ಲಿ ಪಾಲ್ಗೊಂಡ ದೋಷಿಗಳ ವಿರುದ್ಧ ತ್ವರಿತ ಕಾರ್ಯಾಚರಣೆ ಮಾಡುವ ಬೇಡಿಕೆಯನ್ನು ಮಾಡಿವೆ. ಇದರಲ್ಲಿ ತಾಯಿ-ತಂದೆಯರಿಗೆ ತಮ್ಮ ಮಕ್ಕಳಿಗೆ ಲವ್‌ಜಿಹಾದ್‌ದ ಬಗ್ಗೆ ಎಚ್ಚರಿಸುವ ಬಗ್ಗೆಯೂ ಕರೆ ನೀಡಲಾಗಿದೆ.

೯. ಹಿಂದೂ ಸಹೋದರಿಯರನ್ನು ಜಾಗೃತ ಮಾಡುವುದು ಮತ್ತು ಅವರನ್ನು ಕಾಪಾಡುವುದು ನಮ್ಮ ಕರ್ತವ್ಯ !

ಒಂದು ಕಾಲದಲ್ಲಿ ರಾಣಿ ಪದ್ಮಿನಿ, ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ಮಹಾರಾಣಿ ತಾರಾಬಾಯಿ ಈ ಹಿಂದೂ ವಿರಾಂಗನೆಯರು ತಮ್ಮ ಪರಾಕ್ರಮದಿಂದ ವಿದೇಶಿ ಆಕ್ರಮಣಕಾರ ರೊಂದಿಗೆ ಹೋರಾಡುವುದು ಮತ್ತು ಮತಾಂತರದ ಬದಲು ಬಲಿದಾನವಾಗಲು ಸ್ವೀಕರಿಸಿದ್ದರು. ಇಂದು ಅವರ ಮುಂದಿನ ಪೀಳಿಗೆಯೇ ಅಜ್ಞಾನದಿಂದ ತಮ್ಮ ಆಕ್ರಮಣಕಾರರ ಪ್ರೇಮಜಾಲದಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದೆ. ಈ ಸಹೋದರಿಯರನ್ನು ಜಾಗೃತಗೊಳಿಸುವುದು ಮತ್ತು ಅವರನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ.’ – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.