ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಘರ್ಷಣೆ ನಡೆದಿತ್ತು. ಹಾಗಾಗಿ ಪ್ರಸ್ತುತ ಎಲ್ಲಾ ಹಂತಗಳಲ್ಲಿ ಉದ್ವಿಗ್ನತೆಯ ವಾತಾವರಣವಿದೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಅಥವಾ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಟೀಕಿಸಿದ್ದಾರೆ. ಇಲ್ಲಿಯವರೆಗೆ, ರಾಹುಲ್ ಗಾಂಧಿ ಮಾಡಿದ ಅನೇಕ ಹೇಳಿಕೆಗಳನ್ನು ಬಾಲಿಶವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅವರ ಬಾಲ್ಯಶತನದಿಂದಲೂ ಮೋದಿ ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳು ಸ್ವಲ್ಪಮಟ್ಟಿಗೆ ಹೋಲುತ್ತವೆ. ‘ಇಷ್ಟು ದೊಡ್ಡ ಘರ್ಷಣೆಯದರೂ ಪ್ರಧಾನಿ ಏಕೆ ಶಾಂತವಾಗಿದ್ದಾರೆ ? ಅವರು ಏನು ಮರೆ ಮಾಚುತ್ತಿದ್ದಾರೆ ? ಏನಾಗಿದೆ ಎಂದು ತಿಳಿಯಲು ನಾವು ಬಯಸುತ್ತೇವೆ. ಚೀನಾ ನಮ್ಮ ಸೈನಿಕರನ್ನು ಕೊಲ್ಲಲು ಹೇಗೆ ಧೈರ್ಯ ಮಾಡಿತು ? ಚಕಮಕಿಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು; ಆದರೆ ಅವರನ್ನು ನಿರಾಯುಧವಾಗಿ ಕಳುಹಿಸಿದವರು ಯಾರು ?’, ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಕೇಳಿದ್ದಾರೆ. ಈ ಪ್ರಶ್ನೆಗಳನ್ನು ನೋಡುತ್ತಾ, ‘ದೇಶದ ರಕ್ಷಣೆಗೆ ಸಂಬಂಧಿಸಿದ ಗೌಪ್ಯ ಪ್ರಶ್ನೆಗಳನ್ನು ಸರಕಾರಕ್ಕೆ ಕೇಳಲಿಕ್ಕಿರುವುದಿಲ್ಲ’, ಇದು ಕಾಂಗ್ರೆಸ್ಸಿನ ದುರದೃಷ್ಟವೂ ಆಗಿದೆ. ಇದು ಬಹಿರಂಗ ರಾಷ್ಟ್ರಾಘಾತವಾಗಿದೆ. ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಬಿಜೆಪಿ ನಾಯಕ ಸಂಬಿತ್ ಪಾತ್ರ ಉತ್ತರಿಸಿದ್ದಾರೆ ! ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮಾಡಿದ ಒಪ್ಪಂದದ ಬಗ್ಗೆ ಗಾಂಧಿಯವರಿಗೆ ನೆನಪಿಸುತ್ತಾ, ‘ನೀವು ಕಲಿತ್ತಿಲ್ಲದಿದ್ದರೆ ಅಥವಾ ಏನೂ ತಿಳಿದಿಲ್ಲದಿದ್ದರೆ, ನೀವು ಲಾಕ್‌ಡೌನ್‌ನ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಕೆಲವು ಪುಸ್ತಕಗಳನ್ನು ಓದಬೇಕು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಚೀನಾದೊಂದಿಗೆ ಮಾಡಿಕೊಂಡ ಒಪ್ಪಂದಗಳ ಬಗ್ಗೆಯೂ ಓದಬೇಕು; ಈ ಒಪ್ಪಂದದ ಕಾರಣದಿಂದಾಗಿ, ಭಾರತ ಅಥವಾ ಚೀನಾ ಈ ಎರಡೂ ಬದಿಗಳಲ್ಲಿ ಯಾವುದೇ ಗುಂಡಿನ ದಾಳಿ ನಡೆಸುವುದಿಲ್ಲ ಅಥವಾ ಸ್ಫೋಟಕಗಳನ್ನು ಬಳಸವುದಿಲ್ಲ. ಅದೇ ರೀತಿ ಸೈನಿಕರೂ ಶಸ್ತ್ರಾಸ್ತ್ರಗಳನ್ನು ಹೊಂದಿರಲ್ಲ ಎಂಬುದರ ಬಗ್ಗೆ ಒಪ್ಪಲಾಯಿತು’, ಎಂದು ಹೇಳಿದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಇದೇ ರೀತಿ ರಾಹುಲ್ ಗಾಂಧಿಗೆ ಉತ್ತರ ನೀಡಿದರು. ಅಂದರೆ ಸೈನಿಕರು ಕಾಂಗ್ರೆಸ್ ಮಾಡಿದ ಒಪ್ಪಂದದಂತೆ ಹಾಕಿದ ಆದೇಶವನ್ನು ಪಾಲಿಸಿದ್ದಾರೆ’ ಎಂದು ಹೇಳ ಬೇಕಾಗಿದೆ. ಭಾರತ-ಚೀನಾ ಒಪ್ಪಂದದ ಬಗ್ಗೆ ಎಳ್ಳಷ್ಟೂ ಅಧ್ಯಯನ ಇಲ್ಲದಿದ್ದಾಗ ರಾಹುಲ್ ಗಾಂಧಿಯವರ ಪ್ರಶ್ನೆ ಮತ್ತು ಸಂದೇಹಗಳನ್ನು ನೋಡಿದಾಗ ಅವರ ಅಜ್ಞಾನಹೀನತೆಯು ತಿಳಿದು ಬರುತ್ತದೆ. ಸರಕಾರವನ್ನು ಟೀಕಿಸುವ ರಾಹುಲ್ ಗಾಂಧಿ ಅವರ ವೃತ್ತಿಪರವಲ್ಲದ ಹೇಳಿಕೆಗಳಿಗಾಗಿ ಪ್ರತಿ ಬಾರಿಯೂ ಟೀಕೆಗೆ ಗುರಿಯಾಗುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕು ! ಸಾಮಾನ್ಯ ತತ್ವವೆಂದರೆ, ನಾವು ಒಂದು ಬೆರಳಿನಿಂದ ಎದುರಿನವರಿಗೆ ಬೊಟ್ಟು ಮಾಡುವಾಗ ಉಳಿದ ೪ ಬೆರಳುಗಳು ನಮ್ಮತ್ತ ಇರುತ್ತವೆ; ಆದರೆ ರಾಹುಲ್ ಗಾಂಧಿ ಅವರಿಗೆ ಅದು ತಿಳಿದಿರಲಿಕ್ಕಿಲ್ಲ. ಆದ್ದರಿಂದ ಒಂದರ ನಂತರ ಒಂದು ಪ್ರಶ್ನೆಯನ್ನು ಕೇಳುವ ಮೂಲಕ, ಅವರು ತಮ್ಮನ್ನು ಮತ್ತು ತಮ್ಮ ಸ್ವಂತ ಪಕ್ಷದ ಗೇಲಿ ಮಾಡುತ್ತಿದ್ದಾರೆ. ಬಹುಶಃ ಇದು ತನ್ನದೇ ಆದ ರಾಜಕೀಯ ಚಿತ್ರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅವರ ಕರುಣಾಜನಕ ಪ್ರಯತ್ನ; ಆದರೆ ದುರದೃಷ್ಟವಶಾತ್, ಅವರು ವಿಫಲರಾಗಿದ್ದಾರೆ. ಇಡೀ ದೇಶವು ಚೀನಾ ವಿರುದ್ಧ ಒಗ್ಗೂಡಿದಾಗ ಮತ್ತು ಸೈನಿಕರ ಧೈರ್ಯ ಮತ್ತು ಸಮರ ವೃತ್ತಿಯನ್ನು ಶ್ಲಾಘಿಸುತ್ತಿದೆ. ‘ರಾಷ್ಟ್ರೀಯ ಹಿತಾಸಕ್ತಿಯನ್ನು ಯೋಚಿಸದೆ ಕೇವಲ ಸ್ವಾರ್ಥಿ ಮತ್ತು ರಾಷ್ಟ್ರದ್ವೇಷಿ ಮನೋಭಾವವನ್ನು ಬೆಳೆಸಿಕೊಳ್ಳುವ ರಾಹುಲ್ ಗಾಂಧಿ ಪಕ್ಷದ ಹಿತಾಸಕ್ತಿಗಳನ್ನು ಸಾಧಿಸಲು ಸಾಧ್ಯವೇ ? ರಾಹುಲ ಗಾಂಧಿಯವರ ಪಕ್ಷ ಅಧಿಕಾರದಲ್ಲಿದ್ದಾಗ, ದೇಶದಲ್ಲಿ ಅನೇಕ ಬಾಂಬ್ ಸ್ಫೋಟಗಳು ನಡೆದವು; ಆದರೆ ಅದರ ಬಗ್ಗೆ ಪ್ರತಿಕ್ರಿಯಿಸುವಾಗ, “ಪ್ರತಿದಿನ ಬಾಂಬ್ ಸ್ಫೋಟಗಳು ಸಂಭವಿಸಿದರೂ ಆಶ್ಚರ್ಯಪಡಬೇಡಿ” ಎಂದು ಅವರು ಹೇಳಿದ್ದರು, ಇದು ಬಹಳ ಬೇಜವಾಬ್ದಾರಿಯುತ ಮತ್ತು ಅಪರಿಪಕ್ವವಾದ ಹೇಳಿಕೆಯಾಗಿದೆ. ಅಂದಿನ ಸರಕಾರವು ರಾಷ್ಟ್ರೀಯತೆಯ ಪ್ರಜ್ಞೆಯನ್ನು ಹೊಂದಿರಲಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ಘಟನೆಗಳ ದೃಷ್ಟಿಯಿಂದ, ಪ್ರಸ್ತುತ ಜನರು ರಾಹುಲ್ ಗಾಂಧಿಯನ್ನು ಅವರ ಸರಕಾರದ ಅಸಮರ್ಥತೆಯ ಬಗ್ಗೆ ಕೇಳಿದರೆ ಆಶ್ಚರ್ಯವಾಗಬಾರದು.
ಜೂನ್ ೧೯ ರಂದು ರಾಹುಲ್ ಗಾಂಧಿ ಅವರ ಜನ್ಮದಿನವಿತ್ತು. ಕನಿಷ್ಠಪಕ್ಷ ಆ ದಿನವಾದರೂ ರಾಷ್ಟ್ರಹಿತದ ಕೆಲಸಗಳನ್ನು ಮಾಡಿದರೆ ಅವರೆಂತಹ ಗಾಂಧಿ ? ಅದೇ ದಿನ, ‘ಚೀನಾದ ದಾಳಿಯನ್ನು ಮೊದಲೇ ಯೋಜಿಸಲಾಗಿದೆ. ಕೇಂದ್ರ ಸರ್ಕಾರ ನಿದ್ದೆ ಮಾಡಿದೆ’ ಎಂದು ಮೋದಿ ಸರಕಾರವನ್ನು ಟೀಕಿಸಿದರು. ‘ರಾಹುಲ ಗಾಂಧಿಯವರು ಇದನ್ನು ಹೇಗೆ ಪತ್ತೆ ಹಚ್ಚಿದರು ಅಥವಾ ಚೀನಾದಲ್ಲಿ ನಡೆದ ಆಕ್ರಮಣ ಪೂರ್ವಸಭೆಯಲ್ಲಿ ಅವರು ಪಾಲ್ಗೊಂಡಿದ್ದರೇ ? ಇದು ಕಾಂಗ್ರೆಸ್ ಯೋಜನೆಯಲ್ಲ ಎಂದು ಹೇಗೆ ಹೇಳಲಾಗದು ? ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರ ಪ್ರತಿಕ್ರಿಯೆಗಳು. ಅಂತಹ ಹೇಳಿಕೆ ನೀಡುವ ಮೂಲಕ ಅವರು ಒಂದು ರೀತಿಯಲ್ಲಿ ಚೀನಾವನ್ನು ಬೆಂಬಲಿಸುತ್ತಿದ್ದಾರೆ ಎಂದು ಯಾರಾದರೂ ಯೋಚಿಸುವುದು ತಪ್ಪೇ ? ರಾಹುಲ್ ಗಾಂಧಿಯವರ ವಿಲಕ್ಷಣ ಹೇಳಿಕೆಗಳು ಚೀನಾ ದುರುಪಯೋಗ ಪಡಿಸಿಕೊಳ್ಳಬಹುದು. ಚೀನಾ ಭಾರತವನ್ನು ಪೀಡಿಸಲು ಬಯಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಳು ಚೀನಾವು ಸಹಾಯ ಮಾಡುತ್ತಿವೆ. ಸ್ವಾರ್ಥಿ ಕಾರಣಗಳಿಗಾಗಿ ಕೊಳಕು ರಾಜಕೀಯ ಮಾಡುವವರಿಂದ ಮಾತ್ರ ಇದು ಹೀಗಾಗುವುದು ಎಂಬುದರಲ್ಲಿ ಸಂದೇಹವಿಲ್ಲ !
ಬಾಲಿಶತನ ಸಾಕು !
ಚೀನಾದೊಂದಿಗಿನ ಪ್ರಸ್ತುತ ಸಂಘರ್ಷವು ಅಂದಿನ ಪ್ರಧಾನಿ ನೆಹರೂ ಅವರ ತಪ್ಪಾದ ವಿದೇಶಾಂಗ ನೀತಿಯಲ್ಲಿ ಬೇರೂರಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ೧೯೬೨ ರಲ್ಲಿ, ನೆಹರೂ ಅಕ್ಷರಶಃ ಚೀನಾ ಮುಂದೆ ಮಂಡಿಯೂರಿ ಅವನಿಗೆ ಅಕ್ಸಾಯ್ ಚಿನ್ ಅನ್ನು ಭಾರತದ ಭೂಪ್ರದೇಶವಾಗಿ ನೀಡಿದರು. ಈ ನಿರ್ಧಾರದ ಪರಿಣಾಮಗಳನ್ನು ಭಾರತವು ದಶಕಗಳಿಂದ ಅನುಭವಿಸುತ್ತಿದೆ. ಕಾಂಗ್ರೆಸ್ ಭಾರತೀಯ ಸೈನ್ಯವನ್ನು ಎಷ್ಟರ ಮಟ್ಟಿಗೆ ಆಧುನೀಕರಿಸಿತು ? ಇಲ್ಲ ಎಂಬ ಉತ್ತರ. ಕಾಂಗ್ರೆಸ್ ಆಳ್ವಿಕೆಯಲ್ಲಿ ಪಾಕಿಸ್ತಾನ ಅನೇಕ ಭಾರತೀಯ ಸೈನಿಕರನ್ನು ಕೊಂದಿತ್ತು. ಆಗ ರಾಹುಲ್ ಗಾಂಧಿ ತಕ್ಷಣ ಗಡಿಗೆ ಪಲಾಯನ ಮಾಡಿದ್ದಾರೆಯೇ ? ಇಲ್ಲವಲ್ಲ ಯುದ್ಧವು ಲೂಟಿಯ ಆಟವಲ್ಲ ಎಂದು ರಾಹುಲ್ ಗಾಂಧಿ ಅರಿತುಕೊಳ್ಳಬೇಕು. ಪ್ರತಿ ಬಾರಿಯೂ ಬಾಲಿಶತನದಿಂದ ರಾಜಕೀಯ ಮಾಡಬೇಡಿ. ಯುದ್ಧ, ರಕ್ಷಣಾ, ಮಿಲಿಟರಿ ಮತ್ತು ಶಸ್ತ್ರಾಸ್ತ್ರಗಳ ವಿಷಯಗಳು ಹೆಚ್ಚು ಸೂಕ್ಷ್ಮವಾಗಿದ್ದು, ಅವುಗಳನ್ನು ಗೌಪ್ಯವಾಗಿಡಬೇಕಾಗುತ್ತದೆ. ವಾಸ್ತವವಾಗಿ, ಈಗ ಚೀನಾದಿಂದ ಅಕ್ಸಾಯ್ ಚೀನ್ ಅವರನ್ನು ಹಿಂದಕ್ಕೆ ಪಡೆಯುವ ಸಮಯ. ೧೯೬೨ ರ ಸರಕಾರ ಈಗ ಅಸ್ತಿತ್ವದಲ್ಲಿಲ್ಲ. ಇಂದು ಮೋದಿ ಸರಕಾರ. ಶತ್ರು ರಾಷ್ಟ್ರಗಳು ನಡೆಸಿದ ದಾಳಿಗೆ ಮೋದಿ ಸರಕಾರ ಸೂಕ್ತವಾಗಿ ಮತ್ತು ತ್ವರಿತವಾಗಿ ಸ್ಪಂದಿಸಿದೆ ಎಂದು ನಮಗೆ ತಿಳಿದಿದೆ. ಚೀನಾ ಈ ದಾಳಿಗೆ ಮೋದಿ ಸರಕಾರ ಖಂಡಿತವಾಗಿಯೂ ಸ್ಪಂದಿಸುತ್ತದೆ ! ಆದ್ದರಿಂದ, ಬುದ್ಧಿವಂತರು ಬಾಯಿ ಮುಚ್ಚಿಕೊಳ್ಳಬೇಕು. ಸರಕಾರ ಮತ್ತು ಸೇನೆ ತಮ್ಮ ಕೆಲಸವನ್ನು ಮಾಡಲಿ. ಆಗ ಮಾತ್ರ ರಾಷ್ಟ್ರ ಮುಕ್ತವಾಗಿರುತ್ತದೆ.