(ಗ್ರೂಮಿಂಗ್ ಗ್ಯಾಂಗ್ ಎಂದರೆ ಸಣ್ಣ ಹೆಣ್ಣುಮಕ್ಕಳನ್ನು ಅಥವಾ ಯುವತಿಯರನ್ನು ಜಾಲದಲ್ಲಿ ಸಿಲುಕಿಸಿ ಅವರ ಲೈಂಗಿಕ ಶೋಷಣೆ ಮಾಡುವ ಗ್ಯಾಂಗ್)

ಲಂಡನ (ಬ್ರಿಟನ್) – ಬ್ರಿಟಿಷ್ ಸಂಸತ್ತಿನಲ್ಲಿ ಇತ್ತೀಚೆಗೆ ‘ಗ್ರೂಮಿಂಗ್ ಗ್ಯಾಂಗ್’ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಗ್ರೇಟ್ ಯಾರ್ ಮೌತ್ ನ ಸಂಸದ ರೂಪರ್ಟ್ ಲೋವ್ ಅವರು ಸಂಸತ್ತಿನಲ್ಲಿ ಅನೇಕ ಸಂತ್ರಸ್ತ ಮಹಿಳೆಯರು ಮತ್ತು ಬಾಲಕಿಯರ ಸಾಕ್ಷ್ಯಗಳನ್ನು ಓದಿ ಪ್ರಸ್ತಾಪಿಸಿದರು. ಈ ಸಾಕ್ಷ್ಯಗಳಲ್ಲಿ ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ ಮತ್ತು ಜನಾಂಗೀಯ ಆಧಾರದ ಮೇಲೆ ಬ್ರಿಟಿಷ್ ಹುಡುಗಿಯರನ್ನು ಗುರಿಯಾಗಿಸಿಕೊಂಡಿರುವಂತಹ ಅತ್ಯಂತ ನೋವಿನ ಘಟನೆಗಳು ಮುನ್ನೆಲೆಗೆ ಬಂದಿವೆ.
೧. ಸಂಸತ್ತಿನಲ್ಲಿ ಲೋವ್ ಅವರು, ಅನೇಕ ಸಂತ್ರಸ್ತರು ಹಲವು ವರ್ಷಗಳ ಕಾಲ ದೌರ್ಜನ್ಯವನ್ನು ಸಹಿಸಿಕೊಂಡರು; ಆದರೆ ಅವರ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇವು ಕೇವಲ ಘಟನೆಗಳಾಗಿರಲಿಲ್ಲ, ಬದಲಿಗೆ ಇದೊಂದು ಸಂಘಟಿತ ಅಪರಾಧವಾಗಿತ್ತು, ಇದನ್ನು ತಡೆಯುವಲ್ಲಿ ಅನೇಕ ಸಂಸ್ಥೆಗಳು ವಿಫಲವಾದವು, ಎಂದು ಹೇಳಿದರು.
೨. ಸಂಸದ ಲೋವ್ ಅವರು ಈ ಗ್ರೂಮಿಂಗ್ ಗ್ಯಾಂಗ್ ಪ್ರಕರಣಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಿದ್ದರು. ಈ ತನಿಖೆಯಲ್ಲಿ, ಬಾಲ ಲೈಂಗಿಕ ಶೋಷಣೆಯ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಪ್ರದೇಶಗಳಿಂದ ಹೆಚ್ಚಿನ ಪುರಾವೆಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
೩. ಲೋವ್ ಅವರು ಮಹಿಳೆಯೊಬ್ಬಳ ಸಾಕ್ಷ್ಯವನ್ನು ಉಲ್ಲೇಖಿಸುತ್ತಾ, ಈ ಮಹಿಳೆಯ ತಂದೆ ಇಮಾಮ್ (ಇಸ್ಲಾಂ ಧರ್ಮದ ವಿದ್ವಾಂಸ) ಆಗಿದ್ದರು. ಆ ಮಹಿಳೆಯು, ಹಲವು ವರ್ಷಗಳವರೆಗೆ ತನ್ನ ಮೇಲೆ 600 ರಿಂದ 700 ಬೇರೆ ಬೇರೆ ಪುರುಷರು ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿಸಿದ್ದಾಳೆ. ಒಬ್ಬ ಸಣ್ಣ ಹುಡುಗಿಯು, ತನ್ನ ಮುಖದ ಮೇಲೆ ಸಿಗರೇಟಿನಿಂದ ಸುಡಲಾಗಿತ್ತು ಎಂದು ಹೇಳಿದ್ದಾಳೆ. ಮತ್ತೊಬ್ಬ ಸಂತ್ರಸ್ತೆಯು, ತನಗೆ 12 ರಿಂದ 13 ವರ್ಷ ವಯಸ್ಸಾಗಿದ್ದಾಗ ತನ್ನ ಗುಪ್ತಾಂಗಕ್ಕೆ ಮದ್ಯದ ಬಾಟಲಿಯನ್ನು ತುರುಕಿ ಒಡೆಯಲಾಗಿತ್ತು ಎಂದು ಹೇಳಿದ್ದಾಳೆ. ಗ್ರೂಮಿಂಗ್ ಗ್ಯಾಂಗ್ ನಡೆಸುವ ಜನರು ಜನಾಂಗೀಯ ನಿಂದನೆಗಳನ್ನೂ ಮಾಡುತ್ತಿದ್ದರು ಎಂದು ಮತ್ತೊಬ್ಬ ಸಂತ್ರಸ್ತೆ ಸಾಕ್ಷ್ಯ ನುಡಿದಿದ್ದಾಳೆ. ಅವರು, ‘ಬಿಳಿ ಚರ್ಮದ ಹುಡುಗಿಯರ ಮೇಲಿನ ಸಂಸ್ಕಾರಗಳು ಮುಸ್ಲಿಂ ಹುಡುಗಿಯರಿಗಿಂತ ಕಡಿಮೆ ಇರುತ್ತವೆ,’ ಎಂದು ಹೇಳುತ್ತಿದ್ದರು. ಇಸ್ಲಾಂ ಹಬ್ಬಗಳ ಸಮಯದಲ್ಲಿ ತಮ್ಮ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದವು ಎಂದು ಒಬ್ಬ ಸಂತ್ರಸ್ತೆ ತಿಳಿಸಿದ್ದಾಳೆ. ವಿಶೇಷವಾಗಿ ಈದ್ ಹಬ್ಬದ ಆಸುಪಾಸಿನಲ್ಲಿ ಹೆಚ್ಚಿನ ಔತಣಕೂಟಗಳು ನಡೆಯುತ್ತಿದ್ದಾಗ ಅವರನ್ನು ಗುರಿಯಾಗಿಸಲಾಗುತ್ತಿತ್ತು ಮತ್ತು ಆ ಔತಣಕೂಟದಲ್ಲಿ ಭಾಗವಹಿಸುವ ಇತರ ಜನರೂ ಸಹ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದರು.
ಧರ್ಮ ಮತ್ತು ಜನಾಂಗೀಯ ಭೇದಭಾವದ ಆಧಾರದ ಮೇಲೆ ಗುರಿ !
ಅನೇಕ ಸಂತ್ರಸ್ತರು ದೈಹಿಕ ಹಿಂಸಾಚಾರದ ಜೊತೆಗೆ ಮಾನಸಿಕ ಶೋಷಣೆಯನ್ನೂ ಉಲ್ಲೇಖಿಸಿದ್ದಾರೆ. ತಾನು ಕ್ರಿಶ್ಚಿಯನ್ ಆಗಿದ್ದರಿಂದ ತನ್ನನ್ನು ಗುರಿಯಾಗಿಸಲಾಯಿತು ಎಂದು ಒಬ್ಬ ಸಂತ್ರಸ್ತೆ ಹೇಳಿದ್ದಾಳೆ. ಶೋಷಣೆ ನಡೆಸುವಾಗ ಆ ಜನರು ‘ಕ್ರಾಸ್’ ಕಡೆಗೆ ನೋಡಿ, ಈಗ ನಿನ್ನ ಈಶ್ವರ ಎಲ್ಲಿದ್ದಾನೆ ? ನಿನ್ನ ಈಶ್ವರ ನಿನ್ನನ್ನು ಕೈಬಿಟ್ಟಿದ್ದಾನೆಯೇ ? ಎಂದು ಕೇಳುತ್ತಿದ್ದರು.
ಬ್ರಿಟಿಷ್ ಶ್ವೇತವರ್ಣದ ಹುಡುಗಿಯರೇ ಗುರಿ !
ಗ್ರೂಮಿಂಗ್ ಗ್ಯಾಂಗ್ ಹೆಚ್ಚಾಗಿ ಬ್ರಿಟಿಷ್ ಮೂಲದ ಬಿಳಿ ಚರ್ಮದ ಹುಡುಗಿಯರನ್ನೇ ಗುರಿಯಾಗಿಸಿಕೊಳ್ಳುತ್ತಿತ್ತು. ಜನಾಂಗೀಯ ಭೇದಭಾವ ಮಾಡಲಾಗುತ್ತಿತ್ತು ಎಂದು ಸಂತ್ರಸ್ತೆಯರು ಹೇಳಿದ್ದಾರೆ. ನನ್ನೊಂದಿಗಿದ್ದ ಹುಡುಗಿಯರೆಲ್ಲರೂ ಶ್ವೇತವರ್ಣದವರೇ (ಮೂಲ ಬ್ರಿಟಿಷ್) ಆಗಿದ್ದರು, ಎಂದು ಸಂತ್ರಸ್ತೆಯೊಬ್ಬಳು ತಿಳಿಸಿದ್ದಾಳೆ.
ಅಂತಹದೇ ಮತ್ತೊಂದು ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬಳು, ತಾನು 15 ರಿಂದ 20 ಹುಡುಗಿಯರನ್ನು ನಾಯಿಗಳ ಪಂಜರದಲ್ಲಿ ಕೂಡಿಹಾಕಿರುವುದನ್ನು ನೋಡಿದ್ದಾಗಿ ಹೇಳಿದ್ದಾಳೆ. ಇವರೆಲ್ಲರೂ ಮೂಲ ಬ್ರಿಟಿಷ್ ಹುಡುಗಿಯರಾಗಿದ್ದರು. ಅಷ್ಟೇ ಅಲ್ಲದೆ, ಈ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ದೇಶದ ವಿವಿಧ ಸ್ಥಳಗಳಲ್ಲಿ ತನ್ನ ಮೇಲೆ ಅನೇಕ ಪೊಲೀಸ್ ಅಧಿಕಾರಿಗಳು ಬಲಾತ್ಕಾರ ಮಾಡಿದ್ದಾರೆ ಎಂದು ಸಂತ್ರಸ್ತೆಯೊಬ್ಬಳು ತಿಳಿಸಿದ್ದಾಳೆ.
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!