ಬಾಬರೀ ಕಟ್ಟಡವನ್ನು ಕೆಡವಿದ ಪ್ರಕರಣದಲ್ಲಿ ಸಿಬಿಐಯ ವಿಶೇಷ ನ್ಯಾಯಾಲಯವು ೩೨ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಇದು ಐತಿಹಾಸಿಕ ನಿರ್ಣಯವಾಗಿದೆ. ಕಳೆದ ೨೮ ವರ್ಷಗಳಿಂದ ಹಿಂದೂಗಳನ್ನು ‘ಮತಾಂಧರು, ‘ಶಾಂತಿಭಂಗಗೊಳಿಸುವವರು, ‘ಉದ್ರಿಕ್ತ ಕೃತ್ಯ ಮಾಡುವವರು, ‘ಸಮಾಜಕಂಟಕರು ಎಂದು ಹೇಳಿ ನಿರಂತರ ಹೀಯಾಳಿಸಲಾಗುತ್ತಿತ್ತು, ಈಗ ಅವರೆಲ್ಲರ ಬಾಯಿ ಮುಚ್ಚಿಕೊಂಡಿದೆ. ಈ ಕಟ್ಟಡವನ್ನು ಕೆಡವಿದ ನಂತರ ಹಿಂದುತ್ವನಿಷ್ಠ ನೇತಾರರ ಮತ್ತು ಕಾರ್ಯಕರ್ತರ ಮೇಲೆ ಖಟ್ಲೆಗಳನ್ನು ದಾಖಲಿಸಲಾಯಿತು. ಬಾಬರಿ ಕಟ್ಟಡವನ್ನು ಕೆಡವಿದ ನಂತರ ಹಿಂದೂಗಳು ತೋರಿಸಿದ ಸಹನಶೀಲತೆ ಮತ್ತು ಅವರು ಸಹಿಸಿಕೊಂಡಂತಹ ಹಿಂಸೆಗೆ ಸರಿಸಾಟಿಯಿಲ್ಲ. ಅವರು ತೋರಿಸಿದ ಸಹನಶೀಲತೆಯು ಫಲಕಾರಿಯಾಯಿತು. ಯಾವಾಗಲೂ ‘ನಾವು ಭಾರತೀಯ ನ್ಯಾಯವ್ಯವಸ್ಥೆಯನ್ನು ನಂಬುತ್ತೇವೆ, ಎಂದು ಹೇಳುತ್ತಾ ತಮ್ಮನ್ನು ‘ಪ್ರಜಾಪ್ರಭುತ್ವವಾದಿಗಳೆಂದು ಹೇಳಿಸಿಕೊಳ್ಳುವವರು ಈ ನಿರ್ಣಯದ ನಂತರ ನ್ಯಾಯಾಧೀಶರ ನಿಲುವಿನ ವಿರುದ್ಧ ಮಾತನಾಡುತ್ತಿದ್ದಾರೆ. ಅಂದರೆ ನಿರ್ಣಯ ಹಿಂದೂಗಳ ವಿರುದ್ಧ ಬಂದರೆ, ‘ಸತ್ಯದ ವಿಜಯ ಮತ್ತು ನಿರ್ಣಯ ಹಿಂದೂಗಳ ಪರವಾಗಿ ಬಂದರೆ ‘ನಿರ್ದಿಷ್ಟವಾದ ನಿರ್ಣಯ ಎಂದು ಹೇಳುವುದು ಎಷ್ಟರಮಟ್ಟಿಗೆ ಯೋಗ್ಯವಾಗಿದೆ ? ಈ ನಿರ್ಣಯದಿಂದ ಹಿಂದೂಗಳ ಮೇಲಿನ ಕಳಂಕ ಅಳಿಸಿಹೋಗಿದೆ. ವಾಸ್ತವದಲ್ಲಿ ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳಿಗೆ ತಮ್ಮ ನ್ಯಾಯಯುತ ಹಕ್ಕಿಗಾಗಿ ಎಲ್ಲ ಸ್ತರಗಳಲ್ಲಿ ಸಂಘರ್ಷ ಮಾಡಬೇಕಾಗುತ್ತದೆ ಮತ್ತು ತಮ್ಮ ನಿರ್ದೋಷತ್ವವನ್ನು ಸಿದ್ಧಪಡಿಸಬೇಕಾಗುತ್ತದೆ, ಇದು ನಮ್ಮ ವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಹಿಂದೂಗಳು ಇದನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು ? ಈ ತೀರ್ಪಿಗೆ ಸಂಬಂಧಿಸಿ ಕೇಳಿಬರುವ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯುವುದು ಅನಿವಾರ್ಯವಾಗಿದೆ.
ಲಿಬರಹನ ಆಯೋಗದ ವಿರುದ್ಧ ಕ್ರಮ ತೆಗೆದುಕೊಳ್ಳಿ !
ಬಾಬರಿ ಕಟ್ಟಡವನ್ನು ಧ್ವಂಸ ಮಾಡಿದ ನಂತರ ಹಿಂದೂಗಳನ್ನು ಅವಮಾನಿಸಲು (ಅ) ಪ್ರಗತಿಪರರಲ್ಲಿ, ಜಾತ್ಯತೀತವಾದಿಗಳಲ್ಲಿ ನಾ ಮುಂದು ತಾ ಮುಂದು ಎನ್ನುವ ಸ್ಪರ್ಧೆ ಆರಂಭವಾಯಿತು. ಅದರಲ್ಲಿಯೇ ಅಂದಿನ ಕಾಂಗ್ರೆಸ್ ಸರಕಾರ ಲಿಬರಹನ ಆಯೋಗವನ್ನು ಸ್ಥಾಪಿಸಿ ಹಿಂದೂದ್ವೇಷಿಗಳನ್ನು ರಮಿಸಲು ಪ್ರಯತ್ನಿಸಿತು. ಅಂದಿನ ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಸ್ಥಾಪನೆಯಾಗಿರುವ ಈ ಆಯೋಗದ ಉದ್ದೇಶವು ಶುದ್ಧವಾಗಿರಲಿಲ್ಲ. ಹಿಂದೂಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೇರಿ ಅವರನ್ನು ಮುಖಭಂಗ ಮಾಡಲು ಪ್ರಯತ್ನವಾಯಿತು. ಈ ಆಯೋಗಕ್ಕಾಗಿ ೮ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು. ಈ ಖರ್ಚನ್ನು ಹಿಂದೂಗಳು ತುಂಬಿಸಿದ ತೆರಿಗೆಯ ಹಣದಿಂದ ಮಾಡಲಾಯಿತು, ಎಂದು ಪ್ರತ್ಯೇಕವಾಗಿ ಹೇಳುವ ಆವಶ್ಯಕತೆಯಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಹಿಂದೂಗಳನ್ನು ‘ಮತಾಂಧರನ್ನಾಗಿ ಮಾಡಲು ಹಿಂದೂಗಳ ಜೇಬಿನಿಂದಲೇ ಹಣವನ್ನು ಕೀಳುವ ಉದ್ಯೋಗ ಇದಾಗಿತ್ತು. ಜಗತ್ತಿನ ಯಾವ ದೇಶದಲ್ಲಿಯೂ ಬಹು ಸಂಖ್ಯಾತರಾಗಿರುವ ಸಮಾಜವನ್ನು ಈ ರೀತಿಯಲ್ಲಿ ಅವಹೇಳನ ಮಾಡುವ ಘಟನೆಯು ಎಲ್ಲಿಯೂ ಕಾಣಿಸುವುದಿಲ್ಲ. ಹಿಂದೂಗಳು ಮಾತ್ರ ಇದನ್ನು ಕೂಡ ಸಹನಶೀಲತೆಯಿಂದ ಸ್ವೀಕರಿಸಿದರು. ಈ ಆಯೋಗದ ದರ್ಬಾರು ೧೭ ವರ್ಷಗಳವರೆಗೆ ನಡೆಯಿತು. ಸಿಬಿಐಯ ವಿಶೇಷ ನ್ಯಾಯಾಲಯವು ನೀಡಿದ ಈ ನಿರ್ಣಯದಿಂದ ಈ ಆಯೋಗದ ವರದಿಗೆ ಕಸದ ಬುಟ್ಟಿ ತೋರಿಸುವ ಸಮಯ ಬಂದಿದೆ. ಇಂತಹ ಢೋಂಗಿ ವರದಿಗಳನ್ನು ತಯಾರಿಸಿ ಹಿಂದೂಗಳ ಮಾನಭಂಗ ಮಾಡುವವರಿಗೆ ಎಂತಹ ಶಿಕ್ಷೆಯನ್ನು ನೀಡಲಾಗುವುದು, ಎನ್ನುವ ವಿಷಯದಲ್ಲಿ ಈ ನಿರ್ಣಯದ ಹಿನ್ನೆಲೆಯಲ್ಲಿ ಚರ್ಚೆಯಾಗುವ ಆವಶ್ಯಕತೆಯಿದೆ. ಹಿಂದೂಗಳ ವಿರುದ್ಧ ಷಡ್ಯಂತ್ರ ರಚಿಸಲು ಸ್ಥಾಪಿಸಲಾಗಿರುವ ಈ ಆಯೋಗದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಬಾಬರೀ ಕಟ್ಟಡ ಧ್ವಂಸ ಪ್ರಕರಣದಲ್ಲಿ ತೀರ್ಪು ಬಂದ ನಂತರ ಮೊದಲು ಲಿಬಹರನ ಆಯೋಗಕ್ಕೆ ಸಂಬಂಧಿಸಿದವರಿಂದ ಈ ಆಯೋಗದ ಕಾರ್ಯಾಚರಣೆಗೆ ಆಗಿರುವ ಖರ್ಚನ್ನು ವಸೂಲು ಮಾಡಲು ಇದು ಯೋಗ್ಯವಾದ ಸಮಯವಾಗಿದೆ.
ಆರೋಪಿ ಸ್ಥಾನದಲ್ಲಿ ಹಿಂದೂಗಳೇ ಏಕೆ ?
ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಗಲಭೆಗಳಾಗಿದ್ದು ಅವುಗಳ ಹಿಂದೆ ಮತಾಂಧರಿದ್ದರು, ಎನ್ನುವುದು ಸೂರ್ಯಪ್ರಕಾಶದಷ್ಟೇ ಸತ್ಯವಾಗಿದೆ. ಆದರೂ ಈ ಮತಾಂಧರಿಗೆ ನ್ಯಾಯಾಂಗ ಪ್ರಕ್ರಿಯೆಗಳನ್ನು ಎದುರಿಸಬೇಕಾಗವ ಪ್ರಮೇಯಗಳು ಅಪರೂಪವಾಗಿದೆ. ಮುಂಬಯಿಯಲ್ಲಿ ಗಲಭೆ ನಡೆಸಿದವರು ಮುಕ್ತರಾಗಿ ತಿರುಗಾಡುತ್ತಿದ್ದಾರೆ. ಬಂಗಾಲ, ಕೇರಳ, ಉತ್ತರಪ್ರದೇಶ ಮುಂತಾದೆಡೆಗಳಲ್ಲಿ ನಡೆದಿರುವ ಗಲಭೆಗಳಲ್ಲಿ ಮತಾಂಧರ ವಿರುದ್ಧ ತಕ್ಷಣ ಖಟ್ಲೆಯನ್ನು ದಾಖಲಿಸಿ ಅವರನ್ನು ಕಂಬಿ ಎಣಿಸುವಂತೆ ಮಾಡಿರುವ ಉದಾಹರಣೆಗಳು ಈ ದೇಶದಲ್ಲಿ ಕಂಡು ಬರುವುದಿಲ್ಲ ? ಅಷ್ಟೇ ಏಕೆ ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಮಾಡಿರುವ ಮತಾಂಧರ ವಿರುದ್ಧ ಖಟ್ಲೆಯನ್ನು ದಾಖಲಿಸಲಾಗಿದೆಯೇ ? ಹಿಂದೂಗಳು ತಮ್ಮ ನಿರ್ದೋಷತ್ತ್ವವನ್ನು ಸಿದ್ಧಪಡಿಸಲು ನ್ಯಾಯಾಲಯದ ಮೆಟ್ಟಿಲನ್ನು ಸವೆಸುತ್ತಾರೆ; ಆದರೆ ಮತಾಂಧರು ಮುಕ್ತರಾಗಿ ಸಂಚರಿಸುವುದು, ಸಂತಾಪಜನಕವಾಗಿದೆ. ನ್ಯಾಯಾಲಯದ ಪ್ರಕ್ರಿಯೆಯನ್ನು ಎದುರಿಸಲು ಹಿಂದೂಗಳು ಯಾವತ್ತೂ ಹಿಂಜರಿಯಲಿಲ್ಲ; ಆದರೆ ಹಿಂದೂಗಳ ದಾರಿಗೆ ಅಡ್ಡಬರುವ ದುರ್ವರ್ತನೆಯು ಹಿಂದೂಗಳಿಗೆ ಸ್ವೀಕಾರವಿಲ್ಲ. ಸ್ವಾತಂತ್ರ್ಯದ ನಂತರ ೭೩ ವರ್ಷಗಳಿಂದ ಹಿಂದೂಗಳು ನ್ಯಾಯವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಸಹನಶೀಲತೆಯಿಂದ ಮತ್ತು ಪ್ರಾಮಾಣಿಕತೆಯಿಂದ ವರ್ತಿಸುತ್ತಾ ಬಂದಿದ್ದಾರೆ; ಆದರೆ ಈ ಗುಣಗಳನ್ನು ದುರುಪಯೋಗಿಸಿಕೊಂಡು ಪದೇ ಪದೇ ಹಿಂದೂಗಳ ಮಾನಭಂಗ ಮಾಡಲಾಯಿತು. ಈಗ ಹಿಂದೂಗಳಿಗೆ ಇದರ ಅರಿವಾಗುತ್ತಿದೆ. ತಮ್ಮ ಮೇಲೆ ಅನ್ಯಾಯವಾಗುತ್ತಿದೆ, ಎನ್ನುವ ಭಾವನೆಯು ಹಿಂದೂಗಳಲ್ಲಿ ಹೆಚ್ಚುತ್ತಾ ಆ ಭಾವನೆಯ ಉದ್ರೇಕವಾದರೆ, ಅದಕ್ಕೆ ಯಾರು ಹೊಣೆ, ಎನ್ನುವ ಪ್ರಶ್ನೆಗೂ ಉತ್ತರವನ್ನು ಈ ನಿರ್ಣಯದ ಹಿನ್ನೆಲೆಯಲ್ಲಿ ಕಂಡು ಹಿಡಿಯುವ ಅವಶ್ಯಕತೆಯಿದೆ.
ಹೋರಾಟ ಮುಗಿದಿಲ್ಲ!
ಬಾಬರೀ ಕಟ್ಟಡದ ತೀರ್ಪು ಬಂದು ಹಿಂದೂಗಳು ದೋಷಮುಕ್ತರಾಗಿರುವಾಗ ಇನ್ನೊಂದೆಡೆ ಮಾತ್ರ ಮಥುರೆಯಲ್ಲಿನ ಶ್ರೀಕೃಷ್ಣಜನ್ಮ ಭೂಮಿಯ ೧೩.೩೭ ಎಕರೆ ಭೂಮಿಯ ಮಾಲೀಕತ್ವವನ್ನು ಹಿಂಪಡೆಯುವ ಹಾಗೂ ಈ ಭೂಮಿಯಲ್ಲಿದ್ದ ಶಾಹೀ ಈದ್ಗಾಹ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸಬೇಕೆಂಬ ಬೇಡಿಕೆಯ ಅರ್ಜಿಯನ್ನು ಮಥುರಾ ದಿವಾಣಿ ನ್ಯಾಯಾಲಯವು ಸೆಪ್ಟೆಂಬರ್ ೩೦ ರಂದು ತಳ್ಳಿ ಹಾಕಿತು. ಇದರಿಂದ ಹಿಂದೂಗಳು ಇನ್ನೂ ಒಂದು ದೀರ್ಘ ಕಾಲದ ನ್ಯಾಯಾಂಗ ಹೋರಾಟವನ್ನು ನಡೆಸಲು ಸಿದ್ಧರಾಗಬೇಕಾಗುವುದು. ಶ್ರೀರಾಮಜನ್ಮಭೂಮಿ ಮುಕ್ತವಾಯಿತು; ಆದರೆ ಶ್ರೀಕೃಷ್ಣ ಜನ್ಮಭೂಮಿಯ ಜೊತೆಗೆ ಹಿಂದೂಗಳ ಅನೇಕ ಧರ್ಮಸ್ಥಳಗಳು ನ್ಯಾಯದ ನಿರೀಕ್ಷೆಯಲ್ಲಿವೆ. ಬಾಬರೀ ಕಟ್ಟಡದ ತೀರ್ಪಿನ ನಂತರ ಎಮ್.ಐ.ಎಮ್.ನ ಮುಖಂಡ ಅಸಾದುದ್ದೀನ ಓವೈಸಿ ಮತ್ತು ಇತರ ಮತಾಂಧ ಮುಖಂಡರು ಕ್ರೋಧಿತರಾಗಿದ್ದಾರೆ. ಅನೇಕ ಮತಾಂಧರು ಬಾಬರಿ ಕಟ್ಟಡವನ್ನು ಕೆಡವಿರುವ ಛಾಯಾಚಿತ್ರಗಳನ್ನು, ಧ್ವನಿಚಿತ್ರಸುರುಳಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ‘ಇದಕ್ಕೆ ಯಾರು ಹೊಣೆ, ಎಂದು ಪ್ರಶ್ನಿಸುತ್ತಿದ್ದಾರೆ. ಇವರೆಲ್ಲರೂ ‘ನಮಗೆ ಅನ್ಯಾಯವಾಗಿದೆ, ಎಂದು ಹೇಳುತ್ತಾ ಬೊಬ್ಬೆ ಹೊಡೆಯುತ್ತಿದ್ದಾರೆ; ಆದರೆ ಹಿಂದೂಗಳ ಮೇಲಾದ ಅನ್ಯಾಯದ ಬಗ್ಗೆ ಏನು ? ರಾಮಮಂದಿರವನ್ನು ಬಾಬರ ಕೆಡವಿದನು, ಅದರ ಬಗ್ಗೆ ಏನು ? ಹಿಂದೂಗಳು ತಮ್ಮ ಆರಾಧ್ಯದೇವತೆಗೆ ಅವನ ಜನ್ಮಭೂಮಿಗೆ ಹೋಗಿ ಪೂಜೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಅದರ ಬಗ್ಗೆ ಏನು ? ಈಗ ಇಂತಹ ಅನೇಕ ಪ್ರಶ್ನೆಗಳ ಉತ್ತರವನ್ನು ಈ ಮತಾಂಧರಿಂದ ಹೇಳಿಸಿಕೊಳ್ಳುವ ಸಮಯ ಬಂದಿದೆ. ಈ ಹೋರಾಟ ಮುಗಿಯಲಿಲ್ಲ. ಇಸ್ಲಾಂನ ವಶದಲ್ಲಿರುವ ಹಿಂದೂಗಳ ಎಲ್ಲ ದೇವಸ್ಥಾನಗಳು ಯಾವಾಗ ಮುಕ್ತವಾಗುತ್ತವೆಯೋ, ಆಗ ಹಿಂದೂಗಳ ಹೋರಾಟ ನಿಲ್ಲುವುದು. ಇದನ್ನು ಶೀಘ್ರದಲ್ಲಿಯೇ ಸಾಧ್ಯಗೊಳಿಸಲು ಹಿಂದೂ ರಾಷ್ಟ್ರವೇ ಬೇಕು !