
ಢಾಕಾ (ಬಾಂಗ್ಲಾದೇಶ) – ಭಾರತದೊಂದಿಗಿನ ಸಂಬಂಧಗಳ ಭವಿಷ್ಯವು ಗಂಗಾ ನದಿ ನೀರು ಹಂಚಿಕೆ ಒಪ್ಪಂದದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬಾಂಗ್ಲಾದೇಶದ ಆಡಳಿತಾರೂಢ ‘ಬಿ.ಎನ್.ಪಿ.’ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್ ಹೇಳಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ 1996 ರಲ್ಲಿ ನಡೆದ ಗಂಗಾ ನೀರು ಹಂಚಿಕೆ ಒಪ್ಪಂದವು ಇದೇ ವರ್ಷದ ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಬಾಂಗ್ಲಾದೇಶಕ್ಕೆ ಗಂಗಾ ನದಿಯು (ಅಲ್ಲಿ ಅದನ್ನು ಪದ್ಮಾ ಎಂದು ಕರೆಯಲಾಗುತ್ತದೆ) ಕೃಷಿ, ಜೀವವೈವಿಧ್ಯ ಮತ್ತು ನೀರು ಸರಬರಾಜಿನ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ ಎಂದು ಪರಿಗಣಿಸಲಾಗಿದೆ.
ಢಾಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಲಂಗೀರ್, ಹೊಸ ಒಪ್ಪಂದವು ಬಾಂಗ್ಲಾದೇಶದ ಜನರ ಅಗತ್ಯತೆಗಳು ಮತ್ತು ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕು ಎಂಬ ಸ್ಪಷ್ಟ ಸಂದೇಶವನ್ನು ಬಾಂಗ್ಲಾದೇಶವು ಭಾರತಕ್ಕೆ ನೀಡಲು ಬಯಸುತ್ತದೆ ಎಂದು ಹೇಳಿದರು. ಹೊಸ ಒಪ್ಪಂದ ಏರ್ಪಡುವವರೆಗೆ ಪ್ರಸ್ತುತ ಇರುವ ಒಪ್ಪಂದವನ್ನೇ ಮುಂದುವರಿಸಬೇಕು. ಭವಿಷ್ಯದ ನೀರು ಹಂಚಿಕೆ ಒಪ್ಪಂದಗಳು ಯಾವುದೇ ನಿರ್ದಿಷ್ಟ ಸಮಯದ ಮಿತಿಗೆ ಒಳಪಟ್ಟಿರಬಾರದು ಎಂದೂ ಅವರು ಸಲಹೆ ನೀಡಿದರು.
ಭಾರತವು, ಉಭಯ ದೇಶಗಳ ನಡುವಿನ ನೀರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಸ್ಥಾಪಿತ ದ್ವಿಪಕ್ಷೀಯ ವ್ಯವಸ್ಥೆಯ ಮೂಲಕ ನಿಯಮಿತವಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು