ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂಡ್ ಸಿರಿಯಾ ಅಂದರೆ, ‘ಐಸಿಸ್ ಈ ಕಟ್ಟರ್ ಜಿಹಾದಿ ಉಗ್ರವಾದಿ ಸಂಘಟನೆಗೆ ಸಂಬಂಧವಿದೆ ಎಂಬ ಕಾರಣಕ್ಕಾಗಿ ರಾಷ್ಟ್ರೀಯ ತನಿಖಾ ದಳ ಮತ್ತು ಪುಣೆಯ ಭಯೋತ್ಪಾದನಾ ನಿಗ್ರಹ ದಳದವರು ಪುಣೆಯಲ್ಲಿ ನಾಬೀಲ್ ಸಿದ್ದಿಕೀ ಖತ್ರಿ ಮತ್ತು ಸಾದಿಯಾ ಅನ್ವರ ಶೇಖ್ ಇವರಿಬ್ಬರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಐಸಿಸ್‌ಗಾಗಿ ಕಾರ್ಯಾಚರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರಲ್ಲಿ ಸಾದಿಯಾ ಶೇಖ್ ಇವಳ ಹಿನ್ನೆಲೆ ಸಂದೇಹಾ ಸ್ಪದವಾಗಿದೆ. ೨೦೧೫ ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ರಕ್ತಪಾತ ಮಾಡುತ್ತಿರುವಾಗ ನಮ್ಮ ದೇಶದಲ್ಲಿ ಅನೇಕ ಜನರು ಐಸಿಸ್‌ಗೆ ಬಹಿರಂಗವಾಗಿ ಬೆಂಬಲಿಸಿದ್ದರು. ಇದರಲ್ಲಿನ ಕೆಲವರು ಆ ಸಂಘಟನೆಗೆ ಸೇರಲು ನೇರವಾಗಿ ಸಿರಿಯಾಗೆ ಹೋಗಿದ್ದರು. ಆಗ ಪೊಲೀಸರು ದೇಶದ ಮೂಲೆಮೂಲೆಗಳಿಂದ ಐಸಿಸ್‌ನ ಉಗ್ರರನ್ನು ಬಂಧಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದರು. ಆಗ ಪೊಲೀಸರು ಈ ಸಾದಿಯಾ ಅನ್ವರ್ ಶೇಖ್ ಇವಳನ್ನು ಪುಣೆಯ ವಿಮಾನ ನಿಲ್ದಾಣದಿಂದ ವಶಪಡಿಸಿಕೊಂಡಿದ್ದರು. ಆಗ ‘ಸಾದಿಯಾ ಸಾಮಾಜಿಕ ಮಾಧ್ಯಮಗಳ ಮೂಲಕ ಐಸಿಸ್‌ನಲ್ಲಿನ ಉಗ್ರವಾದಿಗಳ ಸಂಪರ್ಕದಲ್ಲಿದ್ದಳು ಹಾಗೂ ಐಸಿಸ್‌ಗೆ ಸೇರಲು ಅವಳು ಸಿರಿಯಾಗೆ ಹೊರಟಿದ್ದಳು, ಎಂದು ಹೇಳಲಾಗಿತ್ತು. ನಿಜವಾಗಿ ನೋಡಿದರೆ, ಅವಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಇಷ್ಟೇ ವಿಷಯ ಸಾಕಾಗಿತ್ತು; ಆದರೆ ಆಗ ಸಾದಿಯಾ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಪೊಲೀಸರು ಅವಳಿಗೆ ಸದುಪದೇಶ ಮಾಡುವ ನಿರ್ಣಯವನ್ನು ತೆಗೆದುಕೊಂಡಿದ್ದರು, ಆದರೆ ಅದು ನಂತರ ಸಂಪೂರ್ಣ ವಿಫಲವಾಯಿತು. ಅದಕ್ಕಾಗಿ ಅವಳ ಧರ್ಮದ ಧರ್ಮಗುರುಗಳ ಸಹಾಯವನ್ನು ಕೂಡ ಪಡೆಯಲಾಗಿತ್ತು. ಈ ಸಾದಿಯಾಳಿಗೆ ನಮ್ಮ ದೇಶವನ್ನು ಹೇಗೆ ಬುಡಮೇಲು ಮಾಡಬೇಕು ಎಂಬುದು ಚೆನ್ನಾಗಿ ತಿಳಿಯುತ್ತದೆ, ಇಂತಹವಳನ್ನು ಕೇವಲ ಅಪ್ರಾಪ್ತ ವಯಸ್ಸಿನವಳೆಂದು ಹೇಳಿ ಬಿಟ್ಟು ಬಿಡುವ ನಿರ್ಣಯವು ಯೋಗ್ಯವಾಗಿತ್ತೇ ? ಅವಳನ್ನು ಬಿಟ್ಟವರು ಇದರ ಉತ್ತರವನ್ನು ಕೊಡಬೇಕು. ಇತರ ದೇಶಗಳಲ್ಲಿ ಉಗ್ರವಾದಿಗಳ ವಿರುದ್ಧ ಕಠೋರದಲ್ಲಿನ ಕಠೋರ ನಿಲುವನ್ನು ಹೊಂದಿರುವಾಗ ಉಗ್ರವಾದಿಗಳ ಅತೀ ಹೆಚ್ಚು ಬಿಸಿತಟ್ಟಿರುವ ಭಾರತದಲ್ಲಿ ಮಾತ್ರ ಹೀಗೆ ಉದಾರತೆಯ ನಿಲುವನ್ನು ಅಂಗೀಕರಿಸುವುದೆಂದರೆ, ಇದನ್ನು ಆತ್ಮಘಾತಕವೆಂದೇ ಹೇಳಬೇಕಾಗುವುದು. ೨೦೧೫ ರಲ್ಲಿ ಧರ್ಮಗುರುಗಳು ಸಾದಿಯಾಳಿಗೆ ಸದುಪದೇಶ ಮಾಡಿದರು; ಆದರೆ ಅದರಿಂದ ಅವಳ ಮೇಲೆ ಎಳ್ಳಷ್ಟೂ ಪರಿಣಾಮವಾಗಲಿಲ್ಲ. ೨೦೧೮ ರಲ್ಲಿ ಪುನಃ ಈ ಸಾದಿಯಾಳನ್ನು ‘ಆತ್ಮಾಹುತಿ ದಾಳಿಗೆ ಪ್ರಯತ್ನಿಸಿದ ಆರೋಪದಲ್ಲಿ ಕಾಶ್ಮೀರ ಕಣಿವೆಯಲ್ಲಿ ಬಂಧಿಸಲಾಗಿತ್ತು. ಅವಳು ಉಗ್ರವಾದಿ ಸಂಘಟನೆಯ ‘ಫಿದಾಯೀನ (ಆತ್ಮಾಹುತಿ ದಾಳಿ ಮಾಡುವವಳು) ಆಗಿದ್ದಾಳೆಂದು ಹೇಳಿ ಅವಳ ವಿರುದ್ಧ ಜಾಗರೂಕರಾಗಿರಲು ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಅವಳನ್ನು ಸಾಕ್ಷಿಗಳಿಲ್ಲವೆಂದು ಬಿಡಲಾಗಿತ್ತು. ಸ್ವಲ್ಪದರಲ್ಲಿ ಹೇಳುವುದಾರೆ ಸಾದಿಯಾ ದೇಶದ ವಿರುದ್ಧ ಜಿಹಾದವನ್ನೇ ಆರಂಭಿಸಿದ್ದಳು, ಆದರೆ ಅವಳು ಕೆಲವೊಮ್ಮೆ ಅಪ್ರಾಪ್ತ ವಯಸ್ಸಿನವಳೆಂದು, ಇನ್ನು ಕೆಲವೊಮ್ಮೆ ಸಾಕ್ಷಿಗಳ ಅಭಾವದಿಂದ ಪೊಲೀಸರ ಹಿಡಿತದಿಂದ ಮುಕ್ತವಾಗಿದ್ದಳು. ಅಂತೂ ಕೊನೆಗೆ ಅವಳನ್ನು ರಾಷ್ಟ್ರೀಯ ತನಿಖಾ ದಳದವರು ಬಂಧಿಸಿದರು. ಸಾದಿಯಾ ಮತ್ತು ನಾಬೀಲ ಇವರಿಬ್ಬರೂ ಪೌರತ್ವ ಸುಧಾರಣಾ ಕಾನೂನಿನ ವಿರುದ್ಧ ಮುಸಲ್ಮಾನ ಯುವಕರನ್ನು ಪ್ರಚೋದಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ತನಿಖಾ ದಳದವರು ನೀಡಿದ್ದಾರೆ. ಅದಕ್ಕೆ ಸಂಬಂಧಿಸಿ ಇವರಿಬ್ಬರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿರುವ ಸಂಭಾಷಣೆಗಳನ್ನು ಕೂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇವೆಲ್ಲ ಪ್ರಸಂಗಗಳಿಂದ ಒಂದು ವಿಷಯ ಮಾತ್ರ ಬಹಿರಂಗವಾಗಿದೆ, ಅದೆಂದರೆ, ಪೊಲೀಸರ ಸದುಪದೇಶದ ನಿರ್ಣಯ ವಿಫಲವಾಯಿತು. ಪೊಲೀಸರು ಸಾದಿಯಾಳಿಗೆ ವಿವಿಧ ಮಾರ್ಗಗಳಿಂದ ಸದುಪದೇಶವನ್ನು ಮಾಡಿದರೂ ಅವಳು ತನ್ನ ಉಗ್ರವಾದದ ಮಾರ್ಗವನ್ನು ಎಂದಿಗೂ ಬಿಡಲಿಲ್ಲ. ಪೊಲೀಸರು ಅದನ್ನು ಸಣ್ಣ ವಿಷಯವೆಂದು ತಿಳಿದಿದ್ದರು; ಆದರೆ ಅವಳ ಧ್ಯೇಯವು ದೇಶವನ್ನು ಬುಡಮೇಲು ಮಾಡುವಷ್ಟು ದೊಡ್ಡದು ಹಾಗೂ ದೇಶದ್ರೋಹದ್ದಾಗಿತ್ತು. ಸದುಪದೇಶದ ನಂತರವೂ ಅವಳು ಐಸಿಸ್‌ನೊಂದಿಗಿನ ಸಂಪರ್ಕವನ್ನು ಸ್ವಲ್ಪವೂ ಕಡಿಮೆ ಮಾಡಲಿಲ್ಲ. ಅವಳು ತನ್ನ ಕಾರ್ಯವನ್ನು ಮುಂದುವರಿಸುತ್ತಿದ್ದಳು. ದೇಶದಾದ್ಯಂತ ಐಸಿಸ್‌ನ ದಲಾಲರು ಪೊಲೀಸರ ಬಲೆಗೆ ಬೀಳುತ್ತಿದ್ದರೂ ಅಂದಿನ ಗೃಹಸಚಿವರು ಮಾತ್ರ ‘ಐಸಿಸ್ನಿಂದ ಭಾರತದ ಮುಸಲ್ಮಾನರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ, ಎಂದು ಪದೇ ಪದೇ ಎದೆ ತಟ್ಟಿ ಹೇಳುತ್ತಿದ್ದರು, ಅದು ಎಷ್ಟು ಅಸತ್ಯವಾಗಿತ್ತು ಎಂಬುದು ಸಾದಿಯಾ ಮತ್ತು ನಾಬಿಲ್ ಇವರ ಬಂಧನದಿಂದ ಪುನಃ ಸ್ಪಷ್ಟವಾಗಿದೆ. ಒಟ್ಟಾರೆ ‘ಸದುಪದೇಶವನ್ನು ಯಾರಿಗೆ ಮಾಡಬೇಕು ?, ಎಂಬುದು ಕೂಡ ತಿಳಿಯದ ಪೊಲೀಸರು ಜನರನ್ನು ಹೇಗೆ ರಕ್ಷಿಸುವರು ? ಇನ್ನಾದರೂ ಪೊಲೀಸರು ಸಾದಿಯಾ ಮತ್ತು ನಾಬಿಲ್ ಇವರಿಗೆ ಬುದ್ಧಿವಾದ ಹೇಳದೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜನರ ಅಪೇಕ್ಷೆಯಾಗಿದೆ. ಈ ಪ್ರಕರಣದಲ್ಲಿ ಇನ್ನೊಂದು ದೊಡ್ಡ ಕೊರತೆ ಗಮನಕ್ಕೆ ಬಂದಿತು, ಅದೆಂದರೆ, ‘ಯಾವುದೇ ಹುಡುಗ ಅಥವಾ ಹುಡುಗಿ ಕೇವಲ ಅಪ್ರಾಪ್ತ ವಯಸ್ಸಿನವರೆಂದು ಹೇಳಿ ಅವರ ಗಂಭೀರದಲ್ಲಿನ ಗಂಭೀರ ಅಪರಾಧ ಗಳನ್ನು ಕ್ಷಮಿಸಲಾಗುತ್ತದೆ. ಇದರ ಬಗ್ಗೆ ವಿಚಾರವಿಮರ್ಶೆ ಆಗಬೇಕು. ಮೇಲೆ ಹೇಳಿದಂತೆ ಇಂತಹ ಅಪ್ರಾಪ್ತ ವಯಸ್ಸಿನ ಹುಡುಗ-ಹುಡುಗಿ ಯರಿಗೆ ದೊಡ್ಡ ದೊಡ್ಡ ಹಾಗೂ ಅನಾವಶ್ಯಕ ಧ್ಯೇಯಗಳಿರುತ್ತವೆ. ಹೀಗಿರುವಾಗ ಅವರನ್ನು ಕೇವಲ ವಯಸ್ಸಿನ ಆಧಾರದಲ್ಲಿ ಬಿಟ್ಟು ಬಿಡುವುದು ಸಮಾಜದಲ್ಲಿ ವಿಷವನ್ನು ಹರಡಿಸಿದಂತಾಗುತ್ತದೆ. ಇಂತಹವರನ್ನು ಬಿಟ್ಟು ಬಿಡದೆ ಅವರ ವಿರುದ್ಧ ಯೋಗ್ಯವಾದ ಕಾರ್ಯಾಚರಣೆಯಾಗುವ ಹಾಗೆ ಕಾನೂನಿನಲ್ಲಿ ಬದಲಾವಣೆ ಮಾಡುವುದು ಆವಶ್ಯಕವಾಗಿದೆ. ೨೦೧೪ ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದನಂತರ ಅವರು ಎಲ್ಲ ಹಳೆಯ ಕಾನೂನುಗಳನ್ನು ಬದಲಾಯಿಸುವ ವಿಚಾರವನ್ನು ಹೇಳಿದ್ದರು. ಅದರ ಅಂತರ್ಗತ ಈಗ ಇಂತಹ ಸದುಪದೇಶದ ನಿಲುವನ್ನು ಕೂಡ ಪುನರ್ವಿಮರ್ಶೆ ಮಾಡಬೇಕು.
ಅಸುರಕ್ಷಿತ ಪುಣೆ !
ಒಂದು ಕಾಲದಲ್ಲಿ ಪುಣೆಯು ನಮ್ಮ ದೇಶಕ್ಕೆ ದೃಷ್ಟಿಕೋನವನ್ನು ನೀಡುವ ನಗರವಾಗಿತ್ತು. ಮೊಗಲರ ಜಿಹಾದ್‌ಗೆ ಹೇಗೆ ಧೂಳೆರಚುವುದು?, ಎಂಬುದನ್ನು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಬಾಜೀರಾವ್ ಪೇಶ್ವೆಯವರು ಈ ಭೂಮಿಯಲ್ಲಿ ಪ್ರತ್ಯಕ್ಷ ಕೃತಿ ಮಾಡಿ ತೋರಿಸಿದ್ದರು, ಆದರೆ ಇಂದು ಅದೇ ಪುಣೆ ಉಗ್ರವಾದ, ನಕ್ಸಲವಾದ, ಪ್ರಗತಿಪರತ್ವ, ನಾಸ್ತಿಕವಾದ ಇತ್ಯಾದಿಗಳ ಸುತ್ತಿನಲ್ಲಿ ಸಿಲುಕಿರುವುದು ದುರ್ಭಾಗ್ಯದ ವಿಷಯವಾಗಿದೆ. ಒಂದು ಕಾಲದಲ್ಲಿದ್ದ ಪುಣೆಯ ‘ಸಾಂಸ್ಕೃತಿಕ ರಾಜಧಾನಿಯೆನ್ನುವ ಬಿರುದು ಯಾವಾಗಲೋ ಅಳಿಸಿಹೋಗಿದ್ದು ಈಗ ಅಲ್ಲಿ ರಾಷ್ಟ್ರದ್ರೋಹಿ ವಿಚಾರಗಳ ಪ್ರಭಾವ ಹೆಚ್ಚಾಗಿದೆ. ಅಲ್ಲಿ ಕೆಲವೊಮ್ಮೆ ಉಗ್ರವಾದಿಗಳಿಗೆ ಸದುಪದೇಶವನ್ನು ನೀಡಲಾಗುತ್ತದೆ, ಕೆಲವೊಮ್ಮೆ ಕಲೆಯ ಹೆಸರಿನಲ್ಲಿ ನಕ್ಸಲ್ ವಿಚಾರಗಳನ್ನು ಹರಡಲಾಗುತ್ತದೆ, ಕೆಲವೊಮ್ಮೆ ನಗರ ನಕ್ಸಲರನ್ನು ಬಹಿರಂಗವಾಗಿ ಸಮರ್ಥನೆ ಮಾಡಲಾಗುತ್ತದೆ, ಕೆಲವೊಮ್ಮೆ ಗಲಭೆಯೆಬ್ಬಿಸಲಾಗುತ್ತದೆ ಮತ್ತು ಕೆಲವೊಮ್ಮೆ ಉಗ್ರವಾದಿಗಳು ಬಾಂಬ್‌ಸ್ಫೋಟ ಮಾಡುತ್ತಾರೆ. ಆದ್ದರಿಂದ ಸುರಕ್ಷಿತವಾಗಿದ್ದ ಈ ನಗರವು ದಿನಗಳೆದಂತೆ ಅಸುರಕ್ಷಿತತೆಯ ದಿಕ್ಕಿನ ಕಡೆಗೆ ಸರಿಯುತ್ತಿದೆ. ಪೊಲೀಸರು ಸಾದಿಯಾಳ ಜೊತೆಗೆ ನಾಬಿಲಾನನ್ನು ಕೂಡ ಬಂಧಿಸಿದ್ದಾರೆ, ನಾಬಿಲಾ ಪುಣೆಯ ಕೋಂಢವಾದಲ್ಲಿನ ನಿವಾಸಿಯಾಗಿದ್ದಾನೆಂದು ಹೇಳ ಲಾಗುತ್ತದೆ. ಈ ಕೋಂಢವಾ ಭಾಗವು ಮತಾಂಧ ಬಹುಸಂಖ್ಯಾತ ಪ್ರದೇಶವಾಗಿದ್ದು ಅದು ಕುಕೃತ್ಯಗಳ ತಾಣವಾಗಿದೆ. ಒಟ್ಟಾರೆ ಪುಣೆ ಮತ್ತು ಅದರ ಜೊತೆಗೆ ಸಂಪೂರ್ಣ ದೇಶವನ್ನು ಉಗ್ರವಾದ ಮತ್ತು ನಕ್ಸಲ್ ವಾದದಿಂದ ಮುಕ್ತಗೊಳಿಸಬೇಕಾಗಿದ್ದರೆ, ಸರಕಾರ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ಮುಂದಿಟ್ಟು ತ್ವರಿತಗತಿಯಲ್ಲಿ ಕೃತಿಗಳನ್ನು ಮಾಡಬೇಕಾಗಿದೆ.