೧. ಜಾತ್ಯತೀತವಾದಿಗಳು ಈಗ ಏಕೆ ಮೌನವಾಗಿದ್ದಾರೆ ?
ದಾವಣಗೆರೆಯಲ್ಲಿ ಈದ್‌ಗಾಗಿ ಹಿಂದೂ ಅಂಗಡಿಗಳಿಂದ ಸಾಹಿತ್ಯ ಖರೀದಿಸುತ್ತಿದ್ದ ಮುಸ್ಲಿಂ ಮಹಿಳೆಯರನ್ನು ಮತಾಂಧರು ನಿಂದಿಸುತ್ತಿರುವ ಕೆಲವು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಒಬ್ಬ ಮತಾಂಧನು ಮಹಿಳೆಯ ಕೈಯಿಂದ ಚೀಲವನ್ನು ಕಸಿದುಕೊಂಡು ಅದನ್ನು ಎಸೆಯುವುದನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿದೆ.
೨. ಕಾಶ್ಮೀರದಲ್ಲಿಯೂ ಪ್ರತ್ಯೇಕತಾವಾದಿ ಸಂಘಟನೆಗಳನ್ನು ನಿಷೇಧಿಸಿ !
ಶ್ರೀನಗರದಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಸೈನಿಕರು ಗಾಯಗೊಂಡಿದ್ದಾರೆ. ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಪ್ರತ್ಯೇಕತಾವಾದಿ ಗುಂಪಿನ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಖಾನ್ ಅವರ ಕಿರಿಯ ಮಗ ಜುನೈದ್ ಖಾನ್ ಕೂಡ ಸೇರಿದ್ದಾನೆ.
೩. ಅಂತಹ ’ವೆಬ್‌ಸರೀಸ್’ಗಳನ್ನು ನಿಷೇಧಿಸಿ !
‘ಪಾತಾಲ್ ಲೋಕ್’ ಎಂಬ ವೆಬ್‌ಸಿರೀಸ್‌ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಹಿಂದೂ ಮಹಾರಾಜರು ಹಿಂದೂ ರಾಜಕಾರಣಿಗೆ ಮಾಂಸವನ್ನು ಕೊಡುತ್ತಿರುವ ಮತ್ತು ಆಕಳಿನ ಮೇಲೆ ಕುಳಿತ ದೇವಿಯ ಚಿತ್ರದ ಎದುರು ಮಾಂಸ ತಿನ್ನುವುದನ್ನು ತೋರಿಸಲಾಗಿದೆ.
೪. ರಾಮ ಮಂದಿರವನ್ನು ವಿರೋಧಿಸುವವರಿಗೆ ಕಪಾಳಮೋಕ್ಷ !
ಅಯೋಧ್ಯೆಯ ರಾಮ ಜನ್ಮಭೂಮಿ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಹದ ಮಾಡುವ ಕೆಲಸ ನಡೆಯುತ್ತಿದೆ. ಆ ಸಮಯದಲ್ಲಿ ವಿವಿಧ ದೇವತೆಗಳ ಭಗ್ನ ವಿಗ್ರಹಗಳು, ೫ ಅಡಿ ಕೆತ್ತಿದ ಶಿವಲಿಂಗ ಇತ್ಯಾದಿಗಳು ಭೂಮಿಯಲ್ಲಿ ಕಂಡುಬಂದಿವೆ.
೫. ಹಿಂದೂ ಬಹುಸಂಖ್ಯಾತವಿರುವ ಭಾರತದಲ್ಲಿ ಹಿಂದೂ ಧಾರ್ಮಿಕ ಸ್ಥಳಗಳು ಏಕೆ ಅಸುರಕ್ಷಿತವಾಗಿವೆ ?
ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ ನೇ ವಿಧಿಯನ್ನು ರದ್ದುಪಡಿಸಿದ ನಂತರ, ಕಾಶ್ಮೀರದ ಹಿಂದೂ ಧಾರ್ಮಿಕ ಸ್ಥಳಗಳನ್ನು ರಕ್ಷಿಸಲು ಸರಕಾರ ಕಾನೂನು ರೂಪಿಸಬೇಕು ಎಂದು ಕಾಶ್ಮೀರಿ ಹಿಂದೂಗಳು ಒತ್ತಾಯಿಸಿದ್ದಾರೆ.
೬. ದೇವಾಲಯ ಸರಕಾರಿಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ !
ಕೋರೋನಾ ಸಾಂಕ್ರಾಮಿಕತೆಯಿಂದ ಉಂಟಾದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು, ‘ತಿರುವಾಂಕೂರು ದೇವಸ್ವಂ ಬೋರ್ಡ್’ ಮಂಡಳಿಯು ತನ್ನ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿನ ಎಲ್ಲ ಹೆಚ್ಚುವರಿ ದೀಪಗಳು ಮತ್ತು ಸಾಂಪ್ರದಾಯಿಕ ಹಿತ್ತಾಳೆ ಪಾತ್ರೆಗಳನ್ನು ಹರಾಜು ಮಾಡಲು ನಿರ್ಧರಿಸಿದೆ.
೭. ದೇಶದಲ್ಲಿ ಸಾಧುಗಳ ಹತ್ಯೆ ಯಾವಾಗ ನಿಲ್ಲುತ್ತದೆ ?
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ನಾಗಠಾಣಾ ಬುದ್ರುಕ್‌ನಲ್ಲಿರುವ ಮಠದಲ್ಲಿ ಶ್ರೀ ೧೦೮ ಬಾಲತ್ಪಾಸ್ವಿ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್ ಮತ್ತು ಭಗವಾನ್ ಶಿಂದೆ ಇವರ ಹತ್ಯೆ ಮಾಡಲಾಯಿತು. ಕದಿಯುವ ಉದ್ದೇಶದಿಂದ ಕೊಲೆ ಮಾಡಿದ ಆರೋಪಿ ಸಾಯಿನಾಥ ಲಿಂಗಾಡೆ ಇವನನ್ನು ಪೊಲೀಸರು ಬಂಧಿಸಿದ್ದಾರೆ.