‘ನಮ್ಮ ಜೀವನವು ಆಧ್ಯಾತ್ಮಿಕ, ಆದಿಭೌತಿಕ ಮತ್ತು ಆದಿದೈವಿಕ ಹೀಗೆ ಮೂರು ಸ್ತರಗಳದ್ದಾಗಿದೆ, ಆದರೆ ‘ನಮ್ಮ ಜೀವನವು ಒಂದೇ ಸ್ತರದಲ್ಲಿದೆ. ಆದಿಭೌತಿಕ ಸ್ತರದಲ್ಲಿಯೇ ಇದೆ, ಎಂದು ತಿಳಿಯುವ ಕೆಲವು ಜನರು ವಿಜ್ಞಾನವಾದದ ಅಥವಾ ಬುದ್ಧಿವಾದದ ಡಂಗುರ ಸಾರುತ್ತಾರೆ; ಆದರೆ ಆ ಆಧಾರವು ಕಾಣಲು ಚೆನ್ನಾಗಿದ್ದರೂ, ಅಸ್ಥಿರ ಅಂದರೆ ಅವಿಶ್ವಾಸಾರ್ಹವಾಗಿರುತ್ತದೆ. ಪುರಾಣಗಳಲ್ಲಿರುವ ಶಾಶ್ವತ ತತ್ತ್ವಗಳ ಆಧಾರದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಿದೆ. ಇಂದು ಅವಿಶ್ವಾಸ, ವಿಜ್ಞಾನವಾದ ಹಾಗೂ ಕುಂಟು ಬುದ್ಧಿವಾದದ ಆಧಾರದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ವಿನಾಶಕಾರಿಯಾಗಿದೆ. ಚಿರಂತನ ತತ್ತ್ವದ ಆಧಾರವನ್ನು ಪಡೆಯಬೇಕು. ಅದಕ್ಕಾಗಿ ನಮ್ಮ ಶಾಸ್ತ್ರಗಳು, ಪರಂಪರೆ ಮತ್ತು ನಿಷ್ಠೆ ಇವುಗಳ ವಿಚಾರ ಮತ್ತು ಅದೇ ರೀತಿ ಯಥಾಶಕ್ತಿ ಆಚರಣೆಯು ಅನಿವಾರ್ಯವಾಗಿದೆ.
ಇಂದು ಮದ್ಯಸೇವನೆ, ವ್ಯಸನಗಳು, ಭ್ರಷ್ಟಾಚಾರ, ಆತ್ಮಕೇಂದ್ರಿತ ವೃತ್ತಿ, ಪ್ರಸಿದ್ಧಿಯ ಲಾಲಸೆ, ಧನಪರಾಯಣ, ಶುಷ್ಕವಾದ ಈ ದುರ್ಗುಣಗಳ ಉದ್ರೇಕವಾಗಿವೆ. ಇಂದು ಸಂಪೂರ್ಣ ವಿಶ್ವವು ಚಿರಂತನ ತತ್ತ್ವದ ಆಧಾರವನ್ನು ಪಡೆದು ಅದಕ್ಕನುಸಾರ ಜೀವನದ ಶಾಸ್ತ್ರಶುದ್ಧ ನಿಯೋಜನೆಯನ್ನು ಸಿದ್ಧಪಡಿಸುವ ವಿಚಾರವನ್ನು ಶೋಧಿಸುತ್ತಿದೆ. ಇಂತಹ ಸಮಯದಲ್ಲಿ ಹಿಂದುತ್ವದ ಸಂಕಲ್ಪನೆಯನ್ನು ಘೋಷಿಸಿ ಅಭ್ಯುದಯ ಹಾಗೂ ನಿಃಶ್ರೇಯಸ್ಸು ಇವೆರಡರ ಪ್ರಾಪ್ತಿಗಳಿಗಾಗಿ ಅನುಷ್ಠಾನವನ್ನು ಮಾಡುವ ಪ್ರಚಂಡ ಸಂಘಟನೆಯನ್ನು ಸ್ಥಾಪಿಸಬೇಕಾಗಿದೆ. – ಗುರುದೇವ ಡಾ. ಕಾಟೆಸ್ವಾಮೀಜಿ (‘ಘನಗರ್ಜಿತ, ಫೆಬ್ರವರಿ ೨೦೧೨).