ಪ್ರತೀಕಾರದ ಸಾಹಸ !

ಅಫಘಾನಿಸ್ತಾನದ ಕಮರ ಗುಲ್ ಹೆಸರಿನ ೧೬ ವರ್ಷದ ಯುವತಿ ಈಗ ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ಮಧ್ಯರಾತ್ರಿ ಅವಳ ಮನೆಗೆ ನುಗ್ಗಿದ ಇಬ್ಬರು ತಾಲಿಬಾನಿ ಉಗ್ರರು ಅವಳ ತಂದೆ-ತಾಯಿಯ ಹತ್ಯೆ ಮಾಡಿದರು. ಆಗ ಅವಳು ತನ್ನ ತಂದೆಯ ‘ಎಕೆ ೪೭ ರೈಫಲ್‌ನಿಂದ ಒಬ್ಬ ಉಗ್ರನನ್ನು ಕೊಂದಳು, ಅವಳ ಹಾರಿಸಿದ ಗುಂಡಿನಿಂದ ಮತ್ತೊಬ್ಬ ಉಗ್ರ ಗಾಯಗೊಂಡನು. ಆ ಎರಡನೇಯ ಭಯೋತ್ಪಾದಕನು ಗುಂಡು ಹಾರಿಸಲು ಪ್ರಾರಂಭಿಸಿದಾಗ ಕಮರ ಗುಲ್‌ಳ ೧೨ ವರ್ಷದ ಸಹೋದರನು ಉಗ್ರನಿಂದ ರೈಫಲ್ ಕಸಿದುಕೊಂಡು ಅವನನ್ನು ಕೊಂದನು. ಆ ಯುವತಿ ಮತ್ತು ಅವಳ ಸಹೋದರರ ಬಗ್ಗೆ ಪ್ರಸ್ತುತ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಮರ್ ಗುಲ್‌ಳ ತಂದೆ-ತಾಯಿ ಸರಕಾರದ ಬೆಂಬಲಿಗರಾಗಿದ್ದರು; ಆದ್ದರಿಂದ ತಾಲಿಬಾನಿ ಉಗ್ರರು ಅವರನ್ನು ಗುರಿ ಮಾಡಿದ್ದರು. ಆ ಉಗ್ರರಿಗೆ ಈ ೧೬ ವರ್ಷದ ಯುವತಿಯು ಪ್ರತ್ಯುತ್ತರವನ್ನು ನೀಡಿದ್ದಾಳೆ. ಅರ್ಥಾತ್ ಅದು ಅಫಘಾನಿಸ್ತಾನ ಆಗಿರುವುದರಿಂದ ಅವರ ಮನೆಯಲ್ಲಿ ‘ಎ.ಕೆ. ೪೭ ಇತ್ತು. ಆ ಮಕ್ಕಳು ಅಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಬೆಳೆದಿರುವುದರಿಂದ ಅವರಿಗೆ ಬಹುತೇಕ ಅಂತಹ ವಾತಾವರಣ ಹೊಸದಾಗಿರಲಿಕ್ಕಿಲ್ಲ. ಹೀಗಿದ್ದರೂ, ಸ್ವಂತ ತಂದೆ-ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವಾಗ ಮಧ್ಯರಾತ್ರಿ ಆ ಇಬ್ಬರು ಮಕ್ಕಳು ತೋರಿಸಿದ ಧೈರ್ಯಕ್ಕೆ  ಸರಿಸಾಟಿಯಿಲ್ಲ.  ಅವಳ ಮನೆಯಲ್ಲಿ ಸಹಜವಾಗಿ ಕೈಗೆ ‘ಎ.ಕೆ. ೪೭ ರೈಫಲ್ ಸಿಕ್ಕ ರೀತಿಯಲ್ಲಿ ಭಾರತೀಯರ ಬಳಿ ಸಿಗುವುದಿಲ್ಲ; ಆದರೆ ಆ ಇಬ್ಬರು  ಅಕ್ಕ-ತಮ್ಮ ತೋರಿಸಿದ ಪ್ರಸಂಗಾವಧಾನ ಜಾಗರೂಕತೆ ಮತ್ತು ಪ್ರತಿಕಾರ ಮಾಡುವ ವೃತ್ತಿ ಇವೆಲ್ಲವೂ ಪ್ರಶಂಸನೀಯವಾಗಿದೆ.

‘ದುರ್ಬಲರನ್ನು ದೇವರೂ ರಕ್ಷಣೆ ಮಾಡುವುದಿಲ್ಲ ಎಂಬರ್ಥದ ಒಂದು ಸಂಸ್ಕೃತ ಸುಭಾಷಿತವಿದೆ. ಭಾರತೀಯ ಸಮಾಜಕ್ಕೆ ಶೌರ್ಯದ ಇತಿಹಾಸವಿದೆ. ಹೀಗಿದ್ದರೂ, ಕಳೆದ ಕೆಲವು ವರ್ಷಗಳಿಂದ ಆ ತೇಜಕ್ಕೆ ಗ್ರಹಣ ತಗುಲಿದೆ. ಎಲ್ಲಿ ಜಿರಲೆ ಕಂಡ ಕೂಡಲೇ ಕಿರುಚುವ ಇಂದಿನ ಆಧುನಿಕ ಪೋಷಾಕಿನ ಮಹಿಳೆಯರು ಮತ್ತು ಎಲ್ಲಿ ‘ಎ.ಕೆ. ೪೭ ರೈಫಲ್ ಕೈಗೆತ್ತಿಕೊಂಡು ಉಗ್ರರನ್ನು ಕೊಲ್ಲುವ ಕಮರ ಗುಲ್. ಯಾವ ವಿಷಯಗಳನ್ನು ನಾವು ಸ್ವತಃ ಪ್ರಸಂಗಾವಧಾನದಿಂದ ಕೃತಿ ಮಾಡಬೇಕಿತ್ತೋ ಅದನ್ನು ಮಾಡಲೂ ಸಮಾಜವು ತರಬೇತಿ ಪಡೆದಿಲ್ಲ, ಇದಕ್ಕೆ ಪೊಲೀಸರು, ಸುರಕ್ಷಾದಳ ಇವರ ಮೇಲೆ ಅವಲಂಬನೆ ಹೆಚ್ಚುತ್ತಿರುವುದು ಕಾರಣವಿರಬಹುದು. ರಸ್ತೆಯಲ್ಲಿ ಬಂಗಾರದ ಸರದ ಕಳ್ಳತನ, ಪಾಕೀಟು ಹೊಡೆಯುವುದು, ಮಹಿಳೆಯರ  ಮಾನಭಂಗಗಳಂತಹ ಅನೇಕ ಸಂದರ್ಭಗಳಲ್ಲಿ ಯಾವ ರೀತಿ ಪ್ರತಿಕ್ರಿಯೆಯನ್ನು ತೋರಿಸುವ ಅವಶ್ಯಕತೆಯಿರುತ್ತದೆಯೋ, ಅದೂ ಆಗುತ್ತಿರುವುದು ಕಂಡು ಬರುತ್ತಿಲ್ಲ. ಪ್ರತಿಯೊಂದು ಸಲ ಬಂದೂಕು ಹಿಡಿದುಕೊಂಡು ಎದುರಿಗೆ ಹೋಗಬೇಕು ಎಂದಲ್ಲ; ಆದರೆ ಸ್ವರಕ್ಷಣೆಗಾಗಿ ಮಾಡಿದ ಯಾವುದೇ ಒಂದು ಪ್ರತಿಕ್ರಿಯೆಯ ಕೃತಿಯೂ ಸಮಾಜಕಂಟಕರಿಗೆ ಭಯ ಹುಟ್ಟಿಸುತ್ತದೆ. ಯಾವ ಸಮಾಜ ಇಷ್ಟೂ ಮಾಡುವುದಿಲ್ಲವೋ, ಆ ಸಮಾಜ ದೊಡ್ಡ ಸಂಕಟಗಳ ಸಮಯದಲ್ಲಿ ಹತಾಶವಾಗುತ್ತದೆ. ಶಾರೀರಿಕ ಸಾಮರ್ಥ್ಯದೊಂದಿಗೆ ಮಾನಸಿಕ ಸಾಮರ್ಥ್ಯದ ಅರಿವನ್ನು ಕೂಡ ಮರೆಯುತ್ತದೆ. ಇಂತಹ ಅನೇಕ ವ್ಯಕ್ತಿಗಳಿಂದಲೇ ಸಮಾಜ ನಿರ್ಮಾಣವಾಗಿರುತ್ತದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿಯು ತನಗೆ ಎದುರಾಗುವ ತೊಂದರೆಗಳ, ತನ್ನ ಮೇಲಾಗುವ ಅನ್ಯಾಯವನ್ನು ತನ್ನ ಕ್ಷಮತೆಗನುಸಾರ ಧೈರ್ಯದಿಂದ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರ್ಧರಿಸಿದರೆ, ಸಮಾಜವೂ ಪ್ರತಿಕ್ರಿಯೆ ವ್ಯಕ್ತಪಡಿಸುವ ಕ್ಷಮತೆಯನ್ನು ಬೆಳೆಸಿಕೊಳ್ಳುತ್ತದೆ. ಒಮ್ಮೆ ತನ್ನ ಮೇಲೆ ಆಗುವ ಅನ್ಯಾಯದ ವಿರುದ್ಧ ಪ್ರತಿಕಾರ ವ್ಯಕ್ತಪಡಿಸುವ ಶಕ್ತಿ ನಿರ್ಮಾಣವಾದರೆ, ಕಾಲಕ್ರಮೇಣ ನಮ್ಮ ಪ್ರದೇಶದ ಇತರ ತಪ್ಪು ಘಟನೆಗಳು ಗಮನಕ್ಕೆ ಬರತೊಡಗುತ್ತವೆ. ಸಮಾಜದ ಅಯೋಗ್ಯ ಘಟನೆಗಳು ಮನಸ್ಸಿಗೆ ಅನ್ಯಾಯದ ವಿರುದ್ಧ ಸೂಕ್ತ ಮಾರ್ಗದಿಂದ ಹೋರಾಡಲು ಕೃತಿಶೀಲರಾಗುವಂತೆ ಮಾಡುತ್ತದೆ. ಇದರಿಂದಲೇ ಒಂದು ವ್ಯಾಪಕ ಸಾಮಾಜಿಕ ದೃಷ್ಟಿಕೋನ ನಿರ್ಮಾಣವಾಗುತ್ತದೆ. ಇಂತಹ ಜಾಗರೂಕ ಕೃತಿಶೀಲ ಸಮಾಜದಲ್ಲಿ ಅಯೋಗ್ಯ ಘಟನೆಗಳಿಗೆ ಸ್ಥಾನವಿರುವುದಿಲ್ಲ.

ಸಾಮಾಜಿಕ ಪ್ರತಿಕಾರಕ್ಷಮತೆ ಹೆಚ್ಚಾಗಬೇಕು !

ಭಾರತವೂ ಕಳೆದ ೨ ದಶಕಗಳಿಂದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರೊಂದಿಗೆ ಹೋರಾಡುತ್ತಿದೆ. ಅದಕ್ಕಿಂತ ಮೊದಲಿನಿಂದಲೂ ನಾವು ಇಸ್ಲಾಮಿ ಆಕ್ರಮಣಗಳನ್ನು ಸಹಿಸುತ್ತ ಬಂದಿದ್ದೇವೆ. ಇಸ್ಲಾಮಿ ಆಕ್ರಮಣಕಾರರನ್ನು ಬಗ್ಗುಬಡಿದ ಅನೇಕ ತೇಜಸ್ವಿ ರಾಜರು ನಮ್ಮಲ್ಲಿ ಆಗಿಹೋಗಿದ್ದಾರೆ. ಆ ಕಾಲದಲ್ಲಿ ಜನತೆಯೂ ಪ್ರತಿಕ್ರಿಯೆ ವ್ಯಕ್ತಪಡಿಸುವ ಕ್ಷಮತೆಯನ್ನು ಹೊಂದಿತ್ತು. ತೀರಾ ಇತ್ತೀಚೆಗೆ ಆಂಗ್ಲರ ಕಾಲದಲ್ಲಿಯೂ ಭಾರತದಲ್ಲಿ ಅನೇಕ ಬಾಲ ಕ್ರಾಂತಿವೀರರು ಆಗಿ ಹೋದರು. ೧೯೯೦ ನೇ  ದಶಕದಲ್ಲಿ ಕಾಶ್ಮೀರಿ ಹಿಂದೂಗಳ ಮೇಲೆ ಇಸ್ಲಾಮಿ ದೌರ್ಜನ್ಯವಾಗುತ್ತಿದ್ದಾಗ, ಇತರ ಸಮಾಜವು ಅವರ ನೋವನ್ನು ಅರಿತುಕೊಳ್ಳಲಿಲ್ಲ. ಕಳೆದ ೨ ದಶಕಗಳಿಂದ ಕಾಶ್ಮೀರಿ ಹಿಂದೂಗಳು ಅತ್ಯಂತ ಕಠಿಣ ಜೀವನವನ್ನು ಜೀವಿಸುತ್ತಿದ್ದಾರೆ. ಕಮರ್ ಗುಲ್‌ರಂತಹ ಪ್ರಸಂಗಗಳು ಘಟಿಸಿದಾಗ ವಿಶೇಷವಾಗಿ ಕಾಶ್ಮೀರಿ ಕಣಿವೆಯ ಹಿಂದೂಗಳ ಆಕ್ರೋಶ ಕಣ್ಣೆದುರಿಗೆ ಬರುತ್ತದೆ. ಆ ಸಮಯದಲ್ಲಿ ಒಂದು ವೇಳೆ ಕಳೆದ ಕಮರ ಗುಲ್ ನಿರ್ಮಾಣವಾಗಿದ್ದರೆ, ಆಗಿನ ಚಿತ್ರಣವೇ ಬೇರೆಯದಾಗಬಹುದಾಗಿತ್ತು. ಹಿಂದಿನ ತಿಂಗಳಿನಲ್ಲಿಯೇ ಉಗ್ರರು ಕಾಶ್ಮೀರ ಕಣಿವೆಯ ಏಕೈಕ ಹಿಂದೂ ಸರಪಂಚನ ಹತ್ಯೆ ಮಾಡಿದರು. ಪಾಕ್ ಬೆಂಬಲಿತ ಭಯೋತ್ಪಾದಕರು ಅಲ್ಲಿಯ ಸ್ಥಳೀಯರೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಇದರಿಂದ ಅಲ್ಲಿ ಸೇನೆಯ ಮೇಲೆಯೂ ನಿರಂತರವಾಗಿ ಆಕ್ರಮಣ ನಡೆಯುತ್ತಿರುತ್ತವೆ. ಇಂತಹ ಸ್ಥಿತಿಯಲ್ಲಿ ಸ್ಥಳೀಯರ ಆಶ್ರಯಕ್ಕೆ ಬರುವ ಉಗ್ರರಿಗೆ ಈ ರೀತಿ ಪ್ರತಿಯೊಂದು ಮನೆಯಿಂದ ‘ಆತಿಥ್ಯ ನಡೆದರೆ, ಕಾಶ್ಮೀರ ಕಣಿವೆ ಖಂಡಿತವಾಗಿಯೂ ಶಾಂತಿಯನ್ನು ಅನುಭವಿಸಬಲ್ಲದು.

ಇಂದು ಕಮರ ಗುಲ್‌ಳನ್ನು ಪಾಕಿಸ್ತಾನದ ತಾಲಿಬಾನಿ ಉಗ್ರರ ಗುಂಡುಗಳನ್ನು ಎದುರಿಸಿದ ಮಲಾಲಾ ಯುಸೂಫಜಾಯಿಯೊಂದಿಗೆ ತುಲನೆ ಮಾಡಲಾಗುತ್ತಿದೆ. ಮಲಾಲಾ ತಾಲಿಬಾನಿ ಉಗ್ರರನ್ನು ಎದುರಿಸುತ್ತ ಶಿಕ್ಷಣವನ್ನು ಮುಂದುವರಿಸಿದಳು. ಈಗಲೂ ಅವಳು ತನ್ನ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವಲ್ಲಿ ಮಗ್ನಳಾಗಿದ್ದಾಳೆ. ಈಗ ಕಮರ ಗುಲ್‌ಳಿಗೂ ಅಫಘಾನಿಸ್ತಾನ ಸರಕಾರದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವಳಿಗೆ ಪುರಸ್ಕಾರ ದೊರೆಯಬಹುದು ಮತ್ತು ಕೆಲವು ವರ್ಷಗಳ ಬಳಿಕ ಪುನಃ ಪರಿಸ್ಥಿತಿ ‘ಯಥಾಸ್ಥಿತಿಗೆ ಮರಳಬಹುದು. ಮಲಾಲಾಳಿಗೆ ನೊಬೆಲ್ ಪುರಸ್ಕಾರ ದೊರಕಿತೆಂದು ಪಾಕಿಸ್ತಾನದ ಪರಿಸ್ಥಿತಿ ಬದಲಾಗಲಿಲ್ಲ. ಆದುದರಿಂದಲೇ ಈ ಘಟನೆಗಳಿಂದ ಕಲಿತು ಸರಕಾರವು ಉಗ್ರರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದು, ಅಲ್ಲದೇ ಸಾಮಾನ್ಯರೂ ಪ್ರತಿಕ್ರಿಯೆ ವ್ಯಕ್ತಪಡಿಸುವ ಕ್ಷಮತೆಯನ್ನು ಹೊಂದುವುದು, ಇದೇ ಪಾಠವನ್ನು ಕಲಿಯುವುದು ಅವಶ್ಯಕವಾಗಿದೆ.

ಪ್ರಸ್ತುತ ಕಾಲ ಕಠಿಣವಾಗಿದ್ದು, ಚೀನಾ ಮತ್ತು ಅಮೇರಿಕಾದ ಪರಸ್ಪರ ಸಂಬಂಧ ತೀರಾ ಹದಗೆಟ್ಟಿದೆ. ಭಾರತದಲ್ಲಿಯೂ  ಚೀನಾದೊಂದಿಗೆ ಯುದ್ಧ ಮಾಡುವ ಕೋರಿಕೆ ತೀವ್ರವಾಗುತ್ತಿದೆ. ಪಾಕಿಸ್ತಾನ ಚೀನಾದ ಕೈಗೊಂಬೆಯಾಗಿರುವುದರಿಂದ, ಎರಡೂ ಗಡಿಗಳಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ. ಪಾಕಿಸ್ತಾನದ ಗಡಿಯಿಂದ ಉಗ್ರರು ದೇಶದಲ್ಲಿ ನುಸುಳುವ ಸಿದ್ಧತೆಯಲ್ಲಿದ್ದಾರೆ. ಕೊರೋನಾದಿಂದ ಉದ್ಭವಿಸಿರುವ ಸ್ಥಿತಿಯಿಂದ ಸಂಪೂರ್ಣ ಜಗತ್ತು ಹತಾಶೆಯಾಗಿದೆ. ಇಂತಹ ಸ್ಥಿತಿಯಲ್ಲಿ ಮನೋಧೈರ್ಯವನ್ನು ಕಳೆದುಕೊಳ್ಳಬಾರದೆಂದು, ಪ್ರಯತ್ನಿಸಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಕೇವಲ ಉಗ್ರರೊಂದಿಗೆ ಹೋರಾಡುವುದಕ್ಕಷ್ಟೇ ಅಲ್ಲ; ಜೀವನದ ಎಲ್ಲ ಸಮಸ್ಯೆಗಳನ್ನು ಎದುರಿಸಲು ಅವಶ್ಯಕವಿರುವ ಮನೋಬಲವು ಕಮರ ಗುಲ್‌ಳ ಕೃತ್ಯದಿಂದ ಖಂಡಿತವಾಗಿಯೂ ದೊರೆಯವುದು !