ರಾಷ್ಟ್ರಹಿತಕ್ಕಾಗಿ ‘ಪೌರತ್ವ ತಿದ್ದುಪಡಿ ಕಾನೂನು, ‘ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ‘ರಾಷ್ಟ್ರೀಯತ್ವ ಪೌರತ್ವ… ಇವುಗಳ ವಿರುದ್ಧ ಜಾತ್ಯತೀತವಾದಿಗಳು ಕೋಲಾಹಲವುಂಟು ಮಾಡುತ್ತಿದ್ದಾರೆ. ‘ಕೇಂದ್ರ ಸರಕಾರವು ತೆಗೆದುಕೊಂಡಿರುವ ಈ ನಿರ್ಣಯಗಳು ಮುಸಲ್ಮಾನ ವಿರೋಧಿಯಾಗಿವೆ; ಅವು ಸಂವಿಧಾನಬಾಹಿರವಾಗಿವೆ, ಈ ರೀತಿಯಲ್ಲಿ ಅತ್ಯಂತ ತಪ್ಪು ಚಿತ್ರಣವನ್ನು ಮೂಡಿಸಲಾಗುತ್ತಿದೆ. ಮುಸಲ್ಮಾನ ಪ್ರೇಮದ ಅತಿರೇಕವಿರುವ ಈ ಜನರು ಈ ದೇಶದ ಬಹುಸಂಖ್ಯಾತರನ್ನು (ಹಿಂದೂಗಳನ್ನು) ಮಲತಾಯಿಯಂತೆ ನೋಡುವ ಸಚ್ಚರ್ ಆಯೋಗದ ವಿರುದ್ಧದ ಮಾತ್ರ ಬಾಯಿ ಮುಚ್ಚಿ ಸುಮ್ಮನೆ ಕುಳಿತು ಕೊಂಡಿದ್ದಾರೆ. ಅದರ ಮೇಲೆ ಬೆಳಕು ಚೆಲ್ಲುವ ಈ ಲೇಖನವನ್ನು ನಮ್ಮ ವಾಚಕರಿಗಾಗಿ ಆಧಾರಸಹಿತ ಪ್ರಕಟಿಸುತ್ತಿದ್ದೇವೆ.
ಹಿಂದೂಗಳಲ್ಲಿನ ಮತ್ತು ಮುಸಲ್ಮಾನರಲ್ಲಿನ ೫ ಜಾಗತಿಕ ಮನ್ನಣೆ ಪಡೆದಿರುವ ಮಹತ್ವಪೂರ್ಣ ‘ಮಾನವ ವಿಕಾಸದ ನಿರ್ದೇಶಾಂಕಗಳ ತುಲನಾತ್ಮಕ ವಿಶ್ಲೇಷಣೆಯಲ್ಲಿ ಬೆಳಕಿಗೆ ಬಂದ ಅಂಶವೆಂದರೆ, ಭ್ರೂಣಮೃತ್ಯು, ಬಾಲಮೃತ್ಯು, ನಾಗರಿಕೀಕರಣ ಮತ್ತು ಅಪೇಕ್ಷಿತ ಜನನ ಪ್ರಮಾಣ ಈ ೪ ನಿರ್ದೇಶಾಂಕಗಳಲ್ಲಿ ಭಾರತೀಯ ಹಿಂದೂಗಳು ಮುಸಲ್ಮಾನರಿಗಿಂತ ಅತ್ಯಂತ ಹಿಂದುಳಿದವರಾಗಿದ್ದಾರೆ. ಯಾರಿಗೆ ಮುಸಲ್ಮಾನ ಸಮಾಜದೊಂದಿಗೆ ಕಡಿಮೆ ದರದಲ್ಲಿ ವ್ಯಾವಸಾಯಿಕ ಮತ್ತು ಶೈಕ್ಷಣಿಕ ಸಾಲದ ರೂಪದಲ್ಲಿ ಲಕ್ಷಗಟ್ಟಲೆ ರೂಪಾಯಿಗಳ ವಿದ್ಯಾರ್ಥಿವೇತನ ಮತ್ತು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆಯೋ, ಆ ಕ್ರೈಸ್ತ, ಬೌದ್ಧ, ಪಾರ್ಸಿ ಹಾಗೂ ಸಿಕ್ಖ್ ಈ ೪ ಪಂಥಗಳ ಅಲ್ಪಸಂಖ್ಯತರಿಗಿಂತ ಹಿಂದೂಗಳು ಹೆಚ್ಚು ಪ್ರಮಾಣದಲ್ಲಿ ಹಿಂದುಳಿದವರಾಗಿದ್ದಾರೆ.
ವಿವಿಧ ಸಂಸ್ಥೆಗಳಲ್ಲಿನ ಅನೇಕ ವಿದ್ವಾಂಸರು ಸ್ವತಂತ್ರವಾಗಿ ಮಾಡಿದ ಶೋಧ ಅಧ್ಯಯನಗಳ ಮಾಧ್ಯಮದಿಂದ ಅನೇಕ ಬಾರಿ ‘ಹಿಂದೂ ಮತ್ತು ಮುಸಲ್ಮಾನರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯಲ್ಲಿ ಅತ್ಯಲ್ಪ ವ್ಯತ್ಯಾಸವಿದೆ ಎಂಬುದು ಸಿದ್ಧವಾಗಿದೆ. ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ ಇವರು ಒಂದು ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರೆಂದು ನೇಮಿಸಿದ್ದ ನ್ಯಾಯಾಧೀಶ ರಾಜಿಂದರ್ ಸಚ್ಚರ್‌ರು ಸಮಿತಿಯ ವರದಿಯನ್ನು ತಯಾರಿಸುವಾಗ ದೊಡ್ಡ ಪ್ರಮಾಣದಲ್ಲಿ ಸಲ್ಲಿಸಿದ ಸತ್ಯ ದಾಖಲೆಗಳನ್ನು ಏಕೆ ದುರ್ಲಕ್ಷ ಮಾಡಿದರು ? ಇದು ಒಂದು ರಾಜಕೀಯ ಹಾಗೂ ಜಾತೀಯ ರಹಸ್ಯವಾಗಿದೆ. ಸಾವಿರಾರು ರೂಪಾಯಿಗಳ ಕಡಿಮೆ ಬಡ್ಡಿ ದರದ ಶೈಕ್ಷಣಿಕ ಮತ್ತು ವ್ಯಾವಸಾಯಿಕ ಸಾಲವನ್ನು ೫ ನಿರ್ಧಿಷ್ಟ ಅಲ್ಪಸಂಖ್ಯತರಿಗೆ ಧಾರೆ ಎರೆಯುವಾಗ ಅವುಗಳಲ್ಲಿನ ಒಂದೇ ಒಂದು ವಿದ್ಯಾರ್ಥಿವೇತನ ಅಥವಾ ಅದರಲ್ಲಿನ ಒಂದು ರೂಪಾಯಿಯನ್ನೂ ಬಡ ಹಿಂದೂ ವಿದ್ಯಾರ್ಥಿಗಳಿಗೆ ಏಕೆ ನಿರಾಕರಿಸಿದರು ? ನ್ಯಾಯಾಧೀಶ ಸಚ್ಚರ್, ಆಗಿನ ವಿದೇಶಮಂತ್ರಿಗಳಾದ ಸಲ್ಮಾನ ಖುರ್ಶೀದ, ಆಗಿನ ಅಲ್ಪಸಂಖ್ಯತ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯ ಇವರೆಲ್ಲರೂ ಜನರಿಗೆ ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡುವುದು ಆವಶ್ಯಕವಾಗಿದೆ !
೧೬ ಪ್ರಶ್ನೆಗಳು – ನ್ಯಾಯಮೂರ್ತಿ ಸಚ್ಚರ್, ಸಲ್ಮಾನ ಖುರ್ಶೀದ ಮತ್ತು ರಾಷ್ಟ್ರೀಯ ಸಲಹಾಗಾರ ಸಮಿತಿಯ ವಿಶೇಷ ಸದಸ್ಯರಿಗೆ ಈ ಪ್ರಶ್ನೆಗಳ ಉತ್ತರಗಳನ್ನು ಕೊಡಲೇ ಬೇಕಾಗುವುದು !
೧. ನ್ಯಾಯಮೂರ್ತಿ ಸಚ್ಚರ್ ಇವರು ಕಾಗದಪತ್ರಗಳಲ್ಲಿನ (ಪುರಾವೆಗಳಲ್ಲಿನ) ಸತ್ಯಗಳನ್ನು ಏಕೆ ದುರ್ಲಕ್ಷಿಸಿದರು ?
೧೯೯೮ ರಲ್ಲಿ ಸಿದ್ಧವಾಗಿರುವ ‘ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ – ೨ ರಲ್ಲಿ ನಮೂದಿಸಿದಂತೆ ‘ಭ್ರೂಣ ಮತ್ತು ಬಾಲ ಮೃತ್ಯುವಿನ ಘಟನೆಗಳು, ಪೌರತ್ವದ ಸ್ತರ, ಅಪೇಕ್ಷಿತ ಜೀವಿತ ಜನನದ ಪ್ರಮಾಣ ಈ ೪ ಮಹತ್ವಪೂರ್ಣ ನಿರ್ದೇಶಾಂಕಗಳಲ್ಲಿ ಮುಸಲ್ಮಾನರ ಸ್ಥಿತಿಯು ಹಿಂದೂಗಳಿಗಿಂತ ಹೆಚ್ಚು ಚೆನ್ನಾಗಿದೆ, ಎನ್ನುವ ದಾಖಲೆಯ ಕಾಗದಪತ್ರಗಳಲ್ಲಿರುವ ಸತ್ಯವನ್ನು ನ್ಯಾಯಾಧೀಶ ಸಚ್ಚರ್‌ರು ಏಕೆ ದುರ್ಲಕ್ಷಿಸಿದರು ?
೧೯೯೮ – ೧೯೯೯ ರ ಕಾಲಾವಧಿಯಲ್ಲಿ ಮುಸಲ್ಮಾನರ ಭ್ರೂಣ ಮತ್ತು ಬಾಲಮೃತ್ಯುವಿನ ಸರಾಸರಿ ಸಂಖ್ಯೆಯು ಹಿಂದೂಗಳ ತುಲನೆಯಲ್ಲಿ ಕಡಿಮೆಯಿತ್ತು. ಸುಮಾರು ೧೫ ವರ್ಷಗಳ ಹಿಂದೆ ಮುಸಲ್ಮಾನರ ಸರಾಸರಿ ಆಯುಷ್ಯ ಸ್ವಲ್ಪ ಪ್ರಮಾಣದಲ್ಲಿ ಹಿಂದೂಗಳ ಸರಾಸರಿ ಆಯುಷ್ಯಕ್ಕಿಂತ ಹೆಚ್ಚಿತ್ತು. ಇದರಿಂದ ಮಸಲ್ಮಾನರಿಗೆ ಉತ್ತಮ ಪೋಷಣೆ ಸಿಗುತ್ತಿರುವುದು ಕಂಡು ಬರುತ್ತದೆ.
೨. ಮುಸಲ್ಮಾನರು ಹಿಂದೂಗಳಿಗಿಂತ ಒಳ್ಳೆಯ ಸ್ಥಿತಿಯಲ್ಲಿರುವಂತಹ ದಾಖಲೆಗಳನ್ನು ಏಕೆ ದುರ್ಲಕ್ಷಿಸಲಾಯಿತು ?
೧೯೯೮-೧೯೯೯ ರಲ್ಲಿ ಹಿಂದೂಗಳಿಗಿಂತ ಮುಸಲ್ಮಾನರ ಸರಾಸರಿ ಆಯುಷ್ಯ ೧ ವರ್ಷ ೨ ತಿಂಗಳುಗಳಷ್ಟು ಹೆಚ್ಚಿತ್ತು. ಎರಡೂ ಸಮಾಜಗಳ ಸರಾಸರಿಯಲ್ಲಿ ಹಿಂದೂಗಳ ವಯಸ್ಸು ೬೧ ವರ್ಷ ೪ ತಿಂಗಳು ಮತ್ತು ಮುಸಲ್ಮಾನರ ವಯಸ್ಸು ೬೨ ವರ್ಷ ೬ ತಿಂಗಳಿತ್ತು. ‘ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೇಕ್ಷಣೆ -೩ (೨೦೦೫-೦೬) ಕ್ಕನುಸಾರ, ೭ ವರ್ಷಗಳ ಕಾಲಾವಧಿಯಲ್ಲಿ ಮುಸಲ್ಮಾನರ ಅಪೇಕ್ಷಿತ ಆಯುಷ್ಯ ೫ ವರ್ಷ ೪ ತಿಂಗಳಷ್ಟು ಹೆಚ್ಚಾಯಿತು, ಅಂದರೆ ೬೮ ವರ್ಷವಾಯಿತು, ಆ ತುಲನೆಯಲ್ಲಿ ಹಿಂದೂಗಳ ಅಪೇಕ್ಷಿತ ಆಯುಷ್ಯ ಕೇವಲ ೩ ವರ್ಷ ೬ ತಿಂಗಳು ಅಂದರೆ ೬೧ ವರ್ಷ ೪ ತಿಂಗಳುಗಳಿಂದ ೬೫ ರಷ್ಟಾಯಿತು. ಇದು ಹೇಗಾಯಿತು ? ಈ ಒಂದು ವಾಸ್ತವಿಕತೆಯಿಂದಲೇ ಆ ಕಾಲಾವಧಿಯಲ್ಲಿ ಮುಸಲ್ಮಾನರ ಪೋಷಣೆ ಹಿಂದೂಗಳಿಗಿಂತ ಹೆಚ್ಚು ಉತ್ತಮ ರೀತಿಯಲ್ಲಿ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸಾರ್ವಜನಿಕ ರೀತಿಯಲ್ಲಿ ಉಪಲಬ್ಧವಿರುವ ಕಾಗದಪತ್ರಗಳಲ್ಲಿನ ಮಾಹಿತಿಯಿಂದ ‘ಮುಸಲ್ಮಾನರು ಹಿಂದೂಗಳಿಗಿಂತ ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಎಂದು ತಿಳಿದಿದ್ದರೂ ನ್ಯಾಯಾಧೀಶ ಸಚ್ಚರ್ ಮತ್ತು ಸಲ್ಮಾನ ಖುರ್ಶೀದ ಇವರು ಈ ಕಾಗದಪತ್ರಗಳನ್ನು ಏಕೆ ದುರ್ಲಕ್ಷಿಸಿದರು ? ಬಹುಸಂಖ್ಯತ ಸಮಾಜದಲ್ಲಿನ ಬಡವರಲ್ಲಿನ ಬಡವರನ್ನು ೨೦ ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನದಿಂದ ಉದ್ದೇಶಪೂರ್ವಕ ವಂಚಿತರನ್ನಾಗಿಸುವುದರ ಹಿಂದಿನ ಯೋಗ್ಯ ಕಾರಣವನ್ನು ಸ್ಪಷ್ಟಪಡಿಸಿ ಅವರು ತಮ್ಮ ಭೂಮಿಕೆಯನ್ನು ಮಂಡಿಸಬೇಕು.
೩. ನ್ಯಾಯಾಧೀಶ ಸಚ್ಚರ್‌ರು ವಿಕಾಸಶೀಲ ಸಮಾಜದ ಅಧ್ಯಯನ ಕೇಂದ್ರವು ಕೈಗೊಡಿರುವ ಸರ್ವೇಕ್ಷಣೆಯ ಆಧಾರದಲ್ಲಿನ ಮಹತ್ವಪೂರ್ಣ ಸತ್ಯವನ್ನು ಏಕೆ ಬಿಟ್ಟರು ?
ನ್ಯಾಯಾಧೀಶ ಸಚ್ಚರ್‌ರು ಇಷ್ಟು ತತ್ಪರತೆಯಿಂದ ಪ್ರಾಧ್ಯಾಪಕ ಡಾ. ಸಂಜಯ ಕುಮಾರ ಇವರು ಸಲ್ಲಿಸಿದ ‘ಭಾರತದಲ್ಲಿನ ಮುಸಲ್ಮಾನರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಮತ್ತು ಜನಪ್ರಿಯ ಆಕಲನಶಕ್ತಿ ಈ ಪ್ರಬಂಧದಲ್ಲಿನ ನಿಷ್ಕರ್ಷವನ್ನು ಏಕೆ ದುರ್ಲಕ್ಷಿಸಿದರು ?, ಇದನ್ನು ಸ್ಪಷ್ಟಪಡಿಸುವುದು ಅವಶ್ಯಕವಾಗಿದೆ. ‘ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ೨ ಸಪ್ಟೆಂಬರ್ ೨೦೦೬ ರಂದು ಆಯೋಜಿಸಿದ ಚರ್ಚಾಕೂಟದಲ್ಲಿ ದೆಹಲಿಯಲ್ಲಿನ ಅಧ್ಯಯನಕೇಂದ್ರದ ಡಾ. ಸಂಜಯ ಕುಮಾರ ಇವರು ಸಲ್ಲಿಸಿದ ಪ್ರಬಂಧದಿಂದ ‘ಹಿಂದೂ ಮತ್ತು ಮುಸಲ್ಮಾನರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯಲ್ಲಿ ಅತ್ಯಲ್ಪ ವ್ಯತ್ಯಾಸವಿದೆ, ವಿದ್ವಾಂಸರ ಸಮ್ಮುಖದಲ್ಲಿ ಸಲ್ಲಿಸಿದ ಈ ಸಮೀಕ್ಷೆಯನ್ನು ಆಧರಿಸಿರುವ ಶೋಧಪ್ರಬಂಧದಿಂದ ಪ್ರಾಧ್ಯಾಪಕ ಡಾ. ಸಂಜಯ ಕುಮಾರ ಇವರು ಈ ಮೇಲಿನ ವಿಷಯವನ್ನು ದೃಢವಾಗಿ ಹೇಳಿದ್ದರು. ದೆಹಲಿ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರು ವಿಕಾಸಶೀಲ /ವಿಕಸನಶೀಲ ಸಮಾಜದ ಅಧ್ಯಯನ ಕೇಂದ್ರದ ವತಿಯಿಂದ ಕೈಗೊಂಡಿರುವ ಸಮೀಕ್ಷೆಯನ್ನು ಆಧರಿಸಿದ ಈ ಮಹತ್ವಪೂರ್ಣ ಮೇಲಿನ ಸತ್ಯವನ್ನು ಆ ವರದಿಯಿಂದ ಏಕೆ ಬಿಡಲಾಯಿತು ?
೪. ‘ಹಿಂದೂಗಳಲ್ಲಿನ ಅತೀ ಬಡ ಜನರ ಪ್ರಮಾಣ ಮುಸಲ್ಮಾನರಿಗಿಂತ ಹೆಚ್ಚಿರುವುದನ್ನು ನ್ಯಾಯಾಧೀಶ ಸಚ್ಚರ್‌ರು ಏಕೆ ದುರ್ಲಕ್ಷಿಸಿದರು ?
ಪ್ರಾಧ್ಯಾಪಕ ಡಾ. ಸಂಜಯ ಕುಮಾರ ಇವರ ಆಳವಾದ ಸಂಶೋಧನೆಯಲ್ಲಿ ಇನ್ನೂ ಒಂದು ಮಹತ್ವದ ನಿಷ್ಕರ್ಷವೆಂದರೆ, ‘ಹಿಂದೂಗಳಲ್ಲಿನ ಅತೀ ಬಡವರ ಪ್ರಮಾಣವು ಮುಸಲ್ಮಾನರಿಗಿಂತ ಹೆಚ್ಚಿತ್ತು ಈ ನಿಷ್ಕರ್ಷವನ್ನು ನ್ಯಾಯಮೂರ್ತಿ ಸಚ್ಚರ್‌ರು ಏಕೆ ದುರ್ಲಕ್ಷಿಸಿದರು ? ನ್ಯಾಯಾಧೀಶ ಸಚ್ಚರರ ವರದಿಯಲ್ಲಿನ ೩೭ ಮತ್ತು ೩೮ ನೇ ಪುಟದಲ್ಲಿ ಹೇಳಿರುವಂತೆ ಅವರು ಈ ಸತ್ಯವನ್ನು ಸ್ವೀಕರಿಸಿದ ನಂತರ ಅದರ ಸಂಬಂಧವನ್ನು ಮಸಲ್ಮಾನರ ಹೆಚ್ಚು ಒಳ್ಳೆಯ ಬಾಲಪೋಷಣೆಯೊಂದಿಗೆ ಏಕೆ ಜೋಡಿಸಿದರು ?
೫. ಹಿಂದೂಗಳ ತುಲನೆಯಲ್ಲಿ ಮುಸಲ್ಮಾನರ ಅಪೇಕ್ಷಿತ ಆಯುಷ್ಯ ವೃದ್ಧಿಯಾಗಿದ್ದರೂ ಸಚ್ಚರ್ ಮತ್ತು ಸಲ್ಮಾನ ಖರ್ಶೀದ ಇವರು ಅದನ್ನು ಏಕೆ ದುರ್ಲಕ್ಷಿಸಿದರು ?
ಅಕ್ಟೋಬರ್ ೨೦೧೦ ರಲ್ಲಿ ‘ರಾಷ್ಟ್ರೀಯ ಆರೋಗ್ಯ ಸಮೀಕ್ಷೆ-೩ (೨೦೦೫-೨೦೦೬) ರ ವರದಿಯಿಂದ ಒಂದು ಆಘಾತಕಾರಿ ವಿಷಯವು ಬೆಳಕಿಗೆ ಬಂದಿತು, ಅದೇನೆಂದರೆ, ಹಿಂದೂಗಳ ತುಲನೆಯಲ್ಲಿ ಮುಸಲ್ಮಾನರ ಅಪೇಕ್ಷಿತ ಆಯುಷ್ಯದಲ್ಲಿ ಕೇವಲ ೭ ವರ್ಷಗಳಷ್ಟು ಕಡಿಮೆ ಕಾಲಾವಧಿಯಲ್ಲಿ ಅಂದರೆ ೧೯೯೮ ರಿಂದ ೨೦೦೫ ಈ ಕಾಲಾವಧಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ವೃದ್ಧಿಯಾಗಿದೆ. ಈ ಯೋಗ್ಯ ಮಾಹಿತಿಯ ಆಧಾರದಲ್ಲಿ ಉನ್ನತ ಮಟ್ಟದ ಸಮಿತಿಯ ನಿಷ್ಕರ್ಷಗಳ ಖಂಡನೆಯಾಗಿದ್ದರೂ ನ್ಯಾಯಾಧೀಶ ಸಚ್ಚರ್ ಮತ್ತು ಸಲ್ಮಾನ ಖರ್ಶೀದ ಇವರು ಅದನ್ನು ಏಕೆ ದುರ್ಲಕ್ಷಿಸಿದರು ? ‘ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-೩ ರ ಮೂಲಕ ಮುಸಲ್ಮಾನರ ಅಪೇಕ್ಷಿತ ಆಯುಷ್ಯದಲ್ಲಿ ೫ ವರ್ಷ ೪ ತಿಂಗಳು, ಇಂತಹ ಆಶ್ಚರ್ಯಕರ ಹೆಚ್ಚಳವಾಯಿತು. ನ್ಯಾಯಾಧೀಶ ಸಚ್ಚರ್ ಇವರು ತಮ್ಮ ಸವಿಸ್ತಾರ ವರದಿಯಲ್ಲಿ ಮುಸಲ್ಮಾನರ ಹಾನಿಯ ಭೂತವನ್ನು ತೋರಿಸುವ ಕಾರಣವೇನು ? ಎಂಬುದರ ಸ್ಪಷ್ಟೀಕರಣವು ಸಿಗಲೇಬೇಕು.ಅವರಿಂದ ಮಾಡಲಾದ ಈ ಸುಳ್ಳು ಶೋಧನೆಗಳಿಂದ ಜಿಹಾದಿ ಮೂಲಭೂತವಾದಿ ಗಳಿಗೆ ಆವಶ್ಯಕವಿರುವ ಪ್ರಾಣವಾಯು ಮತ್ತು ಮುಸಲ್ಮಾನರಲ್ಲಿ ಕ್ರೋಧ ನಿರ್ಮಾಣ ಮಾಡುವ ಈ ಪಾಕ್‌ಪುರಸ್ಕೃತ ಉಗ್ರವಾದಿಗಳಿಗೆ ಪ್ರೋತ್ಸಾಹ ಸಿಗಲಿದೆ ಎಂಬುದು ಸಚ್ಚರ್ ಇವರಿಗೆ ಏಕೆ ತಿಳಿಯಲಿಲ್ಲ ?
೬.‘ಮುಸಲ್ಮಾನರ ಪಾಲನೆಪೋಷಣೆಯು ಹೆಚ್ಚು ಒಳ್ಳೆಯ ರೀತಿಯಲ್ಲಿ ಆಗುವುದಿಲ್ಲ, ಎಂಬುದರ ಶೋಧವನ್ನು ಏಕೆ ಮಾಡಲಾಯಿತು ?
ಮಾನವ ವಿಕಾಸ ನಿರ್ದೇಶಾಂಕಗಳಲ್ಲಿ ಭ್ರೂಣ ಮೃತ್ಯು, ಬಾಲಮೃತ್ಯು ಮತ್ತು ಅಪೇಕ್ಷಿತ ಜೀವಿತ ಜನ್ಮದರದ ವಿಷಯದಲ್ಲಿ ‘ಹಿಂದೂಗಳಿಗಿಂತ ಮುಸಲ್ಮಾನರ ಸ್ಥಿತಿ ಹೆಚ್ಚು ಚೆನ್ನಾಗಿದೆ ಎಂದು ಅವರ ವರದಿಯಲ್ಲಿ ಸ್ವೀಕರಿಸಲಾಯಿತು. ಅನಂತರ ನ್ಯಾಯಾಧೀಶ ಸಚ್ಚರ್‌ರು ‘ಮುಸಲ್ಮಾನರ ಪಾಲನೆಪೋಷಣೆ ಹೆಚ್ಚು ಒಳ್ಳೆಯ ರೀತಿಯಲ್ಲಿ ಆಗುವುದಿಲ್ಲ, ಎಂಬುದರ ಶೋಧವನ್ನು ಏಕೆ ಮಾಡಲಾಯಿತು ? ಜಾಗತಿಕ ಸ್ತರದಲ್ಲಿನ ಅರ್ಥತಜ್ಞರು ಹಾಗೂ ಜಾಗತಿಕ ಅರೋಗ್ಯ ಸಂಘಟನೆಯು ಮನ್ನಣೆ ನೀಡಿರುವ ಸತ್ಯವನ್ನು ಅವರು ಸಹಜವಾಗಿ ಸ್ವೀಕರಿಸಬಹುದಿತ್ತು.
೭. ಸಂಶೋಧಕ ರಾಜೇಶ ಶುಕ್ಲಾರವರ ಪ್ರಬಂಧದಲ್ಲಿನ ನಿರ್ಣಯವನ್ನು ಏಕೆ ದುರ್ಲಕ್ಷಿಸಿದರು ?
ರಾಷ್ಟ್ರೀಯ ಪ್ರಯುಕ್ತ ಸಂಶೋಧನ ಮಹಾಮಂಡಳದ ಸಂಶೋಧಕರಾದ ರಾಜೇಶ ಶುಕ್ಲಾ ಇವರ ಸರ್ವೇಕ್ಷಣದಿಂದ ಸಿದ್ಧವಾಗಿರುವುದೇನೆಂದರೆ, ಹಿಂದೂ ಮತ್ತು ಮುಸಲ್ಮಾನರ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲ. ಮುಸಲ್ಮಾನರ ತಥಾಕಥಿತ ಹಾನಿಯ ಇನ್ನೊಂದು ಖಂಡನೆಯು ಎಪ್ರಿಲ್ ೨೦೦೭ ರಲ್ಲಿ ಪ್ರಸಿದ್ಧವಾಯಿತು. ‘ಇಕನಾಮಿಕ್ಸ್ ಟೈಮ್ಸ್‌ಸಹಿತ ಹೆಚ್ಚಿನ ಎಲ್ಲ ದಿನಪತ್ರಿಕೆಗಳಲ್ಲಿ ಪ್ರಸಿದ್ಧವಾಗಿರುವ ರಾಜೇಶ ಶುಕ್ಲಾ ಇವರ ಈ ವಿಷಯದಲ್ಲಿನ ಪ್ರಬಂಧದ ನಿಷ್ಕರ್ಷವನ್ನು ನ್ಯಾಯಾಧೀಶ ಸಚ್ಚರ್, ಸಲ್ಮಾನ ಖುರ್ಶೀದ ಮತ್ತು ರಾಷ್ಟ್ರೀಯ ಸಲಹಾ ಸಮಿತಿ ಇವರು ಏಕೆ ದುರ್ಲಕ್ಷಿಸಿದರು ?
೮. ಹಿಂದೂಗಳೊಂದಿಗೆ ವಿವಿಧ ಮಾರ್ಗಗಳಿಂದ ಮಲತಾಯಿಯಂತೆ ವರ್ತಿಸುವ ಪ್ರಮಾಣವು ನಿರಂತರವಾಗಿ ಏಕೆ ಹೆಚ್ಚುತ್ತಲೇ ಹೋಯಿತು ?
ಸಚ್ಚರ್ ಸಮಿತಿಯ ಸುಳ್ಳು ಪ್ರಸಾರದ ಇನ್ನೊಂದು ಪ್ರಬಲವಾದ ಖಂಡನೆಯನ್ನು ೨೪-೨೫ ಅಕ್ಟೋಬರ್ ೨೦೧೧ ರಂದು ಮಾಡಲಾಯಿತು. ಸಂಯುಕ್ತ ರಾಷ್ಟ್ರ ವಿಕಾಸ ಕಾರ್ಯಕ್ರಮ ಮತ್ತು ಭಾರತೀಯ ನಿಯೋಜನ ಮಂಡಳದವರು ನವ ದೆಹಲಿಯಲ್ಲಿ ಸಂಯುಕ್ತ ರೀತಿಯಲ್ಲಿ ಆಯೋಜಿಸಿದ ಚರ್ಚಾಕೂಟದಲ್ಲಿ ಜವಾಹರಲಾಲ ನೆಹರು ವಿದ್ಯಾಪೀಠದ ಸುಖದೇವ ಥೊರಾತ್ ಮತ್ತು ಅಮರೇಶ ಪಾಂಡೇಯ ಈ ವಿದ್ಯಾರ್ಥಿಗಳು ಅವರ ಪ್ರಬಂಧಗಳನ್ನು ಮಂಡಿಸಿದರು. ‘ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ – ೩ (೨೦೦೫-೦೬)ರ ವರದಿಯಿಂದ ಮುಸಲ್ಮಾನರ ಅಪೇಕ್ಷಿತ ಜೀವನಶೈಲಿಯು ಸುಧಾರಣೆಯಾಗಿರುವ ನಿಷ್ಕರ್ಷಕ್ಕೆ ಪುಷ್ಟೀಕರಣ ಸಿಕ್ಕಿತು. ಈ ವರದಿಯ ಪರಿಣಾಮವು ಸ್ಪಷ್ಟವಾದ ನಂತರವೂ ಬಡಹಿಂದೂಗಳಿಗೆ ವಿದ್ಯಾರ್ಥಿವೇತನ ಮತ್ತು ಕಡಿಮೆ ಬಡ್ಡಿಯ ಸಾಲ ನೀಡುವ ವಿಷಯದಲ್ಲಿ ವಿವಿಧ ಮಾರ್ಗದಲ್ಲಿ ಮಲತಾಯಿಧೋರಣೆಯು ಹೆಚ್ಚುತ್ತಾ ಹೋಗಲು ಕಾರಣವೇನು ?, ಈಗ ನ್ಯಾಯಾಧೀಶ ಸಚ್ಚರ್ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯ ಶ್ರೀಮಂತ ಸದಸ್ಯರು ಇದಕ್ಕೆ ಸ್ಪಷ್ಟೀಕರಣವನ್ನು ನೀಡುವ ಸಮಯ ಬಂದಿದೆ !
೯. ದೇಶದಲ್ಲಿನ ೧೩ ರಾಜ್ಯಗಳಲ್ಲಿ ಮುಸಲ್ಮಾನರ ಒಟ್ಟು ಸಾಕ್ಷರತೆಯು ಹೆಚ್ಚು ಪ್ರಮಾಣದಲ್ಲಿರುವಾಗಲೂ ಬಡ ಹಿಂದೂಗಳಿಗೆ ವಿದ್ಯಾರ್ಥಿವೇತನ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ನಿರ್ಬಂಧವನ್ನು ಏಕೆ ಹೇರಿದರು ?
ನ್ಯಾಯಾಧೀಶ ಸಚ್ಚರರು ತಮ್ಮ ವರದಿಯಲ್ಲಿ ೨೦೦೧ ರ ಜನಗಣನೆಗನುಸಾರ ಗುಜರಾತ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ದಾದರಾ ಮತ್ತು ನಗರ ಹವೇಲಿ, ಪುದುಚ್ಚೇರಿ, ಅಂಡಮಾನ ಮತ್ತು ನಿಕೋಬಾರ್ ಸಹಿತ ಸಮಾವೇಶವಿರುವ ೧೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಸಲ್ಮಾನರ ಒಟ್ಟು ಸಾಕ್ಷರತೆಯ ಪ್ರಮಾಣ ಹಿಂದೂಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿದೆ. ಆದರೂ ಈ ೧೩ ರಾಜ್ಯಗಳಲ್ಲಿನ ಮುಸಲ್ಮಾನರಿಗೆ ಲಕ್ಷಗಟ್ಟಲೆ ರೂಪಾಯಿಗಳ ವಿದ್ಯಾರ್ಥಿವೇತನ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಯಿತು; ಆದರೆ ಆ ರಾಜ್ಯಗಳಲ್ಲಿನ ಬಡ ಹಿಂದೂ ಕುಟುಂಬಗಳಿಗೆ (ವಿದ್ಯಾರ್ಥಿಗಳಿಗೆ) ವಿದ್ಯಾರ್ಥಿವೇತನ ಅಥವಾ ಕಡಿಮೆ ಬಡ್ಡಿದರದ ಶೈಕ್ಷಣಿಕ ಸಾಲವನ್ನು ನೀಡಲಾಗಲಿಲ್ಲ. ಸಲ್ಮಾನ ಖುರ್ಶೀದ ಮತ್ತು ರಾಷ್ಟ್ರೀಯ ಸಲಹಾಗಾರ ಸಮಿತಿಯು ೧೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಬಡ ಹಿಂದೂಗಳಿಗೆ ವಿದ್ಯಾರ್ಥಿ ವೇತನ ಮತ್ತು ಕಡಿಮೆ ಬಡ್ಡಿ ದರದ ಸಾಲ ನೀಡದಿರಲು ಕಾರಣವೇನು ?
೧೦. ದೇಶದಲ್ಲಿನ ಆ ೧೩ ರಾಜ್ಯಗಳಲ್ಲಿನ ಒಬ್ಬ ಹಿಂದೂ ಹುಡುಗಿಗೂ ವಿದ್ಯಾರ್ಥಿವೇತನ ಅಥವಾ ಶೈಕ್ಷಣಿಕ ಸಾಲವನ್ನು ಏಕೆ ಕೊಡಲಿಲ್ಲ ?
ದೇಶದ ೧೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂ ಮಹಿಳೆಯರ ಸಾಕ್ಷರತೆಯ ದರವು ಮುಸಲ್ಮಾನ ಮಹಿಳೆಯರಿಗಿಂತ ಕಡಿಮೆಯಿದೆ. ಹೀಗಿದ್ದರೂ ಒಬ್ಬ ಹಿಂದೂ ಹುಡುಗಿಗೂ ವಿದ್ಯಾರ್ಥಿವೇತನ ಅಥವಾ ಶೈಕ್ಷಣಿಕ ಸಾಲವನ್ನು ಏಕೆ ಕೊಡಲಿಲ್ಲ ? ಇದಕ್ಕೆ ಸಂಬಂಧಿಸಿದಂತೆ ಒಟ್ಟು ಸಾಕ್ಷರತೆಯಲ್ಲಿ ಪುರುಷ ಮತ್ತು ಮಹಿಳೆಯರ ಸಾಕ್ಷರತೆಯ ತುಲನಾತ್ಮಕ ಮಾಹಿತಿಯನ್ನು ೨೦೦೧ ರ ಜನಗಣನೆಯ ಧರ್ಮಾಧಾರಿತ ವರದಿಯಲ್ಲಿ ನೀಡಲಾಗಿದೆ.
೧೧. ನ್ಯಾಯಾಧೀಶ ಸಚ್ಚರ್ ಇವರು ‘ಮುಸಲ್ಮಾನ ಸಮಾಜವು ಭಾರತದಲ್ಲಿನ ಎಲ್ಲಕ್ಕಿಂತ ಹೆಚ್ಚು ಬಡವ ಹಾಗೂ ವಂಚಿತ ಸಮಾಜವಾಗಿದೆ ಎನ್ನುವ ತೊಡಕಿನ ನಿಷ್ಕರ್ಷವನ್ನು ಯಾವ ಆಧಾರದ ಮೇಲೆ ಒಪ್ಪಿಕೊಂಡರು ?
೨೪ ಫೆಬ್ರವರಿ ೨೦೧೧ ರಂದು ಲೋಕಸಭೆಯಲ್ಲಿ ಒಂದು ಪ್ರಶ್ನೆಗೆ ಉತ್ತರವನ್ನು ಕೊಡುವಾಗ ಅಲ್ಪಸಂಖ್ಯತ ಸಚಿವಾಲಯದ ರಾಜ್ಯಮಂತ್ರಿ ವಿನ್ಸೆಂಟ್ ಎಚ್. ಪಾಲಾರವರು ಕೇಂದ್ರ ಸರಕಾರವು ಧಾರ್ಮಿಕತೆಯ ಪ್ರಮಾಣಕ್ಕನುಸಾರ ಬಡತನರೇಖೆಯ ಕೆಳಗಿನ ಜನಸಂಖ್ಯೆಯ ಸಂದರ್ಭದಲ್ಲಿ ಯಾವುದೇ ಮಾಹಿತಿಯ ನೊಂದಣಿಯನ್ನು ಇಟ್ಟಿಲ್ಲ. ಒಂದು ವೇಳೆ ಫೆಬ್ರವರಿ ೨೦೧೧ ರಲ್ಲಿ ಇಂತಹ ಯಾವುದೇ ಮಾಹಿತಿಯು ಸರಕಾರದ ಕಡೆಗೆ ಉಪಲಬ್ಧ ಇಲ್ಲವಾಗಿದ್ದರೆ, ನ್ಯಾಯಾಧೀಶ ಸಚ್ಚರ್ ಇವರ ಅಧ್ಯಕ್ಷತೆಯಲ್ಲಿನ ಉನ್ನತ ಸಮಿತಿಯು ಸಲ್ಲಿಸಿದ ವರದಿಯಲ್ಲಿ ನಮೂದಿಸಿದಂತೆ ೪ ವರ್ಷಗಳ ಮೊದಲೇ ಅಂದರೆ ೨೦೦೭ ರಲ್ಲಿ ‘ಮುಸಲ್ಮಾನ ಸಮಾಜ ಭಾರತದಲ್ಲಿನ ಅತೀ ಬಡವ ಹಾಗೂ ವಂಚಿತ ಸಮಾಜವಾಗಿದೆ ಎಂಬ ನಿಷ್ಕರ್ಷವನ್ನು ಯಾವ ಆಧಾರದಲ್ಲಿ ನೀಡಿದ್ದಾರೆ ?
೧೨. ಅಲ್ಪಸಂಖ್ಯತ ಸಮಾಜದಲ್ಲಿನ ಬಡವರಿಗೆ ಸಂವಿಧಾನದ ಯಾವ ಪರಿಚ್ಛೇದಕ್ಕನುಸಾರ ವಿದ್ಯಾರ್ಥಿ ವೇತನದ ಪಾಲನ್ನು ನೀಡಲಾಗಿದೆ ?
‘೨೦ ಕೋಟಿ ರೂಪಾಯಿಗಳಲ್ಲಿನ ವಿದ್ಯಾರ್ಥಿವೇತವನ್ನು ಬಡ ಹಿಂದೂಗಳನ್ನು ಬಿಟ್ಟು, ಅದನ್ನು ಕೇವಲ ೫ ಅಲ್ಪಸಂಖ್ಯತ ಸಮಾಜದ ಬಡವರಿಗೇ ಮಾತ್ರ ಕೊಡಬೇಕು, ಎಂದು ಭಾರತದ ಸಂವಿಧಾನದ ಯಾವ ಪರಿಚ್ಛೇದದಲ್ಲಿ ನಮೂದಿಸಲಾಗಿದೆ ?, ಎಂಬುದರ ಸ್ಪಷ್ಟೀಕರಣವನ್ನು ಸಲ್ಮಾನ ಖುರ್ಶೀದ ಮತ್ತು ರಾಷ್ಟ್ರೀಯ ಸಲಹಾ ಸಮಿತಿ ನೀಡಬೇಕು.
೧೩. ಹಿಂದೂ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೈಕಲ ಕೊಡುವುದನ್ನು ಏಕೆ ತಡೆಯಲಾಯಿತು ?
ಆಗಿನ ಹಣಕಾಸು ಸಚಿವ ಶ್ರೀ. ಪ್ರಣವ ಮುಖರ್ಜಿ ಇವರು ೨೦೧೨ ರಲ್ಲಿ ಮಂಡಿಸಿದ ಮುಂಗಡಪತ್ರದಲ್ಲಿ ಅಲ್ಪಸಂಖ್ಯತ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸ್ಸಿಗನುಸಾರ ೫ ಅಲ್ಪಸಂಖ್ಯತ ಸಮಾಜದ ೯ ನೇಯ ಮತ್ತು ಅದರ ಮೇಲಿನ ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೈಕಲ್ ಗಳನ್ನು ಪೂರೈಸಲು ೪ ಕೋಟಿ ೫೦ ಲಕ್ಷ ರೂಪಾಯಿಗಳ ವ್ಯವಸ್ಥೆ ಮಾಡಿದ್ದರು. ‘ಕೇವಲ ಒಂದು ಸಮಾಜದ, ಅಂದರೆ ಹಿಂದೂ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೈಕಲ್ ಕೊಡುವುದನ್ನು ಏಕೆ ಸ್ಥಗಿತಗೊಳಿಸಲಾಯಿತು ? ಎಂಬುದಕ್ಕೆ ಸಲ್ಮಾನ ಖುರ್ಶೀದ ಇವರು ಉತ್ತರ ಕೊಡಬೇಕು.
೧೪. ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಇಚ್ಛಿಸುವ ಕೇವಲ ಹಿಂದೂ ವಿದ್ಯಾರ್ಥಿಗಳ ಸಾಲದ ಬಡ್ಡಿಯ ದರದ ವಿಷಯದಲ್ಲಿ ಭೇದಭಾವ ಏಕೆ ?
ರಾಷ್ಟ್ರೀಯ ಸಲಹಾ ಸಮಿತಿಯ ಶಿಫಾರಸ್ಸಿಗನುಸಾರ ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ೫ ಅಲ್ಪಸಂಖ್ಯತ ಸಮಾಜದಲ್ಲಿನ ವಿದ್ಯಾರ್ಥಿಗಳಿಗೆ ಸಾಲದ ಬಡ್ಡಿಯ ದರವನ್ನು ಕಡಿಮೆ ಮಾಡಲು ವಿಶೇಷ ಯೋಜನೆಯನ್ನು ಮಂಡಿಸಲಾಯಿತು; ಆದರೆ ಯಾವುದೇ ಹಿಂದೂ ವಿದ್ಯಾರ್ಥಿ ಈ ವಿಶೇಷ ಅಧಿಕಾರಕ್ಕಾಗಿ ಅರ್ಹರಿಲ್ಲ. ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಇಚ್ಛಿಸುವ ಕೇವಲ ಹಿಂದೂ ವಿದ್ಯಾರ್ಥಿಗಳ ಮೇಲೆಯೆ ಈ ವಿಚಿತ್ರ ತಾರತಮ್ಯವನ್ನು ಏಕೆ ಮಾಡಲಾಯಿತು ?, ಎಂಬುದರ ಉತ್ತರವನ್ನು ರಾಷ್ಟ್ರೀಯ ಸಲಹಾ ಸಮಿತಿ ಮತ್ತು ಅಲ್ಪಸಂಖ್ಯತ ಕಲ್ಯಾಣಸಚಿವರು ನೀಡಲೇ ಬೇಕು.
೧೫. ‘ಪ್ರಸ್ತಾವಿತ ನೇತೃತ್ವ ತರಬೇತಿಯ ಲಾಭದಿಂದ ಹಿಂದೂ ಸಮಾಜದಲ್ಲಿನ ಮಹಿಳೆಯರನ್ನು ಏಕೆ ಬಿಡಲಾಯಿತು ?
ನವ ದೆಹಲಿಯಲ್ಲಿನ ‘ದ ಪಯೋನಿಯರ್ ಎಂಬ ನಿಯತಕಾಲಿಕೆಯಲ್ಲಿ ೬ ಜೂನ್ ೨೦೧೩ ರಂದು ಪ್ರಕಟವಾದ ಜಾಹೀರಾತಿನಲ್ಲಿ ‘ನಯೀ ರಾಹತ್ ಈ ಶೀರ್ಷಿಕೆಯಲ್ಲಿ ಹೊಸ ಯೋಜನೆ, ಅಲ್ಪಸಂಖ್ಯತ ಕಲ್ಯಾಣ ಸಚಿವಾಲಯದಿಂದ ಆರಂಭಿಸಲಾಯಿತು. ಅದರಲ್ಲಿ ೫ ಅಲ್ಪಸಂಖ್ಯತ ಸಮಾಜದಲ್ಲಿನ ಮಹಿಳೆಯರಿಗೆ ಸರಕಾರದ ಖರ್ಚಿನಲ್ಲಿ ‘ನೇತೃತ್ವ ವಿಕಾಸದ ತರಬೇತಿಯನ್ನು ನೀಡಲಿಕ್ಕಿತ್ತು. ಕೇವಲ ಒಂದು ಸಮಾಜದ ಅಂದರೆ ಹಿಂದೂ ಸಮಾಜದಲ್ಲಿನ ಮಹಿಳೆಯರನ್ನು ಈ ‘ಪ್ರಸ್ತಾಪಿತ ನೇತೃತ್ವ ತರಬೇತಿಯ ಲಾಭದಿಂದ ಏಕೆ ವಂಚಿಸಲಾಯಿತು, ಇದರ ಸ್ಪಷ್ಟೀಕರಣವನ್ನು ಅಲ್ಪಸಂಖ್ಯತ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರು ನೀಡಬೇಕು.
೧೬. ಕಡುಬಡತನವಿರುವ ಹಿಂದೂಗಳ ಶಿಕ್ಷಣದ ವಿಷಯದಲ್ಲಿ ಸಮಾನ ಅಧಿಕಾರವನ್ನು ಏಕೆ ನಿರಾಕರಿಸಲಾಯಿತು ?
ಎಲ್ಲಕ್ಕಿಂತ ಕೊನೆಗೆ, ಅಂದರೆ ಭಾರತೀಯ ಸಂವಿಧಾನದ ಯಾವ ನಿಯಮದಲ್ಲಿ ಅಲ್ಪಸಂಖ್ಯತ ಸಮಾಜದಲ್ಲಿನ ಜನರ ‘ಮಾನವ ವಿಕಾಸ ನಿರ್ದೇಶಾಂಕ ಬಹುಸಂಖ್ಯತ ಸಮಾಜದ (ಹಿಂದೂ ಸಮಾಜ) ಅತೀ ಬಡ ಜನರಿಗಿಂತ ಹೆಚ್ಚು ಚೆನ್ನಾಗಿದ್ದರೂ ಅವರನ್ನು ‘ವಂಚಿತರು ಹಾಗೂ ಹಿಂದುಳಿದವರು ಎಂದು ಪರಿಗಣಿಸಲಾಗುವುದು ಎಂದು ಬರೆಯಲಾಗಿದೆ ? ನ್ಯಾಯಾಧೀಶ ಸಚ್ಚರ್, ಸಲ್ಮಾನ ಖುರ್ಶೀದ ಮತ್ತು ರಾಷ್ಟ್ರೀಯ ಸಲಹಾ ಸಮಿತಿ ಸಹಿತ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಗೊಳಿಸುತ್ತಾ ‘ಕಡುಬಡತನವಿರುವ ಹಿಂದೂಗಳ ಶಿಕ್ಷಣದ ವಿಷಯದಲ್ಲಿ ಸಮಾನ ಅಧಿಕಾರವನ್ನು ನಿರಾಕರಿಸಿರುವ ವಿಷಯದಲ್ಲಿ ಸ್ಪಷ್ಟೀಕರಣವನ್ನು ನೀಡಬೇಕು. ಯಾವುದೇ ಹಿಂದೂ ವಿದ್ಯಾರ್ಥಿ, ಬಡ ಬ್ರಾಹ್ಮಣ, ಕ್ಷತ್ರಿಯ, ಯಾದವ, ಬಡ ಜಾಟ್ ಅಥವಾ ಜಾಟವಾ ಹುಡುಗಿಯನ್ನು ಮತ್ತು ಬಡ ಲಿಂಗಾಯತ ವಿದ್ಯಾರ್ಥಿಯನ್ನು ಈ ೨೦ ಕೋಟಿ ರೂಪಾಯಿಗಳ ಉಚಿತ ವಿದ್ಯಾರ್ಥಿವೇತನದಲ್ಲಿ ಅರ್ಹರೆಂದು ಏಕೆ ಸ್ವೀಕರಿಸಲಿಲ್ಲ ? ಈ ಮೊತ್ತವನ್ನು ೫ ಪ್ರತಿಕೂಲ ಅಲ್ಪಸಂಖ್ಯತ ಸಮಾಜದ (ಮುಸಲ್ಮಾನ, ಕ್ರೈಸ್ತ, ಬೌದ್ಧ, ಪಾರಸಿ ಮತ್ತು ಸಿಕ್ಖ್) ಹುಡುಗ-ಹುಡುಗಿಯರಿಗೆ, ಅಂದರೆ ಭಾರತೀಯ ಜನಸಂಖ್ಯೆಯ ಶೇ. ೨೦ ರಷ್ಟು ಜನಸಂಖ್ಯೆಯ ಮೇಲೆ ಖರ್ಚು ಮಾಡಲಾಯಿತು. ಇದರ ಬಗ್ಗೆ ಹಿಂದೂಗಳು ತಮ್ಮ ರಾಜಕೀಯ ನೇತಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಘೋಷಿತ ಜಾತ್ಯತೀತವಾದಿಗಳಿಗೆ, ಪ್ರಶ್ನೆ ಮತ್ತು ಪ್ರತಿ ಪ್ರಶ್ನೆಗಳನ್ನು ಕೇಳಿ ಅವರ ಗುಟ್ಟು ಹೊರಬೀಳುವಂತೆ ಮಾಡಬೇಕು. (ಆಧಾರ : ಅಜ್ಞಾತ)