ಭಾರತದ ಸಂವಿಧಾನದ ಮುನ್ನುಡಿಯಲ್ಲಿ ನುಸುಳಿದ ‘ಸೆಕ್ಯುಲರ್’ ಪದವನ್ನು ಸಾಂವಿಧಾನಿಕ ತಿದ್ದುಪಡಿಯಿಂದ ತೆಗೆದುಹಾಕಿ !

‘ಭಾರತದ ವಿಕೃತ ಸೆಕ್ಯುಲರಿಸಮ್’ ಈ ವಿಶೇಷ ‘ಆನ್‌ಲೈನ್’ ಚರ್ಚಾಕೂಟದಲ್ಲಿ ಗಣ್ಯರ ಒಮ್ಮುಖ ಬೇಡಿಕೆ !

೧೯೫೦ ರಲ್ಲಿ ಭಾರತ ಸ್ವತಂತ್ರವಾದಾಗ ಜಾರಿಗೆ ಬಂದ ಸಂವಿಧಾನದಲ್ಲಿ ‘ಸೆಕ್ಯುಲರ್’ ಎಂಬ ಪದ ಇರಲಿಲ್ಲ. ೧೯೭೬ ರಲ್ಲಿ, ತುರ್ತು ಪರಿಸ್ಥಿತಿಯಲ್ಲಿ, ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಬಹುಮತದ ಬಲದ ಮೇಲೆ ಸಂವಿಧಾನದಲ್ಲಿ ಈ ಪದವನ್ನು ಸೇರಿಸಿದರು. ಇಂದಿಗೂ ‘ಸೆಕ್ಯುಲರ್’ ಪದವನ್ನು ಎಲ್ಲಿಯೂ ವ್ಯಾಖ್ಯಾನಿಸಲಾಗಿಲ್ಲ. ಆದ್ದರಿಂದ, ಅಲ್ಪಸಂಖ್ಯಾತರನ್ನು ಓಲೈಸುವುದು ಮತ್ತು ಹಿಂದೂಗಳನ್ನು ಕಡೆಗಣಿಸುವುದು ಭಾರತದಲ್ಲಿ ಮುಂದುವರೆದಿದೆ. ಆದರೆ ಹಿಂದೂ ಜನಜಾಗೃತಿ ಸಮಿತಿಯು ಮೇ ೨೪ ರಂದು ಸಂಜೆ ೬ ರಿಂದ ರಾತ್ರಿ ೮ ರವರೆಗೆ ‘ಭಾರತದ ವಿಕೃತ ಸೆಕ್ಯುಲರಿಸಮ್’ ಕುರಿತು ವಿಶೇಷ ‘ಆನ್‌ಲೈನ್’ ಚರ್ಚಾಕೂಟವನ್ನು ಆಯೋಜಿಸಿತ್ತು. ಈ ಚರ್ಚೆಯಲ್ಲಿ ‘ಭಾರತ ಸೆಕ್ಯುಲರ್ ಆಗಿದೆ’ ಎಂಬುವುದರ ಅರ್ಥ ಏನು ? ಅದರ ಇತಿಹಾಸ ಮತ್ತು ಅದರ ದುಷ್ಪರಿಣಾಮಗಳೇನು? ಅದರಿಂದ ಹಿಂದೂಗಳ ಮೇಲೆ ಹೇಗೆ ಅನ್ಯಾಯವಾಗುತ್ತಿದೆ ?, ಇದರೊಂದಿಗೆ ಇತರ ವಿಷಯಗಳ ಕುರಿತು ಕೂಡ ಚರ್ಚೆ ನಡೆಸಲಾಯಿತು. ಚರ್ಚೆಯ ಕೊನೆಯಲ್ಲಿ, ಕೇಂದ್ರ ಸರ್ಕಾರವು ಸಾಂವಿಧಾನಿಕ ತಿದ್ದುಪಡಿ ಮಾಡಿ ‘ಸೆಕ್ಯುಲರ್’ ಪದವನ್ನು ಸಂವಿಧಾನದ ಮುನ್ನುಡಿಯಿಂದ ತೆಗೆದುಹಾಕಬೇಕು ಎಂದು ಗಣ್ಯರು ಒತ್ತಾಯಿಸಿದರು. ಈ ಚರ್ಚಾಕೂಟದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ) ಚಾರುದತ್ತ ಪಿಂಗಳೆ, ಬಂಗಾಳದ ಹಿರಿಯ ಹಿಂದುತ್ವನಿಷ್ಠ ಮತ್ತು ವಿದ್ವಾಂಸ ಶ್ರೀ. ತಪನ ಘೋಷ, ಕಾಶ್ಮೀರದಿಂದ ‘ರೂಟ್ಸ್ ಇನ್ ಕಾಶ್ಮೀರ್’ ಸಹಸಂಸ್ಥಾಪಕ ಶ್ರೀ. ಸುಶೀಲ್ ಪಂಡಿತ್, ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ ಇದರ ವಕ್ತಾರ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಭಾಗವಹಿಸಿದ್ದು, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಅವರು ನಿರೂಪಣೆ ಮಾಡಿದರು. ಈ ಚರ್ಚಾಕೂಟವನ್ನು ‘ಫೇಸ್‌ಬುಕ್’, ‘ಟ್ವಿಟರ್’ ಮತ್ತು ‘ಯೂ ಟ್ಯೂಬ್’ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಎಲ್ಲಾ ಭಾರತೀಯರ ಮೇಲೆ ’ಸೆಕ್ಯುಲರ್’ ಸಿದ್ಧಾಂತವನ್ನು ಹೇರುವುದು ಪ್ರಜಾಪ್ರಭುತ್ವ ವಿರೋಧಿ ! – ನ್ಯಾಯವಾದಿ ವಿಷ್ಣು ಶಂಕರ ಜೈನ

ಸಂವಿಧಾನ ಅಸ್ತಿತ್ವಕ್ಕೆ ಬಂದಾಗ, ಸಂವಿಧಾನ ಸಭೆಯು ಸುದೀರ್ಘ ಚರ್ಚೆಯ ನಂತರ, ‘ಸೆಕ್ಯುಲರ್’ ಪದವನ್ನು ಸಂವಿಧಾನದಲ್ಲಿ ಸೇರಿಸಲು ನಿರಾಕರಿಸಿತು; ಆದರೆ ೪೨ ನೇ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ತುರ್ತುಪರಿಸ್ಥಿತಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದ ಮುನ್ನುಡಿಯಲ್ಲಿ ‘ಸೆಕ್ಯುಲರ್’ ಪದವನ್ನು ತುರುಕಿಸಿದರು. ಕೆಲವು ಜನರು ‘ಸೆಕ್ಯುಲರ್’ ಮನಸ್ಥಿತಿಯನ್ನು ಹೊಂದಿರಬಹುದು; ಆದರೆ ಆ ಪದವನ್ನು ಸಂವಿಧಾನದ ಮುನ್ನುಡಿಯಲ್ಲಿ ಸೇರಿಸುವುದು ಮತ್ತು ಆ ಸಿದ್ಧಾಂತವನ್ನು ಇಡೀ ಭಾರತೀಯ ಸಮಾಜದ ಮೇಲೆ ಹೇರುವುದು ಪ್ರಜಾಪ್ರಭುತ್ವವಿರೋಧಿಯಾಗಿದೆ. ಆದ್ದರಿಂದ ಕಾನೂನನ್ನು ಅಂಗೀಕರಿಸುವ ಮೂಲಕ ‘ಸೆಕ್ಯುಲರ್’ ಪದವನ್ನು ಸಂವಿಧಾನದಿಂದ ತೆಗೆದುಹಾಕಬಹುದು.

ಭಾರತವನ್ನು ಹಿಂದೂಯೇತರರನ್ನಾಗಿ ಮಾಡಲು ‘ಸೆಕ್ಯುಲರಿಸಮ್’ ಒಂದು ಆಯುಧ ! – ಸುಶೀಲ್ ಪಂಡಿತ್

ಸಂವಿಧಾನವನ್ನು ರಚಿಸುವಾಗ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ೩೭೦ ನೇ ವಿಧಿಯಿಂದ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಲಾಯಿತು. ಜಮ್ಮು ಮತ್ತು ಕಾಶ್ಮೀರದ ಸ್ವತಂತ್ರ ಸಂವಿಧಾನದಿಂದ ಹಿಂದೂಗಳ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ‘ಸೆಕ್ಯುಲರ್’ ಪದವನ್ನು ಜಮ್ಮು-ಕಾಶ್ಮೀರದ ಸಂವಿಧಾನದಿಂದ ತೆಗೆದುಹಾಕಲಾಗಿದೆ. ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಕಾಶ್ಮೀರ ಕಣಿವೆಯ ಮುಸ್ಲಿಮರಿಗೆ ಶೇಕಡಾ ೭೦ ರಷ್ಟು ಅಲಿಖಿತ ಮೀಸಲಾತಿ ನೀಡಲಾಯಿತು. ನ್ಯಾಯಾಲಯಗಳು, ಪತ್ರಿಕೋದ್ಯಮ, ಜನರು ನೇಮಿಸಿದ ಸರ್ಕಾರ ಮತ್ತು ಸೈನ್ಯ ಅಸ್ತಿತ್ವದಲ್ಲಿದ್ದರೂ ಕಾಶ್ಮೀರಿ ಹಿಂದೂಗಳ ನರಮೇಧ ಮತ್ತು ದೌರ್ಜನ್ಯವನ್ನು ಭಾರತದಲ್ಲಿ ನಿಲ್ಲಿಸಲಾಗಿಲ್ಲ. ಭಾರತವನ್ನು ಹಿಂದೂಯೇತರರನ್ನಾಗಿಸಲು ‘ಸೆಕ್ಯುಲರಿಸಮ್’ ಒಂದು ಅಸ್ತ್ರವಾಗಿ ಮಾರ್ಪಟ್ಟಿದೆ.

ಸಂವಿಧಾನದ ೨೮ ಮತ್ತು ೩೦ ಎ ವಿಧಿಗಳು ಭಾರತದ ನೈತಿಕ ಸಂಪ್ರದಾಯಗಳಿಗೆ ವಿರುದ್ಧವಾಗಿವೆ ! – ತಪನ್ ಘೋಷ್

ಸಂವಿಧಾನದ ೩೦ ಎ ವಿಧಿ ಪ್ರಕಾರ, ಅಲ್ಪಸಂಖ್ಯಾತರಿಗೆ ಸ್ವತಂತ್ರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕಿದೆ. ಆದ್ದರಿಂದ ಬೈಬಲನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ ಕಲಿಸಲಾಗುತ್ತದೆ; ಆದರೆ ಹಿಂದೂಗಳು ಅದನ್ನು ಮಾಡಲು ಸಾಧ್ಯವಿಲ್ಲ. ಹಾಗೆಯೇ ಸೆಕ್ಷನ್ ೨೮ ರ ಪ್ರಕಾರ, ಸರ್ಕಾರಿ ಅನುದಾನದಿಂದ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ. ಭಾರತವು ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಂಸ್ಕೃತಿಯ ಪರಂಪರೆಯನ್ನು ಹೊಂದಿದೆ. ರಾಮಾಯಣ ಮತ್ತು ಮಹಾಭಾರತವು ಕೇವಲ ಹಿಂದೂ ಧರ್ಮಗ್ರಂಥಗಳಲ್ಲ, ಆದರೆ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡುತ್ತದೆ. ಅದನ್ನು ಜಾಗೃತಗೊಳಿಸುವುದು ಭಾರತದ ನೈತಿಕ ಹೊಣೆಯಾಗಿದೆ; ಆದರೆ ೨೮ ನೇ ವಿಧಿಯು ಅದನ್ನು ನಿರ್ವಹಿಸುವಲ್ಲಿ ಒಂದು ಅಡಚಣೆಯಾಗಿದೆ. ಹಿಂದೂ ಧರ್ಮ ಸ್ವಭಾವದಲ್ಲಿಯೇ ಸರ್ವಸಮಾವೇಶಕವಾಗಿದೆ. ಹಿಂದೂ ಧರ್ಮದ ಸ್ವರೂಪದಿಂದಾಗಿ ಭಾರತದಲ್ಲಿ ಸದ್ಯ ಸಾಮರಸ್ಯವಿದೆ.

ಹಿಂದೂ ಧರ್ಮಕ್ಕೆ ರಾಜಕೀಯ ರಕ್ಷಣೆ ಬೇಕು ! – ಸದ್ಗುರು (ಡಾ) ಚಾರುದತ್ತ ಪಿಂಗಳೆ

ಧರ್ಮವು ರಾಷ್ಟ್ರದ ಪ್ರಾಣವಾಗಿದೆ. ‘ಸೆಕ್ಯುಲರ್’ ವ್ಯವಸ್ಥೆಯು ಒಂದು ರೀತಿಯಲ್ಲಿ ಧರ್ಮರಹಿತ ಅಂದರೆ ಒಂದು ರೀತಿ ಅಧರ್ಮಿ ವ್ಯವಸ್ಥೆಯಾಗಿದೆ. ಭಾರತದಲ್ಲಿ ಸನಾತನ ಧರ್ಮಕ್ಕೆ ರಾಜಾಶ್ರಯವಿದ್ದಾಗ ಭಾರತವು ಆಧ್ಯಾತ್ಮಿಕ ಮತ್ತು ಭೌತಿಕ ಪ್ರಗತಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿತ್ತು; ಆದರೆ ‘ಸೆಕ್ಯುಲರ್’ ವ್ಯವಸ್ಥೆಯಿಂದಾಗಿ ದೇಶವು ಅವನತಿಯತ್ತ ಸಾಗುತ್ತಿದೆ. ಯುರೋಪಿಯನ್ ಮತ್ತು ಪಾಶ್ವಾತ್ಯ ದೇಶಗಳಲ್ಲಿ, ಬಹುಸಂಖ್ಯಾತರ ಧರ್ಮವು ರಾಜಕೀಯ ರಕ್ಷಣೆಯನ್ನು ಹೊಂದಿದೆ. ಭಾರತದಲ್ಲಿ ಮಾತ್ರ ಹಾಗಿಲ್ಲ. ಆದ್ದರಿಂದ, ಸನಾತನ ಹಿಂದೂ ಧರ್ಮಕ್ಕೆ ಭಾರತದಲ್ಲಿ ರಾಜಕೀಯ ರಕ್ಷಣೆ ಸಿಗುವ ಆವಶ್ಯಕತೆ ಇದೆ.

‘ಸೆಕ್ಯುಲರಿಸಮ್’ನ ಸೋಗಿನಲ್ಲಿ ಭಾರತದಲ್ಲಿ ಹಿಂದೂ ಧರ್ಮದಲ್ಲಿ ಹಸ್ತಕ್ಷೇಪ ! – ರಮೇಶ ಶಿಂದೆ

ಯುರೋಪಿಯನ್ ಪರಿಕಲ್ಪನೆಯ ಪ್ರಕಾರ, ‘ಸೆಕ್ಯುಲರ್’ ವ್ಯವಸ್ಥೆ ಎಂದರೆ ಚರ್ಚ್ ಮತ್ತು ರಾಜ್ಯ ಎಂಬ ಎರಡು ವ್ಯವಸ್ಥೆಗಳು ಪರಸ್ಪರ ಭಿನ್ನವಾಗಿವೆ. ೧೬ ನೇ ಶತಮಾನದಲ್ಲಿ ಯುರೋಪಿನಲ್ಲಿ, ರಾಜರು ಮತ್ತು ಧರ್ಮಗುರುಗಳು ಪ್ರತ್ಯೇಕವಾಗಿದ್ದರು. ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ಪರಸ್ಪರ ಬೇರ್ಪಡಿಸಲು ಯುರೋಪಿನಲ್ಲಿ ‘ಸೆಕ್ಯುಲರ್’ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತು. ಇಂಗ್ಲೆಂಡ್‌ನಲ್ಲಿ ಇನ್ನೂ ಎರಡು ಗೃಹ(ಮನೆ)ಗಳಿವೆ, ‘ಹೌಸ್ ಆಫ್ ಲಾರ್ಡ್ಸ್’ ಮತ್ತು ‘ಹೌಸ್ ಆಫ್ ಕಾಮನ್ಸ್.’ ಧಾರ್ಮಿಕ ಕಾನೂನುಗಳನ್ನು ‘ಹೌಸ್ ಆಫ್ ಲಾರ್ಡ್ಸ್’ ಮೂಲಕ ರಚಿಸಲಾಗುತ್ತದೆ. ಭಾರತದಲ್ಲಿ, ಹಿಂದೂ ಧರ್ಮದಲ್ಲಿ ‘ಸೆಕ್ಯುಲರಿಸಮ್’ ಹೆಸರಿನಲ್ಲಿ ಹಸ್ತಕ್ಷೇಪ ಮಾಡಲಾಗುತ್ತದೆ. ಭಾರತೀಯ ಸಂವಿಧಾನದಲ್ಲಿ ‘ಸೆಕ್ಯುರಿಸಮ್’ನ ವ್ಯಾಖ್ಯೆ ಸ್ಪಷ್ಟವಾಗಿಲ್ಲ. ಭಾರತದ ಸಂವಿಧಾನದಲ್ಲಿ ‘ಸೆಕ್ಯುಲರ್’ ದೇಶವಾಗಿದೆ ಎನ್ನಲಾಗುತ್ತಿದ್ದರೂ ಎಲ್ಲವನ್ನು ಅಲ್ಪಸಂಖ್ಯಾತರಿಗೆ ಲಭ್ಯವಾಗುವಂತೆ ಮಾಡಬೇಕು, ಎಂಬಂತೆ ಪರಿಸ್ಥಿತಿ ಇದೆ.

ಈ ಚರ್ಚಾಕೂಟದ ಸಂದರ್ಭದಲ್ಲಿ ನಡೆದ ಇತರ ವಿಶೇಷ ಘಟನಾವಳಿಗಳು

೧. ಈ ಚರ್ಚೆಯಿಂದಾಗಿ #SayNoToPseudoSecularism ಎಂಬ ಹ್ಯಾಶ್‌ಟ್ಯಾಗ್ ದಿನವಿಡೀ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಇದು ಭಾರತದ ಎರಡನೇ ಟ್ರೆಂಡಿಂಗ್ ವಿಷಯವಾಗಿತ್ತು.

೨. ಭಾರತೀಯ ಸಂವಿಧಾನದ ಮುನ್ನುಡಿಯಲ್ಲಿ ಸೇರಿಸಲಾದ ‘ಜಾತ್ಯತೀತ’ ಪದವನ್ನು ಸರ್ಕಾರ ಸಾಂವಿಧಾನಿಕ ರೀತಿಯಲ್ಲಿ ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ‘ಆನ್‌ಲೈನ್ ಅರ್ಜಿ’ಯನ್ನು (ಪಿಟಿಶನ್) ಸಿದ್ಧಪಡಿಸಿದೆ. ಇಲ್ಲಿಯವರೆಗೆ, ೬,೦೦೦ ಕ್ಕೂ ಹೆಚ್ಚು ಜನರು ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ್ದಾರೆ ಮತ್ತು ೩,೦೦೦ ಕ್ಕೂ ಹೆಚ್ಚು ಜನರು ಈ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಇಮೇಲ್ ಮೂಲಕ ಕಳುಹಿಸಿದ್ದಾರೆ. ಸಮಿತಿಯ ಪರವಾಗಿ, ರಾಷ್ಟ್ರ ಮತ್ತು ಧರ್ಮ ಪ್ರೇಮಿ ಹಿಂದೂಗಳಿಗೆ ಈ ಮನವಿಗೆ ಸಹಿ ಹಾಕುವಂತೆ ಮನವಿ ಮಾಡಿದೆ. ಈ ಅರ್ಜಿಯ ಲಿಂಕ್‌ಅನ್ನು ಕೆಳಗೆ ನೀಡಲಾಗಿದೆ.

https://www.hindujagruti.org/hindi/hindu-issues/Say-No-To-Pseudo-Secularism