ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

ಹಿಂದೂಗಳು ಧರ್ಮರಕ್ಷಣೆಗಾಗಿ ರಾಜಕಾರಣ ಮತ್ತು ಸೈನಿಕೀಕರಣ ಮಾಡುವುದು ಆವಶ್ಯಕವಾಗಿದೆ !

ಗೋವಾದ ರಾಮನಾಥಿಯಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯವತಿಯಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮೇ ೨೭ ರಿಂದ ಜೂನ್ ೮, ೨೦೧೯ ರವರೆಗೆ ‘೮ ನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನೆರವೇರಿತ್ತು. ಈ ಅಧಿವೇಶನದಲ್ಲಿ ಪಶ್ಚಿಮ ಉತ್ತರಪ್ರದೇಶದ ಸಾಂಸ್ಕೃತಿಕ ಗೌರವ ಸಂಸ್ಥೆಯ ಅಧ್ಯಕ್ಷ ಹಾಗೂ ಮೂಲತಃ ಗಾಝಿಯಾಬಾದ್‌ನ (ಉತ್ತರಪ್ರದೇಶ) ಶ್ರೀ. ವಿನೋದ ಕುಮಾರ ಸರ್ವೋದಯ ಇವರು ‘ದೇವಬಂದ್‌ನ ಇಸ್ಲಾಮೀ ಚಕ್ರವ್ಯೂಹ : ಭಾರತದ ಮುಂದಿನ ಇನ್ನೊಂದು ಸವಾಲು, ಎನ್ನುವ ವಿಷಯದಲ್ಲಿ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡುತ್ತಿದ್ದೇವೆ.

ಸ್ವಾತಂತ್ರ್ಯವೀರ ಸಾವರಕರರು, ‘ರಾಜಕಾರಣದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕೀಕರಣವಾಗಬೇಕು ಎಂದು ಹೇಳಿದ್ದರು, ಆದರೆ ನಾವು ಅದನ್ನು ಮರೆತಿದ್ದೇವೆ. ನಾವು ರಾಜಕಾರಣ ಮತ್ತು ಸೈನಿಕೀಕರಣವನ್ನು ಮಾಡಿದಾಗಲೇ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಬಹುದು, ಹೀಗೆ ಮಾಡಿದರೆ ಮಾತ್ರ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಹುದು. ನಾವು ರಾಜಕಾರಣದ ಮತ್ತು ಸೈನಿಕೀಕರಣ ರಹಿತವಾಗಿ ಧರ್ಮರಕ್ಷಣೆ ಮಾಡಲು ಅಸಾಧ್ಯ, ಇದನ್ನು ಮರೆಯಬಾರದು. ವಿಜಯವನ್ನುಗಳಿಸಲು ಪ್ರಜಾಪ್ರಭುತ್ವದ ಪದ್ಧತಿಯಲ್ಲಿ ರಾಜಕಾರಣವನ್ನು ಹಾಗೂ ಶರೀರವನ್ನು ಬಲಿಷ್ಠ ಮಾಡಿಕೊಳ್ಳಲು ಮತ್ತು ದೇಶದ ಶತ್ರುಗಳನ್ನು ಸದೆಬಡಿಯಲು ಸೈನ್ಯಶಕ್ತಿಯನ್ನೂ ಸಜ್ಜಾಗಿಡಲೇಬೇಕು ಏಕೆಂದರೆ ದೇವಬಂದ್‌ದಲ್ಲಿ ಬೆಳಕಿಗೆ ಬಂದ ಇಸ್ಲಾಮೀ ಚಕ್ರವ್ಯೂಹದ ಬಗ್ಗೆ ತಿಳಿದುಕೊಂಡರೆ ಇದರ ಗಾಂಭೀರ್ಯ ಗಮನಕ್ಕೆ ಬರುತ್ತದೆ ಆದರೆ ತಮ್ಮಲ್ಲಿ ಬಹಳ ಕಡಿಮೆ ಜನರಿಗೆ ಈ  ಇಸ್ಲಾಮೀ ಚಕ್ರವ್ಯೂಹದ ಬಗ್ಗೆ ತಿಳಿದಿರಬಹುದು.

ಜುಲೈ ೨೦೧೮ ರಲ್ಲಿ ‘ಜಮಾತೆ ಇಸ್ಲಾಮಿಕ್ ಹಿಂದ್ನ ಮೌಲಾನಾ ಮತ್ಬೀ ಇವರ ಹೇಳಿಕೆಗನುಸಾರ ‘ಜಮಾತೆ ಯೂಥ್ ಕ್ಲಬ್ ಎಂಬ ಹೆಸರಿನ ಒಂದು ಸಂಘಟನೆಯಿದೆ. ಈ ಸಂಘಟನೆಯ ಮೂಲಕ ಪ್ರತಿವರ್ಷ ಹನ್ನೆರಡುವರೆ ಲಕ್ಷ ಯುವಕರಿಗೆ ಬಾಹ್ಯಶಕ್ತಿಗಳನ್ನು ಎದುರಿಸುವ ತರಬೇತಿಯನ್ನು ನೀಡಬೇಕು, ಎಂಬ ಆಶಯವಿದೆ. ಅರ್ಥಾತ್ ೧೦ ವರ್ಷಗಳಲ್ಲಿ ಒಂದು ಕೋಟಿ ೨೫ ಲಕ್ಷ ಸೈನಿಕರನ್ನು ಸಿದ್ಧಪಡಿಸುವುದು ಅವರ ನಿಯೋಜನೆಯಾಗಿದೆ. ಎಷ್ಟು ಭಯಂಕರ ನಿಯೋಜನೆಯಾಗಿದೆ ನೋಡಿ ! ಜನಸಾಮಾನ್ಯರಿಗೆ ಇದರ ಬಗ್ಗೆ ಏನೂ ಮಾಹಿತಿಯಿಲ್ಲ; ಏಕೆಂದರೆ, ಯಾವುದೇ ದಿನಪತ್ರಿಕೆಯಲ್ಲಿ ಅದರ ವಿಷಯ ಮುದ್ರಣವಾಗಿಲ್ಲ, ದೂರಚಿತ್ರವಾಹಿನಿಗಳಲ್ಲಿ ಅದರ ವಾರ್ತೆಯು ಬಂದಿಲ್ಲ. ೨೪ ಜುಲೈ ೨೦೧೮ ರಂದು ದೇವಬಂದ್ನಲ್ಲಿ ಅದರ ಪ್ರಾತ್ಯಕ್ಷಿಕೆಯು ನಡೆಯಿತು. ಒಂದು ದಿನಪತ್ರಿಕೆಯಿಂದ ಈ ವಾರ್ತೆ ನನಗೆ ತಿಳಿಯಿತು. ಪ್ರಾತ್ಯಕ್ಷಿಕೆಯ ಮಾಹಿತಿ ಓದಿದಾಗ ಯಾರೋ ಡೆಹರಾಡೂನ್‌ನ ಸೈನ್ಯ ಅಕಾಡೆಮಿಯಿಂದ ತರಬೇತಿ ಪಡೆದು ಬಂದವರು ಇದರ ಸಂಚಲನ ಮಾಡುತ್ತಿದ್ದಾರೆ, ಎಂದೆನಿಸುತ್ತಿತ್ತು. ಅವರು ಜನರ ಮುಂದೆ ಅಂತಹ ಪ್ರದರ್ಶನಗಳನ್ನು ಮಾಡಿ ತೋರಿಸಿದರು. ಅದರಲ್ಲಿ ಆ ಮೌಲಾನಾ ಸಹ ಇದ್ದರು. ಅವರು ೧೬ ಜಿಲ್ಲೆಗಳ ೧೦೦ ಹುಡುಗರಿಗೆ ತರಬೇತಿ ನೀಡಿದರು ಮತ್ತು ೧೦೦ ಜಿಲ್ಲೆಗಳ ಹನ್ನೆರಡುವರೆ ಲಕ್ಷ ಯುವಕರನ್ನು ಪ್ರತಿ ವರ್ಷ ಸಿದ್ಧಪಡಿಸುವುದು ಅವರ ನಿಯೋಜನೆಯಾಗಿದೆ. ಅವರು, ‘ಬಾಹ್ಯಶಕ್ತಿಗಳೊಂದಿಗೆ ಹೋರಾಡಲು ನಾವು ಸಿದ್ಧರಾಗುತ್ತಿದ್ದೇವೆ ಎಂದು ಹೇಳುತ್ತಾರೆ. ಅವರ ಪ್ರಕಾರ ಈ ಬಾಹ್ಯಶಕ್ತಿ ಯಾವುದು ? ಇಸ್ಲಾಮಿನ ಬಾಹ್ಯಶಕ್ತಿಗಳೆಂದರೆ, ಮುಸ್ಲಿಮೇತರರು, ಅಂದರೆ ಕಾಫೀರರು, ಅವರನ್ನೆಲ್ಲ ಇಸ್ಲಾಮ್‌ನ ಬಾಹ್ಯಶಕ್ತಿಗಳೆಂದು ಹೇಳಲಾಗುತ್ತದೆ. ದೇವಬಂದ್‌ದ ಪಠ್ಯ ಕ್ರಮದಲ್ಲಿ ‘ಯಾರು ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಾರೆಯೋ, ನೀವು ಅವರೊಂದಿಗೆ ಪ್ರೇಮದ ಸಂಬಂಧವನ್ನಿಡಬಹುದು ಹಾಗೂ ಯಾರು ಇಸ್ಲಾಂ ಧರ್ಮ ಸ್ವೀಕರಿಸುವುದಿಲ್ಲವೋ, ಅವರೊಂದಿಗೆ ಯುದ್ಧದ ಸಂಬಂಧವನ್ನು ಇಡಬೇಕು. ಅವರು ತಾವಾಗಿಯೇ ಇಸ್ಲಾಂಧರ್ಮವನ್ನು ಸ್ವೀಕರಿಸಿದರೆ ಯುದ್ಧ ಮಾಡುವುದರ ಅವಶ್ಯಕತೆಯಿಲ್ಲ. ಇದು ಇಸ್ಲಾಮ್‌ನ ನಿಯಮವಾಗಿದೆ. ಎಂದು ಕಲಿಸಲಾಗುತ್ತದೆ

ಜಾತ್ಯತೀತತೆಯ ಮರೆಯಲ್ಲಿ ದೇಶದಲ್ಲಿ ಜಿಹಾದ್‌ಗೆ ಪ್ರೋತ್ಸಾಹ !

ಇವರು ಮತಾಂಧ ಜನರ ಮನಸ್ಸಿನಲ್ಲಿ ‘ಜಿಹಾದ್ ಮಾಡಿರಿ, ಜಿಹಾದ್ ಮಾಡಿರಿ, ಜಿಹಾದ್ ಮಾಡಿರಿ ಎಂಬುದನ್ನು ಬಿಂಬಿಸುತ್ತಾರೆ. ಇದನ್ನು ನಾವು ಹೇಗೆ ದೂರಗೊಳಿಸುವುದು ಎಂಬುದೇ ಒಂದು ದೊಡ್ಡ ಚಿಂತೆಯ ವಿಷಯವಾಗಿದೆ. ನಮ್ಮ ಸೈನಿಕೀಕರಣ ಮತ್ತು ರಾಜಕೀಯಕರಣವಾಗಲು ಸಾಧ್ಯವಿಲ್ಲ. ಎಲ್ಲ ರಾಜಕಾರಣವು ಈ ಮತಾಂಧರ ಹಿಂದೆ ಹೋಗುತ್ತಿದೆ. ಅಲ್ಪಸಂಖ್ಯಾತವಾದವಿರಲಿ ಅಥವಾ ಜಾತ್ಯತೀತತೆ ಇರಲಿ, ಇವೆರಡರ ನೆರಳಿನಲ್ಲಿ ಕೇವಲ ಮತಾಂಧತೆಯೇ ಹೆಚ್ಚುತ್ತಿದೆ. ಪ್ರತಿದಿನ ನಿಮಗೆ ಜಿಹಾದ್‌ನ ಅನೇಕ ರೂಪಗಳು ನೋಡಲು ಸಿಗುತ್ತವೆ. ‘ಲವ್ ಜಿಹಾದ್, ‘ಲ್ಯಾಂಡ್ ಜಿಹಾದ್, ‘ಜನಸಂಖ್ಯೆ ಜಿಹಾದ್, ‘ಬೌದ್ಧಿಕ ಜಿಹಾದ್, ಫಿಲ್ಮೀ ಜಿಹಾದ್, ಹೀಗೆ ನೀವು ಯಾವ್ಯಾವ ರೂಪದ ವಿಚಾರಗಳನ್ನು ಊಹಿಸಬಹುದೋ ಅವೆಲ್ಲದರ ಮೂಲ ಸಂಕಲ್ಪನೆ ‘ಜಿಹಾದ್ವೇ ಆಗಿದೆ ! ನಾವು ನಮ್ಮ ರಕ್ಷಣೆಯ ಬಗ್ಗೆ ಮಾತನಾಡುತ್ತೇವೆ; ಆದರೆ ನಮಗೆ ನಮ್ಮ ಶತ್ರುಗಳು ಯಾರೆಂದು ಗೊತ್ತಿಲ್ಲ, ನಮಗೆ ಯಾರೊಂದಿಗೆ ಸಂಘರ್ಷ ಮಾಡುವುದಿದೆ, ಎಂಬುದು ತಿಳಿದಿರುವುದು ಆವಶ್ಯಕವಾಗಿದೆ.

ದೇಶದಲ್ಲಿ ೮೦೦ ವರ್ಷಗಳಿಂದ ಮತಾಂಧರಿಂದ ‘ಮಾಬ್ ಲಿಂಚಿಂಗ್ ಆಗುತ್ತಿರುವುದು !

೧೦ ವರ್ಷಗಳಲ್ಲಿ ೧ ಕೋಟಿ ೨೫ ಲಕ್ಷ ಸೇನೆಯನ್ನು ಸಿದ್ಧಗೊಳಿಸುವುದೇ ಈ ‘ಜಮಾತೆ ಯುಥ್ ಕ್ಲಬ್ನ ಧ್ಯೇಯವಾಗಿದೆ. ‘ಭಾರತದಲ್ಲಿ ಗುಂಪುಕಟ್ಟಿ ಜನರು ಹಿಂಸೆಗಳನ್ನು ಭುಗಿಲೆಬ್ಬಿ ಸುತ್ತಾರೆ (ಮಾಬ್ ಲಿಂಚಿಂಗ್) ಅಥವಾ ಗೋಹತ್ಯೆಗಳ ಹೆಸರಿನಲ್ಲಿ ಈ ಜನಸಮೂಹದಿಂದ ಹತ್ಯೆಗಳು ನಡೆಯುತ್ತಿವೆ. ಇದರ ಅರ್ಥವೇನು ? ಇಂತಹ ಹತ್ಯೆಗಳನ್ನು ಯಾರು ಮಾಡುತ್ತಾರೆ ? ೮೦೦ ವರ್ಷಗಳ ಹಿಂದಿನ ಇತಿಹಾಸವನ್ನು ನೋಡಿದರೆ, ಹಿಂದುಸ್ಥಾನದಲ್ಲಿ ಜನಸಮೂಹದಿಂದಾದ ಹೆಚ್ಚಿನ ಹತ್ಯೆಗಳು ಮತಾಂಧರಿಂದಲೇ ಆಗಿವೆ. ಸಾಂಪ್ರದಾಯಿಕ ವಾತಾವರಣವನ್ನು ಕೆಡಿಸುವ ಕಾರ್ಯವನ್ನು ಮತಾಂಧರು ಮಾಡಿದ್ದಾರೆ. ನಾವು ಹಿಂದೂಗಳು ಯಾರನ್ನೂ ಹತ್ಯೆ  ಮಾಡಿರುವ ಒಂದೇ ಒಂದು ಉದಾಹರಣೆಯಿಲ್ಲ. ಜನಸಮೂಹದಿಂದ ಆದ ಹತ್ಯೆಗಳು ಮತ್ತು ಹೆಚ್ಚಿನ ಗಲಭೆಗಳನ್ನು ಮತಾಂಧರು ಮಾಡುತ್ತಾರೆ. ಅವುಗಳ ನೋಂದಣಿಗಳಿವೆ. ಇತಿಹಾಸವನ್ನು ನೋಡಿದರೆ, ಈ ದೇಶದಲ್ಲಿನ ಶೇ. ೭೫ ರಷ್ಟು ಗಲಭೆಗಳನ್ನು ಮತಾಂಧರು ಮಾಡಿದ್ದಾರೆ. ಹೇಳುವ ತಾತ್ಪರ್ಯವೆಂದರೆ, ಜನ ಸಮುದಾಯದಿಂದ ಮಾಡಿರುವ ಹತ್ಯೆಗಳಿಗೆ ‘ಮಾಬ್ ಲಿಂಚಿಂಗ್ನ ಹೆಸರುಕೊಟ್ಟು ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ. ಅದಕ್ಕೆ ಸರಕಾರ ಒಂದು ಕಾನೂನನ್ನು ತರಬೇಕು. ನಾವು ಎಷ್ಟು ದಿನ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವುದು ?

ದೇಶದಲ್ಲಿ ಸಾರಾಸಗಟಾಗಿ ನಡೆಯುವ ಜಿಹಾದ್‌ಗಳತ್ತ ಕಡೆಗೆ ಸರಕಾರ-ಆಡಳಿತದವರ ದುರ್ಲಕ್ಷವೇಕೆ ?

ಗೋವಾದಲ್ಲಿ ೨೦೧೨ ರಿಂದ ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನವು ಆರಂಭವಾಗಿದೆ. ಅನಂತರ ದೇಶದಲ್ಲಿ ೨೦೧೪ ರಲ್ಲಿ ಭಾಜಪದ ಸರಕಾರ ಬಂದಿತು. ೨೦೧೯ ರಲ್ಲಿಯೂ ಪುನಃ ಭಾಜಪ ಸರಕಾರವೇ ಅಧಿಕಾರಕ್ಕೆ ಬಂದಿತು.ಇದು ಆ ಅಧಿವೇಶನದ ಪರಿಣಾಮವಾಗಿದೆ, ಎಂಬುದನ್ನು ಗಮನದಲ್ಲಿಡಿ. ಹಿಂದೂ ಶಕ್ತಿಯು ನಿರಂತರವಾಗಿ ಹಿಂದೂಗಳನ್ನು ರಕ್ಷಿಸುವ ಸಂಸ್ಥೆಗಾಗಿ, ರಾಜಕಾರಣಕ್ಕಾಗಿ ಭಾಜಪವನ್ನು ಮುಂದೆತರುತ್ತಿದೆ. ಸೋನಿಯಾ ಗಾಂಧಿಯ ಸರಕಾರ ೨೦೦೬ ರಲ್ಲಿ ಅಲ್ಪಸಂಖ್ಯಾತರ ಸಚಿವಾಲಯವನ್ನು ಸ್ಥಾಪಿಸಿತ್ತು. ಆದರೆ ಈಗ ಅದು ಮುಗಿದು ಹೋಗಿದೆ.ಅಲ್ಪಸಂಖ್ಯಾತವಾದವನ್ನು ಏಕೆ ಹುಟ್ಟಿಸಿ ಹಾಕಲಾಗುತ್ತದೆ ? ಅಲ್ಪಸಂಖ್ಯಾತವಾದವು ಪರೋಕ್ಷವಾಗಿ ಸಹ ಜಿಹಾದವೇ ಆಗಿದೆ. ಅಫಘಾನಿಸ್ತಾನ ಪ್ರತಿ ವರ್ಷ ಭಾರತದ ೧ ಸಾವಿರ ಅಫಘಾನಿಸ್ತಾನಿಯರಿಗೆ ಶಿಷ್ಯವೇತನವನ್ನು ನೀಡುತ್ತದೆ. ‘ಐ.ಸಿ.ಸಿ.ಆರ್.ನ ಮಾಧ್ಯಮದಿಂದ ೩ ವರ್ಷಗಳಿಗಾಗಿ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ೩ ಸಾವಿರ ಅಫಘಾನಿಸ್ತಾನಿಯರು ಅಧಿಕೃತವಾಗಿ ನಮ್ಮ ದೇಶದಲ್ಲಿ ವಾಸಿಸುತ್ತಿದ್ದಾರೆ. ಅವರೇನು ಜಿಹಾದ್ ಮಾಡುವುದಿಲ್ಲವೇ ? ಅವರು ನಮ್ಮ ಭಗಿನಿಯರನ್ನು, ಕನ್ಯೆಯರನ್ನು ಎತ್ತಿಕೊಂಡು ಹೋಗುತ್ತಾರೆ, ಅವರೊಂದಿಗೆ ಸಂಬಂಧವಿಡುತ್ತಾರೆ. ಅದಲ್ಲದೇ ಪಾಕಿಸ್ತಾನ, ಸುಡಾನ್, ಲಿಬಿಯಾ, ಬಾಂಗ್ಲಾದೇಶ ಮತ್ತು ಮ್ಯಾನಮಾರ ಮುಂತಾದೆಡೆಯಿಂದ ಕೋಟಿಗಟ್ಟಲೆ ನುಸುಳುಕೋರರು ಈ ದೇಶದಲ್ಲಿ ನುಸುಳಿದ್ದಾರೆ. ಭಾರತದಲ್ಲಿ ಈ ಗೃಹ ವಂಚಕರಿದ್ದಾರೆ ಎಂಬುದು ಸರಕಾರಕ್ಕೆ ಗೊತ್ತಿಲ್ಲವೇ ? ಎಲ್ಲೆಲ್ಲಿ ಮತಾಂಧ ಯುವಕರು ಅಡಗಿಕೊಂಡಿದ್ದಾರೆ ? ಎಲ್ಲೆಲ್ಲಿ ಜಿಹಾದ್ ನಡೆಯುತ್ತಿದೆ ? ಎಂಬುದು ಎಲ್ಲರಿಗೂ ತಿಳಿದಿದೆ, ಆದರೆ ಯಾರೂ ಅವರನ್ನು ಬಂಧಿಸುವುದಿಲ್ಲ. ಸರಕಾರ ೩೦ ವರ್ಷಗಳ ದಾಖಲೆಗಳನ್ನು ತೆಗೆದರೆ ಎಲ್ಲ ಜಿಹಾದಿ ಚಟುವಟಿಕೆಗಳು ಬೆಳಕಿಗೆ ಬರುವವು.

ನಿದ್ರಿಸ್ತ ಹಿಂದೂಗಳು ಯಾವಾಗ ಎಚ್ಚೆತ್ತುಕೊಳ್ಳುವರು ?

ನಾವು ಎಷ್ಟು ದಿನ ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳುವುದು ? ಜಿಹಾದಿಗಳು ನಾಲ್ಕೂ ದಿಕ್ಕುಗಳಲ್ಲಿ ‘ನೆಟ್‌ವರ್ಕ್ ರಚಿಸಿ ಇಟ್ಟಿದ್ದಾರೆ. ಆದುದರಿಂದ ನಮಗೆ ಮನೆಯಿಂದ ಹೊರಗೆ ಬರಲೇ ಬೇಕಾಗುವುದು. ಅಲ್ಲಲ್ಲಿ ಅವರ ನಿಯೋಜನೆಗಳು ನಡೆದಿವೆ. ನಮ್ಮ ಅಕ್ಕ-ತಂಗಿಯರಿಗೆ ಮನೆಯಿಂದ ಹೊರಗೆ ಬರಲು ಕಠಿಣವಾಗುತ್ತಿದೆ. ನಾವು ಎಷ್ಟು ಮಾಡಿದರೂ ನಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಿಲ್ಲ, ಇದರಿಂದ ನನಗೆ ತುಂಬಾ ದುಃಖವಾಗುತ್ತದೆ.

ಮತಾಂಧರಿಗೆ ಇಡೀ ದೇಶ ಬೇಕಾಗಿದ್ದರಿಂದ ಅವರಿಗೆ ಎಷ್ಟು ಕೊಟ್ಟರೂ ತೃಪ್ತಿಯಿಲ್ಲ, ಎಂಬುದನ್ನು ಗಮನದಲ್ಲಿಡಿ !

ಪಾಕಿಸ್ತಾನದ ಆ ಸಮಯದಲ್ಲಿನ ವಿಶ್ವಸಂಸ್ಥೆಯಲ್ಲಿನ ರಾಯಬಾರಿ ಅಬ್ದುಲ ಹುಸೇನ ಹರೂನ ಇವರು, ‘೨೦೦೮ ರಲ್ಲಿ ಮುಂಬಯಿಯಲ್ಲಿ ದಂಗೆಯಾಗುವುದು ಎಂದು ಹೇಳಿದ್ದರು. ಅವರು ಹೇಳಿದಂತೆ ಬಾಂಬ್ ಸ್ಫೋಟವಾಗಿತ್ತು. ‘ದೇವಬಂದ್ ಮದರಸಾಗಳಲ್ಲಿ ಉಗ್ರವಾದಿಗಳ ಉತ್ಪತ್ತಿಯಾಗುತ್ತದೆ. ಆದ್ದರಿಂದ ಸರಕಾರ ದೇವಬಂದ್ ಮದರಸಾಗಳನ್ನು ನಿಷೇಧಿಸಬೇಕು, ಎಂದು ಸಹ ಅವರು ಹೇಳಿದ್ದರು. ೨೦೦೮ ರ ಘಟನೆ ನಿಮಗೆ ನೆನಪಿರಬಹುದು. ಆಗ ಮುಂಬಯಿಯಲ್ಲಿ ದಂಗೆಗಳಾಗಿದ್ದವು, ಆಗ ಉಗ್ರರು ಬಹಿರಂಗವಾಗಿ ದೂರಚಿತ್ರವಾಹಿನಿಗಳಲ್ಲಿ ‘ಈ ದೇಶ ನಮ್ಮದು, ನಾವು ಈ ದೇಶವನ್ನು ಲೂಟಿ ಮಾಡುವೆವು ಎನ್ನುತ್ತಿದ್ದರು.  ಇದೇ ರೀತಿಯ ಭಾವನೆಗಳನ್ನು ನಮ್ಮ ಮೊದಲ ಶಿಕ್ಷಣಸಚಿವರಾದ ಅಬ್ದುಲ ಕಲಾಮ್ ಆಝಾದರವರು ಸಹ  ವ್ಯಕ್ತಪಡಿಸಿದ್ದರು. ‘ಯಾವ ದೇಶದಲ್ಲಿ ನಮ್ಮ ಸರಕಾರವಿತ್ತೋ, ಅಲ್ಲಿ ಪುನಃ ನಮ್ಮ ಸರಕಾರವನ್ನು ತರುವುದು ನಮ್ಮ ಕರ್ತವ್ಯವಾಗಿದೆ. ಈ ದೇಶದಲ್ಲಿ ಮುಸಲ್ಮಾನರ ಆಡಳಿತ ಬರಬೇಕು, ಅದು ಬಿಟ್ಟು ಬೇರೇನೂ ನಮಗೆ ಬೇಕಾಗಿಲ್ಲ, ಇದು ಪ್ರತಿಯೊಬ್ಬ ಮುಸಲ್ಮಾನನ ಇಚ್ಛೆಯಾಗಿದೆ. ಅಲ್ಪಸಂಖ್ಯಾತರಿಗೆ ಮೋಸವಾಗಿದೆ, ಎಂದು ಅಪಪ್ರಚಾರವನ್ನು ಮಾಡಲಾಗುತ್ತಿದೆ. ನಿಜ ನೋಡಿದರೆ, ಅಲ್ಪಸಂಖ್ಯಾತರಿಗೆ ಮೋಸವಾಗಿಲ್ಲ, ಆದರೂ ಅಲ್ಪಸಂಖ್ಯಾತರಿಗೆ ಸಂಪೂರ್ಣ ಭಾರತ ಭೂಮಿ ನಮ್ಮದಾಗಬೇಕು ಎನ್ನುವ ಇಚ್ಛೆ ಇದೆ. ಅಷ್ಟರ ವರೆಗೆ ನಾವು ಅವರಿಗೆ ಎಷ್ಟು ಕೊಟ್ಟರೂ ಅದೂ ಕಡಿಮೆಯೇ ಆಗುವುದು. ಅವರು ರಾಷ್ಟ್ರವಾದಕ್ಕೆ ‘ಸೈತಾನ ಮತ್ತು ರಾಷ್ಟ್ರಭಕ್ತಿಗೆ ‘ಸೈತಾನಿ ಎಂದು ಹೇಳುತ್ತಾರೆ. ಇಸ್ಲಾಮ್ ಮತ್ತು ರಾಷ್ಟ್ರೀಯತೆ ಇವೆರಡೂ ವಿಷಯಗಳು ಪರಸ್ಪರ ವಿರೋಧಿಯಾಗಿವೆ. ಎಲ್ಲಿ ಇಸ್ಲಾಮ್ ಇದೆಯೋ, ಅಲ್ಲಿ ರಾಷ್ಟ್ರೀಯತೆಗೆ ಯಾವುದೇ ಸ್ಥಾನವಿಲ್ಲ. ಇಂತಹ ಅನೇಕ ವಿಷಯಗಳಿವೆ, ನಮಗೆ ಅವುಗಳ ಮಾಹಿತಿ ಇರಬೇಕು. ಹಿಂದೂಗಳಿಗೆ ಅವರ ಮೂಲವನ್ನು ಪರಿಚಯಿಸಬೇಕಿದೆ ಹಿಂದೂಗಳ ಡಿ.ಎನ್.ಎ.ಯ ಅಹಿಂಸೆ, ಔದಾರ್ಯ ಮತ್ತು ಕ್ಷಮಾಶೀಲತೆಯಿದೆ ಎಂದು ನಮಗೆ ಹೇಳಲಾಗುತ್ತದೆ, ಆದರೆ ಯಾರೂ ಹಿಂದೂಗಳ ದೇವ-ದೇವತೆಗಳ ಕೈಗಳಲ್ಲಿ ಶಸ್ತ್ರಗಳಿವೆ ಎಂದು ಹೇಳುವುದಿಲ್ಲ. ಆ ಶಸ್ತ್ರಗಳನ್ನು ಶಾಸ್ತ್ರಕ್ಕನುಸಾರ-ಧರ್ಮಕ್ಕನುಸಾರ ಉಪಯೋಗಿಸಲಾಗುತ್ತದೆ, ಹೀಗೆ ಮಾಡಿದರೆ ಅದು ಪುಣ್ಯವಾಗುತ್ತದೆ, ಅದು ನ್ಯಾಯವಾಗುತ್ತದೆ. ನಮಗೆ ಅಹಿಂಸೆ ಮತ್ತು ಔದಾರ್ಯದ ಪಾಠವನ್ನು ಕಲಿಸಿ ಶತ್ರುಗಳ ಬಗ್ಗೆ ಭಾವನಾತ್ಮಕರನ್ನಾಗಿ ಮಾಡಲಾಗುತ್ತದೆ. ಯಾರು ಶತ್ರುಗಳು ? ಯಾರ ಜೊತೆಗೆ ಸಂಘರ್ಷ ಮಾಡುವುದಿದೆ ? ಇಂತಹ ಉಪದೇಶ ಮಾಡಿ ನಮ್ಮನ್ನು ಸುಮ್ಮನೇ ಕುಳ್ಳಿರಿಸಲಾಗುತ್ತದೆ. ಇದರಿಂದ ಮತಾಂಧರ ಆಕ್ರಮಣಕಾರೀ ಮನೋವೃತ್ತಿಗೆ ಸಹಾಯ ಸಿಗುತ್ತಿದೆ. ಅವರಲ್ಲಿ ಕ್ರೂರತನ, ಆಕ್ರಮಣಕಾರೀ ವೃತ್ತಿ ಹೆಚ್ಚಾಗುತ್ತಾ ಹೋಗುತ್ತಿದೆ. ಬಾಲ್ಯದಿಂದಲೇ ಜಿಹಾದ್‌ನ ಧ್ಯೇಯವಿಡುವ ಮತಾಂಧರ ಮಕ್ಕಳು ದೊಡ್ಡವರಾದಾಗ ಸಮಾಜದಲ್ಲಿ ಶಾಂತಿ ರಕ್ಷಿಸುವರೇ ? ಒಂದು ದೂರಚಿತ್ರವಾಹಿನಿಯ ಪತ್ರಕರ್ತ ಬಿಲ ರೇಡಕರ್ ಇವರ ೨೦೦೮ ರ ಒಂದು ಘಟನೆಯಿದೆ. ಅವರು ಒಮ್ಮೆ ಪೇಶಾವರನಲ್ಲಿನ ಒಂದು ಸುಪ್ರಸಿದ್ಧ ಮದರಸಾದ ಮಕ್ಕಳ ಸಂದರ್ಶನವನ್ನು ತೆಗೆದು ಕೊಂಡಿದ್ದರು. ಅಲ್ಲಿ ೬೦೦ ಮಕ್ಕಳು ಕುರಾನ್ ಕಲಿಯುತ್ತಿದ್ದರು. ಅವರು ಮಕ್ಕಳಿಗೆ, ‘ನಿಮ್ಮಲ್ಲಿ ಎಷ್ಟು ಜನರಿಗೆ ಡಾಕ್ಟರ್ ಆಗಲಿಕ್ಕಿದೆ ? ಎಂದು ಕೇಳಿದರು, ಆಗ ಅದರಲ್ಲಿನ ಕೇವಲ ಇಬ್ಬರು ಮಕ್ಕಳು ಕೈ ಎತ್ತಿದರು. ‘ಯಾರು ಜಿಹಾದ್ ಮಾಡುತ್ತೀರಿ ? ಎಂದು ಕೇಳಿದಾಗ ಉಳಿದ ಎಲ್ಲ ಮಕ್ಕಳು ಕೈ ಎತ್ತಿದರು. ಆದಿಫ್ ಜಮಾಲ್ ಎಂಬ ಒಬ್ಬ ಪಾಕಿಸ್ತಾನದ ಪತ್ರಕರ್ತರು ! ಅವರು ೬೦೦ ಜಿಹಾದಿಗಳ ಅಂತಿಮ ಪತ್ರಗಳ ಅಧ್ಯಯನ ಮಾಡಿದರು. ಆ ಪತ್ರಗಳಲ್ಲಿ ಜಿಹಾದಿಗಳು, ಮುಂದಿನಂತೆ ಬರೆದಿದ್ದರು, ನಾನು ಸ್ವೇಚ್ಛೆಯಿಂದ ಜಿಹಾದ್ ಮಾಡಿದ್ದೇನೆ. ‘ಒಂದು ವೇಳೆ ಸ್ವರ್ಗ  (ಜನ್ನತ) ಸಿಗುವುದಿಲ್ಲ ಎಂದಾಗಿದ್ದರೆ, ನಾನು ಜಿಹಾದ್ ಮಾಡುತ್ತಿರಲಿಲ್ಲ. ಇದು ಅವರ ಬೇಸರದ ನುಡಿಯಾಗಿತ್ತು, ಇದಕ್ಕೆ ನಾವು ಗ್ರಂಥವೆಂದು ಹೇಳಬಹುದೇ ? ಇದು ವಿಚಾರ ಮಾಡುವಂತಹ ವಿಷಯವಾಗಿದೆ. ಅವರು ಸ್ವತಃ ಸ್ವರ್ಗಕ್ಕೆ ಹೋಗಲು ಮಾನವೀಯತೆಯನ್ನೇ ಕೊಲೆ ಮಾಡುತ್ತಿದ್ದಾರೆ. ಇನ್ನೋರ್ವ ಕ್ರೈಸ್ತ ವಿದ್ವಾಂಸರೂ ಒಂದು ಅಧ್ಯಯನವನ್ನು ಮಾಡಿದ್ದಾರೆ. ಅವರು ಜಿಹಾದಿ ಆತ್ಮಾಹುತಿ ಬಾಂಬರ್ ಆಗಿರುವವರನ್ನು ಅಧ್ಯಯನ ಮಾಡಿದಾಗ ಅವರಿಗೆ ಗಮನಕ್ಕೆ ಬಂದ ಅಂಶವೆಂದರೆ, ‘ಕಾಫೀರನು ಅಯೋಗ್ಯ ಕೃತಿಯನ್ನು ಮಾಡಿರಲಿ ಅಥವಾ ಮಾಡದಿರಲಿ ಅವನು ಕಾಫೀರ್ ಆಗಿರುವುದೇ ಒಂದು ದೊಡ್ಡ ಅಪರಾಧವಾಗಿದೆ. ಅವನನ್ನು ಕೊಲ್ಲುವುದು ಅವರು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಯುತ್ತಾರೆ. ನಾವು ಇಂತಹ ಅನೇಕ ವಿಷಯಗಳನ್ನು ಗಮನಿಸಬೇಕು. ನಾವು ‘ಇಸ್ಲಾಮ್ ಶಾಂತಿಯ ದೂತವಾಗಿದೆ, ಶಾಂತಿಯ ಪಂಥವಾಗಿದೆ ಎಂದು ಹೇಳುತ್ತೇವೆ, ಆದರೆ ಅವರಿಗೆ ಈ ಶಾಂತಿಯನ್ನು ಯಾರು ಕಲಿಸುವರು ? ಎಲ್ಲ ಕಟ್ಟರ್‌ಪಂಥಿ ಮುಲ್ಲಾಗಳು ನಮಗೆ ಮಾತ್ರ ಜಾತ್ಯತೀತತೆ ಮತ್ತು ದೇಶಭಕ್ತಿಯನ್ನು ಕಲಿಸುತ್ತಾರೆ. ಒಂದು ಕೋಟಿ ೨೫ ಲಕ್ಷ ಜಿಹಾದಿ ಸೇನೆಯನ್ನು ಎದುರಿಸಲು ಹಿಂದೂಗಳಲ್ಲಿ ಸಿದ್ಧತೆ ಇದೆಯೇ ? ಅವರು ಸೈನ್ಯವನ್ನು ತಯಾರಿಸುತ್ತಿದ್ದಾರೆ. ಅದಕ್ಕಾಗಿ ಅವರು ಹನ್ನೆರಡುವರೆ ಲಕ್ಷ ಯುವಕರಿಗೆ ಪ್ರತಿವರ್ಷ ತರಬೇತಿಯನ್ನು ನೀಡುತ್ತಿದ್ದಾರೆ. ಅದರಲ್ಲಿ ಯಾರೆಲ್ಲ ಸೇರ್ಪಡೆಯಾಗಲಿದ್ದಾರೆ ? ದೇಶದಲ್ಲಿ ಅಡಗಿರುವ ಉಗ್ರವಾದಿಗಳು ಅಥವಾ ಅಡಗಿಕೊಂಡು ಜಾಲವನ್ನು ಹರಡಿಸುವವರು ಮತ್ತು ಯಾರು ಅಡಗಿಕೊಂಡು ಕಾರ್ಯ ಮಾಡುವರೋ, ಅವರೆಲ್ಲರೂ ಅದರಲ್ಲಿ ಭಾಗವಹಿಸಲಿಕ್ಕಿಲ್ಲವೇ? ಅವರೆಲ್ಲರನ್ನೂ ಈ ಸೇನೆಯಲ್ಲಿ ಖಂಡಿತವಾಗಿಯೂ ಸೇರಿಸಿಕೊಳ್ಳಲಾಗುವುದು. ಈ ದೇವಬಂದ್‌ನವರು ಇಷ್ಟು ದೊಡ್ಡ ಸೇನೆಯನ್ನು ತಯಾರಿಸುತ್ತಿರುವಾಗ ನಾವೆಲ್ಲರೂ ಕೇವಲ ನೋಡುತ್ತಾ ಕುಳಿತುಕೊಳ್ಳಬೇಕು ಮತ್ತು ಸರಕಾರವೂ ಇದರ ಕುರಿತು ಏನೂ ಮಾತನಾಡುವುದಿಲ್ಲ. ನಮ್ಮ ಸಂಪೂರ್ಣ ದೇಶದ ಸೈನ್ಯವೂ ೨೦ ಲಕ್ಷಕ್ಕಿಂತ ಹೆಚ್ಚಿಲ್ಲ. ಇಲ್ಲಿಯಂತೂ ಒಂದೂ ಕಾಲು ಕೋಟಿ ತರಬೇತಿ ಹೊಂದಿರುವ ಸೈನ್ಯವನ್ನು ತಯಾರು ಮಾಡುವ ಯೋಜನೆಯನ್ನು ಮಾಡಲಾಗುತ್ತಿದೆ ಸ್ವಲ್ಪ ವಿಚಾರ ಮಾಡಿ. ೨೦೧೨ ರಲ್ಲಿ ‘೧೫ ನಿಮಿಷ ಪೊಲೀಸರನ್ನು ಬದಿಗೆ ಸರಿಸಿರಿ, ನಾವು ಎಲ್ಲ ಜನರನ್ನು ನೋಡಿಕೊಳ್ಳುವೆವು, ಎಂದು ಹೇಳುವ ಅಕ್ಬರುದ್ದೀನ ಓವೈಸಿ ಎಲ್ಲಿದ್ದಾನೆ ? ದೇವಬಂದ್ ಮೌಲಾನಾ ಬಹಿರಂಗವಾಗಿ ಸೈನ್ಯವನ್ನು ತಯಾರಿಸುತ್ತಿದ್ದಾನೆ. ಅವರನ್ನು ತಡೆಯುವವರು ಯಾರೂ ಇಲ್ಲ. ವಾಸ್ತವದಲ್ಲಿ ಇದೊಂದು ಇದು ಒಂದು ಗಂಭೀರ ವಿಷಯವಾಗಿದೆ. ಯಾರು ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾರೆಯೋ, ಅವರಿಗೆ ಯಾರೂ ಏನೂ ಹೇಳುವುದಿಲ್ಲ. ಎಲ್ಲರೂ ನಮಗೇ ಹೇಳುತ್ತಾರೆ; ಏಕೆಂದರೆ ನಮ್ಮಲ್ಲಿ ಔದಾರ್ಯ, ಸಹಿಷ್ಣುತೆ ಇದೆ. ಆದರೆ ಔದಾರ್ಯ ಮತ್ತು ಸಹಿಷ್ಣುತೆಯೊಂದಿಗೆ ಧರ್ಮದ ಸಂಬಂಧವನ್ನಿಡ ಬೇಕು. ಧರ್ಮಗ್ರಂಥದಿಂದ ಔದಾರ್ಯವನ್ನು ಯಾರಿಗಾಗಿ ಮತ್ತು ಹೇಗೆ ತೋರಿಸಬೇಕು ? ಎಂಬುದನ್ನು ಕಲಿಸಬೇಕು.

ಹಿಂದೂಗಳು ಸ್ವರಕ್ಷಣೆಗಾಗಿ ಶ್ರೀರಾಮ, ಶ್ರೀಕೃಷ್ಣನಿಂದ ಪ್ರೇರಣೆ ಪಡೆದು ಸ್ವಧರ್ಮವನ್ನು ರಕ್ಷಿಸುವ ಆವಶ್ಯಕತೆಯಿದೆ !

ರಾಮನು ರಾವಣನನ್ನು ಏಕೆ ಕೊಂದನು ? ರಾವಣನು ಜ್ಞಾನಿಯಾಗಿದ್ದನು, ಆದರೆ ಅವನು ಅಧರ್ಮ ಮಾಡಿದುದರಿಂದ ರಾಮನು ಅವನನ್ನು ವಧಿಸಿದನು. ಕೊಲೆ ಮಾಡಲಿಲ್ಲ. ನಾವು ನಮ್ಮ ಭಗವಾನ ಶ್ರೀರಾಮನಿಂದ, ಶ್ರೀಕೃಷ್ಣನಿಂದ ಪ್ರೇರಣೆಯನ್ನು ಪಡೆದುಕೊಳ್ಳಬೇಕು. ನಮ್ಮ ಶಾಲೆಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಸೈನಿಕ ಶಿಕ್ಷಣವನ್ನು ಅನಿವಾರ್ಯಗೊಳಿಸಬೇಕು. ಶರೀರ ಬಲವಿದ್ದರೆ, ಆತ್ಮಬಲವೂ ಬಲಿಷ್ಠವಾಗುತ್ತದೆ. ಸಂಸ್ಕಾರ, ಸಂಸ್ಕೃತಿಯಿಂದ ನಾವು ನಮ್ಮ ಮನೋಬಲ ವನ್ನು ಹೆಚ್ಚಿಸುತ್ತೇವೆ. ಆಧ್ಯಾತ್ಮಿಕ ಸ್ತರವನ್ನು ಹೆಚ್ಚಿಸುತ್ತೇವೆ. ಇದರಿಂದ ದೇಶದ ಬಗೆಗಿನ ಭಕ್ತಿ ಜಾಗೃತವಾಗುತ್ತದೆ. ನಾವು ಧರ್ಮಕ್ಕಾಗಿ ಸಮರ್ಪಿತವಾಗುತ್ತೇವೆ. ದೇಶಭಕ್ತಿಯನ್ನು ಮಾಡಿ ದೇಶಭಕ್ತರಾಗು ತ್ತೇವೆ. ದೇಶವನ್ನು ರಕ್ಷಿಸುತ್ತೇವೆ, ಇದರಿಂದ ಹಿಂದೂಗಳ ರಕ್ಷಣೆಯಾದರೆ ಮಾತ್ರ ನಮ್ಮ ಹಿಂದೂ ರಾಷ್ಟ್ರದ ಕನಸು ನನಸಾಗಬಹುದು. ಒಂದುವೇಳೆ ನಮಗೆ ಹಿಂದೂಗಳನ್ನು ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ, ನಮ್ಮ ಹಿಂದೂ ರಾಷ್ಟ್ರದ ಕನಸು ಅಪೂರ್ಣವಾಗುವುದು. ಅದಕ್ಕಾಗಿ ನಾವು ಮೊಟ್ಟಮೊದಲು ಹಿಂದೂಗಳನ್ನು ರಕ್ಷಣೆ ಮಾಡುವ ಸೈನ್ಯವನ್ನು ಸಿದ್ಧಪಡಿಸಬೇಕು. ಅದು ಈ ದೇವಬಂದ್‌ದವರನ್ನು, ಈ ಮೌಲಾನಾಗಳನ್ನು ಪರಿಣಾಮಕಾರಿ ಪ್ರಭಾವಪೂರ್ಣವಾಗಿ ವೈಚಾರಿಕ ಪ್ರತಿಕಾರವನ್ನು ಮಾಡಲು ಯಶಸ್ವಿಯಾಗುವುದು. ಈಗಲೂ ಅವರ ಬಲ ಕೋಟಿಯಷ್ಟಿದೆ. ನಾವು ಇದನ್ನು ಗಮನದಲ್ಲಿಟ್ಟು ಮುಂದುವರಿದರೆ, ನಾವು ಬಹಳಷ್ಟನ್ನು ಮಾಡಬಹುದು. – ಶ್ರೀ. ವಿನೋದಕುಮಾರ ಸರ್ವೋದಯ