ಎಲ್ಲಾ ಸಾಧಕರಿಗೆ ಮಹತ್ವದ ಸೂಚನೆ !
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ‘ಸಾಧಕರ ಅನುಭೂತಿಗಳು, ಅವರಿಗೆ ಕಲಿಯಲು ಸಿಕ್ಕಿದ ಅಂಶಗಳು’ ಇತ್ಯಾದಿಗಳನ್ನು ಪ್ರಕಟಿಸುವ ಉದ್ದೇಶಗಳು ಈ ಕೆಳಗಿನಂತಿವೆ – ಇತರ ಸಾಧಕರಿಗೆ ಅದರಿಂದ ಕಲಿಯಲು ಸಿಗಬೇಕು, ಜಿಜ್ಞಾಸುಗಳಿಗೆ ಅವರ ಪ್ರಕೃತಿಗೆ ಅನುಗುಣವಾಗಿ ಸಾಧನೆಯ ದಿಶೆ ಸಿಗಬೇಕು ಮತ್ತು ಸಾಧಕರಿಗೆ ಆ ವಿಷಯಕ್ಕೆ ಸಂಬಂಧಿಸಿದ ಅಧ್ಯಾತ್ಮಶಾಸ್ತ್ರವನ್ನು ಕಲಿಯಲು ಸಾಧ್ಯವಾಗಬೇಕು.

ಗ್ರಂಥವನ್ನು ಸಂಕಲನ ಮಾಡುವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಉದ್ದೇಶವು, ‘ಸಾಧಕರ ಸಾಧನೆಯ ಸಮಯವು ಅನಾವಶ್ಯಕ ಲೇಖನಗಳನ್ನು ಓದುವುದರಲ್ಲಿ ವ್ಯರ್ಥವಾಗಬಾರದು’ ಎಂದಾಗಿರುತ್ತದೆ. ಆದ್ದರಿಂದ ಸನಾತನದ ಗ್ರಂಥಗಳಲ್ಲಿ ಪ್ರತಿಯೊಂದು ಅಂಶವನ್ನು ನಿಖರವಾಗಿ ಮಂಡಿಸಲಾಗಿರುತ್ತದೆ. ನಾವು ಸಹ ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಈ ತತ್ತ್ವವನ್ನು ಅಳವಡಿಸಿಕೊಂಡು ನಮ್ಮ ಲೇಖನಗಳನ್ನು ಯಾವ ರೀತಿ ಕಳುಹಿಸಬೇಕು ?’, ಎಂಬುದನ್ನು ಮುಂದೆ ನೀಡಲಾಗಿದೆ.
ಅನೇಕ ಸಾಧಕರು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲು ಗ್ರಂಥ ಸಂಕಲನ ವಿಭಾಗಕ್ಕೆ ‘ಪ್ರಸಾರದ ಅನುಭವಗಳು, ಅನುಭೂತಿಗಳು, ಕಲಿಯಲು ಸಿಕ್ಕಿದ ಅಂಶಗಳು, ಸಾಧನಾಪ್ರವಾಸ, ಭಾವಜಾಗೃತಿಯ ಪ್ರಯೋಗಗಳು, ಕವಿತೆಗಳು’ ಮುಂತಾದ ವಿವಿಧ ಲೇಖನಗಳನ್ನು ಕಳುಹಿಸುತ್ತಾರೆ. ಸಾಧಕರಿಂದ ಬರುವ ಲೇಖನಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ, ಹಾಗೆಯೇ ಲೇಖನಗಳೂ ವಿಸ್ತೃತ ಪ್ರಮಾಣದಲ್ಲಿ ಬರುತ್ತಿದೆ. ಆದ್ದರಿಂದ ‘ಆ ಲೇಖನಗಳನ್ನು ಆಯ್ಕೆ ಮಾಡುವುದು, ಸಂಕಲನ ಮಾಡುವುದು ಮತ್ತು ಆ ಲೇಖನಗಳನ್ನು ಪ್ರಕಟಿಸುವುದು’, ಇವುಗಳಲ್ಲಿ ಅಡಚಣೆಗಳು ಬರುತ್ತಿವೆ. ಆದ್ದರಿಂದ ಇನ್ನು ಮುಂದೆ ಲೇಖನಗಳನ್ನು ಕಳುಹಿಸುವಾಗ ಸಾಧಕರು ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಸಾಧಕರೇ, ‘ಸನಾತನ ಪ್ರಭಾತ’ದಲ್ಲಿ ಲೇಖನ ಪ್ರಕಟಿಸುವ ನಿಲುವನ್ನು ಗಮನದಲ್ಲಿಟ್ಟುಕೊಳ್ಳಿ !
‘ಸಾಧಕರು ಲೇಖನಗಳನ್ನು ಕಳುಹಿಸಿದ ನಂತರ ‘ಅವುಗಳ ಆಯ್ಕೆ ಮಾಡುವುದು, ಸಂಬಂಧಪಟ್ಟವರ ಭಾವಚಿತ್ರಗಳನ್ನು ಪಡೆಯುವುದು, ಲೇಖನದಲ್ಲಿರುವ ಅಪೂರ್ಣ ವಿಷಯ ಗಳನ್ನು ಪೂರ್ಣಗೊಳಿಸುವುದು, ಸಂಕಲನಕ್ಕಾಗಿ ಅದರ ಆದ್ಯತೆಯನ್ನು ನಿರ್ಧರಿಸುವುದು ಮತ್ತು ಅನಂತರ ಸಂಕಲನ ಮಾಡಿ ಆ ಕಡತವನ್ನು ಪತ್ರಿಕೆಯ ಕಾರ್ಯಾಲಯಗಳಿಗೆ ನೀಡುವುದು’, ಇಂತಹ ಪ್ರಕ್ರಿಯೆ ಇರುತ್ತದೆ. ಅದಕ್ಕಾಗಿ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ಅನಂತರ ಲೇಖನವನ್ನು ಪ್ರಕಟಿಸುವಾಗ ‘ಬರವಣಿಗೆಯ ಪುನರಾವರ್ತನೆ, ಅದರ ಪ್ರಾಧಾನ್ಯತೆ, ಅದಕ್ಕೆ ಸಂಬಂಧಿಸಿದ ದಿನವಿಶೇಷ’, ಇವುಗಳಂತಹ ಅಂಶಗಳ ಆಧಾರದಲ್ಲಿ ಲೇಖನ ಯಾವಾಗ ಪ್ರಕಟಿಸಬೇಕು ?’, ಎಂಬುದನ್ನು ನಿರ್ಧರಿಸಲಾಗುತ್ತದೆ. ಇಂತಹ ಕೆಲವು ಕಾರಣಗಳಿಂದ ಲೇಖನ ಬಂದ ತಕ್ಷಣ ಅದು ಪ್ರಕಟವಾಗುವುದಿಲ್ಲ, ಹಾಗೆಯೇ ನೀಡಲಾದ ಎಲ್ಲಾ ಲೇಖನಗಳನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ.
ಸಾಧಕರ ಲೇಖನಗಳಲ್ಲಿ ಕೆಲವೊಮ್ಮೆ ಒಂದೇ ರೀತಿಯ ವಿಷಯವಿರುತ್ತದೆ ಅಥವಾ ಅಂತಹ ಲೇಖನವು ಈ ಹಿಂದೆ ಪ್ರಕಟವಾಗಿರಬಹುದು. ಆದ್ದರಿಂದ ಅಂತಹ ಲೇಖನವನ್ನು ಅಥವಾ ಲೇಖನದ ಕೆಲವು ಭಾಗಗಳನ್ನು ಮತ್ತೆ ಪ್ರಕಟಿಸಲಾಗುವುದಿಲ್ಲ.
ಇದನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಲೇಖನವನ್ನು ಕಳುಹಿಸಿದ ನಂತರ ‘ಅದು ಯಾವಾಗ ಪ್ರಕಟವಾಗುತ್ತದೆ ?’, ಎಂದು ಬೆಂಬತ್ತುವಿಕೆ ಮಾಡಬಾರದು.’
– ಗ್ರಂಥ ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೪.೨೦೨೬)
೧. ‘ಸನಾತನ ಪ್ರಭಾತ’ಕ್ಕಾಗಿ ಯಾವ ಲೇಖನಗಳನ್ನು ಕಳುಹಿಸಬೇಕು ?
ಅ. ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗೆಗಿನ ವೈಶಿಷ್ಟ್ಯಪೂರ್ಣ ಅನುಭೂತಿಗಳು, ಅವರ ಭೇಟಿಯ ಪ್ರಸಂಗಗಳು, ಅವರಿಂದ ಕಲಿಯಲು ಸಿಕ್ಕಿದ ಅಂಶಗಳು, ‘ಅವರು ಸಾಧಕರನ್ನು ಸೇವೆಯಲ್ಲಿ ಮತ್ತು ಸಾಧನೆಯಲ್ಲಿ ಹೇಗೆ ರೂಪಿಸಿದರು ?’, ಎಂಬ ಬಗೆಗಿನ ಅಂಶಗಳು’ ಮುಂತಾದ ಲೇಖನಗಳನ್ನು ಪ್ರಾಧಾನ್ಯತೆಯಿಂದ ಮತ್ತು ಅತ್ಯಂತ ನಿಖರವಾಗಿ ಕಳುಹಿಸಬೇಕು. ಇದರಲ್ಲಿ ವರ್ಷ, ಹಾಗೆಯೇ ಸ್ಥಳ ಮತ್ತು ಪ್ರಸಂಗ, ಇವೆಲ್ಲವನ್ನೂ ಸ್ಪಷ್ಟವಾಗಿ ಬರೆಯಬೇಕು.
ಆ. ಸನಾತನದ ಸಂತರು ಮತ್ತು ಸದ್ಗುರುಗಳ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಅನುಭೂತಿಗಳು, ಹಾಗೆಯೇ ಅವರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಕಳುಹಿಸಬಹುದು.
ಇ. ಸಾಧಕರಿಗೆ ಬಂದ ನಾವೀನ್ಯಪೂರ್ಣ ಅನುಭೂತಿಗಳು, ಸಾಧಕರ ಜೀವನದ ಕೆಲವು ವಿಭಿನ್ನ ಪ್ರಸಂಗಗಳು, ಉದಾ. ಯಾವ ಪ್ರಸಂಗಗಳಿಂದ ಸಾಧನೆ ಹೆಚ್ಚಾಯಿತು ಅಥವಾ ಈಶ್ವರನ ಬಗ್ಗೆ, ಸಾಧನೆಯ ಬಗ್ಗೆ ಸೆಳೆತ ಹೆಚ್ಚಾಯಿತೋ ಅಥವಾ ಈಶ್ವರನ ಅನುಭೂತಿ ಬಂದಿತೋ, ಅಂತಹ ಪ್ರಸಂಗಗಳನ್ನು ಸಂಕ್ಷಿಪ್ತವಾಗಿ ಕಳುಹಿಸಬಹುದು.
ಈ. ಇತರ ಸಾಧಕರು, ಹಾಗೆಯೇ ಬಾಲಸಾಧಕರ ಗುಣ ವೈಶಿಷ್ಟ್ಯಗಳನ್ನು ಕಳುಹಿಸುವಾಗ ಸಾಧಕರು ಅದನ್ನು ಸಂಕ್ಷಿಪ್ತವಾಗಿ, ಹಾಗೆಯೇ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಬರೆದುಕೊಡಬೇಕು. ಬಾಲಸಾಧಕರ ವೈಶಿಷ್ಟ್ಯಪೂರ್ಣ ಲೇಖನಗಳನ್ನು ಕಳುಹಿಸುವ ಬಗ್ಗೆ ಸನಾತನ ಪ್ರಭಾತದಲ್ಲಿ ಆಯಾ ಕಾಲಕ್ಕೆ ಚೌಕಟ್ಟುಗಳು ಪ್ರಕಟವಾಗಿವೆ. ಆ ಚೌಕಟ್ಟುಗಳ ಕಟಿಂಗ್ಸ್ ಅಥವಾ ಆ ಸಂಚಿಕೆಯನ್ನು ತಮ್ಮ ಬಳಿ ಇಟ್ಟುಕೊಂಡು ಅದಕ್ಕನುಸಾರ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ ನಂತರವೇ ಬಾಲಸಾಧಕರ ಲೇಖನಗಳನ್ನು ಕಳುಹಿಸುವ ಕಾರ್ಯ ಪದ್ಧತಿಯನ್ನು ನಿರ್ಧರಿಸಲಾಗಿದೆ. ಅದಕ್ಕನುಸಾರ ಅವುಗಳನ್ನು ಕಳುಹಿಸಬೇಕು.
ಉ. ಇತರ ವಿಷಯಗಳ ಕುರಿತು ನಾವೀನ್ಯಪೂರ್ಣ ಲೇಖನ ಗಳನ್ನೂ ನಿಖರವಾಗಿ ಮತ್ತು ಸಂಕ್ಷಿಪ್ತವಾಗಿ ಕಳುಹಿಸಬೇಕು.
ಊ. ಕೆಲವು ಸಾಧಕರು ಯಾವುದಾದರೊಬ್ಬ ಸಾಧಕರು ನಿಧನರಾದಾಗ ಅವರಿಗೆ ಸಂಬಂಧಿಸಿದ ಲೇಖನವನ್ನು ಬರೆದುಕೊಡುತ್ತಾರೆ. ಅವರಲ್ಲಿ ಒಳ್ಳೆಯ ಗುಣಗಳಿದ್ದರೂ ಸಾಧಕರು ಅವರಿಗೆ ಸಂಬಂಧಿಸಿದ ಲೇಖನವನ್ನು ಆಯಾ ಸಮಯದಲ್ಲಿ ನೀಡದ ಕಾರಣ ಅವರ ಜೀವಿತಾವಧಿಯಲ್ಲಿ ಅವರನ್ನು ಪ್ರಶಂಸಿಸಲು ಸಾಧ್ಯವಾಗುವುದಿಲ್ಲ; ಆದ್ದರಿಂದ ಸಾಧಕರು ಇತರರ ಒಳ್ಳೆಯ ಪ್ರಯತ್ನಗಳನ್ನು ಅಥವಾ ಬದಲಾವಣೆಗಳನ್ನು ಆಯಾ ಸಮಯದಲ್ಲಿಯೇ ಬರೆದುಕೊಡಬೇಕು.
ಎ. ಮೃತ ಸಾಧಕರ ಬಗೆಗಿನ ಮಹತ್ವಪೂರ್ಣ ಲೇಖನಗಳನ್ನು ಅವರ ಕುಟುಂಬದವರು ಮತ್ತು ಸಾಧಕರು ಬೇಗನೆ ಕಳುಹಿಸಿದರೆ, ಅವುಗಳನ್ನು ನಿಧನದ ನಂತರದ ೧೦ ನೇ ಅಥವಾ ೧೨ ನೇ ದಿನದಂದು ಮುದ್ರಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಬಾರಿ ಈ ಲೇಖನಗಳು ತಡವಾಗಿ ಬರುವುದರಿಂದ ಸಂಕಲನ ಮಾಡಿ ಅವುಗಳನ್ನು ದಿನಪತ್ರಿಕೆಯಲ್ಲಿ ಪ್ರಕಟಿಸುವಾಗ ಬಹಳಷ್ಟು ಗಡಿಬಿಡಿಯಾಗುತ್ತದೆ. ಇಂತಹ ಲೇಖನಗಳನ್ನು ಕಳುಹಿಸುವಾಗ ಜೊತೆಗೆ ಮೃತ ಸಾಧಕರ ಭಾವಚಿತ್ರವನ್ನು ಕಳುಹಿಸಬೇಕು. ಲೇಖನದಲ್ಲಿ ಅವರ ವಯಸ್ಸನ್ನು ಉಲ್ಲೇಖಿಸಬೇಕು ಮತ್ತು ಬರೆದುಕೊಡುವವರು ತಮ್ಮ ಪೂರ್ಣ ಹೆಸರು, ಸಂಬಂಧ, ಊರು ಮೊದಲಾದ ಎಲ್ಲವನ್ನೂ ಪೂರ್ಣಗೊಳಿಸಿಯೇ ಲೇಖನವನ್ನು ಕಳುಹಿಸಬೇಕು. ಸಂಕಲನ ವಿಭಾಗಕ್ಕೆ ಅಪೂರ್ಣ ಮಾಹಿತಿ ಬಂದರೆ ಎಲ್ಲವನ್ನೂ ಪೂರ್ಣಗೊಳಿಸಲು ಸಮನ್ವಯಕ ಸಾಧಕರಿಗೆ ಬಹಳ ಸಮಯ ನೀಡಬೇಕಾಗುತ್ತದೆ.
ಏ. ಯಾವುದಾದರೂ ಜಿಲ್ಲೆಯಲ್ಲಿ ಹೊಸ ಜಿಜ್ಞಾಸು ಅಥವಾ ಧರ್ಮಪ್ರೇಮಿಗಳು ಸಾಧನೆಯನ್ನು ಆರಂಭಿಸಿದ್ದರೆ ಅವರಿಗೆ ಬಂದ ಅನುಭೂತಿಗಳು, ಹಾಗೆಯೇ ಅವರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಬರೆದು ಕಳುಹಿಸಬೇಕು. ಈ ಲೇಖನದಲ್ಲಿ ಅದು ಹೊಸ ಧರ್ಮಪ್ರೇಮಿ ಅಥವಾ ಜಿಜ್ಞಾಸುಗಳಿಗೆ ಸಂಬಂಧಿಸಿದೆ ಎಂದು ಮರೆಯದೇ ಉಲ್ಲೇಖಿಸಬೇಕು. ಹಳೆಯ ಸಾಧಕರಿಗೆ ಬಂದ ಯಾವುದಾದರೂ ಸಾಮಾನ್ಯ ಅನುಭೂತಿ, ಉದಾ. ಸುಗಂಧ ಬರುವುದು ಇತ್ಯಾದಿ ಇದು ಹೊಸ ಜಿಜ್ಞಾಸುವಿನ ದೃಷ್ಟಿಯಿಂದ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಅದು ಪ್ರಕಟವಾದರೆ ಅವನ ಸಾಧನೆಗೆ ಪ್ರೋತ್ಸಾಹ ಸಿಗಬಹುದು ಮತ್ತು ಇತರ ಜಿಜ್ಞಾಸುಗಳಿಗೆ ಅದರಿಂದ ಕಲಿಯಲು ಸಾಧ್ಯವಾಗುತ್ತದೆ.
೨. ಯಾವ ಲೇಖನವನ್ನು ಕಳುಹಿಸಬಾರದು ?
ಅ. ಸಾಧಕರು ಮನಸ್ಸಿನ ಸ್ತರದ ಸವಿಸ್ತಾರವಾದ ವಿಚಾರ ಪ್ರಕ್ರಿಯೆಯನ್ನು ಬರೆದು ಕಳುಹಿಸಬಾರದು. ಅದನ್ನು ವ್ಯಷ್ಟಿ ಸಾಧನೆಯ ವರದಿಯಲ್ಲಿಯೂ ಹೇಳಬಹುದು.
ಆ. ಸಾಧಕರು ಒಂದೇ ಬಾರಿಗೆ ೫-೬ ದೊಡ್ಡ ಕವಿತೆಗಳನ್ನು ಬರೆದು ಕಳುಹಿಸಬಾರದು. ಬಹಳಷ್ಟು ಬಾರಿ ಕವಿತೆಗಳಲ್ಲಿನ ಕೆಲವು ಸಾಲುಗಳು ಅಪೂರ್ಣವಾಗಿರುತ್ತವೆ. ಅವುಗಳ ಅರ್ಥವನ್ನು ತಿಳಿದುಕೊಂಡು ಸಂಕಲನ ಮಾಡುವುದು ಕಷ್ಟವಾಗುತ್ತದೆ ಮತ್ತು ಹೆಚ್ಚಿನ ಸಮಯವನ್ನು ನೀಡಬೇಕಾಗುತ್ತದೆ. ಅನೇಕ ಸಾಧಕರು ಬಹಳ ದೊಡ್ಡದಾದ ಕವಿತೆಗಳನ್ನು ಕಳುಹಿಸುತ್ತಾರೆ. ಆದ್ದರಿಂದ ಕವಿತೆಯಲ್ಲಿನ ಅನಾವಶ್ಯಕ ಭಾಗವನ್ನು ತೆಗೆದು ಅದನ್ನು ಸರಿಪಡಿಸಲು ಸಾಧಕರಿಗೆ ಸಮಯ ನೀಡಬೇಕಾಗುತ್ತದೆ. ಕೆಲವು ಬಾರಿ ಒಂದೇ ಕವಿತೆಯಲ್ಲಿನ ಕೆಲವು ಚರಣಗಳು ೨ ಸಾಲುಗಳದ್ದಾಗಿದ್ದರೆ, ಕೆಲವು ೩ ಮತ್ತೆ ಕೆಲವು ೪ ಸಾಲುಗಳದ್ದಾಗಿರುತ್ತವೆ. ಒಂದು ಕವಿತೆಯಲ್ಲಿನ ಚರಣಗಳು ನಿರ್ದಿಷ್ಟ ಸಾಲುಗಳದ್ದೇ, ಉದಾ. ೨ ಅಥವಾ ೩ ಸಾಲುಗಳದ್ದೇ ಆಗಿರಬೇಕು.
ಇ. ಕೆಲವರು ಅಪೂರ್ಣ ಮತ್ತು ಸಂದರ್ಭರಹಿತ ಲೇಖನಗಳನ್ನು ಕಳುಹಿಸುತ್ತಾರೆ. ಆ ಲೇಖನ ಅರ್ಥವಾಗುವುದಿಲ್ಲ. ಬಹಳಷ್ಟು ಸಮಯ ನೀಡಿ ಮತ್ತು ಪ್ರಶ್ನೆ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಾಧಕರು ಇಂತಹ ಲೇಖನಗಳನ್ನು ಕಳುಹಿಸಬಾರದು.
ಈ. ಕೆಲವು ಸಾಧಕರು ರಾಮನಾಥಿ (ಗೋವಾ) ಯಲ್ಲಿನ ಸನಾತನದ ಆಶ್ರಮದಲ್ಲಿ ನಡೆದ ಯಾಗಗಳ ಬಗ್ಗೆ ಬರೆದು ಕೊಡುತ್ತಾರೆ; ಆದರೆ ಆ ಲೇಖನದಲ್ಲಿ ಯಾಗದ ಹೆಸರು, ದಿನಾಂಕ ಇತ್ಯಾದಿ ಇರುವುದಿಲ್ಲ, ಹಾಗೆಯೇ ಅನುಭೂತಿಯನ್ನೂ ವ್ಯವಸ್ಥಿತವಾಗಿ ಬರೆದಿರುವುದಿಲ್ಲ. ಆದ್ದರಿಂದ ಅಂತಹ ಬರವಣಿಗೆಯನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ.
೩. ಕೆಲವು ಪ್ರಮುಖ ಅಂಶಗಳು
ಅ. ಲೇಖನಗಳನ್ನು ಕಳುಹಿಸುವ ಎಲ್ಲಾ ಸಾಧಕರು ಲೇಖನದ ಕೆಳಗೆ ‘ತಮ್ಮ ಹೆಸರು, ವಯಸ್ಸು, ಊರು, ದಿನಾಂಕ ಮತ್ತು ಸಂಪರ್ಕ ಸಂಖ್ಯೆ’ಯನ್ನು ಬರೆಯಬೇಕು.
ಆ. ಯಾವ ಸಾಧಕನ ಬಗ್ಗೆ ಬರೆದುಕೊಡಲಾಗಿದೆಯೋ, ಅವನ ಮತ್ತು ತಮ್ಮ ಭಾವಚಿತ್ರವನ್ನು ಕಳುಹಿಸಬೇಕು.
ಇ. ಲೇಖನದಲ್ಲಿ ಕೆಲವು ಸಂದರ್ಭಗಳನ್ನು ನೀಡಿದ್ದರೆ ಅವು ಸರಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಈ. ‘ಸನಾತನ ಪ್ರಭಾತ’ದಲ್ಲಿನ ಲೇಖನದ ಸಂದರ್ಭವನ್ನು ನೀಡಿದ್ದಲ್ಲಿ ಆ ಸಂಚಿಕೆಯ ದಿನಾಂಕವನ್ನೂ ನಮೂದಿಸಬೇಕು.
ಉ. ಬಾಲಸಾಧಕರ ಲೇಖನವನ್ನು ಕಳುಹಿಸುವಾಗ ಆ ಬಾಲ ಸಾಧಕನ ಈಗಿನ ಛಾಯಾಚಿತ್ರ ಮತ್ತು ಯಾರು ಬಾಲ ಸಾಧಕನ ಬಗ್ಗೆ ಬರೆದುಕೊಟ್ಟಿದ್ದಾರೆಯೋ, ಅವರೆಲ್ಲರ ಈಗಿನ ಛಾಯಾಚಿತ್ರಗಳನ್ನು ಕಳುಹಿಸಬೇಕು.
ಊ. ಕೆಲವು ಸಾಧಕರು ಕೊನೆಯ ಕ್ಷಣದಲ್ಲಿ ‘ವಾಟ್ಸ್‌ಆಪ್’ ಮೂಲಕ ಲೇಖನಗಳನ್ನು ಕಳುಹಿಸುತ್ತಾರೆ. ಈ ಲೇಖನಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ಅಡಚಣೆ ಬರುತ್ತದೆ. ಸಾಧಕರು ಈ ರೀತಿ ಲೇಖನಗಳನ್ನು ಕಳುಹಿಸದೇ ಆಯಾ ಜಿಲ್ಲೆಯ ಸಮನ್ವಯಕ ಸಾಧಕರ ಮೂಲಕವೇ ಅವುಗಳನ್ನು ಕಳುಹಿಸಬೇಕು.
ಎ. ಬಹಳಷ್ಟು ಬಾರಿ ಸಾಧಕರ ಹುಟ್ಟುಹಬ್ಬ, ಹಾಗೆಯೇ ಉಪ ನಯನ, ವಿವಾಹ, ಇಂತಹ ಕಾರ್ಯಕ್ರಮಗಳು ಪೂರ್ವ ನಿಯೋಜಿತವಾಗಿರುತ್ತವೆ. ಯಾವ ಸಾಧಕರ ಹುಟ್ಟುಹಬ್ಬ, ಉಪನಯನ ಅಥವಾ ವಿವಾಹ ಇರುತ್ತದೆಯೋ, ಅವರ ಗುಣ ವೈಶಿಷ್ಟ್ಯಗಳ ಆ ಕಾರ್ಯಕ್ರಮದ ದಿನದಂದು ಪ್ರಕಟಿಸಬೇಕಾದ ಕಡತಗಳು ಸಂಕಲನ ವಿಭಾಗಕ್ಕೆ ತೀರಾ ಕೊನೆಯ ಕ್ಷಣದಲ್ಲಿ ಬರುತ್ತವೆ. ಅಂತಹ ಕಡತಗಳು ಗ್ರಂಥ ಸಂಕಲನ ವಿಭಾಗಕ್ಕೆ ಕನಿಷ್ಠ ೩ ವಾರಗಳ ಮೊದಲು ಬರುವುದು ಅಪೇಕ್ಷಿತವಾಗಿದೆ.
ಏ. ಅನೇಕ ಜಿಲ್ಲೆಗಳಲ್ಲಿ ‘ಲೇಖನವನ್ನು ಸಂಕಲನ ವಿಭಾಗಕ್ಕೆ ಹೇಗೆ ಕಳುಹಿಸಬೇಕು ?’, ಇದರ ಕಾರ್ಯಪದ್ಧತಿಯನ್ನು ನಿರ್ಧರಿಸ ಲಾಗಿದೆ, ಆದ್ದರಿಂದ ಇಂತಹ ಜಿಲ್ಲೆಗಳ ಸಾಧಕರು ಸಂಕಲನ ವಿಭಾಗಕ್ಕೆ ನೇರವಾಗಿ ಲೇಖನಗಳನ್ನು ಕಳುಹಿಸದೇ ಜಿಲ್ಲೆಯಲ್ಲಿ ನಿರ್ಧರಿಸಲಾದ ಕಾರ್ಯಪದ್ಧತಿಯಂತೆಯೇ ಲೇಖನಗಳನ್ನು ಕಳುಹಿಸಬೇಕು.’
– ಗ್ರಂಥ ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೪.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !