ಟಿಕ್-ಟಾಕ್ ನಿಷೇಧಿಸಿರಿ !

ಚೀನಾದ ‘ಟಿಕ್-ಟಾಕ್ ಆಪ್ ನಿಷೇಧಿಸುವಂತೆ ಬೇಡಿಕೆಯ ಧ್ವನಿ ಮತ್ತೊಮ್ಮೆ ತಾರಕಕ್ಕೇರಿದೆ. ೨೦೧೬ ರಲ್ಲಿ ಚೀನಾ ದೇಶದ ‘ಬಾಯಿಟ್ ಡಾನ್ಸ ಟೆಕ್ನಾಲಜಿ ಕಂಪನಿಯು ಈ ‘ಆಪ್ನ್ನು ಮಾರುಕಟ್ಟೆಗೆ ತಂದಿತು. ಅಲ್ಪಾವಧಿಯಲ್ಲಿಯೇ ಅದು ಜಗತ್ತಿನಾದ್ಯಂತ ಜನಪ್ರಿಯವಾಯಿತು. ಈ ಆಪ್ ಮೂಲಕ ೧೫ ಸೆಕೆಂಡುಗಳ ಚಿಕ್ಕ ‘ವಿಡಿಯೋ ತಯಾರಿಸಿ ಅದನ್ನು ಪ್ರಸಾರ ಮಾಡಬಹುದಾಗಿದೆ. ಅದು ಎಷ್ಟು ಶೀಘ್ರವಾಗಿ ‘ಆಪ್ ಜನಪ್ರಿಯವಾಯಿತೋ, ಅಷ್ಟೇ ವೇಗವಾಗಿ ಅದು ವಿವಾದಗಳ ಸುಳಿಯಲ್ಲಿ ಸಿಲುಕಿತು. ಇದಕ್ಕೆ ಕಾರಣವೆಂದರೆ ಈ ‘ಆಪ್ ಮೂಲಕ ಹೆಚ್ಚುತ್ತಿರುವ ವಿಕೃತಿ ಮತ್ತು ಅನೈತಿಕತೆಗೆ ಸಿಕ್ಕ ಚಾಲನೆ ! ಚಿಕ್ಕ ಮಕ್ಕಳ ಲೈಂಗಿಕ ಶೋಷಣೆ, ಬಲಾತ್ಕಾರ, ‘ಆಸಿಡ್ ಅಟ್ಯಾಕ್ ಹೀಗೆ ಅನೇಕ ವಿಕೃತ ‘ವಿಡಿಯೋಗಳನ್ನು ಈ ‘ಆಪ್ ಮುಖಾಂತರ ಬಹಿರಂಗವಾಗಿ ಪ್ರಸಾರ ಮಾಡಲಾಗುತ್ತದೆ. ಅಶ್ಲೀಲ ಚಲನಚಿತ್ರ ಗಳಿಗಂತೂ ಎಲ್ಲೆಯೇ ಇಲ್ಲವಾಗಿದೆ. ಕೆಲವು ದಿನಗಳ ಹಿಂದೆ ಫೈಜಲ್ ಸಿದ್ಧಿಕಿ ಯುವತಿಯ ಮುಖದ ಮೇಲೆ ರಾಸಾಯನಿಕವನ್ನು ಎಸೆದಿದ್ದರಿಂದ ಯುವತಿಯ ಮುಖವು ಕುರೂಪಗೊಂಡ ಸಂದರ್ಭದ ಒಂದು ‘ವಿಡಿಯೋ ಪ್ರಸಾರ ಮಾಡಿದ್ದನು. ಮುಜೀಬರ ರೆಹಮಾನ ಮತ್ತು ಅವನ ಸಹಪಾಠಿಗಳು ಬಲಾತ್ಕಾರವನ್ನು ಪ್ರೋತ್ಸಾಹಿಸುವ ‘ವಿಡಿಯೋ ತಯಾರಿಸಿದ್ದರು. ಭಾರತದಲ್ಲಿ ಕೊರೋನಾ ನುಸುಳಿದ ಬಳಿಕ ಕೆಲವು ಮತಾಂಧರು ‘ಮಾಸ್ಕ್ ಹಾಗೂ ಸುರಕ್ಷಿತ ಸಾಮಾಜಿಕ ಅಂತರಗಳಂತಹ ನಿಯಮಗಳನ್ನು ಉಲ್ಲಂಘಿಸಲು ಜನರನ್ನು ಪ್ರಚೋದಿಸುವ ‘ವಿಡಿಯೊ ತಯಾರಿಸಿದ್ದರು. ‘ಟಿಕ್-ಟಾಕ್ ಮೇಲಿರುವ ಇಂತಹ ಸಮಾಜವಿಘಾತಕ, ಅಶ್ಲೀಲ ಮತ್ತು ಕೀಳು ಅಭಿರುಚಿಯ ಚಲನಚಿತ್ರಗಳ ಎಷ್ಟೋ ಉದಾಹರಣೆಗಳನ್ನು ಹೇಳಬಹುದಾಗಿದೆ. ಸದ್ಯದ ‘ಟಿಕ್-ಟಾಕ್ನ ನಿಷೇಧಕ್ಕೆ ಯೂ-ಟ್ಯೂಬ್ ವಿರುದ್ಧ ಟಿಕ್-ಟಾಕ್ ವಾದದ ಪದರವೂ ಇದೆ. ಆದರೆ ‘ಟಿಕ್-ಟಾಕ್ ಇರಲಿ ಅಥವಾ ಮನೋರಂಜನೆಯ ಹೆಸರಿನಲ್ಲಿ ವಿಕೃತಿಯನ್ನು ಪ್ರೋತ್ಸಾಹಿಸುವ ವಿಷಯಗಳಿರಲಿ ಅವೆಲ್ಲವುಗಳಿಗೆ ಸರಕಾರವು ನಿಷೇಧ ಹೇರುವುದೇ ಉತ್ತಮವಾಗಿದೆ.

‘ಸೆನ್ಸರ್‌ಶಿಪ್ ಬೇಕು !

ಚಲನಚಿತ್ರಗಳಲ್ಲಿರುವ ಅಶ್ಲೀಲ ಸಂವಾದ ಅಥವಾ ದೃಶ್ಯಗಳನ್ನು ಕತ್ತರಿಸಲು ಭಾರತದಲ್ಲಿ ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿ ಇದೆ. ಈ ಮಂಡಳಿ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಒಂದು ಪ್ರತ್ಯೇಕ ಮತ್ತು ಗಂಭೀರವಾದ ಪ್ರಶ್ನೆಯಾಗಿದೆ; ಆದರೆ ನೈತಿಕತೆಯನ್ನು ರಕ್ಷಿಸಲು ಅಲ್ಪ ಸ್ವಲ್ಪ ಪ್ರಮಾಣದಲ್ಲಿಯಾದರೂ ಒಂದು ವ್ಯವಸ್ಥೆ ಕಾರ್ಯನಿರತವಾಗಿದೆ. ದುರ್ದೈವದಿಂದ  ಇಂತಹ ವ್ಯವಸ್ಥೆ ‘ಟಿಕ್-ಟಾಕ್ನಂತಹ ‘ಆಪ್ಗಳಿಗೆ ಇಲ್ಲ. ‘ಆಪ್  ಮಾಲೀಕರು ‘ನಾವು ‘ಸಾರಾಂಶವನ್ನು ಪರಿಶೀಲಿಸಿ ಪ್ರಸಾರ ಮಾಡುತ್ತೇವೆ, ಎಂದು ಎಷ್ಟೇ ವಾದಿಸಿದರೂ, ಅದರಲ್ಲಿ ಸತ್ಯಾಂಶ ಇರುವುದಿಲ್ಲ. ಕಾರಣವೆಂದರೆ, ಹಾಗಿದ್ದರೆ ಅಶ್ಲೀಲ ‘ವಿಡಿಯೋಗಳು ಪ್ರಸಾರವೇ ಆಗುತ್ತಿರಲಿಲ್ಲ. ಇದಕ್ಕೆ ಕಳೆದ ಕೆಲವು ವರ್ಷಗಳಲ್ಲಿ ಆಗಿರುವ ‘ಇಂಟರ್‌ನೆಟ್ ಕ್ರಾಂತಿಯೂ ಕಾರಣವಾಗಿದೆ. ತಂತ್ರಜ್ಞಾನವನ್ನು ಹೇಗೆ ಉಪಯೋಗಿಸಬೇಕು ಎನ್ನುವುದು ಉಪಯೋಗಿಸುವವರನ್ನು ಅವಲಂಬಿಸಿರುತ್ತದೆ. ತಂತ್ರಜ್ಞಾನವು ಹೊಸ ಹೊಸ ಸಾಧನೆಗಳನ್ನು ಮನುಷ್ಯನಿಗೆ ಒದಗಿಸಿಕೊಟ್ಟಿದೆ; ಆದರೆ ಅದನ್ನು ಒಳ್ಳೆಯ ರೀತಿಯಿಂದ ಉಪಯೋಗಿಸುವ ಬುದ್ಧಿಯನ್ನು ಮಾತ್ರ ನೀಡಲಿಲ್ಲ. ಮನೋರಂಜನೆಯ ಹೆಸರಿನಡಿಯಲ್ಲಿ ‘ಟಿಕ್ – ಟಾಕ್ ನಂತರ ‘ಆಪ್  ಅದೇ ರೀತಿಯ ‘ವೆಬ್‌ಸಿರೀಸ್ನಂತಹ ಪ್ರಕಾರಗಳು ನೈತಿಕತೆಯ ಎಲ್ಲ ಬಂಧನಗಳನ್ನು ತೆಗೆದುಹಾಕಿದೆ. ಇದನ್ನು ಹದ್ದುಬಸ್ತಿನಲ್ಲಿಡುವುದು ಅತ್ಯಾವಶ್ಯಕವಾಗಿದೆ.

ಕಳೆದ ವರ್ಷ ಮದ್ರಾಸ ಉಚ್ಚ ನ್ಯಾಯಾಲಯವು ಚಿಕ್ಕ ಮಕ್ಕಳ ಲೈಂಗಿಕ ಶೋಷಣೆಯಾಗುತ್ತಿದೆಯೆಂದು ‘ಟಿಕ್-ಟಾಕನ್ನು ನಿಷೇಧಿಸಿತ್ತು. ಆದರೆ ಮುಂದೆ ನಿಷೇಧವನ್ನು ತೆರೆಯಲಾಯಿತು. ಇಂಡೋನೇಶಿಯಾ ಸಹ ಈ ‘ಆಪ್ ಮೇಲೆ  ನಿಷೇಧ ಹೇರಿತ್ತು. ಬಾಂಗ್ಲಾದೇಶದಲ್ಲಿಯೂ ಇದನ್ನು ನಿಷೇಧಿಸಲಾಗಿದೆ. ಜನವರಿಯಲ್ಲಿ ಅಮೇರಿಕಾದ ಸೈನಿಕರಿಗೂ ಸರಕಾರಿ ಸಂಚಾರಿವಾಣಿಯಲ್ಲಿ ‘ಟಿಕ್-ಟಾಕ್ ಉಪಯೋಗಿಸಲು ನಿಷೇಧವಿರುವ ಸುದ್ದಿ ಪ್ರಸಾರವಾಗಿತ್ತು. ಇತ್ತೀಚೆಗಷ್ಟೇ ‘ಟಿಕ್-ಟಾಕ್ ಸಂಸ್ಥೆಯ ಭಾರತದಲ್ಲಿರುವ ನೌಕರರಿಗೆ ಚೀನಾ ಸರಕಾರದ ವಿರುದ್ಧವಿರುವ ಯಾವುದೇ ವಿಷಯವನ್ನು ‘ಟಿಕ್-ಟಾಕ್ನಲ್ಲಿ ಇಡಬಾರದು. ಅಲ್ಲದೇ ಟಿಬೇಟಿನ ಬೌದ್ಧ ಧರ್ಮಗುರು ದಲಾಯಿಲಾಮಾ ಮತ್ತು ಟಿಬೇಟನ್ನು ಸಮರ್ಥಿಸುವ ವಿಷಯವನ್ನು ತೆಗೆದುಹಾಕುವಂತೆ ಆದೇಶ ನೀಡಲಾಗಿದೆ. ವಿಸ್ತಾರವಾದಿ ಚೀನಾ ದೇಶವು  ಟಿಬೇಟನ್ನು ಕಬಳಿಸಿದೆ. ‘ಟಿಕ್-ಟಾಕ್ ಚೀನಾದ ವಿಸ್ತಾರವಾದಿ ಭೂಮಿಕೆಗೆ ಬೆಂಬಲ ನೀಡುತ್ತಿದೆ.  ‘ಆತ್ಮನಿರ್ಭರ (ಸ್ವಾವಲಂಬಿ) ಭಾರತದ ವಿಚಾರ ಮಾಡಿದರೆ, ‘ಟಿಕ್-ಟಾಕ್ಗೆ  ಹುಲ್ಲುಕಡ್ಡಿಯಷ್ಟೂ ಮಹತ್ವವಿಲ್ಲ. ಕೇಂದ್ರ ಸರಕಾರವು ‘ಟಿಕ್-ಟಾಕ್ ಮೇಲೆ ನಿಷೇಧ ಹೇರಿ ದೇಶದ ಸಂಸ್ಕೃತಿಗಾಗುತ್ತಿರುವ ಅಪಾಯವನ್ನು ದೂರಗೊಳಿಸಬೇಕು ಮತ್ತು ಈ ಮೂಲಕ ಚೀನಾಕ್ಕೆ ಬಲವಾದ ಪೆಟ್ಟು ನೀಡಬೇಕು ಎನ್ನುವುದೇ ದೇಶವಾಸಿಗಳ ಅಪೇಕ್ಷೆಯಾಗಿದೆ.

 ದೃಷ್ಟಾ ದೃಶ್ಯವಶಾತ್ ಬದ್ಧ !

‘ದೃಷ್ಟಾ ದೃಶ್ಯವಶಾತ್ ಬದ್ಧಃ ಎಂದರೆ  ದೃಷ್ಟಾ (ವೀಕ್ಷಿಸುವವನು) ದೃಶ್ಯವನ್ನು ನೋಡುವುದರಿಂದ ಅವನು ಅದರಲ್ಲಿ ಬದ್ಧನಾಗಿ (ಬಂದಿಯಾಗಿ) ಬಿಡುತ್ತಾನೆ. ಒಂದು ವೇಳೆ ‘ಟಿಕ್-ಟಾಕ್ನಂತಹ ‘ಆಪ್ ‘ವೆಬ್ ಸಿರೀಸ್ ಹಾಗೆಯೇ ‘ಪಬ್‌ಜಿ ‘ಬ್ಲೂ-ವೇಲ್, ‘ಪೊಕೆಮಾನ್ ಗೊ ಗಳಂತಹ ‘ಆನ್‌ಲೈನ್ ಆಟಗಳನ್ನು ಉಪಯೋಗಿಸುವವರ ಮೇಲೆ ನಿರಂತರ ಹಿಂಸಾತ್ಮಕ, ಪ್ರಚೋದನಾತ್ಮಕ ಹಾಗೂ ಅಶ್ಲೀಲ ವಿಷಯಗಳ ಸುರಿಮಳೆಯಾಗುತ್ತದೆ. ಹೀಗೆ ಆಗುತ್ತಿದ್ದರೆ, ಅವನಲ್ಲಿ ಒಳ್ಳೆಯ ವಿಚಾರ ಗಳು ಮೂಡುವುದಾದರೂ ಎಲ್ಲಿಂದ ? ಸ್ವಾಮಿ ವಿವೇಕಾನಂದರು ‘ದೇಶದ ಯುವಕರ ಬಾಯಿಯಲ್ಲಿ ಯಾವ ಹಾಡು ಇದೆ, ಎನ್ನುವುದರಿಂದ ಆ ದೇಶದ ಭವಿಷ್ಯವನ್ನು ಹೇಳಬಹುದು ಎಂದು ಹೇಳಿದ್ದರು. ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ಪರಿಗಣಿಸಿದರೆ, ಭಾರತವನ್ನು ಉಜ್ವಲಗೊಳಿಸಲು ಇನ್ನೂ ಎಷ್ಟು ಶ್ರಮಿಸಬೇಕಾಗಿದೆಯೆಂದು ಗಮನಕ್ಕೆ ಬರುವುದು.

ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸಮಯ ತಗಲುತ್ತದೆ; ಆದರೆ ಕೆಟ್ಟ ಅಭ್ಯಾಸಗಳು ತಕ್ಷಣವೇ ರೂಢಿಯಾಗುತ್ತವೆ. ನಮ್ಮಿಂದ ಆಗಿರುವ ಸಮಾಜ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಯ ಕಾರ್ಯದ ಅಥವಾ ಪ್ರಬೋಧನೆಯ ‘ವಿಡಿಯೋ ತಯಾರಿಸಬೇಕೆಂದು ಜನರಿಗೆ ಅನಿಸಬೇಕು ಅಂತಹ  ಕಾರ್ಯವನ್ನು ಮಾಡಬೇಕಾಗಿದ್ದರೆ, ಅದಕ್ಕಾಗಿ ಜೀವಮಾನವಿಡೀ ಶ್ರಮಿಸಬೇಕಾಗುತ್ತದೆ. ಕಷ್ಟ ಪಡಬೇಕಾಗುತ್ತದೆ, ‘ಟಿಕ್-ಟಾಕ್ನಲ್ಲಿ ಹಲ್ಲು ತಿಕ್ಕುವುದರಿಂದ ಹಿಡಿದು ಕಾಲಿನಲ್ಲಿ ಚಪ್ಪಲಿಯನ್ನು ಹಾಕುವವರೆಗೆ ಯಾವುದೇ ಕೃತಿಯ ‘ವಿಡಿಯೋ ತಯಾರಿಸಬಹುದು. ಇದರಿಂದ ತಕ್ಷಣವೇ ಪ್ರಚಾರವೂ ಸಿಗುತ್ತದೆ; ಆದರೆ ಅದು ಅಷ್ಟೇ ನಿರರ್ಥಕ ಮತ್ತು ಅಶಾಶ್ವತವಾಗಿರುತ್ತದೆ. ಕೆಟ್ಟ ಚಟಗಳ ವಿಡಿಯೋ ತಯಾರಿಸಲು ಬುದ್ಧಿ ಬೇಕಾಗುವುದಿಲ್ಲ, ಆದರೆ ಉತ್ಕೃಷ್ಟ ಕಾರ್ಯವನ್ನು ಮಾಡಿ ತೋರಿಸಲು ಸಾಮರ್ಥ್ಯ ಬೇಕಾಗುತ್ತದೆ. ಅದೇ ನಿಜವಾದ ಪುರಷಾರ್ಥವಾಗಿರುತ್ತದೆ. ಪುಕ್ಕಟೆ ಪ್ರಚಾರಕ್ಕೆ ಹಪಹಪಿಸುತ್ತಿರುವ ‘ಟಿಕ್-ಟಾಕ್ನವರು ಇದನ್ನು ಗಮನಿಸಬೇಕು. ಇಂದು ನಿಷೇಧಿಸಿದರೆ, ‘ಟಿಕ್-ಟಾಕ್ ಸ್ಥಗಿತಗೊಳ್ಳುತ್ತದೆ. ಆದರೆ ನಾಳೆ ಅದೇ ವೇದಿಕೆಯ ಮೇಲೆ ಇನ್ಯಾವುದಾದರೂ ಹೊಸ ನಿರರ್ಥಕ ಸಾಧನೆ ಸಿದ್ಧಗೊಳ್ಳಬಹುದು. ಇದರಿಂದ ಇಂತಹ ಪರಿಸ್ಥಿತಿಯ ಮೇಲೆ ಶಾಶ್ವತ ಉಪಾಯಗಳನ್ನು ರೂಪಿಸಬೇಕಾಗಿದ್ದರೆ, ಜನರನ್ನು ಸಕಾರಾತ್ಮಕ ಕಾರ್ಯದಲ್ಲಿ ತೊಡಗಿಸಬೇಕು. ಸಮಾಜವನ್ನು ಒಂದು ಒಳ್ಳೆಯ ಧ್ಯೇಯದ ದಿಶೆಯಲ್ಲಿ ಕೆಲಸ ಮಾಡಲು ಪ್ರೇರೇಪಿಸಬೇಕು. ಎಲ್ಲಕ್ಕಿಂತ ಮಹತ್ವದ್ದೆಂದರೆ ಸಾತ್ತ್ವಿಕ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನಿಸಬೇಕು. ‘ಟಿಕ್-ಟಾಕ್ನ ಟಿಕ್‌ಟಿಕ್ ನಿಷ್ಕ್ರಿಯಗೊಳಿಸಬೇಕಾಗಿದ್ದರೆ, ಸಾತ್ತ್ವಿಕತೆಯ ಘಂಟಾನಾದವೇ ಅವಶ್ಯಕವಾಗಿದೆ.