ಹಿಂದೂ ರಾಷ್ಟ್ರ ಮಾತ್ರ (ಸಾತ್ತ್ವಿಕರಾಷ್ಟ್ರ) ಅಖಂಡ ಉಳಿಯಬಹುದು !

‘ರಾಷ್ಟ್ರವು ಅಖಂಡ ಉಳಿಯುವುದರ ಹಿಂದೆ ಕೇವಲ ರಾಷ್ಟ್ರೀಯ ಭಾವನೆ ಇದ್ದರೆ ನಡೆಯುವುದಿಲ್ಲ, ಆದರೆ ರಾಷ್ಟ್ರೀಯ ಚಾರಿತ್ರ್ಯವೂ ಶುದ್ಧವಾಗಿರಬೇಕಾಗುತ್ತದೆ. ಸ್ವಾತಂತ್ರ್ಯಕ್ಕಿಂತ ಮೊದಲು ಕಾಂಗ್ರೆಸ್‌ನಲ್ಲಿ ನೇತೃತ್ವದ ರಾಷ್ಟ್ರೀಯ ಭಾವನೆ ಇತ್ತು; ಆದರೆ ಅಧಿಕಾರದ ಲಾಲಸೆ ಮತ್ತು ಮುಸಲ್ಮಾರ ಅವಾಸ್ತವ ಓಲೈಕೆ ಇವುಗಳಿಂದಾಗಿ ದೇಶದ ವಿಭಜನೆಯನ್ನು ಅವರು ತಡೆಗಟ್ಟಲು ಆಗಲಿಲ್ಲ. ಮುಂಬರುವ ಹಿಂದೂ ರಾಷ್ಟ್ರವು ಆಧ್ಯಾತ್ಮಿಕ ಅಧಿಷ್ಠಾನದ ಮೇಲೆ ನಿರ್ಮಾಣವಾಗಲಿದೆ. ಸಾತ್ತ್ವಿಕ, ನಿಸ್ವಾರ್ಥಿ, ಚಾರಿತ್ರ್ಯಸಂಪನ್ನ ಮತ್ತು ರಾಷ್ಟ್ರಭಕ್ತ ಜನರೇ ಹಿಂದೂ ರಾಷ್ಟ್ರವನ್ನು ನಡೆಸಲಿರುವುದರಿಂದ ಹಿಂದೂ ರಾಷ್ಟ್ರಕ್ಕೆ ಪ್ರತ್ಯೇಕತಾವಾದದ ಅಪಾಯವಿಲ್ಲ. ಆದ್ದರಿಂದಲೇ ಏಕಮೇವ ಹಿಂದೂ ರಾಷ್ಟ್ರವೇ ಅಖಂಡವಾಗಿ ಉಳಿಯಬಹುದು. ಇಂತಹ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಒಟ್ಟಾಗಿ ಪ್ರಯತ್ನಿಸೋಣ ! – (ಪೂ.) ಶ್ರೀ. ಸಂದೀಪ ಆಳಶಿ (೯.೮.೨೦೨೦)