ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೋಧಿಸುವ ಆವಶ್ಯಕತೆಯನ್ನು ಅರಿತ ಶಿಕ್ಷಕರು !

ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು ದೇಶಾಭಿಮಾನಿಯನ್ನಾಗಿಸಲು ಅದಕ್ಕೆ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಮಹಾನ್ ಧ್ಯೇಯವನ್ನಿರಿಸಿ ಈ ವೀರಪುರುಷರು ಮಾಡಿದ ಕಾರ್ಯವು ಅಷ್ಟೇ ಶ್ರೇಷ್ಠವಾಗಿದೆ.

೧. ಮೊದಲ ಕ್ರಾಂತಿಕಾರರಾದ ವಾಸುದೇವ ಬಳವಂತ ಫಡಕೆ : ೧೮೭೪ ರಲ್ಲಿ ಪುಣೆಯಲ್ಲಿ ‘ಪುಣೆ ನೇಟಿವ್ ಇನ್‌ಸ್ಟಿಟ್ಯೂಟ್ನ್ನು ಸ್ಥಾಪಿಸಿ, ಇದರ ವತಿಯಿಂದ ರಾಷ್ಟ್ರದ ಬಗ್ಗೆ ಶಿಕ್ಷಣ ಕೊಡುವ ಮೊದಲ ಶಾಲೆಯನ್ನು ಸ್ಥಾಪಿಸಿದರು.

೨. ಲೋಕಮಾನ್ಯ ಬಾಲಗಂಗಾಧರ ತಿಲಕರು : ಇವರು ೧೮೮೦ ರಲ್ಲಿ ವಿಷ್ಣುಶಾಸ್ತ್ರಿ ಚಿಪಳೂಣಕರ ಮತ್ತು ಗೋಪಾಲ ಗಣೇಶ ಆಗರಕರ ಇವರ ಸಹಾಯದಿಂದ ಪುಣೆಯಲ್ಲಿ ‘ನ್ಯೂ ಇಂಗ್ಲಿಷ್ ಸ್ಕೂಲ್ನ್ನು ಸ್ಥಾಪಿಸಿದರು. ‘ಡೆಕ್ಕನ್ ಎಜ್ಯುಕೇಶನ್ ಸೊಸೈಟಿ ಮತ್ತು ‘ಫರ್ಗ್ಯುಸನ್ ಮಹಾವಿದ್ಯಾಲಯವನ್ನೂ ಸ್ಥಾಪಿಸಿದರು.

೩. ಲಾಲಾ ಲಜಪತರಾಯರು : ಇವರು ‘ಆಂಗ್ಲೋ ವೈದಿಕ ಕಾಲೇಜ್ನ್ನು ಸ್ಥಾಪಿಸಿ ರಾಷ್ಟ್ರೀಯ ವೃತ್ತಿಶಿಕ್ಷಣ ಕೊಟ್ಟರು.

೪. ಪಂಡಿತ ಮದನಮೋಹನ ಮಾಲವೀಯ : ಇವರು ೧ ಕೋಟಿ ೩೪ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ೧೯೧೬ ರಲ್ಲಿ ಕಾಶಿಯಲ್ಲಿ ‘ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.