
ತೆಹ್ರಾನ್ (ಇರಾನ್) – ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಜಗತ್ತಿನಾದ್ಯಂತ ಪ್ರಸಾರವಾದ ನಂತರ, ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ತಾವು ತಮ್ಮ ಹುದ್ದೆಯನ್ನು ತೊರೆಯುತ್ತಿಲ್ಲ ಮತ್ತು ಎಂದಿನಂತೆ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವುದಾಗಿ ಪೆಜೆಶ್ಕಿಯನ್ ಸ್ಪಷ್ಟಪಡಿಸಿದ್ದಾರೆ. ನನ್ನ ಕೆಲಸವನ್ನು ಮುಂದುವರಿಸುತ್ತೇನೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಜನರಿಂದ ಏನನ್ನೂ ಮುಚ್ಚಿಡುವುದಿಲ್ಲ! – ಪೆಜೆಶ್ಕಿಯನ್
ಪೆಜೆಶ್ಕಿಯನ್ ಮುಂದುವರಿದು ಮಾತನಾಡಿ, ನಾವು ಇರಾನ್ ಜನತೆಯ ಮುಂದೆ ಸಮಸ್ಯೆಗಳನ್ನು ನಿಜ ಸ್ವರೂಪದಲ್ಲಿ ಮಂಡಿಸುತ್ತೇವೆ. ಪ್ರಸ್ತುತ ಬಿಕ್ಕಟ್ಟುಗಳ ಗಂಭೀರತೆಯ ಬಗ್ಗೆ ಜನರೊಂದಿಗೆ ಪಾರದರ್ಶಕತೆ ಇರುವುದು ಅತ್ಯಗತ್ಯ, ಇದರಿಂದ ಸವಾಲುಗಳನ್ನು ಒಟ್ಟಾಗಿ ಎದುರಿಸಬಹುದು ಎಂದರು.
ಇಸ್ಲಾಮಿಕ್ ಸೈನ್ಯದ ನಿಯಂತ್ರಣದಿಂದ ತೊಂದರೆಗೊಳಗಾಗಿರುವ ದಾವೆ
ಈ ಹಿಂದೆ ಪ್ರಕಟವಾಗಿದ್ದ ರಾಜೀನಾಮೆ ವರದಿಯಲ್ಲಿ ಪೆಜೆಶ್ಕಿಯನ್ ಅವರ ಹೇಳಿಕೆಯನ್ನು ನೀಡಲಾಗಿತ್ತು. “ದೇಶದ ಅಧಿಕಾರದ ಮೇಲೆ ಈಗ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಕಮಾಂಡರ್‌ಗಳ ಸಂಪೂರ್ಣ ನಿಯಂತ್ರಣವಿದೆ. ಫೆಬ್ರವರಿಯಲ್ಲಿ ಇರಾನ್‌ನ ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧ ಪ್ರಾರಂಭವಾದಾಗಿನಿಂದ ಮಹತ್ವದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ನನ್ನ ಸರಕಾರವನ್ನು ಹೊರಗಿಡಲಾಗಿದೆ’ ಎಂದು ಅವರು ಹೇಳಿದ್ದಾರೆಂದು ದಾವೆ ಮಾಡಲಾಗಿತ್ತು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !