ಗೋವಾದ ರಾಮನಾಥಿ ಇಲ್ಲಿನ, ಸನಾತನ ಸಂಸ್ಥೆಯ ಆಶ್ರಮಕ್ಕೆ ಪ್ರತಿದಿನ ಅನೇಕ ಜಿಜ್ಞಾಸುಗಳು ಭೇಟಿ ನೀಡುತ್ತಾರೆ. ಆಗ ’ಆಶ್ರಮದಲ್ಲಿ ವಾಸವಿರುವ ನೂರಾರು ಸಾಧಕರು ಪೂರ್ಣಾವಧಿ ಧರ್ಮಕಾರ್ಯ ಮಾಡುತ್ತಿದ್ದಾರೆ’, ಎಂಬುದನ್ನು ನೋಡಿದಾಗ ಅನೇಕರಿಗೆ ಕೆಲವು ಸಾಮಾನ್ಯ ಪ್ರಶ್ನೆಗಳು ಮೂಡುತ್ತವೆ. ’ನಿಮ್ಮ ಮುಂದಿನ ಗತಿ ಏನು ?’, ’ನಿಮ್ಮ ತಂದೆ-ತಾಯಿಯರನ್ನು ನೀವು ಹೇಗೆ ನೋಡಿಕೊಳ್ಳುತ್ತೀರಿ ?’ ಇತ್ಯಾದಿ. ಸದ್ಯ ಬಹುತೇಕರಿಗೆ ’ಹಣವೇ ಸರ್ವಸ್ವ’ ಎಂದೆನಿಸುತ್ತದೆ. ವ್ಯಾವಹಾರಿಕ ದೃಷ್ಟಿಯಿಂದ ಇದು ಸರಿಯಾಗಿದ್ದರೂ, ಆಧ್ಯಾತ್ಮಿಕ ದೃಷ್ಟಿಯಿಂದ ಇದನ್ನು ಬೇರೆ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ. ಯಾವ ದೇವರು ನಮ್ಮೆಲ್ಲರಿಗೂ ಜನ್ಮ ನೀಡಿದ್ದಾನೋ, ಅವನೇ ಪಾಲಕನಾಗಿದ್ದಾನೆ. ಇದರ ಅನುಭೂತಿಯನ್ನು ಸಾಧಕರು ಪಡೆದಿರುವುದರಿಂದ, ಅವರು ನಿಶ್ಚಿಂತೆಯಿಂದ ಆಶ್ರಮದಲ್ಲಿದ್ದುಕೊಂಡು ಪೂರ್ಣಾವಧಿ ರಾಷ್ಟ್ರ ಮತ್ತು ಧರ್ಮದ ಸೇವೆಯನ್ನು ಮಾಡುತ್ತಾರೆ. ’ದೇವರು ಹೇಗೆ ಕಾಳಜಿ ವಹಿಸುತ್ತಾನೆ’, ಎಂಬುದರ ಕುರಿತು ನಾನು ಸ್ವತಃ ಮತ್ತು ಇತರ ಸಾಧಕರು ಅನುಭವಿಸಿದ ಪ್ರಸಂಗಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇನೆ. ಇದರಿಂದ ’ಎಲ್ಲಿಗೆ ಹೋಗುತ್ತೇನೆ, ಅಲ್ಲಿ ನೀನೇ ನನ್ನ ಸಂಗಾತಿ !’ಎನ್ನುವ ಸಂತವಾಣಿಯು ಎಷ್ಟು ಸಾರ್ಥಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.
ಸಂಕಲನಕಾರ : ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ’ಸನಾತನ ಪ್ರಭಾತ’ ಪ್ರಸಾರ ಮಾಧ್ಯಮ.
ಗುರುಗಳ ಸ್ಥೂಲ ಪ್ರೀತಿ ತೋರಿಸುವ ಛಾಯಾಚಿತ್ರಗಳು
‘ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ ನನ್ನ ಸಂಗಾತಿ !’

ಲೇಖನದ ಎಲ್ಲಾ ಅನುಭೂತಿಗಳಲ್ಲಿ ಪ್ರತ್ಯಕ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಸ್ತಿತ್ವವು ಎಲ್ಲೂ ಇಲ್ಲದಿದ್ದರೂ, ಅವರ ತತ್ತ್ವ್ವ ಅಂದರೆ ’ಗುರುತತ್ತ್ವ್ವ’ವು ಕಾರ್ಯ ಮಾಡುತ್ತದೆ. ಸಾಧಕರೇ ಅವರ ಸರ್ವಸ್ವರಾಗಿದ್ದಾರೆ. ಸಾಧಕರ ಮೇಲಿನ ಪ್ರೀತಿಯಿಂದಾಗಿಯೇ ಗುರುತತ್ತ್ವದ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರ ಕಾಳಜಿಯನ್ನು ಹೇಗೆ ವಹಿಸುತ್ತಾರೋ, ಹಾಗೆಯೇ ಅವರು ಪ್ರತ್ಯಕ್ಷ ಸ್ಥೂಲ ರೂಪದಿಂದಲೂ ಕಾಳಜಿ ವಹಿಸುತ್ತಾರೆ. ಈ ಲೇಖನದ ಜೊತೆಗೆ ನೀಡಿರುವ ವಿವಿಧ ಛಾಯಾಚಿತ್ರಗಳ ಮಾಧ್ಯಮದ ಮೂಲಕ ನಾವು ಗುರುದೇವರಿಗೆ ಸಾಧಕರ ಮೇಲಿರುವ ಪ್ರೀತಿಯನ್ನು ಅನುಭವಿಸೋಣ !
ನೆರೆಯವರಿಂದ ಸಹಾಯ ಮಾಡಿಸಿ ದೇವರು ನೀಡಿದ ಕೃಪೆಯ ಅನುಭೂತಿ !
ಪ್ರಸಂಗ ೧ :
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಶ್ರದ್ಧೆಯಿಂದ ಆತ್ಮನಿವೇದನೆ ಮಾಡಿದ ನಂತರ ತಂದೆಯ ರಕ್ತದ ವರದಿಯು ಸರಿಯಾಗಿ ಬರುವುದು

೧ ಅ. ವರ್ಷ ೧೯೯೯ ರಲ್ಲಿ ನಾನು ಪೂರ್ಣಾವಧಿ ಸಾಧನೆ ಮಾಡಲು ಸೇವಾಕೇಂದ್ರದಲ್ಲಿ ವಾಸಿಸಲು ಹೋದೆ. ನಾನು ಹೋದ ೨-೩ ತಿಂಗಳ ನಂತರ ತಂದೆಯವರ ರಕ್ತದಲ್ಲಿನ ಸಕ್ಕರೆಯು ಹಠಾತ್ತಾಗಿ ಹೆಚ್ಚಾಯಿತು. ಇದರಿಂದ ನಮ್ಮ ನೆರೆಮನೆಯ ಪರಿಚಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ನಂತರ ಅವರು ದೂರವಾಣಿ ಕರೆ ವಿಷಯ ತಿಳಿಸಿದರು ಮತ್ತು ‘ನೀವು ತಂದೆ-ತಾಯಿಯ ಕಾಳಜಿ ವಹಿಸುವುದಿಲ್ಲ ಮತ್ತು ಸನಾತನದ ಹಿಂದೆ ಅಲೆಯುತ್ತಿರುತ್ತೀರಿ !’ ಎಂದರು.
ನಾನು ಅವರಿಗೆ ಶಾಂತವಾಗಿ ಹೀಗೆಂದೆ, ‘ನಾನು ಕೆಲಸದ ನಿಮಿತ್ತ ಪರವೂರಿನಲ್ಲಿದ್ದರೂ ಇಂತಹ ಸ್ಥಿತಿ ಉದ್ಭವಿಸುತ್ತಿತ್ತು ಅಲ್ಲವೇ ? ಜೀವದ ಕಾಳಜಿ ವಹಿಸುವವನು ದೇವರೇ ಆಗಿದ್ದಾನೆ. ಈ ವೇಳೆ ಆತನು ನಿಮ್ಮ ಮೂಲಕ ತಂದೆಗೆ ಸಹಾಯ ಮಾಡಿದ್ದಾನೆ.’
೧ ಆ. ಅನಂತರ ನಾನು ಗುರುಗಳಿಗೆ ತಂದೆಯವರ ಆರೋಗ್ಯದ ಬಗ್ಗೆ ಮಾನಸ ರೂಪದಲ್ಲಿ ತಿಳಿಸಿದೆ. ಮರುದಿನ ಆ ಪರಿಚಿತರ ದೂರವಾಣಿ ಕರೆ ಮಾಡಿ, ”ಆಸ್ಪತ್ರೆಯ ಹಿರಿಯ ವೈದ್ಯರು ತಂದೆಯವರ ಪರೀಕ್ಷೆ ಮಾಡಿದರು ಮತ್ತು ಮತ್ತೊಮ್ಮೆ ರಕ್ತದ ಪರೀಕ್ಷೆ ಮಾಡಲು ತಿಳಿಸಿದರು. ಆಗ ’ಮೊದಲಿನ ವರದಿಗಳು ತಪ್ಪಾಗಿದ್ದವು’ ಎಂಬುದು ಕಂಡುಬಂದಿತು. ತಂದೆಯವರಿಗೆ ಈಗ ಯಾವುದೇ ಚಿಕಿತ್ಸೆಯ ಅವಶ್ಯಕತೆ ಇಲ್ಲ’ ಎಂದರು. ಇದನ್ನು ಹೇಳುವಾಗ ಅವರ ಧ್ವನಿ ನಮ್ರವಾಗಿತ್ತು; ಅವರಿಗೂ ಗುರುಕೃಪೆಯ ಅನುಭೂತಿ ಬಂದಿತ್ತು. ಆದರೆ ಅದೇ ಆ ಪರಿಚಿತರು ನಿಧನವಾದಾಗ, ಅವರ ಮಕ್ಕಳು ನೌಕರಿ ನಿಮಿತ್ತ ಬೇರೆಡೆ ಇದ್ದ ಕಾರಣ ಅವರ ಜೊತೆಯಲ್ಲಿ ಇರಲಿಲ್ಲ. ನೆರೆಹೊರೆಯವರೇ ಅಂತ್ಯಕ್ರಿಯೆ ಮಾಡಬೇಕಾಯಿತು.
ಸಾಧಕರನ್ನು ಪ್ರಶಂಸಿಸಿ ಪ್ರೋತ್ಸಾಹಿಸುವುದು

ಪ್ರಸಂಗ ೨ :
ಸೂಕ್ಷ್ಮದಿಂದ ಸ್ಥೂಲದ ವರೆಗಿನ ಮಾರ್ಗದರ್ಶಕ !
ಕುಲದೇವತೆಯ ದರ್ಶನದ ಸ್ಥಳದಲ್ಲಿ ತಂದೆ-ತಾಯಿಯರು ಪರಸ್ಪರ ಬೇರ್ಪಟ್ಟಾಗ, ತಾಯಿಯನ್ನು ಪರಾತ್ಪರ ಗುರು ಡಾಕ್ಟರರೇ ತಂದೆಯವರ ಬಳಿಗೆ ತಂದು ಬಿಟ್ಟರು
ಒಮ್ಮೆ ನನ್ನ ತಂದೆ-ತಾಯಿ (ಸನಾತನದ ಸಾಧಕ ದಿ. ವಾಮನರಾವ ಜಲತಾರೆ ಮತ್ತು ಸನಾತನದ ೯೫ ನೇ ಸಂತ ಪೂಜನೀಯ (ಶ್ರೀಮತಿ) ಕುಸುಮ ಜಲತಾರೆ, ವಯಸ್ಸು ೮೬ ವರ್ಷ) ಕುಲದೇವತೆಯ ದರ್ಶನಕ್ಕಾಗಿ ಮಾಹೂರನ (ಜಿಲ್ಲ್ಲಾ ನಾಂದೇಡ) ಶ್ರೀ ರೇಣುಕಾದೇವಿಯ ಶಕ್ತಿಪೀಠಕ್ಕೆ ಹೋಗಿದ್ದರು. ಅಲ್ಲಿ ಎರಡು ಬೆಟ್ಟಗಳಿವೆ. ಒಂದು ಬೆಟ್ಟದ ಮೇಲೆ ಶ್ರೀ ರೇಣುಕಾದೇವಿಯ ದೇವಸ್ಥಾನವಿದ್ದರೆ, ಇನ್ನೊಂದು ಬೆಟ್ಟದ ಮೇಲೆ ಶ್ರೀ ಕಾಳಿಕಾಮಾತೆಯ ದೇವಸ್ಥಾನವಿದೆ. ಕಾಳಿಕಾ ಮಾತೆಯ ಮಂದಿರಕ್ಕೆ ಹೆಚ್ಚಾಗಿ ತಂತ್ರ ಉಪಾಸನೆ ಮಾಡುವ ಜನರು ಹೋಗುತ್ತಾರೆ. ಮಾಹೂರನಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದರಿಂದ ತಂದೆ ಮತ್ತು ತಾಯಿ ಪರಸ್ಪರ ಬೇರ್ಪಟ್ಟರು. ತಾಯಿಯವರು ಅರಿವಿಲ್ಲದೆಯೇ ಕಾಳಿಕಾಮಾತೆಯ ದೇವಸ್ಥಾನದ ಕಡೆಗೆ ನಡೆಯತೊಡಗಿದರು. ಆಗ ಶುಭ್ರ ಬಿಳಿ ಬಣ್ಣದ ಕುರ್ತಾ ಧರಿಸಿದ್ದ ಒಬ್ಬ ಗೃಹಸ್ಥರು ಅವರಿಗೆ ಭೇಟಿಯಾದರು. ಅವರು ತಾಯಿಯವರಿಗೆ ದಾರಿ ತಪ್ಪಿರುವುದನ್ನು ಮನವರಿಕೆ ಮಾಡಿಕೊಟ್ಟರು ಮತ್ತು ಅವರ ಕೈ ಹಿಡಿದು ತಂದೆಯವರ ಬಳಿಗೆ ತಂದು ಬಿಟ್ಟರು. ಕೆಲವು ತಿಂಗಳುಗಳ ನಂತರ ತಾಯಿಯವರು ಪರಮ ಪೂಜ್ಯ ಡಾಕ್ಟರರ ಛಾಯಾಚಿತ್ರ ನೋಡಿದಾಗ, ’ತಮ್ಮ ಕೈ ಹಿಡಿದು ತಂದೆ ಬಳಿಗೆ ಕರೆದುಕೊಂಡು ಹೋದುವರು ಪರಮ ಪೂಜ್ಯ ಡಾಕ್ಟರರೇ ಆಗಿದ್ದರು !’ ಎಂಬುದು ಗಮನಕ್ಕೆ ಬಂದಿತು.-ಶ್ರೀ. ಯೋಗೇಶ ಜಲತಾರೆ
ವ್ಯಾಧಿ ಕುರಿತು ಆತ್ಮೀಯತೆಯಿಂದ ವಿಚಾರಿಸುವುದು

ಪ್ರಸಂಗ ೩ :
ಸೂಕ್ಷ್ಮದಿಂದ ಸ್ಥೂಲದಲ್ಲಿ ರಕ್ಷಿಸುವವನು !
ಚಲಿಸುತ್ತಿರುವ ರೈಲನ್ನು ಹತ್ತುವಾಗ ತಂದೆಯವರು ಸಮತೋಲನ ತಪ್ಪಿದಾಗ ಅವರನ್ನು ರಕ್ಷಿಸಿದ ವ್ಯಕ್ತಿ ಪರಾತ್ಪರ ಗುರು ಡಾಕ್ಟರರೇ ಆಗಿದ್ದರು !
ಒಮ್ಮೆ ತಂದೆಯವರು ರೈಲಿನಲ್ಲಿ ಬೇರೆ ಊರಿಗೆ ಹೋಗುತ್ತಿದ್ದರು. ಆಗ ರೈಲ್ವೆ ನಿಲ್ದಾಣದಲ್ಲಿ ವಿಪರೀತ ಜನಸಂದಣಿ ಇತ್ತು. ಈ ಕಾರಣದಿಂದಾಗಿ ಅವರಿಗೆ ರೈಲಿನ ಬೋಗಿಯನ್ನು ಹತ್ತಲು ತಡವಾಯಿತು. ನಂತರ ರೈಲು ಚಲಿಸಲು ಪ್ರಾರಂಭಿಸಿದಾಗ ಬೋಗಿಯನ್ನು ಹತ್ತುವ ಸಂದರ್ಭದಲ್ಲಿ ತಂದೆಯವರ ಸಮತೋಲನ ತಪ್ಪಿತು. ಅವರು ಕೆಳಗೆ ಬೀಳುವಷ್ಟರಲ್ಲಿ ಒಬ್ಬ ವ್ಯಕ್ತಿಯು ಅವರ ಕೈ ಹಿಡಿದು ಅವರನ್ನು ರಕ್ಷಿಸಿದನು. ಅಲ್ಲಿಯವರೆಗೆ ತಂದೆಯವರು ಪರಮ ಪೂಜ್ಯ ಡಾಕ್ಟರರನ್ನು ನೋಡಿರಲಿಲ್ಲ. ನಂತರ ಅವರು ಸನಾತನ ನಿರ್ಮಿತ ’ಸಾಧನೆ’ ಎಂಬ ವಿಷಯದ ಪ್ರವಚನದ ಧ್ವನಿಸುರುಳಿಯ (ಆಡಿಯೋ ಕ್ಯಾಸೆಟ್) ಮೇಲಿದ್ದ ಪ.ಪೂ.ಡಾಕ್ಟರರ ಛಾಯಾಚಿತ್ರವನ್ನು ನೋಡಿದರು. ಅದನ್ನು ನೋಡಿ, ”ರೈಲು ಹತ್ತುವಾಗ ನನ್ನ ಸಮತೋಲನ ತಪ್ಪಿದಾಗ ನನ್ನ ಕೈ ಹಿಡಿದ ವ್ಯಕ್ತಿ ಇವರೇ ಆಗಿದ್ದರು !”, ಎಂದರು. -ಶ್ರೀ. ಯೋಗೇಶ ಜಲತಾರೆ
ಸಾಧಕರೊಂದಿಗೆ ಬೆರೆತು ಆನಂದವನ್ನು ನೀಡುವುದು

ಅನಾರೋಗ್ಯವಿರುವ ಸಾಧಕರಿಗೆ ಆಧಾರ ನೀಡುವುದು
ನನಗೆ ತಿಳಿದಿರುವ ಸನಾತನ ಸಂಸ್ಥೆಯ ಕೆಲವು ಸಾಧಕರಿಗೆ ಗುರುದೇವರ ಕುರಿತು ಬಂದ ಅನುಭೂತಿಗಳು!
ಆಪತ್ಕಾಲೀನ ಘಟನೆಯಿಂದ ರಕ್ಷಿಸಿದ್ದು
ರೈಲಿನ ಭೀಕರ ಅಪಘಾತದಿಂದ ರಕ್ಷಿಸಿ ಅಕೋಲಾದ ಸಾಧಕರೊಬ್ಬರಿಗೆ ಪ.ಪೂ. ಡಾಕ್ಟರರು ನೀಡಿದ ಮರುಜನ್ಮ !
೧. ಸಾಧಕರೊಬ್ಬರು ಸೇವೆಯನ್ನು ಮುಗಿಸಿ ಸೇವಾಕೇಂದ್ರದಿಂದ ಹೊರಟ ನಂತರ ಪ.ಪೂ. ಡಾಕ್ಟರರು ಅವರ ಬಗ್ಗೆ ವಿಚಾರಿಸಿದರು : ಸಂಸ್ಥೆಯ ಆರಂಭದ ಕಾಲದಲ್ಲಿ ಸಾಧಕರೊಬ್ಬರು ಆಗಾಗ ಸೇವೆಗಾಗಿ ಮುಂಬಯಿಯಲ್ಲಿರುವ ಪ.ಪೂ. ಡಾಕ್ಟರರ ನಿವಾಸದಲ್ಲಿದ್ದ ಸೇವಾಕೇಂದ್ರಕ್ಕೆ ಹೋಗುತ್ತಿದ್ದರು. ಒಮ್ಮೆ ಸೇವೆ ಮುಗಿದ ನಂತರ ಅವರು ಊರಿಗೆ ಹೋಗಲು ಹೊರಟರು. ಆಗ ಪ.ಪೂ. ಡಾಕ್ಟರರು ಬೇರೊಂದು ಸೇವೆಯಲ್ಲಿದ್ದರು. ಸ್ವಲ್ಪ ಸಮಯದ ನಂತರ ಹೊರಬಂದ ಪ.ಪೂ. ಡಾಕ್ಟರರು ಅಲ್ಲಿದ್ದವರಿಗೆ ಆ ಸಾಧಕನ ಬಗ್ಗೆ ವಿಚಾರಿಸಿದರು ಮತ್ತು ’ಅವರು ಹೋದರೇ ?’ ಎಂದು ನೋಡಲು ತಿಳಿಸಿದರು. ಸಾಧಕರು ರಸ್ತೆಗೆ ಹೋಗಿ ನೋಡಿದಾಗ, ಆ ಸಾಧಕರು ಆಗಷ್ಟೇ ಆಟೋರಿಕ್ಷಾದಲ್ಲಿ ಹೊರಟಿರುವುದು ಕಂಡುಬಂದಿತು. ಅದನ್ನು ನೋಡಿ ಸಾಧಕರು ಪ.ಪೂ. ಡಾಕ್ಟರರಿಗೆ ವಿಷಯ ತಿಳಿಸಿದರು.
ಸಾಧಕರಿಗೆ ಸಂತರ ಆಶೀರ್ವಾದ ಕೊಡಿಸುವುದು

೨. ರೈಲ್ವೆ ನಿಲ್ದಾಣದಲ್ಲಿ ಸಾಧಕನಿಗೆ ಭಾವನವರ ಭೇಟಿಯಾಗಿ ಅವರು, ’ನಿಮ್ಮನ್ನು ಡಾ. ಆಠವಲೆ ಅವರು ಬೇರೊಂದು ಪ್ಲಾಟ್ ಫಾರ್ಮ್‌ನಲ್ಲಿ ಹುಡುಕುತ್ತಿದ್ದಾರೆ’ ಎಂದು ಹೇಳಿದರು : ಆ ಸಾಧಕರು ರೈಲ್ವೆ ನಿಲ್ದಾಣಕ್ಕೆ ತಲುಪಿ ತಮ್ಮ ರೈಲು ಬರುವ ಪ್ಲಾಟ್ ಫಾರ್ಮ್‌ನ ಕಡೆಗೆ ಹೊರಟರು. ಆಗ ದಾರಿಯಲ್ಲಿ ಅವರಿಗೆ ಅವರ ಭಾವನವರು ಭೇಟಿಯಾದರು. ಅವರು ಸಾಧಕನಿಗೆ, ’ನಿಮ್ಮ ಡಾ. ಆಠವಲೆ ಅವರು ನಿಮ್ಮನ್ನು ಎರಡನೇ ಪ್ಲಾಟ್ ಫಾರ್ಮ್ ಬಳಿ ಹುಡುಕುತ್ತಿದ್ದಾರೆ’ ಎಂದರು. ಇದನ್ನು ಕೇಳಿದ ತಕ್ಷಣ ಸಾಧಕರು ಕ್ಷಣವೂ ತಡಮಾಡದೆ ಆ ಪ್ಲಾಟ್‌ಫಾರ್ಮ್ ಕಡೆಗೆ ಓಡಿ ಹೋಗಿ ಪ.ಪೂ. ಡಾಕ್ಟರರನ್ನು ಹುಡುಕಲು ಪ್ರಾರಂಭಿಸಿದರು. ಅಷ್ಟರಲ್ಲಿ ಆ ಸಾಧಕರು ಹೋಗಬೇಕಿದ್ದ ರೈಲು ಹೋಯಿತು. ಇದರಿಂದ ಅವರು ಭಾವನ ಮನೆಯಲ್ಲಿ ಉಳಿಯಬೇಕಾಯಿತು.

೩. ಮರುದಿನ ರೈಲು ಅಪಘಾತದ ಬಗ್ಗೆ ತಿಳಿದಾಗ ’ಪ.ಪೂ. ಡಾಕ್ಟರರೇ ನನ್ನನ್ನು ರಕ್ಷಿಸಿದರು’ ಎಂದು ಅರಿವಾಯಿತು : ಸಾಧಕನು ಭಾವನ ಮನೆಗೆ ತಲುಪಿದಾಗ ಅವರಿಗೆ ಬಹಳ ಆಶ್ಚರ್ಯವಾಯಿತು; ಸಾಧಕನು ಅವರಿಗೆ ಸ್ವಲ್ಪ ಸಮಯದ ಹಿಂದೆ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದಾಗ ಭಾವನವರು ಹೀಗೆಂದರು, ”ನಾನು ನಿಮ್ಮನ್ನು ಭೇಟಿಯೇ ಆಗಿಲ್ಲ. ನಾನು ಇಂದು ಊರು ಬಿಟ್ಟು ಬೇರೆಲ್ಲೂ ಹೋಗಿಲ್ಲ.” ಆಗ ಸಾಧಕನಿಗೆ ಆಶ್ಚರ್ಯವಾಯಿತು. ರೈಲು ತಪ್ಪಿದ್ದರಿಂದ ಮತ್ತು ಬೇರೆ ದಾರಿಯಿಲ್ಲದ ಕಾರಣ ಅವರು ಅಂದು ಅಲ್ಲೇ ತಂಗಿದರು.
ಮರುದಿನ ಸಾಧಕನಿಗೆ ’ಅವರು ಪ್ರಯಾಣಿಸಬೇಕಿದ್ದ ರೈಲು ಅಪಘಾತವಾಗಿದ್ದು ಅವರ ಕಾಯ್ದಿರಿಸಿದ ಬೋಗಿಯು ಪೂರ್ಣವಾಗಿ ನುಜ್ಜುನೂರಾಗಿತ್ತು’ ಎಂದು ತಿಳಿಯಿತು. ಆಗ ಗುರುದೇವರೇ ತನ್ನನ್ನು ರಕ್ಷಿಸಿದ್ದಾರೆ’ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು.
-ಶ್ರೀ. ಯೋಗೇಶ ಜಲತಾರೆ
ಸಾಧಕರಲ್ಲಿ ಕುಟುಂಬಭಾವನೆ ಮೂಡಿಸುವುದು

ಸೂಕ್ಷ್ಮ ಅಸ್ತಿತ್ವದ ಮೂಲಕ ಆಧಾರವಾಗುವುದು !
ಸಾಧಕರೊಬ್ಬರಿಗೆ ಅಸ್ವಸ್ಥ ಸ್ಥಿತಿಯಲ್ಲಿ ಗುರುದೇವರು ಸತತವಾಗಿ ಜೊತೆಗಿದ್ದಾರೆ ಎಂಬ ಅನುಭೂತಿ ಬಂದಿತು
೧. ಪಾರ್ಶ್ವವಾಯು ಪೀಡಿತರಾದ ಸಾಧಕರೊಬ್ಬರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಬೇಕಾಗಿ ಬಂದಿತು : ೨೦೨೦-೨೦೨೧ ರಲ್ಲಿ ಸಾಧಕರೊಬ್ಬರು ಪಾರ್ಶ್ವವಾಯು ಪೀಡಿತರಾಗಿ ಪರಿಸ್ಥಿತಿ ಗಂಭೀರವಾದ ಕಾರಣ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು.
೨. ಸಾಧಕರು ’ಪ.ಪೂ. ಡಾಕ್ಟರರೇ, ನನ್ನನ್ನು ಕ್ಷಮಿಸಿ’ ಎಂದು ಹೇಳುತ್ತಿರುವುದನ್ನು ಗಮನಿಸಿದ ವೈದ್ಯರು ’ಪ.ಪೂ. ಡಾಕ್ಟರರು ಯಾರು ?’ ಎಂದು ವಿಚಾರಿಸಿದರು : ಗುಣಮುಖರಾದ ನಂತರ ಅವರ ಆರೋಗ್ಯದ ಬಗ್ಗೆ ವೈದ್ಯರು ಹೀಗೆ ಹೇಳಿದರು, ”ಇಂತಹ ರೋಗಿಗಳು ತೀವ್ರವಾದ ನೋವನ್ನು ಅನುಭವಿಸುತ್ತಾರೆ. ಆ ನೋವಿನಿಂದಾಗಿ ಅವರು ಕಿರುಚಾಡುತ್ತಾರೆ. ಕೆಲವರು ಮೂಗು ಮತ್ತು ಬಾಯಲ್ಲಿ ಹಾಕಿರುವ ನಳಿಕೆಗಳನ್ನು ಕಿತ್ತೆಸೆಯುತ್ತಾರೆ. ಆದರೆ ಈ ಸಾಧಕರು ಮಾತ್ರ ಸತತ ’ಪ.ಪೂ. ಡಾಕ್ಟರರೇ, ನನ್ನನ್ನು ಕ್ಷಮಿಸಿ. ನಾನು ಮತ್ತೆ ಇಂತಹ ತಪ್ಪು ಮಾಡುವುದಿಲ್ಲ’, ಎನ್ನುತ್ತಿದ್ದರು” ಇದನ್ನು ಕೇಳಿದ ವೈದ್ಯರು ”ಈ ಪ.ಪೂ. ಡಾಕ್ಟರರು ಯಾರು ?” ಎಂದು ಕೇಳಿದರು. ಆಗ ಸಂಬಂಧಿಕರು, ”ಅವರು ನಮ್ಮ ಗುರುಗಳು !” ಎಂದು ಉತ್ತರಿಸಿದರು.
ಪ್ರೀತಿಸ್ವರೂಪ, ಆನಂದದಾಯಕ ಮಧುರ ನುಡಿ

೩. ’ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸತತವಾಗಿ ಜೊತೆಗಿದ್ದ ಕಾರಣ ನನಗೆ ಯಾವುದೇ ನೋವು ತಿಳಿದಿಲ್ಲ’ ಎಂದು ಸಾಧಕರು ತಿಳಿಸಿದರು : ಗುಣಮುಖರಾದ ನಂತರ ಆ ಸಾಧಕರು, ”ಅನಾರೋಗ್ಯದ ಸಮಯದಲ್ಲಿ ನನಗೆ ಯಾವುದೇ ನೋವು ಅನುಭವಕ್ಕೆ ಬರಲಿಲ್ಲ. ನನಗೆ ನೆನಪಿರುವುದು ಇಷ್ಟೇ, ’ನಾನು ಪ.ಪೂ. ಡಾಕ್ಟರರ ಜೊತೆಗಿದ್ದೆ. ಅವರೊಂದಿಗೆ ನನ್ನ ಅಖಂಡ ಸಂವಾದ ನಡೆಯುತ್ತಿತ್ತು. ಪ.ಪೂ. ಡಾಕ್ಟರರು ನನ್ನ ಮತ್ತು ಸಹಸಾಧಕರ ಸಮಷ್ಟಿ ಸೇವೆಯ ತಪ್ಪುಗಳನ್ನು ಹೇಳುತ್ತಿದ್ದರು. ಆ ತಪ್ಪುಗಳಿಗಾಗಿ ನಾನು ಪ.ಪೂ. ಡಾಕ್ಟರರ ಚರಣಗಳಲ್ಲಿ ಕ್ಷಮೆಯಾಚಿಸುತ್ತಿದ್ದೆ” ಎಂದರು. ವಾಸ್ತವದಲ್ಲಿ ಆ ಸಾಧಕನ ಸ್ಥಿತಿ ಗಂಭೀರವಿತ್ತು. ಗುರುದೇವರು ಅವರನ್ನು ಗುಣಮುಖ ಮಾಡಿದ್ದಲ್ಲದೇ ಸತತ ಅವರ ಜೊತೆಗಿದ್ದು ನೋವಿನ ಅರಿವಾಗದಂತೆ ನೋಡಿಕೊಂಡರು. ಗುರುದೇರು ಒಬ್ಬ ಸಾಧಕನಿಗಾಗಿ ಇದಕ್ಕಿಂತ ಹೆಚ್ಚಿನದನ್ನು ಇನ್ನೇನು ಮಾಡಲು ಸಾಧ್ಯ ?
ಸಾಧಕರ ಆನಂದದಲ್ಲಿ ಸೇರಿ ಸಂತಸವನ್ನು ಹೆಚ್ಚಿಸುವುದು

ಅಧ್ಯಾತ್ಮದಲ್ಲಿ ಕಾಕತಾಳೀಯ ಇರುವುದಿಲ್ಲ, ಅದು ಗುರುಕೃಪೆಯೇ ಆಗಿರುತ್ತದೆ !
ಈ ಲೇಖನದಲ್ಲಿ ಸಾಧಕರಿಗೆ ಬಂದ ಅನುಭವ ಮತ್ತು ಅನುಭೂತಿಗಳನ್ನು ಓದಿದಾಗ ಮೇಲ್ನೋಟಕ್ಕೆ ಅವು ಪವಾಡಗಳಂತೆ ಕಾಣಿಸಬಹುದು ಅಥವಾ ಕೆಲವು ಬುದ್ಧಿಜೀವಿಗಳು ಈ ಘಟನೆಗಳನ್ನು ’ಕಾಕತಾಳೀಯ’ ಎಂದು ಕರೆಯಬಹುದು; ಆದರೆ ಅಧ್ಯಾತ್ಮಶಾಸ್ತ್ರದ ಪ್ರಕಾರ ’ಕಾಕತಾಳೀಯ’ ಎಂಬುದು ಯಾವುದೂ ಇರುವುದಿಲ್ಲ. ಯಾರಿಗೆ ಈಶ್ವರ ಅಥವಾ ತಮ್ಮ ಗುರುಗಳ ಮೇಲೆ ಶ್ರದ್ಧೆ ಇರುತ್ತದೆಯೋ, ಅಂತಹವರಿಗಾಗಿ ’ದೇವರು ಸ್ವತಃ ಅಥವಾ ಇತರರ ಮಾಧ್ಯಮದಿಂದ ಹೇಗೆ ಧಾವಿಸಿ ಬರುತ್ತಾನೆ’ ಎಂಬುದಕ್ಕೆ ಇವು ಉದಾಹರಣೆಗಳಾಗಿವೆ. ಈ ಉದಾಹರಣೆಗಳು ನಮ್ಮ ಬುದ್ಧಿಗೆ ನಿಲುಕದಂತೆ (ಬುದ್ಧಿ ಅಗಮ್ಯ) ಅನಿಸಬಹುದು; ಆದರೆ ಇವೆಲ್ಲ ವಾಸ್ತವದಲ್ಲಿ ನಡೆದ ಘಟನೆಗಳಾಗಿವೆ.
ಮುಂಬರುವ ಆಪತ್ಕಾಲದ ಬಗ್ಗೆ ಭಯಪಡದೆ ಶ್ರದ್ಧೆಯಿಂದ ಸಾಧನೆ ಮಾಡಬೇಕು !
ಮೇಲಿನ ಅನುಭೂತಿಗಳನ್ನು ಓದಿದಾಗ ’ದೇವರು ಮತ್ತು ಗುರುಗಳು ತಮ್ಮ ಶ್ರದ್ಧಾವಂತ ಸಾಧಕರ ಹಾಗೂ ಭಕ್ತರ ಹೇಗೆ ಕಾಳಜಿ ವಹಿಸುತ್ತಾರೆ’ ಎಂಬುದು ಖಂಡಿತವಾಗಿಯೂ ಗಮನಕ್ಕೆ ಬಂದಿರುತ್ತದೆ ! ನಾವು ಕೂಡ ಶ್ರದ್ಧೆಯಿಂದ ಸಾಧನೆ ಮಾಡುತ್ತಾ ಸಾಗಿದರೆ, ದೇವರು ಯುದ್ಧದಂತಹ ಪರಿಸ್ಥಿತಿಯಲ್ಲೂ ಧಾವಿಸಿ ಬರುವುದಿಲ್ಲವೇ ? ಆದ್ದರಿಂದ ಸಾಧಕರು ಬರಲಿರುವ ಆಪತ್ಕಾಲದ ಬಗ್ಗೆ ಭಯಪಡದೆ ಶ್ರದ್ಧೆಯಿಂದ ಸಾಧನೆ ಮಾಡಬೇಕು.
-ಶ್ರೀ. ಯೋಗೇಶ ಜಲತಾರೆ
‘ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ ನನ್ನ ಸಂಗಾತಿ !’
ಒಂದೇ ನೋಟದಲ್ಲಿ…
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !