ಪ್ರಧಾನಮಂತ್ರಿ ಮೋದಿಯವರನ್ನು ಹೊಗಳುತ್ತಾ ಡೊನಾಲ್ಡ್ ಟ್ರಂಪ್ ಹೇಳಿಕೆ !

ನವ ದೆಹಲಿ – ನನಗೆ ಭಾರತದ ಮೇಲೆ ಪ್ರೀತಿಯಿದೆ. ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಷ್ಟವಾಗುತ್ತಾರೆ. ನಾನು ಪ್ರಧಾನಿ ಮೋದಿಯವರ ಬಹುದೊಡ್ಡ ಅಭಿಮಾನಿಯಾಗಿದ್ದೇನೆ. ಮೋದಿ ಮಹಾನ್ ವ್ಯಕ್ತಿ ಮತ್ತು ನನ್ನ ಮಿತ್ರರಾಗಿದ್ದಾರೆ. ಇಲ್ಲಿ ಮುಂಜಾನೆಯಾಗಿದೆ, ನಿಮ್ಮಲ್ಲಿ ಸಂಜೆಯಾಗಿದೆ. ಆದ್ದರಿಂದ ನಿಮಗೆ ‘ಶುಭ ಸಂಜೆ’ ಎಂದು ಹೇಳಲು ಬಂದಿದ್ದೇನೆ. ನನಗೆ ಕೇವಲ ಇಷ್ಟೇ ಹೇಳಬೇಕಾಗಿದೆ, ನೀವೆಲ್ಲರೂ ಉತ್ತಮರಾಗಿದ್ದೀರಿ. ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಈ ಹಿಂದೆಂದೂ ಇಷ್ಟೊಂದು ನಿಕಟವಾಗಿರಲಿಲ್ಲ. ನನ್ನ ಮೇಲೆ ಮತ್ತು ನನ್ನ ದೇಶದ ಮೇಲೆ ನೀವು ಶೇ. 100 ರಷ್ಟು ವಿಶ್ವಾಸವಿಡಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ‘ನಮ್ಮ ಆರ್ಥಿಕತೆ ಮತ್ತು ಶೇರು ಮಾರುಕಟ್ಟೆಯು ದಾಖಲೆಯ ಮಟ್ಟದಲ್ಲಿದೆ ಹಾಗೂ ಭಾರತಕ್ಕೆ ಏನೇನು ಬೇಕೋ, ಅದೆಲ್ಲವೂ ಅವರಿಗೆ ಸಿಗಲಿದೆ’ ಎಂಬ ಭರವಸೆಯನ್ನೂ ಅವರು ನೀಡಿದರು. ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ 250 ನೇ ವರ್ಷಾಚರಣೆಯ ನಿಮಿತ್ತ ಇಲ್ಲಿನ ಅಮೆರಿಕನ್ ರಾಯಭಾರ ಕಚೇರಿಯು ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಅಮೆರಿಕದ ರಾಯಭಾರಿ ಸೆರ್ಜಿಯೋ ಗೋರ್ ಅವರು ಅಧ್ಯಕ್ಷ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿದರು ಮತ್ತು ಸ್ಪೀಕರ್ ಮೂಲಕ ಟ್ರಂಪ್ ಭಾರತೀಯರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರು ಮೇಲಿನ ಹೇಳಿಕೆಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ಮತ್ತು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಸೇರಿದಂತೆ ಸುಮಾರು ಒಂದೂವರೆ ಸಾವಿರ ಅತಿಥಿಗಳು ಉಪಸ್ಥಿತರಿದ್ದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು