ಸನಾತನ ಸಂಸ್ಥೆಯ ಶ್ರೀಸತ್‌ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!

‘ಸಿಂಧ್-ಹಿಂದ್’ನ (ಈಗ ಪಾಕಿಸ್ತಾನದಲ್ಲಿರುವ ರಾಜ್ಯದ) ಅತ್ಯಂತ ಪ್ರಾಚೀನ ಆಶ್ರಮವಾಗಿರುವ ‘ಶದಾಣಿ ದರಬಾರ್’, ಅಂದರೆ ಭಾರತ-ಪಾಕಿಸ್ತಾನದಲ್ಲಿರುವ ಸಿಂಧಿ ಸಮುದಾಯದ ಹಿಂದೂಗಳ ಶ್ರದ್ಧಾಸ್ಥಾನ! ಈ ಪೀಠದ ಪಂಚಮ ಪೀಠಾಧೀಶ್ವರ ಪ.ಪೂ. ಮಾತಾ ಸಾಹಿಬ್ ಹಾಸೀದೇವಿಜಿ ಅವರ ದ್ವಿಶತಾಬ್ದಿ ಜಯಂತಿಯ ನಿಮಿತ್ತ ರಾಯಪುರದಲ್ಲಿ (ಛತ್ತೀಸಗಢ) ಮೇ 17 ರಿಂದ ಜುಲೈ 29, 2026ರ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ 70 ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನವೂ ಭಾರತ ಮತ್ತು ಪಾಕಿಸ್ತಾನದ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಶದಾಣಿ ದರಬಾರ್ ಗೆ ಆಗಮಿಸುತ್ತಿದ್ದಾರೆ.

ಈ ದರಬಾರಿನ ಪ್ರಸ್ತುತ ನವಮ ಪೀಠಾಧೀಶ್ವರ ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜರ ಆಹ್ವಾನದ ಮೇರೆಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಜುಲೈ 20 ಮತ್ತು 21, 2026 ರಂದು ಶದಾಣಿ ದರಬಾರಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜುಲೈ 20 ರಂದು ಅವರು ನಾರಿಶಕ್ತಿ ಸಮ್ಮೇಳನದಲ್ಲಿ, ಹಾಗೂ ಜುಲೈ 21 ರಂದು ಪ್ರತ್ಯಕ್ಷ ಶದಾಣಿ ದರಬಾರಿನಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡಿದರು. ಜೊತೆಗೆ ಛತ್ತೀಸಗಢದಲ್ಲಿ ಸನಾತನ ಸಂಸ್ಥೆಯ ಸಾಧಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಾಧ್ಯಮದಿಂದ ಧರ್ಮಕಾರ್ಯ ಮಾಡುವ ಧರ್ಮಪ್ರೇಮಿಗಳಿಗೂ ಆಧ್ಯಾತ್ಮಿಕ ದಿಕ್ಕು ನೀಡುವ ಮಾರ್ಗದರ್ಶನ ಮಾಡಿದರು. ಈ ಪ್ರವಾಸದಲ್ಲಿ ವಿವಿಧ ಉದ್ಯಮಿಗಳು, ಗಣ್ಯರು ಮತ್ತು ರಾಜಕೀಯ ನಾಯಕರನ್ನು ಭೇಟಿಯಾಗಲು ಅವರು ಸಮಯ ನೀಡಿದರು. ಉತ್ತರಾಧಿಕಾರಿದ್ವಯರ ಕೇವಲ ಒಂದೂವರೆ ದಿನದ ಈ ಪ್ರವಾಸವು ಸಂಪೂರ್ಣವಾಗಿ ಈಶ್ವರ ಯೋಜಿತವೇ ಆಗಿದೆಯೆಂಬ ಅನುಭೂತಿಯನ್ನು ನೀಡಿತು.

ಪ. ಪೂ. ಮಾತಾ ಸಾಹಿಬ್ ಹಾಸೀದೇವಿಜಿ ಅವರ ಭಾವಚಿತ್ರಕ್ಕೆ ವಂದಿಸುವಾಗ ಎಡದಿಂದ ಶ್ರೀಸತ್‌ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಗಾಡಗೀಳ

1. ಉತ್ತರಾಧಿಕಾರಿದ್ವಯರ ಮಾರ್ಗದರ್ಶನದ ಸಮಯದಲ್ಲಿ ಭಕ್ತರಿಗೆ ಸಂತವಾಣಿಯ ಪ್ರಭಾವದ ಅನುಭವವಾಗುವುದು

ನಾರಿಶಕ್ತಿ ಸಮ್ಮೇಳನದ ಪ್ರಾರಂಭದಲ್ಲಿ ಶ್ರೋತೃಗಳು ತಮ್ಮೊಳಗೆ ಚರ್ಚಿಸುತ್ತಿದ್ದರು; ಆದರೆ ಶ್ರೀಸತ್‌ ಶಕ್ತಿ (ಸೌ.) ಸಿಂಗಬಾಳ ಅವರು ಮಾತನಾಡಲು ಪ್ರಾರಂಭಿಸುತ್ತಿದ್ದಂತೆಯೇ ಸಂಪೂರ್ಣ ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯ ಹರಡಿತು. ಎಲ್ಲ ಶ್ರೋತೃಗಳು ಶಾಂತ ಹಾಗೂ ಅಂತರ್ಮುಖಿಯಾಗಿ ವಿಷಯವನ್ನು ಆಲಿಸತೊಡಗಿದರು ಮತ್ತು ಸ್ವಯಂ ಉತ್ಸಾಹದಿಂದ ಪ್ರತಿಕ್ರಿಯೆ ನೀಡತೊಡಗಿದರು. ಸಣ್ಣ ಗುಂಡುಸೂಜಿ ಬಿದ್ದರೂ ಸದ್ದು ಕೇಳಿಸುವಷ್ಟು ಶಾಂತತೆ ನಿರ್ಮಾಣವಾಯಿತು. ಸಂತವಾಣಿ ಮತ್ತು ಅವರ ಅಸ್ತಿತ್ವವು ಸಮಾಜದ ಮೇಲೆ ಹೇಗೆ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬುದನ್ನು ಈ ಸಮಯದಲ್ಲಿ ಪ್ರತ್ಯಕ್ಷವಾಗಿ ಅನುಭವಿಸಲು ಸಿಕ್ಕಿತು.

2. ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜರ ಧರ್ಮಪತ್ನಿ ಪೂಜ್ಯ (ಸೌ.) ದೀಪಿಕಾದೀದಿ ಅವರು ವ್ಯಕ್ತಪಡಿಸಿದ ಕೃತಜ್ಞತೆ!

ಪೂ. (ಸೌ.) ದೀಪಿಕಾದೀದಿ ಅವರು ಜುಲೈ 21 ರಂದು ಶದಾಣಿ ದರಬಾರಿನಲ್ಲಿ ತಮ್ಮ ಮನೋಗತವನ್ನು ವ್ಯಕ್ತಪಡಿಸುತ್ತಾ, ‘‘ಎರಡೂ ಗುರುಮಾತೆಯರ ವಾಣಿಯು ಅತ್ಯಂತ ಮಧುರ, ಸರಳ ಮತ್ತು ಸುಲಭವಾಗಿದೆ. ಅದನ್ನು ಕೇಳಿ ನಾನು ಸ್ವತಃ ಅತ್ಯಂತ ಪ್ರಭಾವಿತಳಾಗಿದ್ದೇನೆ. ಆದ್ದರಿಂದಲೇ ಇಂದು ಮತ್ತೆ ಈ ಕಾರ್ಯಕ್ರಮದ ಲಾಭ ಪಡೆಯಲು ನಾನು ಬಂದಿದ್ದೇನೆ. ಅವರ ವಾಣಿಯ ಪ್ರಭಾವವು ಎಲ್ಲ ಶ್ರೋತೃಗಳ ಮೇಲೆ ಮತ್ತು ಸಾಧಕರ ಮೇಲೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ’’ಎಂದು ಹೇಳಿದರು. ಅವರು ಕೊನೆಯಲ್ಲಿ, ‘‘ನೀವು ಆಗಾಗ ಇಲ್ಲಿಗೆ ಆಗಮಿಸಿ ನಮ್ಮನ್ನೆಲ್ಲರನ್ನು ಕೃತಾರ್ಥರನ್ನಾಗಿ ಮಾಡಬೇಕು’’ಎಂದು ವಿನಂತಿಸಿಕೊಂಡರು.

ಅಖಿಲ ಸಿಂಧಿ ಸಮುದಾಯವನ್ನು ಸನಾತನ ಸಂಸ್ಥೆಯೊಂದಿಗೆ ಜೋಡಿಸಿದ ಸದ್ಗುರುದ್ವಯರ ಪ್ರವಾಸ!

ಸದ್ಗುರುದ್ವಯರನ್ನು ಸ್ವಾಗತಿಸುವಾಗ ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜ್, ಪೂ. (ಸೌ.) ದೀಪಿಕಾದೀದಿ ಮತ್ತು ಬದಿಯಲ್ಲಿ ಶ್ರೀ. ಸುನಿಲ ಘನವಟ

‘ಸನಾತನ ಸಂಸ್ಥೆ’ ಮತ್ತು ‘ಶದಾಣಿ ದರಬಾರ್’ ಎಂದರೆ ಸನಾತನ ಧರ್ಮೀಯರ ಮೇಲೆ ಸನಾತನ ಸಂಸ್ಕಾರಗಳನ್ನು ಬಿತ್ತುವ ಧರ್ಮಪೀಠಗಳಾಗಿವೆ. ರಾಜೀಮ ಕುಂಭಮೇಳದಿಂದ, ಅಂದರೆ 2013 ರಿಂದ ಕಳೆದ 13 ವರ್ಷಗಳಿಂದ ಈ ಎರಡೂ ಆಧ್ಯಾತ್ಮಿಕ ಸಂಸ್ಥೆಗಳ ನಡುವೆ ನಿರ್ಮಾಣವಾಗಿರುವ ಧರ್ಮಬಾಂಧವ್ಯವು ಅಭೂತಪೂರ್ವವಾಗಿದೆ. ಪ್ರಯಾಗ, ಹರಿದ್ವಾರ, ರಾಜೀಮ್ ಕುಂಭಮೇಳ, ಗೋವಾದಲ್ಲಿ ನಡೆಯುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ, ದೆಹಲಿಯ ಶಂಖನಾದ ಮಹೋತ್ಸವ, ಹಾಗೂ ಛತ್ತೀಸಗಢದಲ್ಲಿ ನಡೆಯುವ ಹಿಂದೂ ರಾಷ್ಟ್ರ ಅಧಿವೇಶನಗಳಲ್ಲಿ ಎರಡೂ ಸಂಸ್ಥೆಗಳು ಆಗಾಗ ಒಂದಾಗಿ ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿವೆ. ಇದೇ ಧರ್ಮಬಾಂಧವ್ಯದ ಸಂಬಂಧದಿಂದ ಶದಾಣಿ ದರಬಾರಿನ ನವಮ ಪೀಠಾಧೀಶ್ವರ ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜರು ಸನಾತನ ಸಂಸ್ಥೆಯ ಶ್ರೀಸತ್‌ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರನ್ನು ಛತ್ತೀಸಗಢಕ್ಕೆ ಆಹ್ವಾನಿಸಿದ್ದರು. ಈ ಸದ್ಗುರುದ್ವಯರ ಪ್ರವಾಸವು ಅಖಿಲ ಸಿಂಧಿ ಸಮುದಾಯವನ್ನು ಸನಾತನ ಸಂಸ್ಥೆಯೊಂದಿಗೆ ಜೋಡಿಸುವಂತಾಯಿತು.

3. ಮಾರ್ಗದರ್ಶನದಿಂದ ಪ್ರಭಾವಿತರಾದ ಸಿಂಧಿ ಸಮುದಾಯದ ಗಣ್ಯರು ಭೇಟಿಯಾಗಲು ಆಗಮಿಸುವುದು

ನಾರಿಶಕ್ತಿ ಸಮ್ಮೇಳನದ ನಂತರ ಸದ್ಗುರುದ್ವಯರ ಮಾರ್ಗದರ್ಶನದಿಂದ ಪ್ರಭಾವಿತರಾದ ಉದ್ಯಮಿಗಳು, ಸಂತರು ಮತ್ತು ಗಣ್ಯ ವ್ಯಕ್ತಿಗಳು ಅವರಿಬ್ಬರನ್ನು ಭೇಟಿಯಾಗಲು ಬಂದಿದ್ದರು. ಜುನಾಗಢದ ಒಬ್ಬ ಸಂತರು ತಮ್ಮ ಪ್ರದೇಶದಲ್ಲಿ ಇದೇ ರೀತಿಯ ಮಾರ್ಗದರ್ಶನ ನೀಡಲು ಶ್ರೀಸತ್‌ ಶಕ್ತಿ (ಸೌ.) ಸಿಂಗಬಾಳ ಅವರನ್ನು ಆಹ್ವಾನಿಸಿದರು. ಪಾಕಿಸ್ತಾನದಿಂದ ಬಂದಿದ್ದ ಒಬ್ಬ ಉದ್ಯಮಿಯು ‘ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹಿಂದೂಗಳಿಗೆ ಮಾರ್ಗದರ್ಶನ ಮಾಡಲು ಬರಬೇಕು’ ಎಂದು ಶ್ರದ್ಧಾಪೂರ್ವಕವಾಗಿ ಆಹ್ವಾನಿಸಿದರು. ಪಾಕಿಸ್ತಾನದ ಕೆಲವು ಉದ್ಯಮಿಗಳು ‘ಅಲ್ಲಿನ ತೀರ್ಥಕ್ಷೇತ್ರಗಳು ಮತ್ತು ಶಕ್ತಿಪೀಠಗಳ ದರ್ಶನ ಮಾಡಿಸಲು ಸಂಪೂರ್ಣ ಸಹಾಯ ಮಾಡುತ್ತೇವೆ’ ಎಂದೂ ಸದ್ಗುರುದ್ವಯರಿಗೆ ಭರವಸೆ ನೀಡಿದರು. ಎರಡು ದಿನಗಳ ಕಾರ್ಯಕ್ರಮದಲ್ಲಿ ಸಿಂಧಿ ಸಮುದಾಯದ ಅನೇಕ ಗಣ್ಯ ವ್ಯಕ್ತಿಗಳು ಸಂಸ್ಥೆಯ ಕಾರ್ಯವನ್ನು ಶ್ರದ್ಧೆಯಿಂದ ತಿಳಿದುಕೊಂಡರು, ಹಾಗೂ ಗೋವಾಕ್ಕೆ ಬಂದು ಆಶ್ರಮವನ್ನು ವೀಕ್ಷಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.


ಸನಾತನ ಸಂಸ್ಥೆ ಮತ್ತು ಅದರ ಆಧ್ಯಾತ್ಮಿಕ ಉತ್ತರಾಧಿಕಾರಿ ಸದ್ಗುರುದ್ವಯರ ಮಾರ್ಗದರ್ಶನದ ಕುರಿತು ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜರ ಗೌರವೋದ್ಗಾರ!

ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜ್

೧. ಸನಾತನ ಸಂಸ್ಥೆಯ ಕುರಿತು ಗೌರವೋದ್ಗಾರ : ಸನಾತನ ಸಂಸ್ಥೆಯ ಕೇಂದ್ರ ಕಚೇರಿಯು ಗೋವಾದಲ್ಲಿದ್ದು, ದೇಶಾದ್ಯಂತ ಸಂಸ್ಥೆಯು ಕಾರ್ಯನಿರತವಾಗಿದೆ. ಸನಾತನ ಸಂಸ್ಥೆಯ ಮುಖ್ಯ ಉದ್ದೇಶ ನಮ್ಮ ವೈದಿಕ ಸಭ್ಯತೆ, ಭಾರತೀಯ ಸಂಸ್ಕಾರ ಮತ್ತು ಗುರುಪರಂಪರೆಯನ್ನು ಪ್ರಸಾರ ಮಾಡುವುದಾಗಿದೆ. ಸಂಪೂರ್ಣ ಜಗತ್ತಿನಲ್ಲಿ ಭಾರತವನ್ನು ಆಧ್ಯಾತ್ಮಿಕವಾಗಿ ಶ್ರೇಷ್ಠವಾಗಿಸುವ ಮತ್ತು ದಿವ್ಯ ವಿಚಾರಗಳನ್ನು ಪ್ರಚಾರ ಮಾಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಇದೊಂದು ಅದ್ಭುತ ಸಂಸ್ಥೆಯಾಗಿದ್ದು, ಇಲ್ಲಿ ಸಾಧಕರು ಆಧ್ಯಾತ್ಮಿಕ ಉನ್ನತಿ ಸಾಧಿಸಿದ ನಂತರ ಅವರನ್ನು ಸಂತರು ಮತ್ತು ಸದ್ಗುರುಗಳು ಎಂದು ಕರೆಯಲಾಗುತ್ತದೆ. ನಿಜವಾದ ಅರ್ಥದಲ್ಲಿ ಇದೇ ನಮ್ಮ ಋಷಿ ಪರಂಪರೆಯಾಗಿದ್ದು, ಇದು ಸಮರ್ಪಿತ ಜನರನ್ನು ಧರ್ಮದ ರಕ್ಷಕರನ್ನಾಗಿ ಮುಂದೆ ತರುತ್ತದೆ!

೨. ಶ್ರೀಸತ್‌ ಶಕ್ತಿ (ಸೌ) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರ ಕುರಿತು ಗೌರವೋದ್ಗಾರ! : ಪ.ಪೂ. ಮಾತಾ ಸಾಹಿಬ್

ಹಾಸೀದೇವಿಜಿ ಅವರ 200 ನೇ ಜಯಂತಿ ಮಹೋತ್ಸವದ ನಿಮಿತ್ತ ಭಾರತದ ಒಂದು ಮಹತ್ವದ ಸಂಸ್ಥೆಯಾಗಿರುವ ಸನಾತನ ಸಂಸ್ಥೆಯ ಗುರುಮಾತೆಯರನ್ನು ಆಹ್ವಾನಿಸುವ ಪ್ರೇರಣೆ ಸಿಕ್ಕಿತು.

ಅ. ಸನಾತನ ಸಂಸ್ಥೆಯ ಗುರುಮಾತೆಯರು ಇಂದು ಆಗಮಿಸಿದ್ದಾರೆ. ಅವರ ಮಾರ್ಗದರ್ಶನವನ್ನು ನೀವೆಲ್ಲರೂ ಕೇಳಿದ್ದೀರಿ. ಅವರತ್ತ ನೀವು ನೋಡಿ. ಅವರ ದರ್ಶನ ಪಡೆಯಿರಿ! ಅವರ ಕುರಿತು ನನಗೆ ಸಂಸ್ಕೃತ ಭಾಷೆಯಲ್ಲಿ ಒಂದು ರಚನೆ ಹೊಳೆಯಿತು, ಅದನ್ನು ಓದಿ ಹೇಳುತ್ತೇನೆ. ‘ಅತಿ ಸರಲಾ, ಅತಿ ಮೃದುಲಾ, ಗೃಹ ಕುಶಲಾ। ಸಾ ಅತುಲಾ, ಮಮ ಮಾತಾ ದೇವತಾ|| (ಅರ್ಥ : ಅವರು ಅತ್ಯಂತ ಸರಳ ಸ್ವಭಾವದವರಾಗಿದ್ದಾರೆ, ಅವರು ಅತ್ಯಂತ ಕೋಮಲವಾಗಿದ್ದಾರೆ, ಅವರು ಗೃಹಕಾರ್ಯದಲ್ಲಿ ಅತ್ಯಂತ ಕುಶಲರಾಗಿದ್ದಾರೆ, ಅವರು ಅದ್ವಿತೀಯರಾಗಿದ್ದಾರೆ (ಅವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ), ಇಂತಹ ನನ್ನ ಮಾತೆ, ಇವರೇ ನನ್ನ ದೇವತೆ.)

ಆ. ಸನಾತನ ಸಂಸ್ಥೆಯ ಗುರುಮಾತೆಯರು ಸನಾತನ ಧರ್ಮದ ವ್ಯಾವಹಾರಿಕ ಮಗ್ಗಲುಗಳನ್ನು ಅತ್ಯಂತ ಕುಶಲತೆಯಿಂದ ಮಂಡಿಸಿದ್ದಾರೆ. ಭಾರತೀಯ ನಾರಿಯ ಸ್ವರೂಪವನ್ನು ದೇವಿಯ ರೂಪದಲ್ಲಿ ಮಂಡಿಸುವ ಇವರ ಅತ್ಯಂತ ಭಾವಪೂರ್ಣ ಮತ್ತು ಅತಿ ಮಧುರವಾಗಿ ತಿಳಿಸುವ ಶೈಲಿಯನ್ನು ಕೇಳುವಾಗ, ಯಾವುದೋ ದೇವಿಯೇ ಮಾತನಾಡುತ್ತಿದ್ದಾಳೆ, ಸಾಕ್ಷಾತ್ ದೇವಿಯೇ ಉಪದೇಶ ನೀಡುತ್ತಿದ್ದಾಳೆ, ತನ್ನ ಮಕ್ಕಳಿಗೆ ತಿಳಿಸಿ ಹೇಳುತ್ತಿದ್ದಾಳೆ ಎಂದೆನಿಸುತ್ತಿತ್ತು.

ಇ. ಒಬ್ಬರು ಸಚ್ಚಿದಾನಂದ ಅವಸ್ಥೆಯಲ್ಲಿರುವ ಡಾ. ಆಠವಲೆಜಿಯವರು ಗೋವಾದಲ್ಲಿದ್ದಾರೆ ಮತ್ತು ನೀವು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾಗಿದ್ದೀರಿ, ‘ಸತ್’ ಮತ್ತು ‘ಚಿತ್’. ನೀವು ಸತ್ಯರೂಪಿಣಿ, ಶಕ್ತಿ-ಜ್ಞಾನರೂಪಿಣಿ, ಸರಸ್ವತಿಗೆ ಸಮಾನರಾದವರು, ಮಧುರವಾಗಿ ಮಾತನಾಡುವ ತಾಯಿಗೆ ಸಮಾನರಾದವರು, ಉಪದೇಶ ನೀಡುವ ಸಂತ ಸ್ವಭಾವದವರು, ಸಕಾರಾತ್ಮಕ ಶಕ್ತಿ ನೀಡುವವರು, ಶಿಕ್ಷಕಿಗೆ ಸಮಾನರೂ ಹೌದು, ಶಕ್ತಿಗೆ ಸಮಾನರೂ ಹೌದು, ದೇವಿಗೆ ಸಮಾನರೂ ಹೌದು! ಇವರಿಗೆ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಹೇಗೆ ಹೆಸರು ನೀಡಿದ್ದಾರೋ, ಹಾಗೆಯೇ ಉಡುಗೆ-ತೊಡುಗೆ, ಹಾಗೆಯೇ ಸ್ವಭಾವ, ಹಾಗೆಯೇ ಆಕರ್ಷಣೆ ಮತ್ತು ಮಮತೆಯ ದಿವ್ಯ ರೂಪ! ಈ ನಾರಿಶಕ್ತಿ ಸಮ್ಮೇಳನದಲ್ಲಿ ನಾವು ನಮ್ಮ ಭಾರತೀಯ ಸ್ವರೂಪದ ಗುರುಮಾತೆಯರನ್ನು ಇಲ್ಲಿಗೆ ಆಹ್ವಾನಿಸಿದ್ದೇವೆ ಎಂಬುದಕ್ಕೆ ನಾವು ನಮ್ಮನ್ನು ಧನ್ಯರೆಂದು ಭಾವಿಸುತ್ತೇವೆ.

4. ‘ಸನಾತನ ಸಂಸ್ಥೆ’ ಮತ್ತು ‘ಶದಾಣಿ ದರಬಾರ’ ಒಂದೇ ಪರಿವಾರ ಎಂಬ ಅನುಭೂತಿ

ಶ್ರೀ. ಚೇತನ ರಾಜಹಂಸ

ಇಬ್ಬರೂ ಸದ್ಗುರುದ್ವಯರ ಶದಾಣಿ ದರಬಾರಿನ ಮೊದಲ ಪ್ರವಾಸ ಇದಾಗಿತ್ತು; ಆದರೆ ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜರ ಶಿಷ್ಯರಾದ ಶ್ರೀ. ಬಂಟಿ ಛಾಬ್ರಾ, ಶ್ರೀ. ಸುಮಿತ ಚಾವಲಾ, ಶ್ರೀ. ಅಮರ ಶದಾಣಿ ಮತ್ತು ಇತರ ಸಹಕಾರಿಗಳು ಅತ್ಯಂತ ಭಾವಪೂರ್ಣವಾಗಿ ಸೇವೆ ಮಾಡಿದರು. ‘ಇವರು ನಮ್ಮದೇ ಪರಿವಾರದ ಸಂತರು’ ಎಂಬ ಭಾವನೆಯಿಂದ ಅವರು ಫಲಾಹಾರ ನೀಡುವುದು, ಚರಣಗಳಲ್ಲಿ ಕುಳಿತು ಛಾಯಾಚಿತ್ರ ತೆಗೆದುಕೊಳ್ಳುವುದು ಮತ್ತು ಮನಬಿಚ್ಚಿ ಸಂಭಾಷಣೆ ನಡೆಸುವುದು, ಈ ಎಲ್ಲಾ ಸೇವೆಗಳನ್ನು ಅತ್ಯಂತ ಆತ್ಮೀಯತೆಯಿಂದ ಮತ್ತು ಅಂತಃಕರಣದಿಂದ ಮಾಡಿದರು. ಎಲ್ಲ ಭಕ್ತರ ಮಾತುಗಳಲ್ಲಿ ಒಂದು ವಾಕ್ಯವು ಸಾಮಾನ್ಯವಾಗಿತ್ತು, ಅದೇನೆಂದರೆ “ನಾವು ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇವೆ ಎಂದೆನಿಸುತ್ತಲೇ ಇಲ್ಲ. ನಮ್ಮ ಭೇಟಿ ಅನೇಕ ಬಾರಿ ಆಗಿದೆ ಎಂದೆನಿಸುತ್ತಿದೆ. ನಿಮ್ಮ ಮಾತುಗಳಿಂದ ಮತ್ತು ಆಚರಣೆಯಿಂದ ಸನಾತನ ಸಂಸ್ಥೆ ಹಾಗೂ ಶದಾಣಿ ದರಬಾರ ಒಂದೇ ಪರಿವಾರವಾಗಿದೆ ಎಂಬುದರ ಪ್ರತ್ಯಕ್ಷ ಅನುಭೂತಿಯನ್ನು ನಾವು ಪಡೆಯುತ್ತಿದ್ದೇವೆ.”

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.

ಇಲ್ಲಿ ಪ್ರಸಿದ್ಧಪಡಿಸಲಾದ ಅನುಭೂತಿಗಳು ಕೆಲವು ಬಾರಿ ಕೆಷ್ಟ ಶಕ್ತಿಗಳಿಂದ ಅಥವಾ ‘ಭಾವವಿದ್ದಲ್ಲಿ ದೇವ’ ಎಂಬ ಉಕ್ತಿಯಂತೆ ಸಾಧಕರಿಗೆ / ಸಂತರಿಗೆ / ಧರ್ಮಪ್ರೇಮಿಗಳಿಗೆ ಬಂದಿರುವ ವೈಯಕ್ತಿಕ ಅನುಭೂತಿಗಳಾಗಿವೆ. ಅವು ಎಲ್ಲರಿಗೂ ಬರುತ್ತವೆ ಎಂದೇನಿಲ್ಲ. - ಸಂಪಾದಕರು