ಕೋಟೆಯ ಮೇಲಿನ ‘ಈದ್ಗಾ’ ನಿರ್ಧಾರವು ನ್ಯಾಯಾಲಯದಲ್ಲಿದೆ, ಆದರೂ ರಸ್ತೆ ತಡೆದು ನಮಾಜ್ !
ನಮಾಜ್ ಪಠಣದ ವೇಳೆ ಕೋಟೆಯ ಮೇಲಿನ ದುರ್ಗಾದೇವಿ ದೇವಸ್ಥಾನಕ್ಕೆ ಹಿಂದೂಗಳಿಗೆ ಪ್ರವೇಶ ನಿಷೇಧ

ಮುಂಬಯಿ, ಮೇ 27 (ಸುದ್ದಿ) – ಠಾಣೆ ಜಿಲ್ಲೆಯ ಕಲ್ಯಾಣ್ ನಲ್ಲಿರುವ ದುರ್ಗಾಡಿ ಕೋಟೆಯ ಮೇಲಿನ ತಥಾಕಥಿತ ‘ಈದ್ಗಾ’ ವಿಷಯವು ಸದ್ಯ ನ್ಯಾಯಾಲಯದಲ್ಲಿದೆ. ಹೀಗಿದ್ದರೂ, ದುರ್ಗಾಡಿ ಕೋಟೆಯ ಹೊರಗೆ ಸಾವಿರಾರು ಮುಸ್ಲಿಮರು ಕಳೆದ ಹಲವು ವರ್ಷಗಳಿಂದ ರಸ್ತೆಯನ್ನು ತಡೆದು ನಮಾಜ್ ಪಠಿಸುತ್ತಿದ್ದಾರೆ. ಅತ್ಯಂತ ಆಕ್ರೋಶದ ಸಂಗತಿಯೆಂದರೆ, ನಮಾಜ್ ಪಠಣದ ವೇಳೆ ದುರ್ಗಾಡಿ ಕೋಟೆಯ ಮೇಲಿನ ದುರ್ಗಾದೇವಿ ದೇವಸ್ಥಾನಕ್ಕೆ ಹಿಂದೂಗಳಿಗೆ ಪ್ರವೇಶವನ್ನು ನಿಷೇಧಿಸಲಾಗುತ್ತಿದೆ. ಮಧ್ಯಪ್ರದೇಶದ ಭೋಜಶಾಲೆಯಲ್ಲೂ ಶುಕ್ರವಾರದ ನಮಾಜ್ ಪಠಣದ ಸಮಯದಲ್ಲಿ ಹಿಂದೂಗಳಿಗೆ ಸರಸ್ವತಿ ದೇವಿಯ ಪೂಜೆ ಮಾಡುವುದನ್ನು ಇದುವರೆಗೆ ನಿಷೇಧಿಸಲಾಗಿತ್ತು. ಆದರೆ, ಮಧ್ಯಪ್ರದೇಶ ಉಚ್ಚನ್ಯಾಯಾಲಯವು ಭೋಜಶಾಲೆ ಹಿಂದೂಗಳದ್ದೇ ಎಂದು ತೀರ್ಪು ನೀಡಿದ ನಂತರ, ಹಿಂದೂಗಳು ಈಗ ಅಲ್ಲಿ ಪ್ರತಿದಿನ ಪೂಜೆ-ಅರ್ಚನೆಗಳನ್ನು ಮಾಡಬಹುದಾಗಿದೆ.
🚨 Durgadi Fort in Thane is turning into a “Second Bhojshala”!
Even while the matter of the so-called ‘Eidgah’ is still sub-judice, roads are being blocked for Namaz
❗ Hindus are stopped from entering the Shri Durgadevi Temple during Namaz time.
Shiv Sena leader Gopal Landge… pic.twitter.com/sb7vRtNzTn
— Sanatan Prabhat (@SanatanPrabhat) May 27, 2026
ಈದ್ಗಾ ಅಲ್ಲ ಎನ್ನುವುದಕ್ಕೆ ಪುರಾವೆ
ದುಃಖಕರ ವಿಷಯವೆಂದರೆ, ದುರ್ಗಾಡಿ ಕೋಟೆಯ ಮೇಲಿನ ಶ್ರೀ ದುರ್ಗಾದೇವಿ ದೇವಸ್ಥಾನವೂ ಮಸೀದಿಯಾಗಿದೆ ಎಂದು ಮುಸ್ಲಿಮರು ಹಕ್ಕು ಸಾಧಿಸಿದ್ದರು; ಆದರೆ ಕೋಟೆಯ ಮೇಲಿನ ವಾಸ್ತು ದೇವಸ್ಥಾನವೇ ಆಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರೊಂದಿಗೆ, ಈ ತಥಾಕಥಿತ ‘ಈದ್ಗಾ’ ವಿಷಯವೂ ಸದ್ಯ ಕಲ್ಯಾಣ್ ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇದೆ. ದುರ್ಗಾಡಿ ಕೋಟೆಯ ಮೇಲಿನ ಈ ಗೋಡೆಯು ‘ಈದ್ಗಾ’ ಆಗಿದೆ ಎಂದು ಮುಸ್ಲಿಮರು ಪ್ರತಿಪಾದಿಸುತ್ತಿದ್ದಾರೆ. ಆದರೆ, ‘ಈದ್ಗಾ’ದ ಎರಡೂ ಬದಿಗಳಲ್ಲಿ ಮಿನಾರ್ ಗಳು ಇರುತ್ತವೆ; ಅಂತಹ ಯಾವುದೇ ಮಿನಾರ್ ಗಳು ಈ ಗೋಡೆಗೆ ಇಲ್ಲ. ‘ಈದ್ಗಾ’ದ ಮಧ್ಯದಲ್ಲಿ ಮುಸ್ಲಿಂ ಧರ್ಮಗುರುಗಳು ಭಾಷಣ ಮಾಡಲು ಜಾಗವಿರುತ್ತದೆ; ಅಂತಹ ಜಾಗವೂ ಈ ಗೋಡೆಯ ಮಧ್ಯದಲ್ಲಿ ಇಲ್ಲ. ಹೀಗಿದ್ದರೂ, ವರ್ಷಾನುಗಟ್ಟಲೆ ಮುಸ್ಲಿಮರ ಗುಂಪುಗಾರಿಕೆಗೆ ಮಣಿದು ಆಡಳಿತದ ವತಿಯಿಂದ ರಸ್ತೆಯ ಮೇಲಿನ ನಮಾಜ್ ಪಠಣಕ್ಕೆ ರಕ್ಷಣೆ ನೀಡಲಾಗುತ್ತಿದೆ.
ಪೊಲೀಸರು ಹಿಂದೂಗಳನ್ನು ದೇವಸ್ಥಾನಕ್ಕೆ ಹೋಗದಂತೆ ತಡೆಯಬಾರದು! – ಶಿವಸೇನೆದುರ್ಗಾಡಿ ಕೋಟೆಯ ಮೇಲೆ ಶ್ರೀ ದುರ್ಗಾದೇವಿ ದೇವಸ್ಥಾನವಿದೆ. ನಮಾಜ್ ಪಠಣದ ಸಮಯದಲ್ಲಿ ಪೊಲೀಸರು ಹಿಂದೂಗಳನ್ನು ದೇವಸ್ಥಾನಕ್ಕೆ ಹೋಗದಂತೆ ತಡೆಯುತ್ತಾರೆ. ದೇವಸ್ಥಾನಕ್ಕೆ ಹೋಗುವುದು ನಮ್ಮ ಧಾರ್ಮಿಕ ಹಕ್ಕು. ಪೊಲೀಸರು ನಮ್ಮನ್ನು ಅದರಿಂದ ತಡೆಯಬಾರದು. ಬದಲಿಗೆ ರಸ್ತೆ ತಡೆದು ಕಾನೂನುಬಾಹಿರವಾಗಿ ನಮಾಜ್ ಪಠಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಶಿವಸೇನೆ ಜಿಲ್ಲಾ ಪ್ರಮುಖ ಗೋಪಾಲ ಲಾಂಡಗೆ ಆಗ್ರಹಿಸಿದ್ದಾರೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ