ಮಹಮ್ಮದ್ ಪೈಗಂಬರರ ಬಗ್ಗೆ ಕಾಂಗ್ರೆಸ್ ಶಾಸಕ ಶ್ರೀನಿವಾಸಮೂರ್ತಿಯವರ ಅಳಿಯ ನವೀನ ಇವರು ತಥಾಕಥಿತ ಆಕ್ಷೇಪಾರ್ಹ ಪೋಸ್ಟನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರೆಂದು, ಮತಾಂಧರು ೧೧ ಆಗಸ್ಟ್ ೨೦೨೦ ರಂದು ಬೆಂಗಳೂರಿನಲ್ಲಿ ಗಲಭೆಯನ್ನು ಮಾಡಿದರು. ಇಲ್ಲಿಯ ೨ ಪೊಲೀಸ್ ಠಾಣೆಗಳ ಮೇಲೆ ಆಕ್ರಮಣ ನಡೆಸಿ ಅವುಗಳನ್ನು ಸುಟ್ಟರು. ಈ ಗಲಭೆಯಲ್ಲಿ ೬೦ ಮಂದಿ ಪೊಲೀಸರು ಗಾಯಗೊಂಡಿದ್ದರೆ, ೩೦೦ಕ್ಕಿಂತ ಅಧಿಕ ವಾಹನಗಳನ್ನು ಸುಡಲಾಯಿತು. ಪೊಲೀಸರು ಕೊನೆಗೆ ಗೋಲಿಬಾರ ಮಾಡಿದಾಗ ೩ ಮಂದಿ ಗಲಭೆಕೋರರು ಬಲಿಯಾದರು. ಇದರ ಬಳಿಕ ಗಲಭೆ ನಿಂತಿತು. ಈ ಗಲಭೆಯ ಪ್ರಕರಣದಲ್ಲಿ ೩೪೦ ಕ್ಕಿಂತ ಅಧಿಕ ಜನರನ್ನು ಬಂಧಿಸಲಾಗಿದ್ದು, ೫೨ ಎಫ್.ಐ.ಆರ್.ಗಳನ್ನು ದಾಖಲಿಸಲಾಗಿದೆ. ಪೊಲೀಸರು ದಾಖಲಿಸಿರುವ ಎಫ್.ಐ.ಆರ್.ನಿಂದ ಈ ಗಲಭೆ ನಡೆಸಲು ಪೋಸ್ಟ್ ಕೇವಲ ನೆಪವಾಗಿತ್ತು ಎಂಬುದು ತಿಳಿದು ಬಂದಿದೆ.
ಈ ಗಲಭೆ ಪೂರ್ವನಿಯೋಜಿತವಾಗಿತ್ತು ಮತ್ತು ಅದರ ಹಿಂದೆ ದೊಡ್ಡ ಷಡ್ಯಂತ್ರವಿತ್ತು ಎನ್ನುವುದು ಈಗ ಬಹಿರಂಗಗೊಂಡಿದೆ. ಬೆಂಗಳೂರು ಗಲಭೆಯಲ್ಲಿ ಅನೇಕ ಪೊಲೀಸರ ಹತ್ಯೆಯನ್ನು ಮಾಡಿ ಕಾನ್ಪುರ (ಉತ್ತರಪ್ರದೇಶ) ಬಿಕಾನೇರ್‌ನಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುವವರಿದ್ದರು. ಈ ಗಲಭೆ ಮತಾಂಧ ರಾಜಕೀಯ ಪಕ್ಷ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ (‘ಎಸ್‌ಡಿಪಿಐನ) ಷಡ್ಯಂತ್ರವಾಗಿತ್ತು, ಎನ್ನುವುದು ಪೊಲೀಸರ ವಿಚಾರಣೆಯಿಂದ ಬಹಿರಂಗಗೊಂಡಿದೆ. ಇದರ ಘಟನಾವಳಿಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧. ಗಲಭೆಯಲ್ಲಿ ನಿರುದ್ಯೋಗಿ ಮತ್ತು ಹಣಕಾಸಿನ ತೊಂದರೆಯಿರುವ ಮತಾಂಧರು ಭಾಗವಹಿಸಿದ್ದರು !
ಈ ಗಲಭೆಯಲ್ಲಿ ಹೊಟ್ಟೆಪಾಡಿಗಾಗಿ ಬೇರೆ ದಾರಿ ಇಲ್ಲದಿರುವ, ನಿರುದ್ಯೋಗಿಗಳು ಮತ್ತು ಹಣಕಾಸಿನ ತೊಂದರೆ ಇರುವವರು, ಪೌರತ್ವ ಸುಧಾರಣೆ ಕಾಯಿದೆಯ ವಿರುದ್ಧ ಪ್ರತಿಭಟನೆ ಮಾಡುವವರು ಭಾಗವಹಿಸಿದ್ದರು. ಹಿಂದೂಗಳು ಎಷ್ಟೇ ನಿರುದ್ಯೋಗಿಗಳು ಮತ್ತು ಅವರ ಆರ್ಥಿಕ ಸ್ಥಿತಿ ಎಷ್ಟೇ ಗಂಭೀರವಾಗಿದ್ದರೂ ಅವರು ಇಂತಹ ಕೃತ್ಯಗಳನ್ನು ಎಂದಿಗೂ ಮಾಡುವುದಿಲ್ಲ.
೨. ಪೂರ್ವಸಿದ್ಧತೆಯೊಂದಿಗೆ ಹಲ್ಲೆ
೨ ಅ. ಜ್ವಲನಶೀಲ ಪದಾರ್ಥಗಳ ಉಪಯೋಗ ! : ಮತಾಂಧ ಗಲಭೆಕೋರರು ಬೆಂಕಿ ಹಚ್ಚಲು, ವಾಹನಗಳನ್ನು ಸುಡಲು ಜ್ವಲನಶೀಲ ಪದಾರ್ಥಗಳಾದ ಪೆಟ್ರೋಲ್, ಡಿಸಲ್, ಸೀಮೆಎಣ್ಣೆ, ಥಿನ್ನರ್ ಇತ್ಯಾದಿಗಳನ್ನು ತೆಗೆದುಕೊಂಡು ಬಂದಿದ್ದರು ಎನ್ನುವುದು ಪೊಲೀಸರ ಸುಟ್ಟಿರುವ ವಾಹನಗಳ ಫ್ವಾರೆನ್ಸಿಕ್ ಲ್ಯಾಬ್ ಪರೀಕ್ಷೆಯಿಂದ ಕಂಡು ಬಂದಿದೆ. ಒಂದು ರಣನೀತಿಯ ಮೂಲಕ ಗಲಭೆ ಮಾಡುವ ಮತಾಂಧರ ಒಂದು ಗುಂಪು ಕರ್ನಾಟಕ ರಾಜ್ಯದ ಮೀಸಲು ಪೊಲೀಸ್ ಪಡೆಯ ವಾಹನಗಳನ್ನು ಅಡ್ಡಗಟ್ಟಿದ್ದರು. ಮತಾಂಧರ ಈ ಪೂರ್ವಸಿದ್ಧತೆಯಿಂದ ಪೊಲೀಸಗುಪ್ತಚರ ದಳದ ವೈಫಲ್ಯ ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ಹಾಗೆಯೇ ಇಂತಹ ಅಕಸ್ಮಿಕವಾಗಿ ಜರುಗುವ ಹಿಂಸಾಚಾರವನ್ನು ಎದುರಿಸಲು ಪೊಲೀಸರು ಸಕ್ಷಮರಾಗಿಲ್ಲ ಎನ್ನುವುದೂ ಸ್ಪಷ್ಟವಾಯಿತು. ಈಗ ಇದರ ವಿಚಾರವಾಗುವುದು ಅವಶ್ಯಕವಾಗಿದೆ.
೨ ಆ. ಅನೇಕ ವಾಟ್ಸ್‌ಆಪ್ ಗುಂಪುಗಳ ಉಪಯೋಗ : ಯುವಕರನ್ನು ಧಾರ್ಮಿಕ ಭಾವನೆಗಳಿಂದ ಸೆಳೆದು ಸಂಘಟಿತಗೊಳಿಸುವ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಖಲೀಂ ‘ಪ್ರಸಂಗ ಬಂದಾಗ ನಾನು ಕರೆದಲ್ಲಿಗೆ ಬರಬೇಕು ಎಂದು ಹೇಳಿದ್ದನು. ನಾಲ್ಕೈದು ತಿಂಗಳುಗಳಿಂದ ಅವನು ಗಲಭೆಯ ಷಡ್ಯಂತ್ರಕ್ಕಾಗಿ ಪ್ರಯತ್ನಿಸುತ್ತಿದ್ದನು. ಈ ಕಾಲಾವಧಿಯಲ್ಲಿ ಅವನು ಆರ್ಥಿಕ ಸಹಾಯದ ಆವಶ್ಯಕತೆಯಿರುವ ತನ್ನ ಸಹಚರರಿಗೆ ಸಹಾಯ ಮಾಡಿದ್ದನು. ಮುಜಾಮಿಲ್ ಪಾಷಾ, ಅಫ್ನಾನ್, ಫಿರೋಜ್, ಅಬ್ಬಾಸ್ ಮತ್ತು ಇತರರು ಸಕ್ರಿಯ ಸದಸ್ಯರೊಂದಿಗೆ, ಯುವಕರೊಂದಿಗೆ ಮಾತುಕತೆ ನಡೆಸಲು ೭-೮ ವ್ಯಾಟ್ಸ್‌ಆಪ್ ಗುಂಪುಗಳನ್ನು ಪ್ರಾರಂಭಿಸಿದ್ದನು. ಸರಿಸುಮಾರು ೨೫೦ ರಿಂದ ೩೦೦ ಯುವಕರು ಈ ಗುಂಪಿನಲ್ಲಿ ಸೇರ್ಪಡೆಯಾಗಿದ್ದರು. ಮತಾಂಧರ ಸಂಘಟನೆಗಳ ಮೇಲೆ ಎಷ್ಟು ಸೂಕ್ಷ್ಮ ನಿಗಾ ಇಡಬೇಕಾಗುತ್ತದೆ ಎನ್ನುವುದು ಈಗ ಪೊಲೀಸರ ಗಮನಕ್ಕೆ ಬಂದಿರಬೇಕು. ಇದೇ ರೀತಿಯ ನಿಯೋಜನೆಯನ್ನು ದೇಶದ ಇತರ ಸ್ಥಳಗಳಲ್ಲಿ ಮತಾಂಧ ಸಂಘಟನೆಗಳು ಮಾಡುತ್ತಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
೨ ಇ. ಹತ್ತು ನಿಮಿಷದೊಳಗೆ ಪೊಲೀಸ್ ಠಾಣೆಗೆ ಬರುವ ಸಂದೇಶ : ಈ ವ್ಯಾಟ್ಸ್‌ಆಪ್ ಗುಂಪನ್ನು ಉಪಯೋಗಿಸಿ ಗಲಭೆಯ ದಿನದಂದು ಪಾಷಾ ೧೦ ನಿಮಿಷದೊಳಗೆ ಅಲ್ಲಿಯ ಪೊಲೀಸ್ ಠಾಣೆಯ ಬಳಿ ಜಮಾವಣೆಯಾಗುವಂತೆ ಎಲ್ಲರಿಗೂ ಸಂದೇಶವನ್ನು ರವಾನಿಸಿದ್ದನು. ಗುಂಪಿನ ಎಲ್ಲ ಸದಸ್ಯರು ‘ಓಕೆ ಎಂದು ಪ್ರತಿಕ್ರಿಯಿದ್ದರು. ಕೆಲವೇ ನಿಮಿಷಗಳಲ್ಲಿ ನೂರಾರು ಯುವಕರು ಪೊಲೀಸ್ ಠಾಣೆಯ ಹೊರಗೆ ಗುಂಪುಗೂಡಿದ್ದರು. ಏನಾದರೂ ಅಪರಾಧ ನಡೆದಾಗ ಪೊಲೀಸರೂ ಇಷ್ಟು ಶೀಘ್ರವಾಗಿ ಘಟನಾಸ್ಥಳಕ್ಕೆ ತಲುಪುವುದಿಲ್ಲ, ಅಷ್ಟು ಶೀಘ್ರವಾಗಿ ಮತಾಂಧರು ಗಲಭೆ ಮಾಡಲು ತಲುಪಿದ್ದರು.
೨ ಈ. ಪೊಲೀಸರನ್ನು ಕೊಲ್ಲುವ ಷಡ್ಯಂತ್ರ : ಆಕ್ಷೇಪಾರ್ಹ ಪೋಸ್ಟ್ ಪ್ರಕರಣದಲ್ಲಿ ನವೀನನನ್ನು ಪೊಲೀಸರು ರಾತ್ರಿ ೮ ಗಂಟೆಗೆ ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು. ನವೀನನ ಮೇಲೆ ಹಲ್ಲೆ ನಡೆಸಲು ಅಫ್ನಾನ್, ಮುಜಾಮಿಲ ಪಾಷಾ, ಸೈಯದ ಮಸೂದ್, ಅಯಾಜ್, ಅಲ್ಲಾಬಾಕಾಶ್ ಇವರೆಲ್ಲರೂ ಪೊಲೀಸ್ ಠಾಣೆಯ ಸ್ವಲ್ಪ ದೂರದಲ್ಲಿ ಅಡಗಿದ್ದರು. ರಾತ್ರಿ ೮.೪೫ ಗಂಟೆಗೆ ಅಕಸ್ಮಿಕವಾಗಿ ೫೦೦ ಕ್ಕೂ ಅಧಿಕ ಜನರ ಗುಂಪು ಮಚ್ಚು, ದೊಣ್ಣೆ, ಲಾಂಗ್, ಕಲ್ಲು, ಇಟ್ಟಿಗೆ, ಪೆಟ್ರೋಲ ಬಾಂಬ್ ಹಿಡಿದುಕೊಂಡು ಪೊಲೀಸ್ ಠಾಣೆಯ ಮೇಲೆ ಹಲ್ಲೆ ಮಾಡಿದರು. ‘ಪೊಲೀಸರನ್ನು ಕೊಲ್ಲಿ, ಪೊಲೀಸರನ್ನು ಬಿಡಬೇಡಿ, ಅವರನ್ನು ಮುಗಿಸಿಬಿಡಿ, ಎಂದು ಕೂಗುತ್ತಿದ್ದರು. ಅವರು ಖಾಸಗಿ ಮತ್ತು ಸರಕಾರಿ ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸ್ ಠಾಣೆಯ ಪೀಠೋಪಕರಣ, ಬಾಗಿಲು, ಕಿಟಕಿ ಗಾಜು ಒಡೆದು, ನೆಲಮಹಡಿಯಲ್ಲಿದ್ದ ಜಪ್ತಿ ಮಾಡಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ಈ ಸಮಯದಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದರು. ಆದರೂ ಗುಂಪು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿತು. ‘ನಾವು ಬಂದಿರುವ ಕೆಲಸ (ನವೀನ ಕೊಲೆ) ಮಾಡಿಯೇ ತೀರುತ್ತೇವೆ. ಪೊಲೀಸರಿಂದ ಏನೂ ಮಾಡಲು ಸಾಧ್ಯವಿಲ್ಲ, ಎಂದು ಕೂಗುತ್ತ ಹಲ್ಲೆ ಮಾಡಿದರು. ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದ ಕಾರಣ ಗಲಭೆಕೋರರ ಮೇಲೆ ಗುಂಡು ಹಾರಿಸಿದರು ಮತ್ತು ಅದರಲ್ಲಿ ೩ ಜನರು ಬಲಿಯಾದರು. ತದನಂತರ ಪೊಲೀಸರು ಅಫ್ನಾನ, ಮುಜಾಮಿಲ ಪಾಷಾ, ಸೈಯದ ಮಸೂದ್, ಅಯಾಜ್, ಅಲ್ಲಾಬಕಾಶ್ ಮತ್ತು ಸಹಚರರನ್ನು ವಶಕ್ಕೆ ಪಡೆದರು. ಮತಾಂಧರು ಪೊಲೀಸರನ್ನು ಕೊಲ್ಲುತ್ತಿದ್ದರೆ ಅದಕ್ಕೆ ಯಾರು ಹೊಣೆಯಾಗುತ್ತಿದ್ದರು ? ಎನ್ನುವ ಪ್ರಶ್ನೆ ಬರುತ್ತದೆ. ರಾಜ್ಯದಲ್ಲಿ ಭಾಜಪದ ಸರಕಾರವಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ಇಂತಹ ಬೇಜವಾಬ್ದಾರಿ ಸರಿಯಲ್ಲ ಎಂದು ಹಿಂದೂಗಳು ವಿಚಾರ ಮಾಡುತ್ತಿರಬಹುದು.
೨ ಉ. ರಾಜ್ಯದಲ್ಲಿ ೪ ಸಲ ಗಲಭೆ ಮಾಡುವ ಷಡ್ಯಂತ್ರ ವಿಫಲ : ಬೆಂಗಳೂರು ಗಲಭೆಯ ಮುನ್ನ ರಾಜ್ಯದಲ್ಲಿ ೪ ಸಲ ಗಲಭೆ ನಡೆಸುವ ಪ್ರಯತ್ನಗಳು ಪೊಲೀಸರ ಜಾಗರೂಕತೆಯಿಂದ ವಿಫಲವಾಯಿತು ಎನ್ನುವುದು ಕಂಡು ಬಂದಿದೆ. ಸಿ.ಎ.ಎ. (ಪೌರತ್ವ ತಿದ್ದುಪಡಿ ಕಾನೂನು) ಮತ್ತು ಎನ್.ಆರ್.ಸಿ.(ರಾಷ್ಟ್ರೀಯ ನಾಗರಿಕತ್ವ ನೋಂದಣಿ) ಇವು ಅಂಗೀಕೃತವಾದ ಬಳಿಕ ಶ್ರೀರಾಮಜನ್ಮಭೂಮಿಯ ತೀರ್ಪಿನ ದಿನದಂದು, ಶ್ರೀರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಸಮಯದಲ್ಲಿ ಗಲಭೆ ನಡೆಸಲು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಚು ರೂಪಿಸಿತ್ತು; ಆದರೆ ಪೊಲೀಸ ಬಂದೋಬಸ್ತ ಇದ್ದ ಕಾರಣ ಅದು ಸಾಧ್ಯವಾಗಲಿಲ್ಲ.
೨ ಊ. ಗಲಭೆಯಲ್ಲಿ ಶಾಸಕರ ಮನೆ ಮತ್ತು ಪೊಲೀಸ್ ಠಾಣೆಯನ್ನು ಸುಟ್ಟ ಬಳಿಕ ಮತಾಂಧ ಗಲಭೆಕೋರರು ದರ್ಗಾಗೆ ಹೋಗಿದ್ದರು ! : ಗಲಭೆಕೋರರು ಕಾಂಗ್ರೆಸ್ ಶಾಸಕ ಶ್ರೀನಿವಾಸ ಮೂರ್ತಿಯವರ ಮನೆಗೆ, ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ಬಳಿಕ ೨೦೦ ಕ್ಕಿಂತ ಅಧಿಕ ಮತಾಂಧರು ಚಿಂತಾಮಣಿಯ ಮುರುಗಮಲ್ಲ ದರ್ಗಾಕ್ಕೆ ಹೋಗಿರುವುದು ಕಂಡುಬಂದಿದ್ದರಿಂದ ಪೊಲೀಸರು ಅಲ್ಲಿ ಶೋಧದ ಕಾರ್ಯವನ್ನು ಪ್ರಾರಂಭಿಸಿದರು. ಇದರಿಂದ ಗಲಭೆಕೋರರು ಯಾರೆಂಬುದನ್ನು ಪುನಃ ಹೇಳಬೇಕಾಗಿಲ್ಲ ? ಎನ್ನುವುದು ಇದರಿಂದ ಅಧಿಕ ಸ್ಪಷ್ಟವಾಗುತ್ತದೆ. ಇದರ ಬಗ್ಗೆ ಜಾತ್ಯತೀತವಾದಿಗಳು ಏನನ್ನೂ ಮಾತನಾಡುವುದಿಲ್ಲ. ಇಂತಹ ಘಟನೆಗಳನ್ನು ಹಿಂದೂಗಳ ಸಂಘಟನೆ ಗಳು ಮತ್ತು ರಾಜಕೀಯ ಪಕ್ಷಗಳು ಜನತೆಯೆದುರಿಗೆ ತರಬೇಕು.
೩. ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಷಡ್ಯಂತ್ರ !
೩ ಅ. ಎಸ್.ಡಿ.ಪಿ.ಐ. ಮುಖಂಡ ಫಿರೋಜ ಪಾಶಾ ಮುಖ್ಯ ರೂವಾರಿ ! : ಎಸ್.ಡಿ.ಪಿ.ಐ.ನ ಮುಖಂಡ ಫಿರೋಜ ಪಾಷಾ ಈ ಗಲಭೆಯ ಮುಖ್ಯ ಸೂತ್ರಧಾರ ಇರುವುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ. ಫಿರೋಜ್ ನಾಗರಿಕ ಸಂರಕ್ಷಣಾ ದಳದಲ್ಲಿ ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದನು. ಮಾಜಿ ಉಪಮುಖ್ಯಮಂತ್ರಿ. ಡಾ. ಜಿ. ಪರಮೇಶ್ವರ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್, ಅಲ್ಲದೇ ಕಾಂಗ್ರೆಸ್ಸಿನ ಇತರ ಮುಖಂಡರ ಜೊತೆ ಛಾಯಾಚಿತ್ರವನ್ನು ತೆಗೆಸಿಕೊಂಡು ಫೇಸಬುಕ್‌ನಲ್ಲಿ ಪೋಸ್ಟ್ ಮಾಡಿದ್ದನು. ಮತಾಂಧರ ಸಂಘಟನೆಗಳಿಗೆ ಮತ್ತು ಮತಾಂಧರಿಗೆ ಯಾರ ಸಮರ್ಥನೆ ಸಿಗುತ್ತಿರುತ್ತದೆ ಎನ್ನುವುದು ಇದರಿಂದ ಪುನಃ ಸ್ಪಷ್ಟವಾಗುತ್ತದೆ. ಹಿಂದೂಗಳು ಈಗಲಾದರೂ ಇದರಿಂದ ಪಾಠ ಕಲಿತುಕೊಳ್ಳಬೇಕು.
ಫಿರೋಜ ಪಾಷಾ ವ್ಯಾಟ್ಸಆಪ್‌ನಲ್ಲಿ ‘ಟಿಪ್ಪು ಹೆಸರಿನಲ್ಲಿ ಗುಂಪನ್ನು ಮಾಡಿಕೊಂಡಿದ್ದನು. ಅವನು ಆಗಸ್ಟ್ ೧೧ ರಂದು ನವೀನನ ವಿವಾದಾತ್ಮಕ ಪೋಸ್ಟ ಅನ್ನು ಈ ಗುಂಪಿನಲ್ಲಿ ಪ್ರಸಾರ ಮಾಡಿದನು. ಅಲ್ಲದೇ ಶಾಸಕ ಶ್ರೀನಿವಾಸ ಮೂರ್ತಿಯವರ ಮನೆಯ ಎದುರಿಗೆ ಪ್ರತಿಭಟನೆ ನಡೆಸಲು ಅವನು ಎಲ್ಲರನ್ನು ಕರೆದಿದ್ದನು. ಅದೇ ದಿನ ಸಾಯಂಕಾಲ ೬.೩೦ ಗಂಟೆಗೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದನು. ತದನಂತರ ಪೊಲೀಸರು ನವೀನನನ್ನು ಬಂಧಿಸಲು ೨ ಗಂಟೆ ಸಮಯವನ್ನು ಕೇಳಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಬಂದ ಬಳಿಕ ಏಕಾಏಕಿ ನುಗ್ಗಿದ ಮತಾಂಧರು ಪೊಲೀಸ ಠಾಣೆಯಲ್ಲಿ ದಾಂಧಲೆ ಆರಂಭಿಸಿದ್ದರು. ಮತಾಂಧರು ಈ ರೀತಿ ಮಾಡಬಹುದೆಂದು ಪೊಲೀಸರಿಗೆ ತಿಳಿದಿರಲಿಲ್ಲ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ. ಈ ರೀತಿಯ ಜಾಗರೂಕತೆ ಇಲ್ಲದಿರುವ ಪೊಲೀಸರಿಗೆ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಅವರು ಮುಂದೆ ಜನತೆಯ ರಕ್ಷಣೆಯನ್ನು ಹೇಗೆ ಮಾಡುವರು ?
೩ ಆ. ಗಲಭೆಯ ಷಡ್ಯಂತ್ರದ ಹಿಂದೆ ಎಸ್.ಡಿ.ಪಿ.ಐ. ಮತ್ತು ಕಾಂಗ್ರೆಸ್ ಇವರ ಕೊಡುಕೊಳ್ಳುವಿಕೆ ಬಹಿರಂಗ : ಈ ಗಲಭೆಯಲ್ಲಿನ ಸೊಶಿಯಲ್ ಡೆಮೊಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾದ ಮುಖಂಡ ಕಲೀಲ್ ಪಾಷಾ ಮತ್ತು ಕಾಂಗ್ರೆಸ್ ನಡುವೆ ಇವರಲ್ಲಿ ಒಳ್ಳೆಯ ಸಂಬಂಧವಿದೆ ಎಂಬುದು ಕಂಡುಬಂದಿದೆ. ಪಾಷಾನ ಪತ್ನಿ ಕಾಂಗ್ರೆಸ್ಸಿನ ನಗರಪಾಲಿಕೆಯ ಸದಸ್ಯ ಳಾಗಿದ್ದಾಳೆ. ಇದರಿಂದಲೇ ಈ ಗಲಭೆಯ ಹಿಂದೆ ಎಸ್.ಡಿ.ಪಿ.ಐ. ಮತ್ತು ಕಾಂಗ್ರೆಸ್ಸಿನ ಕೈವಾಡವಿದೆಯೆಂದು ಹೇಳಲಾಗುತ್ತಿದೆ. ಭಾಜಪ ಸರಕಾರವು ಇದರ ಮೂಲದಲ್ಲಿರುವವರನ್ನು ಹುಡುಕಿ ಸಂಬಂಧಿಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.
೩ ಇ. ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಇವುಗಳನ್ನು ನಿಷೇಧಿಸಲು ಕೋರಿದ್ದರೂ ಕೃತಿಯಾಗಿಲ್ಲ : ಸೋಶಿಯಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ.) ಇವುಗಳನ್ನು ನಿಷೇಧಿಸುವಂತೆ ಜನವರಿಯಿಂದ ಅನೇಕ ಸಚಿವರು ಕೋರುತ್ತಿದ್ದಾರೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆಗಿರುವ ಕೆಲವು ಹತ್ಯೆಗಳ ಪ್ರಕರಣಗಳಲ್ಲಿ ಈ ಸಂಘಟನೆಗಳ ಸಹಭಾಗವಿದೆ ಎಂದು ಸರಕಾರವು ಹೇಳುತ್ತಿತ್ತು; ಆದರೆ ಸಾಕ್ಷಿಗಳ ಅಭಾವದಿಂದ ನಿಷೇಧಿಸಲು ಆಗಲಿಲ್ಲ. ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಭಾಜಪವು ಈ ಸಂಘಟನೆಗಳನ್ನು ನಿಷೇಧಿಸಲು ಕೋರಿತ್ತು. ಪಾಪ್ಯುಲರ್ ಫ್ರಂಟ್‌ಅನ್ನು ನಿಷೇಧಿಸಲು ರಾಜ್ಯ ಸರಕಾರವು ಕೇಂದ್ರ ಗೃಹಸಚಿವಾಲಯಕ್ಕೆ ಒಂದು ವರ್ಷದಲ್ಲಿ ೨ ಸಲ ಹೇಳಿದೆ. ಉತ್ತರಪ್ರದೇಶ, ರಾಜಸ್ಥಾನ ಮತ್ತು ಕೇರಳ ಈ ಸರಕಾರಗಳೂ ಇಂತಹ ಬೇಡಿಕೆಯನ್ನು ಮಾಡಿವೆ; ಆದರೆ ಇದುವರೆಗೂ ಅವುಗಳನ್ನು ನಿಷೇಧಿಸಿಲ್ಲ. ಇದರಿಂದಲೇ ಮತಾಂಧರಿಗೆ ಅನುಕೂಲವಾಗುತ್ತದೆ ಮತ್ತು ದೇಶಕ್ಕೆ ಹಾನಿಯಾಗುತ್ತಿದೆ.
೩ ಈ. ಯಾವಾಗೆಲ್ಲ ನಿಷೇಧಕ್ಕೆ ಒತ್ತಾಯ ಕೇಳಿಬಂದಿತು !
೧. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕರಾವಳಿಯಲ್ಲಿ ನಡೆದಿದ್ದ ಹತ್ಯೆ
೨. ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ರುದ್ರೇಶ ಇವರ ಹತ್ಯೆ
೩. ಮಡಿಕೇರಿಯಲ್ಲಿ ಪುಟ್ಟಪ್ಪ ಇವರ ಹತ್ಯೆ
೪. ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ರಾಜೂ ಇವರ ಹತ್ಯೆ
೫. ಶಾಸಕ ತನ್ವೀರ ಸೇಠ ಇವರ ಹತ್ಯೆಯ ಪ್ರಯತ್ನ
೬. ಕೊಡಗಿನ ಕುಶಾಲನಗರದ ಪ್ರವೀಣ ಪೂಜಾರಿಯವರ ಹತ್ಯೆ
೭. ಬಂಟ್ವಾಳದ ಶರತ ಮಡಿವಾಳ ಇವರ ಹತ್ಯೆ
೮. ಬೆಂಗಳೂರಿನಲ್ಲಿ ಸಿ.ಎ.ಎ. ವಿರುದ್ಧದ ಪ್ರತಿಭಟನೆ
೯. ಪಾದರಾಯನಪುರದಲ್ಲಿ ನಡೆದ ಗಲಭೆ
೪. ಗಲಭೆಯಲ್ಲಿ ನೇತೃತ್ವ ವಹಿಸಿದ ಮತಾಂಧ ನಗರಸೇವಕಿಯ ಪತಿ
ಈ ಗಲಭೆಯ ಪ್ರಕರಣದಲ್ಲಿ ನಗರದ ನಾಗವಾರ ವಾರ್ಡಿನ ನಗರಸೇವಕಿ ಇರ್ಶಾದ ಬೇಗಮ್ ಇವರ ಪತಿ ಕಲೀಲ ಪಾಶಾ ಇವನನ್ನು ಬಂಧಿಸಲಾಯಿತು. ಕಲೀಲ ಪಾಶಾ ಗಲಭೆಯ ಸಮಯದಲ್ಲಿ ಯಾರು ಎಲ್ಲಿರಬೇಕು ? ಏನು ಮಾಡಬೇಕು ? ಇದರ ವಿವರವನ್ನು ಸಿದ್ಧಪಡಿಸಿದ್ದನು. ಅದರಂತೆ ಅವನು ಒಂದು ತಂಡವನ್ನು ಸಿದ್ಧಪಡಿಸಿ ಅವರನ್ನು ಪೊಲೀಸ್ ಠಾಣೆಯ ಹತ್ತಿರ ಬಿಟ್ಟು ಅಲ್ಲಿಂದ ಅವನು ಕಣ್ಮರೆಯಾದನು. ಗಲಭೆಯ ಬಳಿಕ ಪುನಃ ಪೊಲೀಸ್ ಠಾಣೆಯ ಹತ್ತಿರ ಬಂದು ಪೊಲೀಸರಿಗೆ ಸಹಕರಿಸುವ ನಾಟಕವನ್ನು ಅವನು ಮಾಡಿದ್ದನು. ಇದರಿಂದ ಮತಾಂಧರ ಜಾಣತನ ಗಮನಕ್ಕೆ ಬರುತ್ತದೆ. ಮತಾಂಧರು ಎಷ್ಟೇ ಆತ್ಮೀಯತೆಯನ್ನು ತೋರಿಸುತ್ತಿದ್ದರೂ, ಪೊಲೀಸರು ಅವರ ಮೇಲೆ ವಿಶ್ವಾಸವನ್ನು ಇಡಬಾರದು ಎನ್ನುವುದನ್ನು ಇದರಿಂದ ಕಲಿತಿರಬಹುದೇ ?
೫. ಪೊಲೀಸರ ಪರವಾಗಿ ಇರುವಂತೆ ತೋರಿಸಿ ದಿಕ್ಕು ತಪ್ಪಿಸುವ ಅಜೀಜಾ !
ಈ ಗಲಭೆಯಲ್ಲಿ ಅಜೀಜಾ ಹೆಸರಿನ ಓರ್ವ ಮಹಿಳೆ ಗಲಭೆಯ ಮೇಲೆ ನಿಯಂತ್ರಣವನ್ನು ಪಡೆಯಲು ಪೊಲೀಸರಿಗೆ ಸಹಾಯ ಮಾಡುತ್ತಿರುವಳಂತೆ ವರ್ತಿಸುತ್ತಿದ್ದಳು; ಆದರೆ ಪ್ರತ್ಯಕ್ಷದಲ್ಲಿ ಅವಳು ಗಲಭೆಯಲ್ಲಿ ಭಾಗವಹಿಸಿದ್ದಳು ಮತ್ತು ಮತಾಂಧರನ್ನು ಕೆರಳಿಸುತ್ತಿದ್ದಳು, ಎನ್ನುವುದು ಕಂಡು ಬಂದ ಬಳಿಕ ಅವಳನ್ನು ಬಂಧಿಸಲಾಯಿತು. ಅಜೀಜಾ ಇವಳು ಗಲಭೆಗಾಗಿ ೧೦೦ ಕ್ಕಿಂತ ಅಧಿಕ ಜನರನ್ನು ಕರೆಸಿದ್ದಳು ಮತ್ತು ಅವರನ್ನು ಕೆರಳಿಸಿದ್ದಳು. ಇದು ‘ಸಿ.ಸಿ.ಟಿ.ವಿ ಫೂಟೇಜ್ ಮೂಲಕ ಬಯಲಾಯಿತು.
೬. ಪೊಲೀಸರ ಎಫ್.ಐ.ಆರ್.ನಲ್ಲಿ ಏನಿದೆ ?
ಅ. ಮತಾಂಧರ ಒಂದು ತಂಡದ ಜನರು ಪೊಲೀಸ್ ಠಾಣೆಯ ಹತ್ತಿರ ಅಡಗಿ ಕುಳಿತ್ತಿದ್ದರು ಮತ್ತು ಅವರು ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ನವೀನನನ್ನು ಹೊರಗೆ ಕರೆತರುವ ದಾರಿಯನ್ನು ಕಾಯುತ್ತಿದ್ದರು. ಅವನನ್ನು ಪೊಲೀಸ್ ಠಾಣೆಗೆ ತರುತ್ತಲೇ ಗಲಭೆಕೋರರಿಂದ ಹಲ್ಲೆ ಮಾಡಲಾಯಿತು.
ಆ. ಮತಾಂಧರ ಗುಂಪು ನವೀನನ ರಕ್ಷಣೆ ಮಾಡುವ ಪೊಲೀಸರನ್ನು ಹತ್ಯೆ ಮಾಡುವ ಘೋಷಣೆಗಳನ್ನು ಕೂಗುತ್ತಿದ್ದರು
ಇ. ಮಚ್ಚು, ಪೆಟ್ರೋಲ್ ಬಾಂಬ್, ಲಾಠಿ ಇತ್ಯಾದಿ ಶಸ್ತ್ರಾಸ್ತ್ರಗಳ ಮೂಲಕ ಪೊಲೀಸರ ಮೇಲೆ ಹಲ್ಲೆ
ಈ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲೆಸೆತ ಮತ್ತು ಬೆಂಕಿ ಹಚ್ಚುವುದು
ಉ. ಲಾಠಿಚಾರ್ಜ್ ಮತ್ತು ಅಶ್ರುವಾಯುವನ್ನು ಸಿಡಿಸಿದರೂ ಗಲಭೆಕೋರರು ಸುಮ್ಮನಾಗಲಿಲ್ಲ.
ಊ. ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕ ಪೊಲೀಸರ ಮೇಲೆ ಹಲ್ಲೆ
೭ ಪೊಲೀಸರಿಗೆ ಗೊಲೀಬಾರ ಮಾಡುವ ಆದೇಶ ಸಿಗದ ಕಾರಣ ಪೊಲೀಸರು ಸ್ವರಕ್ಷಣೆಗಾಗಿ ಗೊಲೀಬಾರ ಮಾಡುವುದು
ಕರ್ನಾಟಕದ ಮೀಸಲು ಪೊಲೀಸ್ ಪಡೆ ಗಲಭೆಯ ಸಮಯದಲ್ಲಿ ಸ್ಥಳಕ್ಕೆ ತಲುಪದ ಕಾರಣ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಗೊಲೀಬಾರ ಮಾಡಲು ಅನುಮತಿಯನ್ನು ಕೇಳಿದರು. ಆ ಸಮಯದಲ್ಲಿ ಅಧಿಕಾರಿಗಳು ಪೊಲೀಸರಿಗೆ ‘ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ. ನೀವೇ ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳಿರಿ. ನಿಮ್ಮ ಆತ್ಮರಕ್ಷಣೆಗಾಗಿ ಏನು ಸಾಧ್ಯವಿದೆಯೋ ಅದನ್ನು ಮಾಡಿರಿ. ನೀವೇ ನಿರ್ಣಯಿಸಿ ಗೊಲೀಬಾರ ಮಾಡಿರಿ, ಎಂದು ಹೇಳಿದರು. ತದನಂತರ ಆ ಪೊಲೀಸರು ಗೊಲೀಬಾರ್ ನಡೆಸಿದರು ಮತ್ತು ಅದರಲ್ಲಿ ೩ ಗಲಭೆಕೋರರು ಬಲಿಯಾದರು. ಆಗ ಗಲಭೆ ನಿಂತಿತು. ಒಂದು ವೇಳೆ ಪೊಲೀಸರು ಸ್ವತಃ ನಿರ್ಣಯವನ್ನು ತೆಗೆದುಕೊಂಡು ಗೊಲೀಬಾರ ಮಾಡದೇ ಇದ್ದಿದ್ದರೆ, ಬಹುತೇಕ ಅನೇಕ ಪೊಲೀಸರ ಹತ್ಯೆಯಾಗುತ್ತಿತ್ತು. ಪೊಲೀಸರ ರಕ್ಷಣೆಯ ವಿಚಾರವನ್ನು ಮಾಡದ ಹಿರಿಯ ಅಧಿಕಾರಿಗಳು ಜನತೆಯ ರಕ್ಷಣೆಯ ಸಮಯದಲ್ಲಿ ದೃಢ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಅಪೇಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಪೊಲೀಸರ ಮಾನಸಿಕತೆ ಬದಲಾಯಿಸುವ ಅವಶ್ಯಕತೆಯಿದೆ.
೮. ನಾನು ಕಾಂಗ್ರೆಸ್ ಪಕ್ಷದವನು ಮತ್ತು ನಾನು ಹಿಂದೂ ಧರ್ಮದವನು !
‘ನನ್ನ ಪಕ್ಷ ಕಾಂಗ್ರೆಸ್ ಆಗಿದೆ ಮತ್ತು ನಾನು ಹಿಂದೂ ಧರ್ಮದವನಾಗಿದ್ದೇನೆ. ಕಾಂಗ್ರೆಸ್‌ನಲ್ಲಿ ಇರುವುದರಿಂದ ಹಿಂದೂ ಧರ್ಮದ ಪರವಾಗಿ ಮಾತನಾಡಬಾರದೇ ? ಎಂದು ತಥಾಕಥಿತ ಪೋಸ್ಟ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಕಾಂಗ್ರೆಸ್ಸಿನ ಶಾಸಕ ಶ್ರೀನಿವಾಸಮೂರ್ತಿಯವರ ಅಳಿಯ ನವೀನ ಪೊಲೀಸರಿಗೆ ಪ್ರಶ್ನಿಸಿದ್ದನು. ಯಾವುದೇ ಆಕ್ಷೇಪಾರ್ಹ ಪೋಸ್ಟ್ ಮಾಡಿಲ್ಲವೆಂದು ಸಹ ಅವನು ಪೊಲೀಸರಿಗೆ ಹೇಳಿದ್ದನು. ‘ಹಿಂದೂ ಧರ್ಮದ ಮೇಲೆ ಆಘಾತ ಮಾಡುವವರ ಕೃತಿಗಳನ್ನು ಇಲ್ಲಿಯವರೆಗೆ ಖಂಡಿಸುತ್ತಲೇ ಬಂದಿದ್ದೇನೆ. ಹಿಂದೂ ಧರ್ಮದ ವಿರುದ್ಧ ವಿಡಂಬನಾತ್ಮಕ ಪೋಸ್ಟ್‌ಗಳನ್ನು ಪ್ರಸಾರ ಮಾಡುವವರಿಗೆ ನಾನು ಖಂಡತುಂಡವಾಗಿ ಉತ್ತರಗಳನ್ನು ನೀಡಿದ್ದೇನೆ. ಇದೇ ಕಾರಣದಿಂದ ನನ್ನ ವಿರುದ್ಧ ಕೆಲವು ಜನರು ಷಡ್ಯಂತ್ರವನ್ನು ರೂಪಿಸಿದ್ದಾರೆ. ಕೆಲವು ಜನರು ಜಾಲತಾಣಗಳಿಂದ ಬೆದರಿಕೆಯನ್ನು ಕೂಡ ಹಾಕಿದ್ದರು, ಎಂದು ನವೀನ ಪೊಲೀಸರಿಗೆ ತಿಳಿಸಿದ್ದಾನೆಂದು ಮೂಲಗಳು ತಿಳಿಸಿವೆ.
ಎಸ್‌ಡಿಪಿಐ ಇತಿಹಾಸ
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಇದು ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ(ಪಿ.ಎಫ್.ಐ) ಪಕ್ಷದ ರಾಜಕೀಯ ಶಾಖೆಯಾಗಿದೆ. ಕಾಂಗ್ರೆಸ್ ಮತ್ತು ಭಾಜಪ ಇವೆರಡು ನಿರಂತರವಾಗಿ ಎರಡನ್ನೂ ನಿಷೇಧಿಸುವಂತೆ ಕೋರುತ್ತಲೇ ಬಂದಿದೆ. ಎಸ್‌ಡಿಪಿಐನ ಪ್ರಭಾವ ಕರ್ನಾಟಕದ ಮುಸಲ್ಮಾನರ ಮೇಲೆ ಬೀಳುತ್ತಿರು ವುದರಿಂದ ಕಾಂಗ್ರೆಸ್ಸಿಗೆ ರಾಜಕೀಯ ಹೊಡೆತ ಬೀಳುವ ಸಾಧ್ಯತೆ ಯಿದೆ ಮತ್ತು ಹಿಂದೂ ವಿರೋಧಿಯಿರುವುದರಿಂದ ಭಾಜಪ ಸಹ ಅದನ್ನು ವಿರೋಧಿಸಲಾಗುತ್ತದೆ.
ಎಸ್‌ಡಿಪಿಐ ೨೧ ಜೂನ್ ೨೦೦೯ ರಲ್ಲಿ ನವದೆಹಲಿಯಲ್ಲಿ ಸ್ಥಾಪನೆಯಾಯಿತು. ತದನಂತರ ಒಂದು ವರ್ಷದ ಬಳಿಕ ೧೩ ಎಪ್ರಿಲ್ ೨೦೧೦ ರಂದು ರಾಜಕೀಯ ಪಕ್ಷವೆಂದು ಚುನಾವಣಾ ಆಯೋಗದ ಬಳಿ ನೋಂದಣಿಯಾಯಿತು. ಸದ್ಯ ಎಮ್.ಕೆ.ಫೈಜಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇದರ ಮುಖ್ಯ ಕಾರ್ಯಾಲಯ ನವದೆಹಲಿಯಲ್ಲಿಯೇ ಇದೆ. ಈ ಪಕ್ಷದ ಜಾಲತಾಣದಿಂದ ದೇಶದಾದ್ಯಂತ ಈ ಪಕ್ಷದ ಪ್ರಸಾರವಾಗಿದೆ. ಮುಸಲ್ಮಾನ, ಹಿಂದುಳಿದ ವರ್ಗ, ಆದಿವಾಸಿಗಳ ಹಿತರಕ್ಷಣೆ ಮಾಡುವುದು ಈ ಪಕ್ಷದ ಉದ್ದೇಶವಾಗಿದೆ ಎಂದು ಹೇಳಲಾಗುತ್ತದೆ.
೨೦೧೩ ನೇ ಇಸವಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಯಲ್ಲಿ ಈ ಪಕ್ಷವು ೨೩ ಸ್ಥಳಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು ಮತ್ತು ಎಲ್ಲ ಸ್ಥಳಗಳಲ್ಲಿ ಅದು ಸೋಲುಂಡಿತು. ಈ ಎಲ್ಲ ಮತದಾರ ಸಂಘಗಳು ಮುಸಲ್ಮಾನ ಬಹುಸಂಖ್ಯಾತವಾಗಿದ್ದವು. ೨೦೧೮ ನೇ ಇಸವಿಯಲ್ಲಿ ಕೇವಲ ೩ ಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತು. ಕಳೆದ ೨ ವರ್ಷಗಳಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಮತ್ತು ಗ್ರಾಮ ಪಂಚಾಯತ ಚುನಾವಣೆಗಳಲ್ಲಿ ಈ ಪಕ್ಷಕ್ಕೆ ಒಳ್ಳೆಯ ಬೆಂಬಲ ದೊರಕಿದೆ.
ಗಲಭೆಯ ಗೂಡಾರ್ಥ
ದೆಹಲಿಯಲ್ಲಿ ಜನವರಿಯಲ್ಲಿ ಸಿ.ಎ.ಎ. ಕುರಿತು ಗಲಭೆ ಯಾಯಿತು. ಅದೇ ಸಮಯದಲ್ಲಿ ಉತ್ತರಪ್ರದೇಶದಲ್ಲಿಯೂ ಅನೇಕ ಸ್ಥಳಗಳಲ್ಲಿ ಮತಾಂಧರು ಹಿಂಸಾಚಾರವನ್ನು ಮಾಡಿದರು. ಈ ಗಲಭೆಯಲ್ಲಿ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ (ಪಿ.ಎಫ್.ಐ) ದ ಕೈವಾಡವಿರುವುದು ಕಂಡು ಬಂದಿತ್ತು. ತದನಂತರ ಕೆಲವು ತಿಂಗಳುಗಳ ಬಳಿಕ ಬೆಂಗಳೂರಿನಲ್ಲಿಯೂ ಗಲಭೆಯಾಯಿತು. ಅದು ಸಂಪೂರ್ಣವಾಗಿ ಪೂರ್ವನಿಯೋಜಿತವಾಗಿತ್ತು. ಇದರ ಹಿಂದೆಯೂ ಪಿ.ಎಫ್.ಐ. ಪಕ್ಷದ ರಾಜಕೀಯ ಶಾಖೆಯಾಗಿರುವ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇರುವುದು ಬಹಿರಂಗವಾಗಿದೆ.
ಗುಪ್ತಚರ ದಳಗಳ ಮಾಹಿತಿಗನುಸಾರ ‘ಮತಾಂಧರು ಈಗ ದೇಶದಲ್ಲಿ ಬಾಂಬ್ ಸ್ಫೋಟ ಅಥವಾ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಬದಲು ಗಲಭೆಗಳನ್ನು ಮಾಡಿ ದೇಶದ ಕಾನೂನು-ಸುವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ರಚಿಸುತ್ತಿದ್ದಾರೆ. ಗಲಭೆಗಳು ಅನೇಕ ದಿನಗಳ ವರೆಗೆ ಪರಿಣಾಮ ಬೀರುವುದರಿಂದ ದೇಶದ ಆರ್ಥಿಕತೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತದೆ ಮತ್ತು ಬಹುಸಂಖ್ಯಾತ ಹಿಂದೂಗಳಲ್ಲಿ ಹೆದರಿಕೆ ಅಲ್ಲದೇ ಭಯದ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಹಾಗೂ ಇದರಿಂದ ಅಲ್ಪಸಂಖ್ಯಾತರ ಮೇಲೆ ಧರ್ಮದ ಆಧಾರದ ಮೇಲೆ ಯಾರೂ ಟೀಕೆಯನ್ನೂ ಮಾಡುವುದಿಲ್ಲ. ಇದರಿಂದ ಮುಂದೆ ದೇಶದಲ್ಲಿ ಅನೇಕ ಸ್ಥಳಗಳಲ್ಲಿ ಗಲಭೆಗಳು ನಡೆದರೆ ಆಶ್ಚರ್ಯವೇನಿಲ್ಲ. ಇದರಿಂದ ಪೊಲೀಸರೊಂದಿಗೆ ಬಹುಸಂಖ್ಯಾತ ಹಿಂದೂಗಳು ಗಮನಕ್ಕೆ ತೆಗೆದುಕೊಳ್ಳಬೇಕಾಗಿರುವುದೇನೆಂದರೆ ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳಬೇಕಾಗುವುದು; ಏಕೆಂದರೆ ಬೆಂಗಳೂರಿನ ಗಲಭೆಯಲ್ಲಿ ಪೊಲೀಸರಿಗೆ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಆಗಲಿಲ್ಲ. ಹೀಗಿರುವಾಗ ಅವರು ಜನತೆಯ ರಕ್ಷಣೆಯನ್ನು ಹೇಗೆ ಮಾಡುವರು ? ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಗುಂಡು ಹಾರಿಸುವ ಆದೇಶವೇ ಸಿಕ್ಕಿರಲಿಲ್ಲ. ಪೊಲೀಸರು ತಮ್ಮ ರಕ್ಷಣೆಗಾಗಿ ಗೋಲಿಬಾರ ಮಾಡಿದ ಬಳಿ ಗಲಭೆ ನಿಂತಿತು.