ಯಾಂತ್ರಿಕ ಸುಧಾರಣೆ !

ಈ ಯಾಂತ್ರಿಕ ಕಲೆಯು ರಾಕ್ಷಸಿಯಾಗಿದ್ದು ಭಸ್ಮಾಸುರನಂತೆ ಮಾನವ ಜನಾಂಗವನ್ನು ನಾಶ ಮಾಡುತ್ತಿದ್ದು ವಿಶ್ವಕ್ಕೆ ಅದು ಸುಧಾರಣೆ ಅನಿಸುತ್ತಿದೆ ! ಇತ್ತೀಚೆಗೆ ಸುವರ್ಣಮಯವಾಗಿದ್ದ ಪಾಶ್ಚಾತ್ಯ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ, ಮುಷ್ಕರ ಆಗುತ್ತಿದೆ, ಯಾದವಿ ಕಲಹ ಮೂಡುತ್ತಿದ್ದು ಮೊದಲು ಯಾರು ಅಧೋಗತಿಗೆ ಹೋಗುತ್ತಾರೆ ?, ಇದರ ಬಗ್ಗೆ ಪೈಪೋಟಿ ನಡೆಯುತ್ತಿದೆ. ಇವೆಲ್ಲವುಗಳು ಈ ಯಾಂತ್ರಿಕ ಕಲೆಯ ಪ್ರಭಾವವಾಗಿದೆ ! ಸೈಕಲ್, ಟ್ರಾಮ್‌ರೈಲು, ಮೋಟಾರುಗಾಡಿ, ಉಗಿಬಂಡಿ, ವಿಮಾನ, ಸಮುದ್ರಯಾನಗಳು, ಜಲಾಂತರ್ಗಾಮಿಗಳು, ತಂತಿಯಂತ್ರ, ವಯರಲೆಸ್, ರೇಡಿಯೊ ಇತ್ಯಾದಿಗಳು ಜಗತ್ತನ್ನು ಎಲ್ಲಿಗೆ ಕರೆದೊಯ್ಯುತ್ತಿದೆ ? ಈ ಶೋಧನೆಯು ಹಾಗೂ ಯಾಂತ್ರಿಕ ಕಲೆಯು ಸಮಾಜದ ಉದ್ಧಾರಕ್ಕಿರದೇ ಸಂಹಾರಕ್ಕಾಗಿದೆ. ‘ನನ್ನ ರಾಷ್ಟ್ರವು ಎಲ್ಲ ರಾಷ್ಟ್ರಗಳ ಮೇಲೆ ವರ್ಚಸ್ಸನ್ನು ಹೇಗೆ ಬೀರಬಹುದು, ಇತರ ರಾಷ್ಟ್ರದ ಸಂಪತ್ತು ನನ್ನ ಕೌಶಲ್ಯದಿಂದ ನನ್ನ ರಾಷ್ಟ್ರಕ್ಕೆ ಹೇಗೆ ಬರಬಹುದು, ಐದೂ ಖಂಡಗಳಲ್ಲಿ ನಮ್ಮದೇ ಆದ ರಾಷ್ಟ್ರಸೇವಕ ಅತ್ಯುಚ್ಚ ಆರಾಮದಾಯಕವಾಗಿ ಇದ್ದು ಅಲ್ಲಿಯ ವ್ಯಾಪಾರಿ ಹಾಗೂ ರಾಜಕೀಯ ಸ್ವಾತಂತ್ರ್ಯವು ನಮ್ಮ ಮುಷ್ಠಿಯಲ್ಲಿಡಲು ಯಾವ ಉಪಾಯಗಳನ್ನು ಮಾಡಬಹುದು ಎಂಬುದರತ್ತ ಎಲ್ಲ ಶಾಸ್ತ್ರೀಯ ಶೋಧಗಳ ಉಪಯೋಗವನ್ನು ಮಾಡಲಾಗುತ್ತಿದೆ !

ಯಂತ್ರಕಲೆಯು ಒಂದು ಸ್ವತಂತ್ರ ಮಾಯೆಯೇ ಆಗಿದೆ. ಎಲ್ಲ ಭೂತಗಳ ಯಂತ್ರಗಳ ಯೋಗದಿಂದ ಮಾಯಾರೂಢ, ಮೋಹಗ್ರಸ್ಥ, ಮೂಢವಾಗಿ ಭ್ರಮೆಯಲ್ಲಿದೆ ! ಯಂತ್ರವು ಮನುಷ್ಯನ ಅಧೀನದಲ್ಲಿದೆಯೋ ಅಥವಾ ಮನುಷ್ಯ ಯಂತ್ರಾಧೀನನಾಗಿದ್ದಾನೆಯೋ ?, ಇದರ ಬಗ್ಗೆ ವಿಚಾರ ಮಾಡುವುದು ಆವಶ್ಯಕವಿದೆ. ಹಿಂದಿನ ಕಾಲದಲ್ಲಿ ಎತ್ತು ಹಾಗೂ ಕುದುರೆ ಈ ಪ್ರಾಣಿಗಳು ವಾಹನವಾಗಿದ್ದವು. ಇಂದಿನ ವಾಹನವು ನಿರ್ವಿಕಾರ ಹಾಗೂ ವೇಗವಾಗಿದ್ದರಿಂದ ನಮಗೆ ಅದರ ಸ್ವಾಧೀನವಾಗಿ ಪ್ರವಾಸ ಮಾಡಬೇಕಾಗುತ್ತದೆ. ಮನುಷ್ಯನು ಯಂತ್ರದಲ್ಲಿ ಇಷ್ಟು ಅವಲಂಬಿಸಿದ್ದಾನೆಂದರೆ, ತಮ್ಮ ಲೇಖನ, ಗಾಯನ, ವಾಚನ, ಚಲನ, ಲೆಕ್ಕಾಚಾರ, ರುಬ್ಬುವುದು, ಕುಟ್ಟುವುದು, ಹೆಣೆಯುವುದು, ಹೊಲಿಯುವುದು, ಕರಕುಶಲ, ಶಿಲ್ಪಿ ಇತ್ಯಾದಿ ಎಲ್ಲ ಪ್ರಜ್ಞೆಯನ್ನು ಯಂತ್ರದ ಸ್ವಾಧೀನ ಮಾಡಿ ಮನುಷ್ಯನು ಯಂತ್ರಕ್ಕೆ ಸಜೀವತೆ ಮತ್ತು ನಾವು ಜಡತ್ವವಾಗಿ ಬಿಟ್ಟಿದ್ದೇವೆ. ಆತನಿಗೆ ಅದರಲ್ಲಿ ಮೋಜು ಹಾಗೂ ಧನ್ಯತೆ ಅನಿಸುತ್ತಿದೆ. ಯಂತ್ರ ಕಲೆಯು ಕಾರ್ಮಿಕ ಇಲಾಖೆ ಹಾಗೂ ಜಗತ್ತಿಗೆ ಕಾರ್ಮಿಕರನ್ನಾಗಿ ಮಾಡುತ್ತದೆ. ಹಿಂದೂಸ್ಥಾನದಲ್ಲಿ ಮುಖ್ಯ ವ್ಯವಸಾಯ ಬೇಸಾಯವಾಗಿದೆ; ಆದರೆ ಯಾಂತ್ರಿಕಕಲೆಯಿಂದ ಬೇಸಾಯ ಮುಳುಗಿತು, ಪರಕೀಯ ವ್ಯಾಪಾರಿ ದೇಶದಲ್ಲಿ ನುಸುಳಿದರು. ಹಿಂದಿನಂತೆ ಧಾನ್ಯದ ರಾಶಿ ಇಲ್ಲ, ಹತ್ತಿಯ ಬೆಲೆ ಹೆಚ್ಚಾಗಿರುವುದು ಕಾಣಿಸುತ್ತದೆ; ಆದರೆ ಅದು ರೈತರಿಗೆ ಸಿಕ್ಕಿದಾಗ, ವಾಹನ, ವಿದೇಶಿ ವಸ್ತ್ರ, ನಾಟಕ, ಮನೋರಂಜನೆ, ಸರಾಯಿ, ಚಹಾ, ತರಕಾರಿ ಇತ್ಯಾದಿಗಳಲ್ಲಿ ಖರ್ಚಾಗಿ ಕೊನೆಯಲ್ಲಿ ಹಣ ಇಲ್ಲದಂತಾಗುತ್ತದೆ. ಸಮಾಜ ವ್ಯವಸ್ಥೆ ಕುಸಿದಾಗ ಅದರ ಪರಿಣಾಮ ಸಂತತಿಯ ಮೇಲಾಗಿ ಸಂತತಿ ಹಾಳಾಗುತ್ತದೆ. ದೇಶದಲ್ಲಿ ಬುದ್ಧಿ ಮತ್ತು ಶಕ್ತಿ ವಿಪರೀತವಿರುವಾಗ ಮೂರ್ಖತನ ಹಾಗೂ ದೌರ್ಬಲ್ಯತೆ ಹೆಚ್ಚಾಗಿದೆ. ಈ ಅನರ್ಥವು ಪರಕೀಯ ಅಧಿಕಾರದಿಂದಾಗಿ ಆಗಿದ್ದರೂ ಅದಕ್ಕೆ ಅನೇಕ ಅಂಶಗಳು ಯಂತ್ರಕಲೆಯೇ ಕಾರಣವಾಗಿದೆ. ಸಮಾಜ ಬೇಜವಾಬ್ದಾರಿತನ, ಅಡ್ಡಿಯಾಗಿದೆ. ಕಾರ್ಮಿಕ ಹಾಗೂ ಬಂಡವಾಳಶಾಹಿ ಈ ಎರಡೆ ಜಾತಿ ಇದ್ದು ಜೀವನವು ಕಿತ್ತಾಟವಾಗಿದೆ. ಊರಿನವರೇ ನಿರ್ಜನವಾಗಿ ಪಟ್ಟಣಗಳಲ್ಲಿ ತುಂಬಿ ಹೋಗಿದ್ದಾರೆ. ಹಳ್ಳಿಗಳಲ್ಲಿ ಕೆಲಸಗಾರರು ಸಿಗದೇ ಇದ್ದರಿಂದ ಗದ್ದೆ ಒಣಗಿ ಹೋಗಿದೆ. ಇವೆಲ್ಲವುಗಳ ದುಷ್ಪರಿಣಾಮ ಯಾಂತ್ರಿಕ ಕಲೆಯಿಂದಾಗಿ ಆಗಿದೆ !- ಗೋವಿಂದಸುತ (ಸಂದರ್ಭ : ಮಾಸಿಕ ‘ಮುಮುಕ್ಷು, ಜುಲೈ-ಆಗಸ್ಟ್ ೧೯೩೦)