ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು ಮತ್ತು ಹಿತಚಿಂತಕರಲ್ಲಿ ವಿನಂತಿ

ಆಪತ್ಕಾಲದ ಪೂರ್ವಸಿದ್ಧತೆಯ ಸೂಚನೆಗಳು ಐಚ್ಛಿಕವಾಗಿವೆ ಎಂಬುದನ್ನು ಗಮನದಲ್ಲಿರಿಸಿ ಹಾಗೂ ಸನಾತನದ ಬಗ್ಗೆ ತಪ್ಪುಮಾಹಿತಿಯನ್ನು ಹರಡುವವರಿಂದ ಎಚ್ಚರದಿಂದಿರಿ !

ಶ್ರೀ. ಚೇತನ ರಾಜಹಂಸ

‘ಸದ್ಯ ದೈನಿಕ ‘ಸನಾತನ ಪ್ರಭಾತ’ದಲ್ಲಿ ಆಪತ್ಕಾಲದ ಪೂರ್ವಸಿದ್ಧತೆ ಎಂದು ದೊಡ್ಡ ನಗರಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಸೂಚನೆಗಳನ್ನು ಮುದ್ರಿಸಲಾಗುತ್ತಿದೆ. ಈ ಸೂಚನೆಗಳನ್ನು ಮುದ್ರಿಸಿರುವುದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳದೇ ಅವುಗಳ ಬಗ್ಗೆ ಸನಾತನದ ವಿರೋಧಕರು ಅನಾವಶ್ಯಕ ತಪ್ಪುಮಾಹಿತಿಯನ್ನು ಹರಡುತ್ತಿದ್ದಾರೆ.

೧. ಆಕ್ಷೇಪ : ಕೆಲವು ವಿರೋಧಕರು ‘ನೀವು ಇಂತಹ ಅವೈಜ್ಞಾನಿಕ ಮಾಹಿತಿಯನ್ನು ಸಮಾಜದಲ್ಲಿ ಹರಡಬೇಡಿರಿ’, ‘ನೀವು ಮೂರನೇಯ ಮಹಾಯುದ್ಧದ ಬಗ್ಗೆ ಭಯವನ್ನು ಹರಡುತ್ತಿರುವಿರಿ’, ಎಂದು ಟೀಕಿಸುತ್ತಿದ್ದಾರೆ.

ಖಂಡನೆ : ಈ ಚೌಕಟ್ಟುಗಳನ್ನು ಮುದ್ರಿಸಿರುವುದರ ಹಿಂದಿನ ಮುಖ್ಯ ಉದ್ದೇಶವನ್ನು ಅರಿತುಕೊಳ್ಳದೇ ಕೆಲವರು ಟೀಕಿಸುತ್ತಿದ್ದಾರೆ ಎಂಬುದು ಇಲ್ಲಿ ಗಮನಕ್ಕೆ ಬರುತ್ತದೆ. ಸ್ಥೂಲದಲ್ಲಿ ನೋಡಿದರೂ ನಗರಗಳಲ್ಲಿ ಜನದಟ್ಟಣೆಯಿಂದ ಉದ್ಭವಿಸಿರುವ ಸಮಸ್ಯೆಗಳು, ವರ್ತಮಾನದಲ್ಲಿನ ಕೊರೋನಾ ರೋಗದ ಸಂಕಟ, ಜಗತ್ತಿನಲ್ಲಿನ ವಿವಿಧ ದೇಶಗಳಲ್ಲಿ ಹೆಚ್ಚುತ್ತಿರುವ ಒತ್ತಡ, ಭಾರತಕ್ಕೆ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಉದ್ಭವಿಸಿರುವ ಯುದ್ಧಜನ್ಯ ಸ್ಥಿತಿ, ಇವೆಲ್ಲವುಗಳನ್ನು ನೋಡಿದರೆ ದೊಡ್ಡ ನಗರಗಳು ಮುಂಬರುವ ಕಾಲದಲ್ಲಿ ಎಷ್ಟು ಸಂಕಟಗಳನ್ನು ಎದುರಿಸಬೇಕಾಗಬಹುದು, ಎಂಬುದರ ಕಲ್ಪನೆಯು ಬರುತ್ತದೆ. ಹಾಗೆಯೇ ಅನೇಕ ಸಂತರು ಮತ್ತು ನ್ಯಾಸ್ಟ್ರಾಡಮಸ್‌ರಂತಹ ಭವಿಷ್ಯಕಾರರು ಮುಂಬರುವ ಆಪತ್ಕಾಲದ ಬಗ್ಗೆ ಪದೇಪದೇ ಹೇಳಿ ಮನುಕುಲಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲ ಸಂಕಟಗಳಿಂದ ಸಾಧಕರು ಸುರಕ್ಷಿತವಾಗಿರಬೇಕು ಎಂದು ಸನಾತನವು ಆಪತ್ಕಾಲದ ಪೂರ್ವ ಸಿದ್ಧತೆಯ ಸಂದರ್ಭದಲ್ಲಿ ಸೂಚನೆಗಳನ್ನು ನೀಡಿದೆ. ಈ ಎಲ್ಲ ಸೂಚನೆಗಳು ಸಂಪೂರ್ಣವಾಗಿ ಐಚ್ಛಿಕವಾಗಿವೆ. ಇದರಲ್ಲಿ ಸನಾತನವು ಯಾರಿಗೂ ಒತ್ತಾಯ ಮಾಡಿಲ್ಲ.

೨. ಆಕ್ಷೇಪ : ‘ಸನಾತನವು ಒಂದು ಕಡೆ ಆಪತ್ಕಾಲ ಬರುವುದಿದೆ ಎಂದು ಹೇಳುತ್ತಿದೆ ಮತ್ತು ಇನ್ನೊಂದು ಕಡೆ ಧ್ವನಿಚಿತ್ರೀಕರಣಕ್ಕಾಗಿ ಉಪಕರಣಗಳನ್ನು ಅರ್ಪಣೆ ಮಾಡಿ ಎಂದು ಕರೆಯನ್ನೂ ನೀಡುತ್ತಿದೆ, ಇದು ಹೇಗೆ ?’, ಎಂದು ಕೆಲವರು ವಿಚಾರಿಸಿದ್ದಾರೆ.

ಖಂಡನೆ : ಕೊರೋನಾ ಮಹಾಮಾರಿ, ಆರ್ಥಿಕ ಮಹಾಕುಸಿತ ಮತ್ತು ಗಡಿಯಲ್ಲಿರುವ ಯುದ್ಧಜನ್ಯ ಸ್ಥಿತಿ, ಇಂತಹ ಆಪತ್ಕಾಲದ ಲಕ್ಷಣಗಳನ್ನು ಸದ್ಯ ನಾವು ಅನುಭವಿಸುತ್ತಿದ್ದೇವೆ. ಅಂದರೆ ಆಪತ್ಕಾಲವು ಈಗಾಗಲೇ ಬಂದಾಗಿದೆ. ಈ ಆಪತ್ಕಾಲದ ತೀವ್ರತೆಯು ಹೆಚ್ಚಾಗುವ ಮೊದಲೇ, ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾಡಲು ಅವಕಾಶವಿದೆ. ಅಧ್ಯಾತ್ಮಪ್ರಸಾರವು, ಸನಾತನದ ಮುಖ್ಯ ಕಾರ್ಯವಾಗಿದೆ. ಕೊರೋನಾದ ಸಂಕಟದಿಂದಾಗಿ ‘ಆನ್‌ಲೈನ್’ ಮಾಧ್ಯಮಗಳಿಂದಲೇ ಅಧ್ಯಾತ್ಮಪ್ರಸಾರದ ಕಾರ್ಯವು ದೊಡ್ಡ ಪ್ರಮಾಣದಲ್ಲಿ ಮುನ್ನಡೆಯುತ್ತಿದೆ. ಇದರಲ್ಲಿ ‘ಆನ್‌ಲೈನ್ ಸತ್ಸಂಗಗಳು, ಚರ್ಚಾಗೋಷ್ಠಿಗಳು, ಹಿಂದೂ ಅಧಿವೇಶನಗಳು, ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ಎಲ್ಲಿಯವರೆಗೆ ಆಪತ್ಕಾಲದ ತೀವ್ರತೆ ಹೆಚ್ಚಾಗುವುದಿಲ್ಲವೋ, ಅಲ್ಲಿಯವರೆಗೆ, ಈ ಕಾರ್ಯವನ್ನು ನಡೆಸಲು ತುರ್ತು ಆವಶ್ಯಕತೆ ಎಂದು ಈ ವಸ್ತುಗಳನ್ನು ಅರ್ಪಣೆ ಮಾಡಿ ಎಂದು ಸನಾತನವು ಕರೆಯನ್ನು ನೀಡಿದೆ.’ – ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೨೮.೯.೨೦೨೦)