ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ದೆಹಲಿ-ಬೆಂಗಳೂರು ಗಲಭೆ : ಹೊಸ ಜಿಹಾದ್ ? ಈ ವಿಷಯದ ಬಗ್ಗೆ ಚರ್ಚಾಕೂಟ !

ಬೆಂಗಳೂರು ಹಾಗೂ ದೆಹಲಿ ಗಲಭೆಯ ಬಗ್ಗೆ ‘ರಾಷ್ಟ್ರೀಯ ತನಿಖಾ ದಳವು ತನಿಖೆ ನಡೆಸಿ ಅದರ ಮೂಲಗಳನ್ನು ಕಿತ್ತೊಗೆಯಬೇಕು ! – ಆರ್.ವಿ.ಎಸ್. ಮಣಿ, ಮಾಜಿ ಕೇಂದ್ರ ಅಧೀನ ಕಾರ್ಯದರ್ಶಿ(ಗೃಹ ಖಾತೆ)

ಬೆಂಗಳೂರು – ದೆಹಲಿ ಗಲಭೆ, ಬೆಂಗಳೂರು ಗಲಭೆ ಇತ್ಯಾದಿ ಎಲ್ಲ ಗಲಭೆಗಳ ಆಯೋಜನೆ, ಆಂತರಿಕ ಯುದ್ಧದ ಸಿದ್ಧತೆಯು ೨೦೦೬ ರಿಂದಲೇ ಆರಂಭವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ‘ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಹಾಗೂ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ನಂತಹ ಸಂಘಟನೆಗಳ ಕೈವಾಡವಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಗಲಭೆಯಲ್ಲಿ ೮ ಸಾವಿರ ಜನರು ಒಟ್ಟಾಗಿದ್ದರು, ಇದರಿಂದಲೇ ಇದರ ಹಿಂದೆ ದೊಡ್ಡ ಸಂಚಿರುವುದು ಗಮನಕ್ಕೆ ಬರುತ್ತದೆ. ಆದ್ದರಿಂದ ‘ಪಿಎಫ್‌ಐ ನಂತಹ ಸಂಘಟನೆಗಳ ಮೇಲೆ ಕೇವಲ ನಿಷೇಧ ಹೇರಿದರೆ ಸಾಲದು, ಬೆಂಗಳೂರು ಹಾಗೂ ದೆಹಲಿ ಗಲಭೆಯ ತನಿಖೆಯನ್ನು ‘ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ) ಅದರ ಮೂಲಕ್ಕೆ ಹೋಗಿ ಬೇರು ಸಮೇತಕಿತ್ತೊಗೆಯಬೇಕು, ಎಂದು ಮಾಜಿ ಕೇಂದ್ರ ಅಧೀನ ಕಾರ್ಯದರ್ಶಿ (ಗೃಹ ಖಾತೆ) ಹಾಗೂ ‘ದ ಮಿಥ್ಸ್ ಆಫ್ ಹಿಂದೂ ಟೆರರ್ ಈ ಪುಸ್ತಕದ ಲೇಖಕರಾದ ಆರ್.ವಿ.ಎಸ್. ಮಣಿಯವರು ಆಗ್ರಹಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ದೆಹಲಿ-ಬೆಂಗಳೂರು ಗಲಭೆ : ಹೊಸ ಜಿಹಾದ್ ? ಈ ವಿಶೇಷ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು. ‘ಫೇಸ್‌ಬುಕ್ ಹಾಗೂ ‘ಯೂಟ್ಯೂಬ್ ಲೈವ್ನ ಮಾಧ್ಯಮಗಳಿಂದ ಈ ಕಾರ್ಯಕ್ರಮವನ್ನು ೩೧ ಸಾವಿರದ ೩೪೩ ಜನರು ನೋಡಿದರೆ, ೮೦ ಸಾವಿರದ ೪೭೬ ಜನರ ತನಕ ತಲುಪಿದೆ.

ಆರ್.ವಿ.ಎಸ್. ಮಣಿ

ಚರ್ಚಾಕೂಟದಲ್ಲಿ ಆರ್.ವಿ.ಎಸ್. ಮಣಿಯವರು ಮಾತನಾಡುತ್ತಾ, ‘ಎಫ್‌ಸಿಆರ್‌ಐ (ಫಾರೆನ್ ಕಾಂಟ್ರಿಬ್ಯೂಶನ್ ರೆಗ್ಯುಲೇಶನ್ ಆಕ್ಟ್) ಅಂತರ್ಗತ ೨೦೧೭-೧೮ ವರ್ಷದಲ್ಲಿ ವಿದೇಶದಿಂದ ೧೮ ಸಾವಿರ ಕೋಟಿ ರೂಪಾಯಿ ಬಂದಿದೆ. ಅದರಲ್ಲಿ ೧೨ ಸಾವಿರ ಕೋಟಿ ರೂಪಾಯಿ ಕ್ರೈಸ್ತ ಮಿಶನರಿಗಳಿಗೆ ಮತಾಂತರ ಮಾಡಲು; ೫,೫೦೦ ಕೋಟಿ ರೂಪಾಯಿ ಇಸ್ಲಾಮಿಕ್ ಸಂಸ್ಥೆಗಳಿಗೆ ಮತಾಂತರಕ್ಕಾಗಿ; ೫೦೦ ಕೋಟಿ ರೂಪಾಯಿ ಹಿಂದೂ ಸಂಸ್ಕೃತಿ, ಧಾರ್ಮಿಕ ಪಂಥಗಳ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಸ್ವಯಂಸೇವಕ ಸಂಘಟನೆಗಳಿಗೆ ನೀಡಿದೆ ರಾಷ್ಟ್ರವನ್ನು ಅಸ್ಥಿರಗೊಳಿಸಲು ಎಫ್‌ಸಿಆರ್‌ಎ ಬಳಸಲಾಗುತ್ತಿರುವುದರಿಂದ ಅದನ್ನು ನಿಷೇಧಿಸಬೇಕು. ಅದೇರೀತಿ ಭಾರತೀಯ ಆಡಳಿತ ಸೇವೆಯಲ್ಲಿರುವ ಕೆಲವು ಅಧಿಕಾರಿಗಳು ಪಾಕಿಸ್ತಾನದಿಂದ ಹಣವನ್ನು ತೆಗೆದುಕೊಂಡು ಅವರಿಗಾಗಿ ಕಾರ್ಯವನ್ನು ಮಾಡುತ್ತಿದ್ದಾರೆ. ಸರಕಾರವು ಅದನ್ನು ಹುಡುಕಬೇಕಿದೆ. ಇಷ್ಟೇ ಅಲ್ಲದೇ, ಪಾಕಿಸ್ತಾನದ ಜಲಾಲಾಬಾದದಿಂದ ಬರುವ ಮಾದಕ ಪದಾರ್ಥಗಳು ಅನೇಕ ದೊಡ್ಡ ಪಾರ್ಟಿಗಳಲ್ಲಿ ವಿತರಣೆಯಾಗುತ್ತದೆ. ಅದರಿಂದ ಬರುವ ಶೇ. ೧೫ ರಷ್ಟು ನಿಧಿಯನ್ನು ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಉಪಯೋಗಿಸಲಾಗುತ್ತಿದೆ. ಇದರ ವಿರುದ್ಧ ಎಲ್ಲರು ಸಂಘಟಿತರಾಗಿ ಹೋರಾಡ ಬೇಕಿದೆ ಎಂದು ಹೇಳಿದರು.

ಶ್ರೀ. ಗಿರೀಶ ಭಾರದ್ವಾಜ

‘ಭಾರತ ಪುನರುತ್ಥಾನ ಟ್ರಸ್ಟ್ನ ಕಾರ್ಯದರ್ಶಿಗಳಾದ ಶ್ರೀ. ಗಿರೀಶ ಭಾರದ್ವಾಜ ಇವರು ಮಾತನಾಡುತ್ತಾ, ಬೆಂಗಳೂರು ಗಲಭೆಯ ನಂತರ ‘ಪಿಎಫ್‌ಐನ ೪೦ ಕ್ಕೂ ಹೆಚ್ಚು ಜನರಿಗೆ ಭಯೋತ್ಪಾದಕರೊಂದಿಗೆ ನಂಟಿರುವುದು ಬೆಳಕಿಗೆ ಬಂದಿದೆ. ಅವರ ಕಾರ್ಯಕರ್ತರು ಬಾಂಬ್‌ಸ್ಫೋಟ ಹಾಗೂ ಅನೇಕ ಹಿಂದೂಗಳ ಹತ್ಯೆ ಮಾಡಿದ ಆರೋಪಿಗಳ ಸಂಪರ್ಕದಲ್ಲಿದ್ದರು. ಈ ಪ್ರಕರಣವನ್ನು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಮೂಲಕವೇ ತನಿಖೆಯಾಗಬೇಕು ಎಂದು ಹೇಳಿದರು.

ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ ಇವರು ಮಾತನಾಡುತ್ತಾ, ‘ದೆಹಲಿ-ಬೆಂಗಳೂರುಗಳಲ್ಲಿನ ಗಲಭೆ, ಅದೇರೀತಿ ಈ ಹಿಂದೆ ಮುಂಬಯಿಯ ಆಝಾದ್ ಮೈದಾನ, ಭಿವಂಡಿ, ಅದೇರೀತಿ ಇತರ ಸ್ಥಳಗಳಲ್ಲಿ ಆಗಿದ್ದ ಗಲಭೆಯನ್ನು ನೋಡಿದಾಗ ಈ ‘ಗಲಭೆ ಜಿಹಾದ್ ಇರುವುದು ಸ್ಪಷ್ಟವಾಗುತ್ತದೆ. ಯುದ್ಧದಲ್ಲಿ ನೇರವಾಗಿ ಗೆಲ್ಲಲು ಸಾಧ್ಯವಿಲ್ಲದ್ದರಿಂದ ಸಂಘಟಿತರಾಗಿ ಅಮಾಯಕ ಹಿಂದೂ, ಪೊಲೀಸ್ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಗುರಿಯಾಗಿಸಿ ದೇಶದಲ್ಲಿ ಬಿಗುವಿನ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ‘ಸಿಎಎಯ ವಿರುದ್ಧ ಹಿಂಸಾತ್ಮಕ ಆಂದೋಲನದಲ್ಲಿ ‘ಪಿಎಫ್‌ಐಯ ಬ್ಯಾಂಕ್ ಖಾತೆಗಳಿಂದ ೧ ಕೋಟಿ ೨೦ ಲಕ್ಷ ರೂಪಾಯಿ ಅನೇಕ ಜನರಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಇಂತಹ ಸಂಘಟನೆಗಳನ್ನು ಶಾಶ್ವತವಾಗಿ ನಿಷೇಧ ಹೇರಬೇಕಿದೆ ಎಂದು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ, ‘ಕರ್ನಾಟಕದಲ್ಲಿ ಆಗುತ್ತಿರುವ ಅನೇಕ ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯ ಹಿಂದೆ ಪಿಎಫ್‌ಐ ಸಂಘಟನೆ ಇರುವುದು ಬೆಳಕಿಗೆ ಬಂದಿದೆ. ಅದರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.