ಸದ್ಯ ಭಾರತದಲ್ಲಿ ಯುದ್ಧದ ಸುಳಿವು ಕಾಣಿಸುತ್ತಿದೆ. ಇತರ ದೇಶಗಳ ಸೈನಿಕರಿಂದಾಗುವ ಕುತಂತ್ರಗಳ ಜೊತೆಗೆ ಉಗ್ರವಾದ, ನಕ್ಸಲವಾದ ಇವುಗಳ ನಿರಂತರ ಆಕ್ರಮಣಗಳಿಂದ ದೇಶದ ಗಡಿಯಲ್ಲಿ ಮತ್ತು ಆಂತರಿಕ ಸ್ಥಿತಿಯು ಯುದ್ಧ ಸಮಾನವಾಗಿದೆ. ಜಮ್ಮು-ಕಾಶ್ಮೀರ, ಭಾರತ-ಚೀನಾದ ಗಡಿರೇಖೆ, ಲಡಾಖ್‌ನಲ್ಲಿ ನಡೆಯುವ ಆಕ್ರಮಣಗಳ ವಿರುದ್ಧ ದೇಶದ ಸೇನೆ ಮತ್ತು ದೇಶದಾದ್ಯಂತ ನಡೆಯುವ ಉಗ್ರವಾದಿ ಮತ್ತು ನಕ್ಸಲವಾದಿ ಆಕ್ರಮಣದ ವಿರುದ್ಧ ಭಾರತೀಯ ಸೈನಿಕರು ಹಗಲಿರುಳು ಹೋರಾಡುತ್ತಿದ್ದಾರೆ. ಇದರಲ್ಲಿ ಅನೇಕ ಸೈನಿಕರು ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಈ ಹುತಾತ್ಮ ಸೈನಿಕರ ಕುಟುಂಬದವರಿಗೆ ವಿವಿಧ ಯೋಜನೆಗಳ ಮೂಲಕ ಆರ್ಥಿಕ, ಶೈಕ್ಷಣಿಕ ಇತ್ಯಾದಿ ಯಾವುದೆಲ್ಲ ಲಾಭಗಳು ಸಿಗುತ್ತವೆ ಹಾಗೂ ಈ ಹುತಾತ್ಮ ಸೈನಿಕರ ಪತ್ನಿಗೆ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಉದ್ಭವಿಸಿದರೆ ಅವುಗಳನ್ನು ಹೇಗೆ ಪರಿಹರಿಸಲಾಗುತ್ತಿದೆ, ಎನ್ನುವ ವಿಷಯದಲ್ಲಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಭಾರತೀಯ ರಕ್ಷಣಾವ್ಯವಸ್ಥೆಯಲ್ಲಿ ಇತರ ದೇಶಗಳ ಆಕ್ರಮಣದಿಂದ ರಕ್ಷಣೆ ಮಾಡಲು ‘ಭಾರತೀಯ ಸೇನೆ (ಆರ್ಮ್ಡ ಫೋರ್ಸ್) ಮತ್ತು ಆಂತರಿಕ ಭದ್ರತೆಗಾಗಿ ‘ಅರೆಸೇನಾ ಪಡೆ (ಪಾರಾ-ಮಿಲಿಟರಿ ಫೋರ್ಸ್) ಸಕ್ರಿಯವಾಗಿವೆ.
೧. ಭಾರತೀಯ ಸೇನೆ ಮತ್ತು ದೇಶದಾದ್ಯಂತದ ರಕ್ಷಣಾ ವ್ಯವಸ್ಥೆ
ಭಾರತೀಯ ಸೇನೆಯು ಯುದ್ಧಕಾಲದಲ್ಲಿ ಸಕ್ರಿಯವಾಗಿರುತ್ತದೆ. ಅದು ರಕ್ಷಣಾ ಸಚಿವಾಲಯದ ಕಾರ್ಯಕ್ಷೇತ್ರದಲ್ಲಿ ಬರುತ್ತದೆ. ಶಾಂತಿಕಾಲದಲ್ಲಿ ಅರೆಸೇನಾ ಪಡೆಗಳು ಅಂದರೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು, ಉದಾ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್.), ಗಡಿ ರಕ್ಷಕ ಪಡೆ (ಬಿ.ಎಸ್.ಎಫ್.), ಭಾರತ-ಟಿಬೇಟ್ ಗಡಿ ಪೊಲೀಸ್ ಪಡೆ (ಐಟಿಬಿಪಿ), ಕೇಂದ್ರೀಯ ಔದ್ಯೋಗಿಕ ರಕ್ಷಕ ಪಡೆ (ಸಿ.ಐ.ಎಸ್.ಎಫ್.), ಆಸಾಮ್ ರೈಫಲ್ಸ್ (ಎ.ಆರ್), ಸಶಸ್ತ್ರ ಗಡಿ ರಕ್ಷಕ ಪಡೆ (ಎಸ್.ಎಸ್.ಬಿ) ಇತ್ಯಾದಿ ಪಡೆಗಳು ಸಕ್ರಿಯವಾಗಿವೆ. ಇವು ಭಾರತೀಯ ಗೃಹಸಚಿವಾಲಯದ ಕಾರ್ಯಕ್ಷೇತ್ರದಲ್ಲಿ ಬರುತ್ತವೆ.
೨. ಭಾರತೀಯ ಸೇನೆಯ ಪ್ರಮುಖ ಪಡೆಗಳು
ಅ. ಭೂದಳ
ಆ. ವಾಯುದಳ
ಇ. ನೌಕಾದಳ
೩. ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ
ಸೈನಿಕರ ಕುಟುಂಬದವರಿಗೆ ಈ ಮುಂದಿನ ಲಾಭಗಳು ಸಿಗುತ್ತವೆ.
ಅ. ಆರ್ಥಿಕ ಸಹಾಯ
೧. ಕೇಂದ್ರ ಸರಕಾರದಿಂದ ೧೦ ಲಕ್ಷ ರೂಪಾಯಿಗಳ ಪರಿಹಾರ ಸಿಗುತ್ತದೆ.
೨. ಆರ್ಮಿ ಗ್ರೂಪ್ ವಿಮೆಯೆಂದು ೨೫ ಲಕ್ಷ ರೂಪಾಯಿ ಸಿಗುತ್ತದೆ. ‘ಆರ್ಮಿ ಸೆಂಟ್ರಲ್ ವೆಲ್ಫೆರ್ ಫಂಡ್ನಿಂದ ೪೦ ಸಾವಿರ ರೂಪಾಯಿ ಸಿಗುತ್ತದೆ. (ಸೈನಿಕ ಕಲ್ಯಾಣ ವಿಭಾಗ, ಮಹಾರಾಷ್ಟ್ರ ರಾಜ್ಯ ಇವರ ಮಾಹಿತಿಗನುಸಾರ)
೪. ‘ಆರ್ಮಿ ವೈವ್ಸ್ ವೆಲ್ಫೆರ್ ಅಸೋಸಿಯೇಶನ್ನಿಂದ ೧೦ ಸಾವಿರ ರೂಪಾಯಿ ಸಿಗುತ್ತದೆ.
೫. ಹುತಾತ್ಮ ಸೈನಿಕರ ಕೊನೆಯ ವೇತನದಷ್ಟು ಪೆನ್ಶನ್ (ನಿವೃತ್ತಿ ವೇತನ) ಕೊಡಲಾಗುತ್ತದೆ. ಇದರ ಹೊರತು ಹುತಾತ್ಮ ಸೈನಿಕರಿಗೆ ಸೇವಾನಿವೃತ್ತವಾಗುವ ಸಮಯದಲ್ಲಿ ಸಿಗುವ ಮೊತ್ತ (ಗ್ರಾಚ್ಯುಟಿ), ಭವಿಷ್ಯ ನಿರ್ವಹಣಾ ನಿಧಿ (ಪ್ರಾವಿಡೆಂಟ್ ಫಂಡ್) ಮತ್ತು ರಜೆಯ ವೇತನ ಸಿಗುತ್ತದೆ.
೭. ಸೈನಿಕ ಇತರ ರಾಜ್ಯದವನಾಗಿದ್ದು ಜಮ್ಮು-ಕಾಶ್ಮೀರ ಕ್ಷೇತ್ರದಲ್ಲಿ ಹುತಾತ್ಮನಾಗಿದ್ದಲ್ಲಿ, ಜಮ್ಮು-ಕಾಶ್ಮೀರ ಸರಕಾರ ಹುತಾತ್ಮ ಸೈನಿಕನ ಕುಟುಂಬದವರಿಗೆ ೨ ಲಕ್ಷ ರೂಪಾಯಿ ಕೊಡುತ್ತದೆ.
೮. ಹುತಾತ್ಮ ಸೈನಿಕನ ಪತ್ನಿಗೆ ರೈಲ್ವೆ ಮತ್ತು ವಿಮಾನ ಪ್ರವಾಸದಲ್ಲಿ ರಿಯಾಯಿತಿ ಸಿಗುತ್ತದೆ.
೯. ಎಲ್.ಪಿ.ಜಿ. ಗ್ಯಾಸ್ ಏಜೆನ್ಸಿ ಅಥವಾ ಪೆಟ್ರೋಲ್ ಪಂಪ್‌ಗಳಲ್ಲಿ ಶೇ. ೮ ರಷ್ಟು ಮಿನಾಯಿತಿ ಸಿಗುತ್ತದೆ.
೧೦. ಸ್ವಉದ್ಯೋಗಕ್ಕಾಗಿ ಅನುದಾನ : ಯುದ್ಧದಲ್ಲಿ ಹುತಾತ್ಮನಾದ ಸೈನಿಕರ ವಿಧವೆಯರಿಗೆ ಕೃಷಿಗೆ ಸಂಬಂಧಿತ ಹಾಗೂ ಹೈನುಗಾರಿಕೆಯ ಸ್ವಉದ್ಯೋಗಕ್ಕಾಗಿ ೧ ಲಕ್ಷ ರೂಪಾಯಿಗಳ ಅನುದಾನ ಸಿಗುತ್ತದೆ.
೧೧. ವಿವಾಹಕ್ಕಾಗಿ ಅನುದಾನ : ಹುತಾತ್ಮ ಸೈನಿಕನ ವಿಧವೆಯ ಪುನರ್ವಿವಾಹಕ್ಕಾಗಿ ಅಥವಾ ಮಗಳ ವಿವಾಹಕ್ಕಾಗಿ ೧ ಲಕ್ಷ ರೂಪಾಯಿಗಳ ಅನುದಾನ ಸಿಗುತ್ತದೆ. ಅದೇ ರೀತಿ ಅನಾಥ ಮಕ್ಕಳ ವಿವಾಹಕ್ಕಾಗಿ ೧ ಲಕ್ಷ ರೂಪಾಯಿಗಳ ಅನುದಾನ ಸಿಗುತ್ತದೆ.
೧೨. ಮನೆ ಕಟ್ಟಲು ಸಹಾಯ : ಯುದ್ಧವಿಧವೆಯರಿಗೆ ಮನೆ ಕಟ್ಟಲು ೧ ಲಕ್ಷದ ೫೦ ಸಾವಿರ ರೂಪಾಯಿಗಳ ಆರ್ಥಿಕ ಸಹಾಯ ಒದಗಿಸಲಾಗುತ್ತದೆ. (ಆಧಾರ : https://abpnews.abplive.in ಮತ್ತು ಸೈನಿಕ ಕಲ್ಯಾಣ ವಿಭಾಗ, ಮಹಾರಾಷ್ಟ್ರ ರಾಜ್ಯ)
ಆ. ಶೈಕ್ಷಣಿಕ ಸಹಾಯ
ಇ. ಯುದ್ಧವಿಧವೆಯರ ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ತತ್ಪರತೆಯಿಂದ ನಿವಾರಿಸಲಾಗುವುದು
೧. ಕೌಟುಂಬಿಕ ತೊಂದರೆಗಳ ದೂರು ಬಂದರೆ ತತ್ಪರತೆಯಿಂದ ಅದನ್ನು ನಿವಾರಿಸುವುದು : ಕೆಲವೊಮ್ಮೆ ಹುತಾತ್ಮ ಸೈನಿಕರ ವಿಧವೆಯರು ಕೌಟುಂಬಿಕ ತೊಂದರೆಗಳನ್ನು ಸಹಿಸಬೇಕಾಗುತ್ತದೆ. ಪತಿಯ ಮರಣಕ್ಕೆ ಇವಳೆ ಅಪಶಕುನವೆಂದು ಹೀಯಾಳಿಸುತ್ತಾರೆ, ಯುದ್ಧದಲ್ಲಿನ ಹುತಾತ್ಮ ಸೈನಿಕನ ವಿಧವೆಯೆಂದು ಅವಳಿಗೆ ಸಿಗುವ ಲಾಭ ಅಂದರೆ ಪೆನ್ಶನ್, ನಗದು ಹಣ ಇತ್ಯಾದಿ ಮಾವನ ಮನೆಗೆ ಕೊಡಬೇಕೆಂದು ಅವಳಿಗೆ ಒತ್ತಡ ಹೇರುತ್ತಾರೆ. ಇಂತಹ ಸಮಯದಲ್ಲಿ ವಿಧವೆ ಜಿಲ್ಲಾ ಸೈನಿಕ ಕಾರ್ಯಾಲಯದಲ್ಲಿ ದೂರು ದಾಖಲಿಸಿದರೆ ಅದನ್ನು ತತ್ಪರತೆಯಿಂದ ನಿವಾರಿಸಲಾಗುತ್ತದೆ. ಅವಳ ಕುಟುಂಬದವರಿಗೆ ಬುದ್ಧಿವಾದ ಹೇಳಲಾಗುತ್ತದೆ ಹಾಗೂ ಅವಳಿಗೆ ಮುಂದೆಯೂ ಏನಾದರೂ ತೊಂದರೆಯಾಗದಂತೆ ಗಮನಿಸಲಾಗುತ್ತದೆ. ಅದಕ್ಕಾಗಿ ಸೈನಿಕ ಕಾರ್ಯಾಲಯದಲ್ಲಿನ ಒಬ್ಬ ಅಧಿಕಾರಿ ಪ್ರತಿ ತಿಂಗಳು ಆ ಕುಟುಂಬವನ್ನು ಭೇಟಿಯಾಗಿ ವಿಚಾರಿಸಿಕೊಳ್ಳುತ್ತಾರೆ.
೨. ಸಾಮಾಜಿಕ ಅಡಚಣೆಯಿದ್ದರೆ ಅದರಲ್ಲಿಯೂ ಸಹಾಯ ಮಾಡಲಾಗುವುದು : ಹುತಾತ್ಮ ಸೈನಿಕನ ಪತ್ನಿಗೆ ನಿವೃತ್ತಿ ವೇತನ, ಆರ್ಥಿಕ ಲಾಭ ಸಿಗುವುದು, ಸರಕಾರದಿಂದ ಭೂಮಿ ಸಿಗುವುದು ಇತ್ಯಾದಿಗಳ ವಿಷಯದಲ್ಲಿ ಕೆಲವು ಅಡಚಣೆಗಳಿದ್ದರೆ, ಸಂಬಂಧಪಟ್ಟ ಆಡಳಿತದ ವಿಭಾಗದಲ್ಲಿ ಸೈನಿಕ ಕಾರ್ಯಾಲಯದಲ್ಲಿನ ಅಧಿಕಾರಿ, ಸಿಬ್ಬಂದಿಗಳು ಸಹಾಯ ಮಾಡುತ್ತಾರೆ.- ಅಶ್ವಿನಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ ಗೋವಾ. (೬.೭.೨೦೨೦)