‘ಪುನಃ ಅಧಿಕಾರಕ್ಕೆ ಬಂದರೆ ಬಡವರಿಗೆ ಜೀವನಪೂರ್ತಿ ಉಚಿತ ಧಾನ್ಯ ನೀಡುವೆನು !’ – ಮಮತಾ ಬ್ಯಾನರ್ಜಿಯವರಿಂದ ಜನರಿಗೆ ಆಮಿಷ

‘ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರ ಪರಾಕಾಷ್ಟೆಯ ಹಿಂದೂದ್ವೇಷದಿಂದ ಅವರು ರಾಜ್ಯದ ಸಂಪತ್ತನ್ನು ಅಲ್ಪಸಂಖ್ಯಾತರ ಮೇಲೆ ಸುರಿದ ಕಾರಣ ಬಂಗಾಲವು ಕಂಗಾಲ್ ಆಯಿತು ! ಈಗ ಹಿಂದೂಗಳು ಜಾಗರೂಕರಾಗಿದ್ದರಿಂದ ಬ್ಯಾನರ್ಜಿಯವರಿಗೆ ಅಧಿಕಾರ ಕೈತಪ್ಪಿ ಹೋಗುವ ಭಯ ಕಾಡುತ್ತಿದೆ; ಆದ್ದರಿಂದಲೇ ಅವರು ಈ ರೀತಿಯ ಆಮೀಷವನ್ನು ತೋರಿಸುತ್ತಿದ್ದಾರೆ. ಅವರು ನಿಜವಾಗಲೂ ಜನರ ಕೆಲಸ ಮಾಡಿದ್ದರೆ ಅವರು ಮತದ ಭಿಕ್ಷೆಯನ್ನು ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ !

ದೇಶದಲ್ಲಿ ಅವಾಸ್ತವಿಕ ಆಮಿಷವನ್ನು ತೋರಿಸಿ ಜನರ ದಾರಿ ತಪ್ಪಿಸುವವರನ್ನು ಸೆರೆಮನೆಯಲ್ಲಿ ಅಟ್ಟುವ ಕಾನೂನು ನಿರ್ಮಿಸಬೇಕು, ಆಗ ಮಾತ್ರ ಈ ರೀತಿ ಮಾಡಲು ಧೈರ್ಯ ಮಾಡುವುದಿಲ್ಲ ಹಾಗೂ ಜನರು ಮೋಸ ಹೋಗುವುದು ನಿಲ್ಲುತ್ತದೆ.

ಮಮತಾ ಬ್ಯಾನರ್ಜಿ

ಕೋಲಕತಾ – ತೃಣಮೂಲ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ಬಡವರಿಗೆ ಜೀವನಪೂರ್ತಿ ಉಚಿತವಾಗಿ ಧಾನ್ಯ ನೀಡುವುದು, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ‘ಆನ್‌ಲೈನ್’ ಸಭೆಯಲ್ಲಿ ಮತದಾರರಿಗೆ ಆಮಿಷ ನೀಡಿದ್ದಾರೆ. ರಾಜ್ಯದಲ್ಲಿ ೨೦೨೧ ರಲ್ಲಿ ವಿಧಾನಸಭೆ ಚುನಾವಣೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಬ್ಯಾನರ್ಜಿಯವರು ಈ ಸಭೆಯನ್ನು ತೆಗೆದುಕೊಂಡಿದ್ದರು.

ಅವರು ತಮ್ಮ ಮಾತನ್ನು ಮುಂದುವರಿಸುತ್ತ, “ನಾವು ಸಂಚಾರನಿಷೇಧ ಆಗುವ ಮುಂಚೆಯೇ ಉಚಿತವಾಗಿ ಧಾನ್ಯವನ್ನು ನೀಡುತ್ತಿದ್ದೆವು. ೧೦ ಕೋಟಿ ಜನರಿಗೆ ಉಚಿತ ಧಾನ್ಯವನ್ನು ನೀಡುತ್ತಿದ್ದೇವೆ. ದೆಹಲಿಯವರು ನಮ್ಮೊಂದಿಗೆ ಯಾವ ರೀತಿ ವರ್ತಿಸಿದ್ದಾರೆ, ಆ ಬಗ್ಗೆ ನಾವು ಖಂಡಿತವಾಗಿಯೂ ಸೇಡನ್ನು ತೀರಿಸುತ್ತೇವೆ. (ಇಷ್ಟು ದ್ವೇಷದ ರಾಜಕೀಯವನ್ನು ಮಾಡುವ ವ್ಯಕ್ತಿ ಅಧಿಕಾರದಲ್ಲಿ ಇದ್ದರೆ ಜನರೊಂದಿಗೆ ಹೇಗೆ ವರ್ತಿಸಬಹುದು, ಎಂಬುದರ ಬಗ್ಗೆ ವಿಚಾರ ಮಾಡದಿರುವುದೇ ಲೇಸು ! – ಸಂಪಾದಕರು) ಹೊರಗಿನ ಯಾವುದೇ ವ್ಯಕ್ತಿಗೆ ಬಂಗಾಲದಲ್ಲಿ ರಾಜ್ಯವಾಳಲು ಅನುಮತಿ ನೀಡುವುದಿಲ್ಲ. ನಮಗೆ ಪುನಃ ಹೇಗೆ ಎದ್ದುನಿಲ್ಲಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ತೃಣಮೂಲ ಕಾಂಗ್ರೆಸನ್ನು ಯಾರೂ ದುರ್ಬಲವೆಂದು ತಿಳಿಯಬಾರದು ನಾವು ‘ಪೌರತ್ವ ತಿದ್ದುಪಡಿ ಕಾನೂನು’ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಮರೆತಿಲ್ಲ. ‘ದೇಶದ ನಾಗರಿಕರು ಯಾರು ?’. ಎಂಬುದು ನಿರ್ಧರಿಸುವ ಅಧಿಕಾರ ರಾಜ್ಯಕ್ಕೆ ಇದೆ. (ಯಾವ ಮಮತಾ(ಬಾನೊ) ಸರಕಾರಕ್ಕೆ ದೇಶದ ಇತರ ರಾಜ್ಯದ ಜನರು ‘ಹೊರಗಿನವರು’ ಎಂದು ಅನಿಸುತ್ತದೆಯೇ; ಆದರೆ ಬಾಂಗ್ಲಾದೇಶಿ ನುಸುಳುಖೋರರು ‘ತಮ್ಮವರು’ ಎಂದೆನಿಸುತ್ತದೆ, ಅದು ರಾಷ್ಟ್ರಾಘಾತವೇ ಆಗಿದೆ ! ಇಂತಹ ನಾಯಕರು ಭಾರತದಲ್ಲಿರುವುದು, ದೌರ್ಭಾಗ್ಯವೇ ಆಗಿದೆ ! – ಸಂಪಾದಕರು) ಅದಕ್ಕಾಗಿ ನಿಯಮಗಳನ್ನು ರೂಪಿಸಿ ಜನರಿಗೆ ತೊಂದರೆ ಕೊಡುವ ಅಧಿಕಾರ ಕೇಂದ್ರಕ್ಕೆ ಇಲ್ಲ. ಇಂತಹವರು ಕೇವಲ ಸುಳ್ಳು ಹೇಳುತ್ತಾರೆ ಹಾಗೂ ಜನಸಾಮಾನ್ಯರಲ್ಲಿ ಹಿಂಸೆಯನ್ನು ಮಾಡುತ್ತಾರೆ’ ಎಂದು ಹೇಳಿದರು. (ಬಂಗಾಲದಲ್ಲಿ ಬಾಂಬ್‌ಸ್ಫೋಟ, ಗಲಭೆ, ಹಿಂದೂಗಳ ಹತ್ಯಾಸರಣಿ ನಡೆಸಿ ಯಾರು ಹಿಂಸೆಯನ್ನು ಮಾಡುತ್ತಿದ್ದಾರೆ, ಎಂಬುದು ಮಮತಾ ಬ್ಯಾನರ್ಜಿ ಏಕೆ ಹೇಳುತ್ತಿಲ್ಲ ? – ಸಂಪಾದಕರು)