Salute tricolor 21 times : ನ್ಯಾಯಾಲಯದ ಆದೇಶದಂತೆ ಆರೋಪಿ ‘ಭಾರತಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ತ್ರಿವರ್ಣ ಧ್ವಜಕ್ಕೆ 21 ಬಾರಿ ಸೆಲ್ಯೂಟ್ ಮಾಡಿದ !

ಆರೋಪಿ ಫೈಜಾನ್ ‘ಪಾಕಿಸ್ತಾನ ಜಿಂದಾಬಾದ, ಹಿಂದುಸ್ತಾನ ಮುರ್ದಾಬಾದ’ ಹೇಳಿದ ಪ್ರಕರಣ

ಜಬಲಪುರ (ಮಧ್ಯಪ್ರದೇಶ) – ‘ಪಾಕಿಸ್ತಾನ ಜಿಂದಾಬಾದ, ಹಿಂದೂಸ್ತಾನ ಮುರ್ದಾಬಾದ’ ಎಂದು ಘೋಷಣೆ ಕೂಗಿದ ಆರೋಪಿ ಫೈಜಾನ್ ಅಕ್ಟೋಬರ್ 22 ರಂದು ಜಬಲಪುರ ಪೊಲೀಸ್ ಠಾಣೆಗೆ ಹಾಜರಾದನು. ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಆದೇಶದಂತೆ ಅವನು ‘ಭಾರತಮಾತಾ ಕಿ ಜೈ’ ಎಂದು ಕೂಗುತ್ತಾ ತ್ರಿವರ್ಣ ಧ್ವಜಕ್ಕೆ 21 ಬಾರಿ ವಂದಿಸಿದನು. ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಆರೋಪಿ ಫೈಜಾನ ಇವನಿಗೆ ಜಾಮೀನು ಮಂಜೂರು ಮಾಡುವಾಗ 50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡನಿಂದ ಜಾಮೀನು ನೀಡುವಾಗ ಮತ್ತು ಪ್ರಕರಣದ ಅಂತಿಮ ತೀರ್ಪು ಆಗುವವರೆಗೆ ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು 21 ಬಾರಿ ತ್ರಿವರ್ಣ ಧ್ವಜವನ್ನು ವಂದಿಸಲು ಮತ್ತು `ಭಾರತಮಾತಾ ಕಿ ಜೈ’ ಎಂದು ಘೋಷಣೆ ನೀಡುವಂತೆ ಆದೇಶಿಸಿದ್ದರು. ಅದರಂತೆ ಆರೋಪಿ ಫೈಜಾನ್ ಅಕ್ಟೋಬರ್ 22ರ ಮಂಗಳವಾರದಂದು ಪೊಲೀಸ್ ಠಾಣೆಗೆ ತೆರಳಿ ಈ ಕೃತಿಯನ್ನು ಮಾಡಿದ್ದಾನೆ.