
(ಕನ್ನಡ ಅರ್ಥ)
ಸ್ಥೂಲದೇಹಕ್ಕಿಹುದು ಸ್ಥಳಕಾಲಗಳ ಪರಿಮಿತಿ |
ಹೇಗಿರಲಿ ಸದಾ ಎಲ್ಲ ಕಡೆಗಳಲ್ಲಿ ||
ಸನಾತನ ಧರ್ಮವಿಹುದು ನನ್ನ ನಿತ್ಯರೂಪ |
ಆ ರೂಪದಲ್ಲಿರುವೆ ಎಲ್ಲ ಕಡೆಗಳಲ್ಲಿ ಸದಾ ||
ಈ ವಚನದ ಮೂಲಕ ಗುರುದೇವರು ೩೦ ವರ್ಷಗಳ ಹಿಂದೆಯೇ ಸಾಧಕರಿಗೆ ತಮ್ಮ ನಿರ್ಗುಣ ತತ್ತ್ವದ ಅನುಭವವನ್ನು ನೀಡಿದ್ದರು. ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಸಾಧಕನು ಅತ್ಯಂತ ತಳಮಳದಿಂದ ಮತ್ತು ಆರ್ತತೆಯಿಂದ ಗುರುದೇವರನ್ನು ಕರೆದರೆ, ಅವರು ಒಂದು ಕ್ಷಣವೂ ತಡ ಮಾಡದೇ ಅವರು ಅವನ ಸಹಾಯಕ್ಕೆ ಧಾವಿಸಿ ಬರುತ್ತಾರೆ. ಈ ಅನುಭೂತಿಯನ್ನು ಸಾವಿರಾರು ಸಾಧಕರು ಪಡೆದಿದ್ದಾರೆ ಮತ್ತು ಈಗಲೂ ಪಡೆಯುತ್ತಿದ್ದಾರೆ, ಉದಾ. ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡುವಾಗ ಗುರುದೇವರು ಸೂಕ್ಷ್ಮ ರೂಪದಿಂದ ಜೊತೆಗಿದ್ದಾರೆ’, ‘ಸತ್ಸಂಗ ತೆಗೆದುಕೊಳ್ಳುವಾಗ ಗುರುದೇವರೇ ನಮ್ಮ ಮೂಲಕ ಮಾತನಾಡುತ್ತಿದ್ದಾರೆ’, ಎಂಬ ಅನುಭೂತಿಗಳು ಸಾಧಕರಿಗೆ ಬರುತ್ತಿವೆ.

ಶಾರೀರಿಕ ತೊಂದರೆಯಾಗುತ್ತಿರುವಾಗ ಅಥವಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಕೊಠಡಿಯಲ್ಲಿಯೂ ಶ್ರೀ ಗುರುಗಳ ಸೂಕ್ಷ್ಮ ಅಸ್ತಿತ್ವದ ಅನುಭೂತಿಯಾಗಿ ಸಾಧಕರಿಗೆ ಧೈರ್ಯ ಬರುತ್ತದೆ. ಯಾವಾಗೆಲ್ಲ ಸಾಧಕನು ಸಂಕಟದಲ್ಲಿರುತ್ತಾನೋ, ಆಗ ಅವನನ್ನು ಸಂಭಾಳಿಸುವ ಕೈಗಳು ಗುರುಗಳದ್ದೇ ಆಗಿರುತ್ತವೆ ಮತ್ತು ಯಾವ ಸಮಯದಲ್ಲಿ ಸಾಧಕನು ಆನಂದಿಯಾಗಿರುತ್ತಾನೋ, ಆ ಆನಂದದ ಮೂಲವೂ ಗುರುಗಳೇ ಆಗಿರುತ್ತಾರೆ. ಈ ರೀತಿಯಾಗಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರಿಗೆ ನೀಡಿದ ಆಶೀರ್ವಚನವನ್ನು ಪ್ರತಿಕ್ಷಣವೂ ಪಾಲಿಸುತ್ತಿದ್ದಾರೆ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !