ಜನವರಿ ೨೬ ರಂದು ಇರುವ ಗಣರಾಜ್ಯೋತ್ಸವದ ನಿಮಿತ್ತ…
‘ಆಂಗ್ಲರ ಆಡಳಿತವೆಂದರೆ ಈಶ್ವರನ ವರದಾನವಾಗಿದೆ. ಪೂರ್ವದಿಕ್ಕಿನ ರಾಜ್ಯಗಳೆಂದರೆ ಅವ್ಯವಸ್ಥಿತ ಕಾರುಬಾರು’, ಎಂದು ಪಾಶ್ಚಾತ್ಯ ಜಗತ್ತು ಸತತವಾಗಿ ಪ್ರಚಾರ ಮಾಡಿತು. ಅದರಿಂದ ಹಿಂದೂಗಳ ಮನಸ್ಸಿನ ಮೇಲೆ ಅಪಾರ ಪರಿಣಾಮವಾಯಿತು. ಈ ಪ್ರಚಾರ ಎಷ್ಟು ಸುಳ್ಳಾಗಿದೆ, ಎಂಬುದನ್ನು ಗಮನಕ್ಕೆ ತಂದುಕೊಡುವ ಹಾಗೂ ಉಪಯುಕ್ತ ಮಾಹಿತಿ ನಿಮಗೆ ತಿಳಿದಿರ ಬೇಕು. ಅದಕ್ಕಾಗಿಯೆ ಈ ಲೇಖನ !
೧. ಈಸ್ಟ್ ಇಂಡಿಯಾ ಕಂಪನಿ ಹೇಗಿತ್ತು ?
೧೮೫೭ ರ ಸ್ವಾತಂತ್ರ್ಯ ಸಮರದ ಮೊದಲು ಹಿಂದೂಸ್ಥಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ರಾಜ್ಯವಿತ್ತು. ಎಲಿಜಬೇತ್ ರಾಣಿ ಹಿಂದೂಸ್ಥಾನದೊಂದಿಗೆ ವ್ಯಾಪಾರ ಮಾಡಲು ಈ ಕಂಪನಿಗೆ ಅಧಿಕಾರಪತ್ರ ನೀಡಿದರು. ಆ ಪತ್ರದಲ್ಲಿ ‘ಸಾಹಸಿ ಗೂಂಡಾಗಳ ಸಂಸ್ಥೆ’ ಎಂದು ಈ ಕಂಪನಿಗೆ ಬಿರುದನ್ನು ನೀಡಲಾಯಿತು. ೩ ಅಕ್ಟೋಬರ್ ೧೬೯೦ ರಂದು ಈ ಸಂಸ್ಥೆಯ ಸಂಚಾಲಕರು ಹಿಂದೂಸ್ಥಾನದಲ್ಲಿ ಯಾವುದೇ ಮಹತ್ವದ ಸ್ಥಾನದಲ್ಲಿ ಸದಾಚಾರಿ ವ್ಯಕ್ತಿಯನ್ನು ನೇಮಿಸಬಾರದೆಂಬ ಪ್ರಸ್ತಾಪ ಮಾಡಿತು. ಏಕೆಂದರೆ ಸಂಸ್ಥೆಯ ವ್ಯವಹಾರದಲ್ಲಿ ಸಭ್ಯರು ನುಸುಳಿದರೆ, ಸಾಹಸಿ ಗೂಂಡಾಗಳು ಕಂಪನಿಯಿಂದ ದೂರ ಸರಿಯುವರು ಹಾಗೂ ಚಂದಾ ಕೊಡುವುದನ್ನು ನಿಲ್ಲಿಸುವರು, ಎಂಬ ಭಯ ಕಾಡುತ್ತಿತ್ತು. ಈ ರೀತಿ ಸಾಹಸದ ಹಾಗೂ ಗುಂಡಾಗಿರಿಯ ಪ್ರಭಾವದಲ್ಲಿ ಧನಸಂಪಾದನೆ ಮಾಡುವ ಈ ಗುಂಪಿನ ಕೈಗೆ ಹಿಂದೂಸ್ಥಾನದ ಆಡಳಿತವನ್ನು ನೀಡಲಾಯಿತು.
೨. ಆಂಗ್ಲ ಆಳ್ವಿಕೆಯ ನಿಜಸ್ವರೂಪ
ಮಾಲ್ಕಮ್ ಲಡ್ಲೋ ಇವನು ‘ಬ್ರಿಟಿಷ್ ಹಿಂದೂಸ್ಥಾನದ ಇತಿಹಾಸ’, ಖಂಡ ೧, ಪುಟ ೧೯೮ ರಲ್ಲಿ ಮುಂದಿನಂತೆ ಹೇಳಿದ್ದಾನೆ, ”ಹಿಂದೂಸ್ಥಾನದಲ್ಲಿನ ಆಂಗ್ಲ ಆಡಳಿತದ ಇತಿಹಾಸವು ಹೆಚ್ಚು ತಿರಸ್ಕಾರ ಬರುವ ಹಾಗಿತ್ತು. ದೌರ್ಬಲ್ಯ ಮತ್ತು ಪುಕ್ಕಲುತನದಿಂದ ಈ ಆಡಳಿತದ ಆರಂಭವಾಯಿತು. ದೌರ್ಜನ್ಯದ ಹೆಚ್ಚಳವಾಯಿತು. ಕಪಟ, ಅಸತ್ಯ ಹಾಗೂ ವಿಶ್ವಾಸಘಾತದ ಪ್ರಭಾವದಲ್ಲಿ ಆಂಗ್ಲರ ಆಡಳಿತ ಬೇರುಗಳು ದೃಢವಾದವು. ಯಾವುದೇ ಸಾಮ್ರಾಜ್ಯ ಸ್ಥಾಪನೆ ಮಾಡುವಾಗ ಇಂತಹ ಭೀಕರ ಘಟನೆಗಳು ಅತಿ ವಿರಳವಾಗಿ ನಡೆದಿರಬಹುದು.” (ಆಧಾರ : ‘೧೮೫೭’, ಲೇಖಕ : ನಾರಾಯಣ ಕೇಶವ ಬೆಹೆರೆ, ಪುಟ ೩ ಮತ್ತು ೪)
೩. ೧೮೫೭ ರ ಅಸಂತೋಷ ಹೆಚ್ಚಾಗುವುದರ ಹಿಂದಿನ ಕಾರಣ
ಕರ್ನಲ್ ಮಲೇಸನ್ ಇವನು ‘೧೮೫೭ ರ ಹಿಂದಿ ಬಂಡಾಯ’ ಎಂಬ ಗ್ರಂಥವನ್ನು ಬರೆದಿದ್ದಾನೆ. ಈ ಗ್ರಂಥದ ದಾಖಲೆಯನ್ನು ನೀಡಿ ‘ನಾನಾಸಾಹೇಬ ಪೇಶ್ವಾ ಎಂಡ್ ದ ಫೈಟ್ ಫಾರ್ ಫ್ರೀಡಮ್’ ಎಂಬ ಗ್ರಂಥದಲ್ಲಿ ಆನಂದಸ್ವರೂಪ ಮಿಶ್ರಾ ಬರೆಯುತ್ತಾರೆ, ”ಅನೇಕ ವಿಷಯಗಳಿಂದ ನನಗೆ ದೃಢವಾದ ಅಂಶವೇನೆಂದರೆ, ಸಿಪಾಯಿಗಳಲ್ಲಿನ ಅಸಂತೋಷ ಹಾಗೂ ದ್ವೇಷಗಳಿಗೆ ಇತರ ಬಾಹ್ಯ ಕಾರಣಗಳು ಘಟಿಸಿದವು, ಅವುಗಳು ವೈಯಕ್ತಿಕ ಸ್ವರೂಪ ದ್ದಾಗಿರದೆ, ರಾಷ್ಟ್ರೀಯವಾಗಿದ್ದವು. ಯಾವ ಸಿಪಾಯಿಗಳು ಕಳೆದ ಶತಮಾನವಿಡೀ ನಮ್ಮ ನಿಜವಾದ ಹಾಗೂ ರಾಷ್ಟ್ರೀಯ ಮಿತ್ರರಾಗಿದ್ದರೋ, ಅವರ ಮನಸ್ಸಿನಲ್ಲಿ ಇಂತಹ ರಾಷ್ಟ್ರೀಯ ವಿಚಾರಗಳ ಸೋಂಕು ಆಗಿರುವುದರಿಂದಲೇ ಈ ಅಸಂತೋಷ ಹಾಗೂ ದ್ವೇಷ ಉತ್ಪನ್ನವಾಯಿತು.”
೪. ಪರಕೀಯರ ಆಡಳಿತವು ಈಶ್ವರನದ್ದೆಂದು ಅನಿಸುವವರಲ್ಲಿ ಸ್ವತ್ವ ಹಾಗೂ ಸ್ವಾಭಿಮಾನದ ಅಭಾವ
ಇದರ ಅರ್ಥ ರಾಷ್ಟ್ರೀಯ ವಿಚಾರ ಮನಸ್ಸಿನಲ್ಲಿ ದೃಢವಾದ ನಂತರ ಗುಲಾಮಗಿರಿಯ ವಿಷಯದಲ್ಲಿ ಕ್ರೋಧ ನಿರ್ಮಾಣವಾಗುತ್ತದೆ. ಸ್ವತ್ವ ಜಾಗೃತವಾಗುತ್ತದೆ. ಗುಲಾಮಗಿರಿಯ ಕೋಳವನ್ನು ತುಂಡರಿಸುವ ಹಾಗೂ ಮುಕ್ತವಾಗಬೇಕೆಂಬ ವಿಚಾರ ಮನಸ್ಸಿನಲ್ಲಿ ದೃಢವಾಗುತ್ತದೆ. ಇದೇ ರಾಷ್ಟ್ರೀಯ ವಿಚಾರಗಳ ನಿಜವಾದ ಸಾಮರ್ಥ್ಯವಾಗಿದೆ. ವಿದೇಶಿಯರ ಆಳ್ವಿಕೆಯು ಎಷ್ಟೇ ಸುಖ ಸೌಲಭ್ಯಗಳನ್ನು ನಿರ್ಮಾಣ ಮಾಡಿದರೂ, ಸುಧಾರಣೆ ಮಾಡಿದರೂ, ವಿದೇಶಿಯರ ಆಳ್ವಿಕೆಯು ನಮ್ಮದೆಂದು ಅನಿಸುವುದಿಲ್ಲ. ಅದು ಅತ್ಯಾಚಾರಿಯೇ ಆಗಿರುತ್ತದೆ. ಇಂತಹ ಆಡಳಿತವು ಈಶ್ವರನ ಕೃಪೆಯಿಂದ ಬರುವುದಿಲ್ಲ. ಅತ್ಯಾಚಾರ ಮಾಡುವವರು ಈಶ್ವರನ ದೂತರಾಗಿರುವುದಿಲ್ಲ. ಅವರು ಸೈತಾನರ ದೂತರೇ ಆಗಿರುತ್ತಾರೆ, ಎಂಬುದರ ಅನುಭವವಾಗುತ್ತದೆ. ವಿದೇಶಿಯರ ಆಡಳಿತ ಯಾರಿಗೆ ಈಶ್ವರನ ವರದಾನವೆನಿಸುತ್ತದೆಯೋ, ಅವರಲ್ಲಿ ಸ್ವತ್ವ, ಸ್ವಾಭಿಮಾನದ ಅಭಾವವಿರುತ್ತದೆ. ಅವರು ನಿರ್ಗತಿಕರು, ದುರ್ಬಲರಾಗಿರುತ್ತಾರೆ ಹಾಗೂ ಗುಲಾಮಗಿರಿಯಲ್ಲಿಯೇ ಅವರು ಧನ್ಯರೆನಿಸಿಕೊಳ್ಳುತ್ತಾರೆ.
೫. ೧೮೫೭ ರ ಬಂಡಾಯ ಆಗುವುದರ ಹಿಂದಿನ ಇನ್ನೊಂದು ಕಾರಣ
ನಾಟರ್ನ ಇವನು ಫ್ರೇಝರ್ ಇವನ ಸಂದರ್ಭವನ್ನು ನೀಡಿ ಹೇಳುತ್ತಾನೆ, ”ಜನರಲ್ಲಿ ತುಂಬಾ ಅಸಮಾಧಾನವಿದೆ. ಈ ಅಸಮಾಧಾನಕ್ಕೆ ಕಾರಣವೂ ಹಾಗೆಯೆ ಇದೆ,’ ಅವನು ಹೇಳುತ್ತಾನೆ, ”೫-೭ ಬಂಡಾಯ ಆಗಬಹುದು, ಇಷ್ಟು ಅಸಮಾಧಾನ ಜನರಲ್ಲಿತ್ತು. ಇಂತಹ ಎಲ್ಲ ದುಷ್ಟ ಪರಿಸ್ಥಿತಿಗೆ ಮೂಲ ಕಾರಣವೆಂದರೆ ಹಿಂದೂಸ್ಥಾನದ ಈ ಭೂಮಿಯನ್ನು ದೇಶಿ ಅಧಿಕಾರಿಗಳ ‘ಮೇಯುವ ಭೂಮಿ’ ಎಂದು ಪರಿಗಣಿಸಲಾಗುತ್ತಿದೆ. ‘ಹಿಂದೂಸ್ಥಾನವು ದೇಶಿ ಅಧಿಕಾರಿಗಳ ಲೂಟಿಗಾಗಿಯೇ ಇದೆ’, ಎಂಬ ಭಾವನೆ ನಮ್ಮಲ್ಲಿದ್ದರೆ, ಅದು ಶೀಘ್ರದಲ್ಲಿಯೇ ನಮ್ಮ ಕೈತಪ್ಪಿ ಹೋಗುವುದು. ಅದಕ್ಕೆ ನಮ್ಮ ವರ್ತನೆಯೇ ಕಾರಣವಾಗುತ್ತದೆ.” (ಆಧಾರ : ‘ನಾನಾಸಾಹೇಬ ಪೇಶ್ವೆ ಹಾಗೂ ಸ್ವಾತಂತ್ರ್ಯ ಯುದ್ಧ’, ಅನುವಾದ : ಡಾ. ಢಮಢೇರೆ, ಪುಟ ೨೭೪)
೬. ಭಾರತೀಯರ ರಾಷ್ಟ್ರೀಯ ವಿಚಾರದ ವಿಷಯದಲ್ಲಿ ಬ್ರಿಟಿಷರ ಸ್ಥಿತಿ
ಸರ್ ಜಾನ್ ಕೆ ಹೇಳುತ್ತಾನೆ, ”ರಾಷ್ಟ್ರೀಯ ವಿಚಾರ ಭಾರತೀಯರಲ್ಲಿ ನಿರ್ಮಾಣವಾಗುವುದು ಸಹನೆಯಾಗುತ್ತಿರಲಿಲ್ಲ. ಒಂದು ವೇಳೆ ಯಾರಾದರೂ ಸ್ವತಂತ್ರವಾಗಿ ವರ್ತಿಸಲು ನಿರ್ಧರಿಸಿದರೆ ಅಥವಾ ಬ್ರಿಟಿಷರ ದೋಷಗಳನ್ನು ತೋರಿಸಲು ಪ್ರಯತ್ನಿಸಿದರೆ, ಅವನನ್ನು ‘ನಮಕ್ ಹರಾಮ್’ (ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವವನು) ಎಂದು ಹೇಳಲಾಗುತ್ತಿತ್ತು. ಯಾರಾದರೂ ಬುದ್ಧಿವಂತ ಆಂಗ್ಲ ವ್ಯಕ್ತಿ ಹಿಂದಿ ಜನರ ಸ್ವಾತಂತ್ರ್ಯದ ವಿಷಯದಲ್ಲಿ ಮಾತನಾಡಿದರೆ ಅಥವಾ ಅದರ ವಿಷಯದಲ್ಲಿ ಅವನು ಸಹಾನುಭೂತಿ ತೋರಿಸಿದರೆ ಅವನನ್ನು ಅವಹೇಳನ ಮಾಡÀಲಾಗುತ್ತಿತ್ತು. ಬಹಳಷ್ಟು ಆಂಗ್ಲರ ಅಭಿಪ್ರಾಯ ಹೇಗಿತ್ತೆಂದರೆ, ಸ್ವದೇಶ ಪ್ರೇಮ ಅಥವಾ ಸ್ವಾತಂತ್ರ್ಯ ಈ ಕಲ್ಪನೆ ಯುರೋಪಿಯನ್ ರಾಷ್ಟ್ರಗಳಿಗೆ ಮಾತ್ರ ಅನ್ವಯವಾಗುತ್ತದೆ. ಏಷ್ಯಾ ಖಂಡದ ಹಾಗೂ ಪ್ರಾಮುಖ್ಯವಾಗಿ ಭಾರತದ ರಾಜ್ಯಗಳಿಗೆ ತಮಗೇನು ಬೇಕು, ಎಂದು ನಿರ್ಧರಿಸುವ ಅಧಿಕಾರವಿಲ್ಲ. ಅವರಿಗೆ ಬಂಡಾಯ ಎಬ್ಬಿಸುವ ಹಕ್ಕಿಲ್ಲ. ವಿಶೇಷ ಸುಧಾರಣೆಯಾಗಿರುವ ಬಿಳಿಯ ಅಧಿಕಾರಿಗಳೇ ಜನರಿಗೆ ಏನು ಬೇಕು ಹಾಗೂ ಜನರ ಹಿತ ಯಾವುದರಲ್ಲಿದೆ ? ಎಂಬುದನ್ನು ನಿರ್ಧರಿಸಬೇಕು. ಇಷ್ಟು ಮಾತ್ರವಲ್ಲ, ಜನರ ಹಿತಕ್ಕಾಗಿ ಜನರ ಅಧಿಕಾರ ಹಾಗೂ ಸಂಪತ್ತನ್ನು ಕಬಳಿಸುವ ಅಧಿಕಾರ ಅವರಿಗಿದೆ.” (ಆಧಾರ : ‘ನಾನಾಸಾಹೇಬ ಪೇಶ್ವೆ ಹಾಗೂ ಸ್ವಾತಂತ್ರ್ಯ ಯುದ್ಧ’, ಅನುವಾದ ಡಾ. ಢಮಢೇರೆ, ಪುಟ ೨೫೭)
೭. ಡಾ. ಶಶಿಭೂಷಣ ಚೌಧರಿ ಇವರು ೧೮೫೭ ರ ಸಮರದಲ್ಲಿ ಬ್ರಿಟಿಷರ ಕ್ರೌರ್ಯವನ್ನು ಸ್ಪಷ್ಟಪಡಿಸಿದರು
‘ಸಿವಿಲ್ ರಿಬೇಲಿಯನ್ ಇನ್ ದ ಇಂಡಿಯನ್ ಮ್ಯುಟಿನೀಸ್ ೧೮೫೭-೧೮೫೯’, ಈ ಶೀರ್ಷಿಕೆ ಇರುವ ಗ್ರಂಥದಲ್ಲಿ ಡಾ. ಶಶಿಭೂಷಣ ಚೌಧರಿ ಈ ಗ್ರಂಥವನ್ನು ಬರೆಯುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸುವಾಗ ಹೇಳುತ್ತಾರೆ, ”೧೮೫೭ ರ ಪ್ರಸಂಗವು ಸ್ವಾತಂತ್ರ್ಯ ಸಮರದ್ದಾಗಿರಲಿಲ್ಲ, ಅದು ಸಿಪಾಯಿದಂಗೆಯಾಗಿತ್ತು’, ಎಂದು ಹೇಳುವ ಇತಿಹಾಸಕಾರರಿಗೆ ಪ್ರತ್ಯುತ್ತರ ನೀಡುವ ಗ್ರಂಥ ಇದಾಗಿದೆ.” ಈ ಗ್ರಂಥಕ್ಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಪ್ರಸ್ತಾವನೆ ಇದೆ. ಈ ಪ್ರಸ್ತಾವನೆಯಲ್ಲಿ ಅವರು ಬರೆಯುತ್ತಾರೆ, ‘ಭಾರತೀಯರಿಗೆ ಸ್ವಾತಂತ್ರ್ಯದ ಇಚ್ಛೆ ಇತ್ತು. ಈ ದಂಗೆ ಕೇವಲ ಸಾಮಾನ್ಯ ಜನರದ್ದಾಗಿರಲಿಲ್ಲ, ಈ ಲೇಖನದ ನಿಷ್ಕರ್ಷ ನಿರ್ವಿವಾದವಾಗಿದೆ.’ ‘ಥಿಅರೀಸ್ ಆಫ್ ದ ಇಂಡಿಯನ್ ಮ್ಯುಟಿನೀ ೧೮೫೭-೧೮೫೯’, ಇದು ೧೮೫೭ ಈ ವಿಷಯದ ಇನ್ನೊಂದು ಗ್ರಂಥವನ್ನು ಡಾ. ಶಶಿಭೂಷಣ ಚೌಧರಿ ಇವರು ಬರೆದಿದ್ದಾರೆ. ಈ ಗ್ರಂಥದಲ್ಲಿನ ಇನ್ನೊಂದು ಪ್ರಕರಣ ‘ಮೋಟಿವ್ಸ್ ಎಂಡ್ ಆಟೀಟ್‌ಯೂಡ್ಸ್’, ಎಂದಿದೆ. ಈ ಪ್ರಕರಣದಲ್ಲಿ ಬ್ರಿಟಿಷರ ಕ್ರೌರ್ಯವನ್ನು ಸ್ಪಷ್ಟಪಡಿಸುವ ಒಂದು ಉದಾಹರಣೆ ನೀಡಲಾಗಿದೆ, ”ಮುಂಬಯಿ ಸರಕಾರದ ಲೆಕ್ಕಪತ್ರಾಗಾರದಲ್ಲಿ ನಾನಾಸಾಹೇಬರ ಘೋಷಣಾಪತ್ರದ ಒಂದು ಪ್ರತಿ ಸಿಕ್ಕಿದೆ. ಅದು ಅಸಾಮಾನ್ಯ ಪ್ರತಿಯಾಗಿದೆ, ಎಂದು ತಿಳಿಯಲಾಗುತ್ತದೆ. ಅದರಲ್ಲಿ ಇತರ ಘೋಷಣಾಪತ್ರದ ಹಾಗೆ ಘಟನೆಗಳ ಪಟ್ಟಿ ಇಲ್ಲ. ಅದರಲ್ಲಿ ಆಂಗ್ಲರು ಎಷ್ಟು ನೀಚರಾಗಿದ್ದಾರೆ ಎಂಬುದರ ವಿವರಣೆ ಇದೆ. ಅದು ಹೀಗಿದೆ, ‘ರಾಜಾ ಶಂಕರ ಶಾಹ ರಾಣಿ ದುರ್ಗಾವತಿಯ ವಂಶದವನಾಗಿದ್ದನು. ಅವನು ಮತ್ತು ಅವನ ಮಗ ಆಂಗ್ಲರ ಗುಂಡಿಗೆ ಬಲಿಯಾದರು. ಅವರ ತಪ್ಪೇನಿತ್ತು ? ರಾಜಾ ಶಂಕರ ಶಾಹನಲ್ಲಿ ಒಂದು ಕಾಗದದ ತುಂಡು ಸಿಕ್ಕಿತು. ಆ ಕಾಗದದ ತುಂಡಿನಲ್ಲಿ ರಾಜನು ದೇವಿಗೆ ಮಾಡಿದ ಪ್ರಾರ್ಥನೆ ಇತ್ತು. ‘ಬ್ರಿಟಿಷ ಸರಕಾರವನ್ನು ಬುಡಮೇಲು ಮಾಡಲು ದೇವಿ ಸಹಕರಿಸಬೇಕು’, ಎಂದು ಆ ಪ್ರಾರ್ಥನೆಯಲ್ಲಿ ಹೇಳಲಾಗಿತ್ತು.”
೮. ಬ್ರಿಟಿಷ ಸಾಹಿತ್ಯದಲ್ಲಿ ೧೮೫೭ ರ ಬಂಡಾಯದ ವಿಷಯದಲ್ಲಿ ಮಾಡಿರುವ ಲೇಖನ ಪೂರ್ಣ ತಪ್ಪಾಗಿದೆ ಎಂದು ಎಡ್ವರ್ಡ್ ಥೋಮ್‌ಸನ್ ಇವರು ಹೇಳಿದ್ದರು
೧೮೫೭ ರ ಬಂಡಾಯದ ವಿಷಯ ಮತ್ತು ಬ್ರಿಟಿಷ ಸಾಹಿತ್ಯದ ವಿಷಯದಲ್ಲಿ ಎಡ್ವರ್ಡ್ ಥಾಮ್‌ಸನ್ ಇವನ ಅಭಿಪ್ರಾಯ ‘ಸ್ಯಾಟರ್ಡೆ ರಿವ್ಯೂ’ನಲ್ಲಿ ಪ್ರಸಿದ್ಧವಾಯಿತು. ಅದು ಹೀಗಿದೆ, ‘ಬಂಡಾಯದ ವಿಷಯದಲ್ಲಿ ಈಗಲೂ ನನ್ನ ಅಭಿಪ್ರಾಯ ಹೇಗಿದೆಯೆಂದರೆ, ಆ ದುಷ್ಟ ಹಾಗೂ ಅಮಾನವೀಯ ಪ್ರಸಂಗ ವನ್ನು ನಾವು ಮಾಡಿದ ವರ್ಣನೆ ನಮ್ಮ ಎಲ್ಲ ಐತಿಹಾಸಿಕ ಲೇಖನದಲ್ಲಿ ಅತ್ಯಂತ ಕೀಳ್ಮಟ್ಟದ್ದಾಗಿದೆ.
ಬಂಡಾಯ ನಮ್ಮ ಸಮೀಪದ ಕಾಲದಲ್ಲಿ ನಡೆಯಿತು. ನಮ್ಮ ಜನರ ಶೌರ್ಯದ ಬಗ್ಗೆ ಎಷ್ಟು ಪ್ರಶಂಸೆ ಮಾಡಬೇಕೋ, ಅಷ್ಟೂ ಕಡಿಮೆಯೆ; ಆದರೆ ನಾವು ಸ್ವತಃ ಪಕ್ಷಕಾರ ಆಗಿರುವಾಗ ನ್ಯಾಯಾಧೀಶರೆಂದು ನಮ್ಮ ಖಟ್ಲೆಯ ನಿರ್ಣಯವನ್ನು ನಾವೇ ನೀಡುವುದನ್ನು ಆದಷ್ಟು ಬೇಗನೆ ನಿಲ್ಲಿಸಿದರೆ ಉತ್ತಮ !’’
೧೦. ೧೮೫೭ ರ ಬಂಡಾಯದ ಬಗ್ಗೆ ಹಿಂದಿ ಜನರಿಗೆ ಲೇಖನ ಮಾಡಲು ಇದ್ದ ಪರೋಕ್ಷ ನಿರ್ಬಂಧ
ಬಂಡಾಯದ ವಿಷಯದಲ್ಲಿ ಏನು ಬೇಕಾದರೂ ಬರೆಯಲು ೭೦ ವರ್ಷಗಳ ವರೆಗೆ ಆಂಗ್ಲರಿಗೆ ಸಂಪೂರ್ಣ ಅನುಮತಿಯಿತ್ತು. ನಮ್ಮ ಹಿಂದಿ ನಾಗರಿಕರ ಮನಸ್ಸನ್ನು ನೋಯಿಸಿದ್ದಕ್ಕಾಗಿ ಅವುಗಳಲ್ಲಿ ಒಂದು ಪುಸ್ತಕವೂ ಜಪ್ತಿಯಾಗಿಲ್ಲ; ಸ್ವಾತಂತ್ರ್ಯವೀರ ಸಾವರಕರ ಬಂಡಾಯದ ಪ್ರದೇಶದ ನಿವಾಸಿ ಆಗಿರಲಿಲ್ಲ. ಅವರು ತಮ್ಮ ಪುಸ್ತಕವನ್ನೂ ಆಂಗ್ಲದ ಆಧಾರದಲ್ಲಿಯೆ ಬರೆದರು. ಅವರಿಗೆ ಅದನ್ನು ಹಿಂದೂಸ್ಥಾನದಲ್ಲಿ ಬರೆಯಲು ಸಾಧ್ಯವಿರಲಿಲ್ಲ. ”ನನಗೆ ಮತ್ತು ಹೋಮ್ಸ್‌ಗೆ ಎಷ್ಟು ಸಾಧನಗಳು ಲಭಿಸಿದವೊ, ಅದರ ನೂರರಲ್ಲಿ ಒಂದಂಶವೂ ಅವರಿಗೆ ಲಭಿಸಿರಲಿಕ್ಕಿಲ್ಲ. ನನ್ನ ಪುಸ್ತಕ ಪ್ರಸಿದ್ಧವಾಗುವ ವರೆಗೆ ನಾನು ಸಾವರಕರ ಪುಸ್ತಕವನ್ನು ಓದಿರಲಿಲ್ಲ. ಆದರೆ ನಾನು ಅದನ್ನು ಓದಿದಾಗ ಸರ್ ವೆಲೆಂಟಾಯಿನ್ ಚಿರೋಲ ಇವರಿಗೆ ಅದು ಚೆನ್ನಾಗಿ ಬರೆದಿದ್ದಾರೆ ಎಂದು ಅನಿಸಿತು. ನನಗೆ ಈ ವಿಷಯದ ಬಗ್ಗೆ ಆಶ್ಚರ್ಯವೆನಿಸಿತು; ಆದರೆ ಬಂಡಾಯಕ್ಕೆ ಸಂಬಂಧಿಸಿ ಪುಸ್ತಕಗಳು ಜಪ್ತಿಯಾಗಿರುವವರಲ್ಲಿ ಸಾವರಕರರು ಒಬ್ಬರೆ ಲೇಖಕರಾಗಿರಲಿಲ್ಲ. ಸಾರಾಂಶವೆಂದರೆ ನಮಗೆ ಈ ವಿಷಯದಲ್ಲಿ ಏನು ಬೇಕಾದರೂ ಬರೆಯುವ ಅವಕಾಶವಿದೆ. ಆದರೆ ಹಿಂದಿ ಭಾಷಿಕರ ಬಾಯಿ ಮುಚ್ಚಲಾಗಿದೆ. ಆಂಗ್ಲರಿಂದ ಹಿಂದೂಸ್ಥಾನದ ಇತಿಹಾಸದಲ್ಲಿ ಏನೆಲ್ಲ ಘಟಿಸಿತೋ, ಆ ವಿಷಯದಲ್ಲಿ ನಮ್ಮ ಇತಿಹಾಸ ಲೇಖಕರು ತೋರ್ಪಡಿಸಿದ ಅಭಿಪ್ರಾಯವನ್ನು ಟೀಕಿಸುವ ಹಾಗೂ ನಮ್ಮ ಪಕ್ಷ ವಹಿಸುವ ಹಿಂದಿ ಭಾಷಿಕರಿಗೆ ಹಕ್ಕು ಇರಲೆ ಬೇಕು. ‘ದ ಅದರ್ ಸೈಡ್ ಆಫ್ ದ ಮೆಡಲ್’, ಈ ಪುಸ್ತಕ ಐತಿಹಾಸಿಕ ಶುದ್ಧತೆಯ ದೃಷ್ಟಿಯಲ್ಲಿ ಆವಶ್ಯಕವಿದೆಯೆಂದು ನಾನು ತಿಳಿಯುತ್ತೇನೆ.’’ (ಆಧಾರ : ‘ಸನ್ ಅಠರಾಶೆ ಸತ್ತಾವನ್’, ಲೇಖಕರು : ನಾರಾಯಣ ಕೇಶವ ಬೆಹೆರೆ, ಪುಟ ೪೫೯/೪೬೦)
೧೧. ಪರಕೀಯ ಆಡಳಿತಗಾರರು ವರದಾನವೆನಿಸುವುದೆಂದರೆ ದೇಶಭಕ್ತಿ ಮತ್ತು ಪ್ರಾಮಾಣಿಕತೆ ಇಲ್ಲದಿರುವುದು
ಗುಲಾಮಗಿರಿಯ ಮಾನಸಿಕತೆಯನ್ನು ಕಾಪಾಡುವ ನಮ್ಮ ದೇಶದಲ್ಲಿನ ನಮ್ಮವರೆ ಆಗಿರುವ ಕೆಲವರು ವಿದೇಶಿಯರು ಬರೆದ ಇತಿಹಾಸವನ್ನು ಅಳಿಸಿ ಸತ್ಯ ಇತಿಹಾಸವನ್ನು ಹೇಳಲು ಪ್ರಯತ್ನಿಸಿದಾಗ ತೀವ್ರ ವಿರೋಧವಾಗುತ್ತದೆ, ಏಕೆಂದರೆ ವಿದೇಶಿಯರ ಆಡಳಿತ ಇವರಿಗೆ ಈಶ್ವರನ ವರದಾನವೆನಿಸುತ್ತದೆ. ಆ ವಿದೇಶಿಯರು ಬರೆದಿರುವ ವಿಕೃತ ಇತಿಹಾಸವೆ ಅವರಿಗೆ ಸತ್ಯವೆನಿಸುತ್ತದೆ; ಏಕೆಂದರೆ ಅವರಲ್ಲಿನ ಸ್ವತ್ವ ಹಾಗೂ ರಾಷ್ಟ್ರಾಭಿಮಾನದ ಭಾವನೆ ಸತ್ತು ಹೋಗಿದೆ. ಇಂತಹ ಜನರು ಪರಾಭವ ಮಾನಸಿಕತೆಯಿಂದ ವಿದೇಶಿ ಆಕ್ರಮಕರ ವಿದೇಶಿ ಆಡಳಿತದವರ ಸ್ಮರಣೆಯನ್ನು ಕಾಪಾಡಲು ಪ್ರಯತ್ನಿಸುತ್ತಾರೆ. ಆ ಸ್ಮರಣೆಯನ್ನು ಯಾರಾದರೂ ನಾಶಗೊಳಿಸಲು ಪ್ರಯತ್ನಿಸಿದರೆ, ಅವರಿಗೆ ಅದು ಸಹನೆಯಾಗುವುದಿಲ್ಲ. ಯಾರಿಗೆ ಹಿಂದಿನ ಯಾವುದೇ ಸ್ವದೇಶಿ ಆಡಳಿತಕ್ಕಿಂತ ವಿದೇಶಿ ಆಡಳಿತ ಹೆಚ್ಚು ಕೆಟ್ಟದಾಗಿದೆಯೆಂದು ತಿಳಿಯುವುದೇ ಇಲ್ಲ ಹಾಗೂ ಯಾರಲ್ಲಿ ಸ್ವದೇಶಿ ಬಾಂಧವರ ವಿರುದ್ಧ ವಿದೇಶಿಯರಿಗೆ ಸಹಾಯವನ್ನು ನಿರಾಕರಿಸುವಷ್ಟು ದೇಶಭಕ್ತಿ ಮತ್ತು ಪ್ರಾಮಾಣಿಕತೆಯೂ ಇಲ್ಲವೋ, ಇಂತಹವರು ಸ್ವದೇಶಿ ಬಾಂಧವರಿಗೆ ವಿಶ್ವಾಸಘಾತ ಮಾಡಿದ್ದಾರೆ, ಎಂಬ ಸತ್ಯವನ್ನು ನಿರಾಕರಿಸಲು ಯಾರಿಗೂ ಸಾಧ್ಯವಿಲ್ಲ.
೧೨. ೧೮೫೭ ರ ಕ್ರಾಂತಿಯುದ್ಧದ ಬಗ್ಗೆ ಕೇಳುವ ಪ್ರಶ್ನೆಗಳು ಹಾಗೂ ಅದಕ್ಕೆ ಸಮರ್ಪಕವಾದ ಉತ್ತರಗಳು
ಸ್ವಾತಂತ್ರ್ಯವೀರ ಸಾವರಕರರು ‘೧೮೫೭ ರ ಸ್ವಾತಂತ್ರ್ಯಸಮರ’ ಈ ಗ್ರಂಥದಲ್ಲಿ ಈ ಕೆಳಗಿನ ಎರಡು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ, ಅವು ಹೀಗಿವೆ…
ಅ. ಕ್ರಾಂತಿಯುದ್ಧದ ಸಂಪೂರ್ಣ ಸಿದ್ಧತೆ ಆಗುವ ಮೊದಲೆ ಕ್ರಾಂತಿಯ ಗಲಭೆ ಆರಂಭವಾಯಿತೇ ?
ಉತ್ತರ : ಕ್ರಾಂತಿಕಾರಿಗಳ ಮುಖಂಡರು ಅನಾವಶ್ಯಕ ಅವಸರಪಡಿಸಲಿಲ್ಲ :
೧೮೫೭ ರ ಸ್ವಾತಂತ್ರ್ಯ ಯುದ್ಧದಲ್ಲಿ ಎಷ್ಟು ಪೂರ್ವಸಿದ್ಧತೆ ಆಗಿತ್ತೋ, ಅಷ್ಟು ಸಿದ್ಧತೆ ಅನೇಕ ವಿಜಯ ಸಂಪಾದಿಸಿದ ಕ್ರಾಂತಿಯ ಸಮಯದಲ್ಲಿ ಆಗಿರಲಿಲ್ಲ. ಸಿಪಾಯಿಗಳ ತಂಡ ಒಂದರ ಹಿಂದೆ ಒಂದು, ರಾಜರು, ಪ್ರಚಲಿತ ಸರಕಾರದ ಹಿರಿಯ ಅಧಿಕಾರಿಗಳು, ಪೊಲೀಸ್, ದೊಡ್ಡ ದೊಡ್ಡ ನಗರಗಳು ಎಲ್ಲವೂ ಒಂದರ ಹಿಂದೆ ಒಂದು ದಂಗೆಯ ವಚನಗಳನ್ನು ನೀಡುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ಬಂಡಾಯ ಆರಂಭವಾಗಲಿಕ್ಕಿತ್ತು. ಇದಲ್ಲದೆ ಅನೇಕ ಪ್ರಸಂಗದಲ್ಲಿ ಪ್ರಾರಂಭದಲ್ಲಿ ಅಡಚಣೆ ನಿರ್ಮಾಣವಾಗುತ್ತದೆ. ಒಮ್ಮೆ ದಂಗೆ ಆರಂಭವಾಯಿತೆಂದರೆ, ಇಡೀ ದೇಶಗಳು ತನ್ನಿಂತಾನೇ ಸೇರಿಕೊಳ್ಳುತ್ತವೆ. ಈ ಅನುಭವವನ್ನು ಗಮನಿಸಿದರೆ ಕ್ರಾಂತಿಕಾರರ ಮುಖಂಡರು ವಿನಾಕಾರಣ ಅವಸರ ಪಟ್ಟಿರಲಿಲ್ಲ, ಎಂಬುದು ಸ್ಪಷ್ಟವಾಗುತ್ತದೆ. ತದ್ವಿರುದ್ಧ ಇಷ್ಟು ಅನುಕೂಲ ಪರಿಸ್ಥಿತಿ ಇರುವಾಗ ದಂಗೆ ಮಾಡುವ ಧೈರ್ಯ ಯಾರಿಗೆ ಬರುವುದಿಲ್ಲವೊ, ಅವರು ಕ್ರಾಂತಿಯ ದಂಗೆ ಯಾವತ್ತೂ ಮಾಡಲು ಸಾಧ್ಯವಿಲ್ಲ, ಎಂದೇ ಹೇಳಬೇಕಾಗುತ್ತದೆ.
ಆ. ೧೮೫೭ ರ ಕ್ರಾಂತಿಯುದ್ಧದಲ್ಲಿ ಏಕೆ ಸೋಲಾಯಿತು ?
ಉತ್ತರ : ಕ್ರಾಂತಿಕಾರಿಗಳು ಅವಸರಪಟುಗಳು ಹಾಗೂ ಅವಿಚಾರಿಗಳಾಗಿರದೆ ಅವರ ಮೇಲೆ ಆರೋಪ ಮಾಡುವ ಹಾಗಿಲ್ಲ : ಈ ಕ್ರಾಂತಿಗಾಗಿ ಆಘಾತಕಾರಿ ಸಿದ್ಧತೆ ವ್ಯವಸ್ಥಿತವಾಗಿ ಮಾಡಲಾಗಿತ್ತು. ಅನಂತರ ನಿರ್ಮಾಣವಾಗುವ ಪರಿಸ್ಥಿತಿಯೊಂದಿಗೆ ಹೇಗೆ ವರ್ತಿಸಬೇಕು ? ಎಂಬ ವಿಷಯದಲ್ಲಿ ಆಘಾತಕಾರಿ, ಆಕರ್ಷಕ ಹಾಗೂ ಸುವ್ಯವಸ್ಥೆಯ ಸಿದ್ಧತೆ ಮಾಡಿರಲಿಲ್ಲ. ಆಂಗ್ಲರ ಆಡಳಿತವನ್ನು ನಷ್ಟಗೊಳಿಸಬೇಕು, ಎಂಬ ವಿಷಯದಲ್ಲಿ ಎಲ್ಲರ ಒಮ್ಮತವಿತ್ತು; ಆದರೆ ಅನಂತರ ಏನು ? ಹಿಂದಿನ ಸ್ಥಿತಿ ಪರಸ್ಪರ ಆಘಾತಕಾರಿ, ಜಗಳ, ಪುನಃ ಅದೇ ಮೊಗಲರು, ಅದೇ ಮರಾಠರು, ಅದೇ ಹಳೆಯ ಜಗಳ ಇಂತಹ ಪರಿಸ್ಥಿತಿಗೆ ಬೇಸರಪಟ್ಟು ಮೂರ್ಖರು ವಿದೇಶಿ ಶತ್ರುಗಳನ್ನು ಒಳಗೆ ಬಿಡುವಂತಹ ಅದೇ ಹಳೆಯ ಪದ್ಧತಿಯನ್ನು ಅವಲಂಬಿಸಲಿಕ್ಕಿದ್ದರೆ, ನಮ್ಮ ರಕ್ತವನ್ನು ಏಕೆ ವ್ಯರ್ಥ ಸುರಿಸಬೇಕು ? ಎಂದು ಸಾಮಾನ್ಯ ಜನರಿಗೆ ಅನಿಸಲು ಆರಂಭವಾಯಿತು. ಕ್ರಾಂತಿಯ ಆಘಾತದ ಭಾಗ ಯಶಸ್ವಿಯಾಗಿ ನೆರವೇರಿತು.
ಅನಂತರದ ಆಡಳಿತದ ಪ್ರಶ್ನೆ ಉದ್ಭವಿಸಿತು. ಆಗ ಪರಸ್ಪರರಲ್ಲಿನ ಭಿನ್ನಾಭಿಪ್ರಾಯ, ಪರಸ್ಪರರ ಬಗ್ಗೆ ಇರುವ ಭಯ ಹಾಗೂ ಆತ್ಮವಿಶ್ವಾಸದ ಅಭಾವ ಇಂತಹ ದುರ್ಗುಣ ಉಮ್ಮಳಿಸಿದವು. ಕ್ರಾಂತಿಯ ನಂತರ ಜನರ ಕಲ್ಪನೆಗೆ ಹಾಗೂ ವಿಚಾರಗಳಿಗೆ ಇಷ್ಟವಾಗುವಂತಹ ಆಕರ್ಷಕ ಕಾರ್ಯಕ್ರಮವನ್ನಿಟ್ಟಿದ್ದರೆ ಕ್ರಾಂತಿಯ ನಂತರ ಆಗುವ ಸ್ವಾತಂತ್ರ್ಯ ಹೆಚ್ಚಳದ ಆಘಾತಕಾರಿ ವೃತ್ತಿ ಬೆಳೆದು ಪ್ರಾರಂಭದ ಹಾಗೆಯೆ ಕ್ರಾಂತಿಯ ಅಂತ್ಯ ಯಶಸ್ವಿಯಾಗುತ್ತಿತ್ತು.
ಹೊಸ ನಿರ್ಮಾಣದ ವಿಷಯ ದೂರ ಉಳಿಯಿತು, ಆದರೆ ಆ ಜನರಿಗೆ ಪರಕೀಯ ಆಡಳಿತವನ್ನು ಸಂಪೂರ್ಣ ನಾಶಗೊಳಿಸಲೂ ಸಾಧ್ಯವಾಗಲಿಲ್ಲ. ಇದರ ಕಾರಣವೆಂದರೆ ಈ ದೇಶದಿಂದ ವಿಶ್ವಾಸಘಾತ ಮತ್ತು ಹೆದರಿಕೆ ಇವೆರಡು ಮಹಾದುರ್ಗುಣಗಳು ಇನ್ನೂ ಸಂಪೂರ್ಣ ನಷ್ಟವಾಗಿರಲಿಲ್ಲ. ಸೋಲಿನ ಮುಖ್ಯ ಕಾರಣವೆಂದರೆ ಈ ಜನರಿಗೆ ಹಿಂದಿನ ಯಾವುದೇ ಸ್ವದೇಶಿ ಆಡಳಿತಕ್ಕಿಂತ ವಿದೇಶಿ ಆಂಗ್ಲರ ಆಡಳಿತ ಹೆಚ್ಚು ಕೆಟ್ಟದಾಗಿದೆ ಎಂಬುದು ತಿಳಿಯಲಿಲ್ಲ. ಯಾರಲ್ಲಿ ಸ್ವದೇಶಿ ಬಾಂಧವರ ವಿರುದ್ಧ ವಿದೇಶಿಯರಿಗೆ ಸಹಾಯವನ್ನು ನಿರಾಕರಿಸುವಷ್ಟು ದೇಶಭಕ್ತಿ ಹಾಗೂ ಪ್ರಾಮಾಣಿಕತೆ ಇರಲಿಲ್ಲವೊ ಅಂತಹ ಜನರು ಸ್ವದೇಶಿ ಬಾಂಧವರಿಗೆ ಮಾಡಿದ ವಿಶ್ವಾಸಘಾತ ! ಆದ್ದರಿಂದ ವೈಫಲ್ಯದ, ಸೋಲಿನ ಎಲ್ಲ ಪಾಪ ಇಂತಹ ವಿಶ್ವಾಸಘಾತಕರ ಮೇಲೆ ಬರುತ್ತದೆ.
ಸ್ವರಾಜ್ಯಕ್ಕಿಂತ ಪರಕೀಯ ಆಡಳಿತ ಹೆಚ್ಚು ಕೆಟ್ಟದಾಗಿರುತ್ತದೆ ಹಾಗೂ ಘಾತಕವಾಗಿರುತ್ತದೆ ಎಂಬುದನ್ನು ತಿಳಿದುಕೊಂಡು ಅದೇ ರೀತಿ ವರ್ತಿಸುವ ವೀರರಿಗೆ ಉಜ್ವಲ ಶ್ರೇಯಸ್ಸು ಲಭಿಸುತ್ತದೆ. ಅದು ಪ್ರಜಾಪ್ರಭುತ್ವವಿರಲಿ ಅಥವಾ ಸರ್ವಾಧಿಕಾರವಿರಲಿ. ಸ್ವಾತಂತ್ರ್ಯದ ಅಭಿಲಾಷೆ ಕೇವಲ ದೇಶ ಸಂಪತ್ಭರಿತ ಹಾಗೂ ಸುಖಿಯಾಗ ಬೇಕೆಂಬುದಕ್ಕಷ್ಟೆ ಇರುವುದಿಲ್ಲ, ಸ್ವಾತಂತ್ರ್ಯದಿಂದಲೆ ಆತ್ಮಕ್ಕೆ ನಿಜವಾದ ಸಮಾಧಾನ ಪ್ರಾಪ್ತಿಯಾಗುತ್ತದೆ. ಲಾಭ ಮತ್ತು ನಷ್ಟಕ್ಕಿಂತ ಸ್ವತ್ವದ ಭಾವನೆಯು ಮಹತ್ವದ್ದಾಗಿರುತ್ತದೆ. ಪಾರತಂತ್ರ್ಯದ ಸ್ವರ್ಣಪಂಜರಕ್ಕಿಂತ ಅರಣ್ಯ ದಲ್ಲಿರುವ ಸ್ವಾತಂತ್ರ್ಯವು ನೂರುಪಟ್ಟು ಶ್ರೇಷ್ಠವಾಗಿದೆ. ಯಾರಿಗೆ ಸ್ವಾತಂತ್ರ್ಯದ ತತ್ತ್ವ ತಿಳಿಯಿತೊ, ಸ್ವಧರ್ಮಕ್ಕಾಗಿ, ಸ್ವದೇಶಕ್ಕಾಗಿ ಯಾರು ತಮ್ಮ ಕರ್ತವ್ಯವನ್ನು ನಿರ್ವಹಿಸಿದರೊ, ಸ್ವಧರ್ಮ ಹಾಗೂ ಸ್ವರಾಜ್ಯಕ್ಕಾಗಿ ಯಾರು ತಮ್ಮ ಖಡ್ಗವನ್ನು ಎತ್ತಿದರೊ, ಅದು ವಿಜಯಕ್ಕಾಗಿ ಅಲ್ಲ, ಆದರೆ ಕರ್ತವ್ಯಬುದ್ಧಿಯಿಂದ ಯಾರು ಸಾವನ್ನಪ್ಪಿದರೊ, ಅವರು ಚಿರಂಜೀವಿಗಳಾಗಿದ್ದಾರೆ. ಅವರಿಗೆ ಕೋಟಿ ಕೋಟಿ ನಮನಗಳು ! ಕೇವಲ ಭೇದಭಾವದಿಂದ ಹಾಗೂ ಅಸ್ಥಿರಬುದ್ಧಿಯಿಂದ ಯಾರು ವೀರರಿಗೆ ಸಹಾಯ ಮಾಡಲಿಲ್ಲವೋ, ಅವರ ಸ್ಮರಣೆ ದೇಶಕ್ಕಿರುವುದಿಲ್ಲ. ಅದಕ್ಕಿಂತಲೂ ಭಯಂಕರವೇನೆಂದರೆ ಯಾರು ಪ್ರತ್ಯಕ್ಷ ಹೋಗಿ ಶತ್ರುವಿನೊಂದಿಗೆ ಸೇರಿಕೊಂಡರೋ ಹಾಗೂ ಸ್ವದೇಶಿ ಬಾಂಧವರೊಂದಿಗೆ ಶತ್ರುವಿನ ಜೊತೆಗೆ ಹೋರಾಡಿದರೋ, ಅವರನ್ನು ಎಷ್ಟು ಧಿಕ್ಕಾರ ಮಾಡಿದರೂ ಕಡಿಮೆಯೆ ! ಈ ಕ್ರಾಂತಿ ಯುದ್ದದ ಸೋಲಿಗೆ ಕಾರಣ ಯಾರು ದೇಶವನ್ನು ಪಾರತಂತ್ರ್ಯಕ್ಕೆ ತಳ್ಳಿದರೊ, ಅಂತಹ ನಪುಂಸಕರು, ಉದಾಸೀನರು ಹಾಗೂ ವಿಶ್ವಾಘಾತಕರೆ ಆಗಿದ್ದಾರೆ.
ದೇಶ ಸ್ವಾತಂತ್ರ್ಯಕ್ಕಾಗಿ ತಮ್ಮ ಬಿಸಿ ರಕ್ತದಲ್ಲಿ ತಮ್ಮ ಖಡ್ಗವನ್ನು ಎತ್ತಿ ಸಶಸ್ತ್ರ ಕ್ರಾಂತಿಯ ಆ ನಾಟ್ಯಪ್ರಯೋಗದಲ್ಲಿ ಅಗ್ನಿಕುಂಡದಲ್ಲಿ ಯಾರು ನಿರ್ಭಯವಾಗಿ ಪ್ರವೇಶ ಮಾಡಿದರೊ, ಸಾಕ್ಷಾತ್ ಮೃತ್ಯು ಎದುರಿನಲ್ಲೆ ಇರುವಾಗಲೂ ಅದನ್ನು ಪರಿಗಣಿಸದೆ ಯಾರು ಮರಣದ ಬಾಯಿಯಲ್ಲೂ ಕುಣಿದರೊ, ಅವರಿಗೆ ದೋಷವನ್ನು ನೀಡಿ ಯಾರೂ ತಮ್ಮ ನಾಲಿಗೆಯನ್ನು ಹೊಲಸು ಮಾಡಿಕೊಳ್ಳಬಾರದು ! ಕ್ರಾಂತಿಕಾರರು ಅವಸರಪಟುಗಳು, ಹುಚ್ಚರು ಹಾಗೂ ಅವಿಚಾರಿಗಳೂ ಆಗಿರಲಿಲ್ಲ. ಆದ್ದರಿಂದ ಅವರಿಗೆ ದೋಷ ನೀಡಲು ಸಾಧ್ಯವಿಲ್ಲ. ಅವರ ಒಂದು ಕರೆಯಿಂದಲೆ ಹಿಂದಮಾತಾ ತನ್ನ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡಳು. ನಮ್ಮ ಪಾರತಂತ್ರ್ಯವನ್ನು ನಷ್ಟಗೊಳಿಸಲು ಅವಳು ಓಡುತ್ತಾ ಹೋದಳು; ಆದರೆ ಅವಳ ಕೆಲವು ಸುಪುತ್ರರು ಅನ್ಯಾಯದ ರಭಸದ ಪ್ರಹಾರ ಮಾಡಿದರು, ಆಗ ದುರ್ಭಾಗ್ಯದಿಂದ ಅವಳ ಕೆಲವು ಸುಪುತ್ರರೇ ಅವಳ ಹೃದಯದೊಳಗೆ ಚೂರಿಯನ್ನು ಹಾಕಿದರು. ಅವಳು ಗಾಯಾಳಾಗಿ ಭೂಮಿಯ ಮೇಲೆ ಕುಸಿದಿರುವಾಗ ಅವಳ ಇಬ್ಬರು ಪುತ್ರರಲ್ಲಿ ಯಾರು ಕ್ರೂರಿ, ಯಾರು ವಿಶ್ವಾಸಘಾತಕ ಹಾಗೂ ಹಾಗೂ ಯಾರು ತಿರಸ್ಕರಣೀಯ ? ಯಾರು ವೀರ, ಯಾರು ಸಾಹಸಿ, ಯಾರು ದೇಶಭಕ್ತ ಹಾಗೂ ಯಾರು ಆದರಣೀಯವಾಗಿದ್ದಾನೆ ? ಎಂಬುದು ಯಾರಿಗೆ ತಿಳಿಯುವುದಿಲ್ಲವೊ, ಅವರ ಬುದ್ಧಿ ಸ್ವಾಧೀನವಿದೆಯೆಂದು ಹೇಳಲು ಸಾಧ್ಯವಿಲ್ಲ.’
(ಆಧಾರ : ‘೧೮೫೭ ರ ಸ್ವಾತಂತ್ರ್ಯಸಮರ’, ಲೇಖಕರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್, ಪುಟ ೪೫೮ ರಿಂದ ೪೬೦) – ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು, ಹಾಗೂ ಲೇಖಕರು, ಡೊಂಬಿವಿಲಿ (೮.೫.೨೦೨೩)