
ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಅವರು ಜಿಜ್ಞಾಸೆಯಿಂದ ಅಧ್ಯಾತ್ಮದ ವಿಷಯಗಳ ಬಗ್ಗೆ ವೈಜ್ಞಾನಿಕ ಉಪಕರಣಗಳಿಂದ ಸಂಶೋಧನೆ ಮಾಡಿದ್ದಾರೆ. ಅದೇ ರೀತಿ ತಮ್ಮ ಬಗ್ಗೆಯೂ ಸೂಕ್ಷ್ಮ ಜ್ಞಾನ ಪಡೆಯುವ ಸಾಧಕರಿಗೆ ಪ್ರಶ್ನೆ ಕೇಳಿ ಅದರ ಕಾರಣವನ್ನು ತಿಳಿಯುತ್ತಾರೆ. ಇಲ್ಲಿ ಅವರು ರಾಷ್ಟ್ರ-ಧರ್ಮದ ಬಗ್ಗೆ ತಮ್ಮ ವಿಚಾರಗಳಲ್ಲಾದ ಬದಲಾವಣೆಗಳ ಬಗ್ಗೆ ಕೇಳಿ, ಅದಕ್ಕೆ ಉತ್ತರ ತಿಳಿದುಕೊಂಡಿದ್ದಾರೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಅವರ ಬರವಣಿಗೆ : ‘ರಾಷ್ಟ್ರ ಮತ್ತು ಧರ್ಮ ವಿಷಯದಲ್ಲಿ ನನ್ನ ವಿಚಾರಗಳಲ್ಲಿ ಆಗತೊಡಗಿದ ಬದಲಾವಣೆ
ಅ. ರಾಷ್ಟ್ರ ಮತ್ತು ಧರ್ಮ ಇವುಗಳ ಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ, ‘ಎಲ್ಲವೂ ಈಶ್ವರೇಚ್ಛೆಯಂತೆಯೇ ನಡೆಯುತ್ತದೆ’ ಎಂಬ ವಿಚಾರ ಮನಸ್ಸಿನಲ್ಲಿ ಬಿಂಬಿತವಾಗಿದ್ದರಿಂದ, ಪರಿಸ್ಥಿತಿಯನ್ನು ಸಾಕ್ಷಿಭಾವದಿಂದ ನೋಡುವುದು ಸಾಧ್ಯವಾಗುತ್ತಿತ್ತು.
ಆ. ಈಶ್ವರನೇ ಸ್ವತಃ ಅವತಾರ ಎತ್ತಿ ಕಾರ್ಯ ಮಾಡುತ್ತಾನೆ ಎಂದ ಮೇಲೆ, ನಾವೂ ನಮಗೆ ಸಾಧ್ಯವಿರುವ ಕಾರ್ಯ ಮಾಡಬೇಕು.
ಇ. ‘ಆ’ನ ವಿಚಾರ ‘ಅ’ನ ವಿಚಾರಕ್ಕೆ ವಿರುದ್ಧವಾಗಿದೆ. ಅಂದರೆ, ‘ನಾನು ಈಶ್ವರೇಚ್ಛೆ ಮತ್ತು ಸಾಕ್ಷಿಭಾವ’ ಶಬ್ದಗಳನ್ನು ಮರೆತು ಸ್ವಂತ ಬುದ್ಧಿಯಿಂದ ವಿಚಾರ ಮಾಡಲಾರಂಭಿಸಿದ್ದೇನೆ’ ಎಂದು ಅನಿಸಿತು.
ಈ. ಮೇಲಿನ ವಿಚಾರ ‘ನನ್ನ ಸ್ವಂತದ್ದೋ ಅಥವಾ ಈಶ್ವರನೇ ಮನಸ್ಸಿನಲ್ಲಿ ಹಾಕಿದ್ದೋ ?’ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು.
ಉ. ಈಶ್ವರನೇ ಸ್ವತಃ ಕಾರ್ಯ ಮಾಡುವುದರಿಂದ, ಅವನೊಂದಿಗೆ ಏಕರೂಪವಾಗಲು ನಾವೂ ಸಾಧ್ಯವಿರುವಷ್ಟು ಕಾರ್ಯ ಮಾಡಬೇಕು.
ಪ್ರಸ್ತುತ ಇಲ್ಲಿಯವರೆಗೆ ವಿಚಾರ ಸರಣಿ ನಿಂತಿದೆ.’ (೭.೪.೨೦೧೧)
೨. ಶ್ರೀ. ರಾಮ ಹೊನಪರ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !
೨ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಅವರ ಬದಲಾಗುತ್ತಾ ಹೋದ ಆಧ್ಯಾತ್ಮಿಕ ಸ್ಥಿತಿಗಳು

೨ ಅ ೧. ರಾಷ್ಟ್ರ ಮತ್ತು ಧರ್ಮ ಇವುಗಳ ಕಠಿಣ ಸ್ಥಿತಿಯನ್ನು ಸಾಕ್ಷಿಭಾವದಿಂದ ನೋಡುವುದು : ‘ಸಂತರಿಗೆ ಅವರ ಉನ್ನತ ಆಧ್ಯಾತ್ಮಿಕ ಮಟ್ಟದಿಂದಾಗಿ ‘ಈಶ್ವರನೇ ಸತ್ಯ ಮತ್ತು ಉಳಿದೆಲ್ಲವೂ ಮಾಯೆ’ ಎಂಬ ಅರಿವಿರುತ್ತದೆ. ‘ಎಲ್ಲ ಈಶ್ವರೇಚ್ಛೆಯಿಂದ ನಡೆಯುತ್ತಿದೆ’ ಎಂಬ ಜ್ಞಾನ ಸಂತರಿಗೆ ಇರುತ್ತದೆ. ಆದ್ದರಿಂದ ಅವರಿಗೆ ಯಾವುದೇ ಸ್ಥಿತಿಯನ್ನು ಬದಲಾಯಿಸುವ ಇಚ್ಛೆ ಇರುವುದಿಲ್ಲ. ಈ ಆಧ್ಯಾತ್ಮಿಕ ಸ್ಥಿತಿಯಿಂದಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ ಅವರಿಗೆ ರಾಷ್ಟ್ರ ಮತ್ತು ಧರ್ಮದ ಕಠಿಣ ಸ್ಥಿತಿಯ ಕಡೆಗೆ ತಟಸ್ಥವಾಗಿ ನೋಡಲು ಸಾಧ್ಯವಾಗುತ್ತಿತ್ತು.
೨ ಅ ೨. ‘ಈಶ್ವರನೇ ಅವತಾರ ಎತ್ತಿ ಕಾರ್ಯ ಮಾಡುತ್ತಾನೆ ಎಂದ ಮೇಲೆ ನಾವೂ ಕಾರ್ಯ ಮಾಡಬೇಕು’ ಎಂಬ ವಿಚಾರ ಬರಲು ಕಾರಣ : ಸತ್ತ್ವಗುಣದಿಂದಾಗಿ ಪೃಥ್ವಿಯ ಮೇಲೆ ಶಾಂತಿ ಮತ್ತು ಸ್ಥಿರತೆ ಇರುತ್ತದೆ. ರಜೋಗುಣದಿಂದ ಮಾಯೆಯ ಕಾರ್ಯ ಹೆಚ್ಚಾಗುತ್ತದೆ ಮತ್ತು ತಮೋಗುಣದಿಂದ ಕೆಟ್ಟ ಘಟನೆಗಳು ಹೆಚ್ಚಾಗುತ್ತವೆ ಹಾಗೂ ಧರ್ಮದ ಕಾರ್ಯವು ಕಡಿಮೆಯಾಗಿ ಅಧರ್ಮದ ಕಾರ್ಯವು ಹೆಚ್ಚಾಗತೊಡಗುತ್ತದೆ. ಕಾಲಕ್ಕನುಗುಣವಾಗಿ ತ್ರಿಗುಣಗಳಲ್ಲಿ ಬದಲಾವಣೆ ಆಗುತ್ತಾ ಹೋದಂತೆ ಪೃಥ್ವಿಯ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೆಲ್ಲವೂ ಮಾಯೆಯ ಕಾರ್ಯವಾಗಿರುತ್ತದೆ. ಈ ಕಾರ್ಯದಲ್ಲಿ ಈಶ್ವರನು ಹಸ್ತಕ್ಷೇಪ ಮಾಡದೆ ತಟಸ್ಥವಾಗಿ ನೋಡುತ್ತಿರುತ್ತಾನೆ. ಯಾವಾಗ ಪ್ರತಿಕೂಲ ಪರಿಸ್ಥಿತಿಯಿಂದ ಸಾಧಕರಿಗೆ ತೊಂದರೆಯಾಗುತ್ತದೆಯೋ, ಆಗ ಈಶ್ವರನು ಅದರಲ್ಲಿ ಹಸ್ತಕ್ಷೇಪ ಮಾಡಿ ಸಾಧಕರನ್ನು ರಕ್ಷಿಸುತ್ತಾನೆ; ಏಕೆಂದರೆ ಈಶ್ವರನು ಭಕ್ತವತ್ಸಲನಾಗಿದ್ದಾನೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಮೊದಲು ರಾಷ್ಟ್ರ-ಧರ್ಮದ ಕಠಿಣ ಸ್ಥಿತಿಯನ್ನು ತಟಸ್ಥವಾಗಿ ನೋಡುತ್ತಿದ್ದರು. ಅವರ ಆಧ್ಯಾತ್ಮಿಕ ಮಟ್ಟವು ಹೆಚ್ಚಾದಾಗ ಅವರಲ್ಲಿನ ‘ಅವತಾರತ್ವ’ವು ಜಾಗೃತವಾಯಿತು.
೨ ಆ. ‘ಬದಲಾದ ವಿಚಾರ ಸ್ವಂತದ್ದೋ ಅಥವಾ ಈಶ್ವರ ಹಾಕಿದ್ದೋ ?’ ಎಂಬ ಪ್ರಶ್ನೆ ಮೂಡುವುದರ ಕಾರಣ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮನಸ್ಸಿನಲ್ಲಿ ಮೊದಲು ‘ರಾಷ್ಟ್ರ ಮತ್ತು ಧರ್ಮದ ಕಠಿಣ ಸ್ಥಿತಿ ತಟಸ್ಥವಾಗಿ ನೋಡುವುದು’ ಮತ್ತು ಅನಂತರ ‘ಈಶ್ವರನೇ ಸ್ವತಃ ಅವತಾರವೆತ್ತಿ ಕಾರ್ಯ ಮಾಡುತ್ತಾನೆ ಎಂದ ಮೇಲೆ, ನಾವೂ ಸಾಧ್ಯವಿರುವ ಕಾರ್ಯ ಮಾಡಬೇಕು’ ಎಂಬ ವಿಚಾರ ಬಂದಿತು.
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿ ಅವತಾರತ್ವ ಜಾಗೃತವಾಗಿದ್ದರೂ ಅವರಲ್ಲಿ ಯಾವುದೇ ‘ಕರ್ತೃತ್ವ ಭಾವ’ ಇಲ್ಲ. ಅವರಲ್ಲಿನ ಅಹಂಶೂನ್ಯ ಸ್ಥಿತಿಯಿಂದಾಗಿ ‘ಬದಲಾದ ವಿಚಾರ ನನ್ನದೋ ಅಥವಾ ಈಶ್ವರನೇ ಮನಸ್ಸಿನಲ್ಲಿ ಹಾಕಿದ್ದೋ ?’ ಎಂಬ ಪ್ರಶ್ನೆ ಅವರಲ್ಲಿ ಮೂಡಿತು.
೨ ಇ. ಮನಸ್ಸಿನ ವಿಚಾರಸರಣಿ ನಿಲ್ಲಲು ಕಾರಣ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈಶ್ವರಪ್ರಾಪ್ತಿಯನ್ನು ಸಾಧಿಸಿದ್ದಾರೆ. ಅವರ ಜೀವನವು ಈಶ್ವರಮಯವಾಗಿದ್ದು ಅವರ ಅವತಾರಿ ಕಾರ್ಯವು ನಡೆಯುತ್ತಿದೆ. ಆದ್ದರಿಂದ ಅವರ ಮನಸ್ಸಿನ ವಿಚಾರಸರಣಿ ನಿಂತಿದೆ.
– ಶ್ರೀ. ರಾಮ ಹೊನಪ (ಸೂಕ್ಷ್ಮಜ್ಞಾನ ಪಡೆದ ಸಾಧಕ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !