
ಸದ್ಯ ಇಂಧನದಿಂದಾಗಿ ಆರಂಭವಾಗಿರುವ ಯುದ್ಧದಲ್ಲಿ ಇರಾನ್ ಮತ್ತು ಇತರ ಕೊಲ್ಲಿ ಪ್ರದೇಶಗಳ ತೈಲ ಸಂಗ್ರಹಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದಾಗಿ ಬೃಹತ್ ಪ್ರಮಾಣದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲದ ಹಾನಿಯಾಗುತ್ತಿದೆ. ಮಧ್ಯಂತರದ ಕಾಲದಲ್ಲಿ ಇರಾನ್ ಹಾರ್ಮುಜ್ ಜಲಸಂಧಿಯ ಮಾರ್ಗವನ್ನು ಮುಚ್ಚಿದ್ದರಿಂದ ಅನೇಕ ದೇಶಗಳ ತೈಲ ನೌಕೆಗಳು ಅಲ್ಲಿ ಸಿಲುಕಿಕೊಂಡವು. ಇದರಿಂದಾಗಿ ಇಡೀ ವಿಶ್ವದ ಮುಂದೆ ಇಂಧನದ ದೊಡ್ಡ ಬಿಕ್ಕಟ್ಟು ಎದುರಾಯಿತು. ಭಾರತವೂ ಇದಕ್ಕೆ ಹೊರತಾಗಿರಲಿಲ್ಲ; ಆದರೆ ಭಾರತದ ಸಮರ್ಥ ನೇತೃತ್ವ ನಾಯಕತ್ವ, ಯೋಗ್ಯ ವಿದೇಶಾಂಗನೀತಿ, ರಾಜತಾಂತ್ರಿಕ ಪ್ರಯತ್ನಗಳು ಮತ್ತು ಭಾರತೀಯ ನೌಕಾದಳದ ಭದ್ರತಾ ವ್ಯವಸ್ಥೆಯಿಂದಾಗಿ ದೇಶಕ್ಕೆ ಕೆಲವು ತೈಲ ನೌಕೆಗಳು ಬಂದಿವೆ ಎಂದು ಸರಕಾರದ ಪರವಾಗಿ ತಿಳಿಸಲಾಗಿದೆ. ಇದರಿಂದಾಗಿ ಸದ್ಯಕ್ಕೆ ಜನತೆಗೆ ಪ್ರತಿದಿನ ವಾಹನ ಚಲಾಯಿಸಲು ಸಾಕಾಗುವಷ್ಟು ಇಂಧನ ಮತ್ತು ಗೃಹಬಳಕೆಯ ’ಎಲ್.ಪಿ.ಜಿ.’ ಅನಿಲದ (ದ್ರವೀಕೃತ ಪೆಟ್ರೋಲಿಯಮ್ ಅನಿಲ) ಪೂರೈಕೆಯು ಸದ್ಯಕ್ಕಂತೂ ಪ್ರಾರಂಭವಾಗಿದೆ. ಆದರೆ ಈ ಪರಿಸ್ಥಿತಿಯು ಯುದ್ಧದ ಸಮಯದಲ್ಲಿ ಯಾವಾಗ ಬೇಕಾದರೂ ಬದಲಾಗಬಹುದು. ಇದಲ್ಲದೆ, ಭಾರತದಲ್ಲಿ ಇಂಧನದ ಅನಧಿಕೃತ ಸಂಗ್ರಹಣೆ ಮಾಡಿ ಕೃತಕ ಅಭಾವ ಸೃಷ್ಟಿಸುವ ಮತ್ತು ಬೆಲೆ ಏರಿಕೆಗೆ ಕಾರಣವಾಗುವ ಮಹಾಶಯರೂ ನಮ್ಮಲ್ಲಿ ಇದ್ದಾರೆ. ಆದ್ದರಿಂದ ಜನತೆಯು ಇಂತಹ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕಾಗಬಹುದು. ಇಂತಹ ಸಮಯದಲ್ಲಿ ಇಂಧನ ಸುರಕ್ಷತೆ ಮತ್ತು ಅತ್ಯಾವಶ್ಯಕ ಪೂರೈಕೆಯ ಜೊತೆಗೆ ಇಂಧನ ಉಳಿತಾಯವೂ ಅಷ್ಟೇ ಆವಶ್ಯಕವಾಗಿದೆ. ಇದರಲ್ಲಿ ಸುರಕ್ಷತೆ ಮತ್ತು ಪೂರೈಕೆಯ ಕರ್ತವ್ಯಗಳನ್ನು ಸರಕಾರವು ಯಥಾಯೋಗ್ಯವಾಗಿ ನಿರ್ವಹಿಸುತ್ತಿದೆ; ಆದರೆ ಇಂಧನ ಉಳಿತಾಯದ ಅಂಶವನ್ನು ಮಾತ್ರ ನಾವು ನಾಗರಿಕರು ಪಾಲಿಸಬೇಕಾಗಿದೆ. ಈ ಕುರಿತು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

‘೧೯೬೫ ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಆಹಾರದ ಕೊರತೆ ನೀಗಿಸಲು ಜನತೆಗೆ ವಾರದಲ್ಲಿ ಒಂದು ಹೊತ್ತು ಉಪವಾಸ ಮಾಡಲು ಕರೆ ನೀಡಿದ್ದರು.’
– ಶ್ರೀ. ಯೋಗೇಶ ಜಲತಾರೆ
೧. ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಜನತೆಗೆ ನೀಡಿದ ಕರೆಯ ಅನುಕರಣೆ ಈಗ ಆವಶ್ಯಕವಾಗಿದೆ !
೧೯೬೫ ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜನತೆಗೆ ’ಜೈ ಜವಾನ್, ಜೈ ಕಿಸಾನ್’ ಎಂಬ ಮೂಲಮಂತ್ರವನ್ನು ನೀಡಿ ಎರಡು ರಂಗಗಳಲ್ಲಿ ಯುದ್ಧ ಮಾಡಲು ತಿಳಿಸಿದ್ದರು. ಮೊದಲನೆಯದು ಗಡಿಯಲ್ಲಿ ಶತ್ರುವಿನ ವಿರುದ್ಧ ಮತ್ತು ಎರಡನೆಯದು ದೇಶದ ಒಳಗೆ ಉದ್ಭವಿಸಿದ್ದ ಆಹಾರ ಧಾನ್ಯಗಳ ಕೊರತೆಯ ವಿರುದ್ಧ. ಅದಕ್ಕಾಗಿ ಅವರು ರೈತರಿಗೆ ಹೆಚ್ಚಿನ ಧಾನ್ಯ ಬೆಳೆಯಲು ಪ್ರೋತ್ಸಾಹ ನೀಡಿದರು. ಅದರೊಂದಿಗೆ ಆಹಾರದ ಕೊರತೆಯನ್ನು ನೀಗಿಸಲು ಜನತೆಗೆ ವಾರದಲ್ಲಿ ಕನಿಷ್ಠ ಒಂದು ಹೊತ್ತು ಉಪವಾಸದ ಕರೆ ನೀಡಿದ್ದರು. ಅವರ ವಿಶೇಷತೆಯೆಂದರೆ, ಅವರು ಕೇವಲ ಕರೆ ನೀಡಿ ಸುಮ್ಮನಾಗಲಿಲ್ಲ, ಬದಲಾಗಿ ತಾವೇ ಅದನ್ನು ಆಚರಿಸಿ ಜನತೆಗೆ ಪ್ರೇರಣೆ ನೀಡಿದರು. ಪರಕೀಯರ ಸಹಾಯದ ಮೇಲೆ ಅವಲಂಬಿತವಾಗದೆ ಸಮಸ್ಯೆಯನ್ನು ಸ್ವಬಲದಿಂದ ಎದುರಿಸುವ ಧೈರ್ಯವನ್ನು ಅವರು ಅಂದು ಭಾರತೀಯರಿಗೆ ನೀಡಿದರು. ಇಂದು ’ಜೈ ಜವಾನ್, ಜೈ ಕಿಸಾನ್’ ಜೊತೆಗೆ ’ಜೈ ತಂತ್ರಜ್ಞಾನ’ ಎಂದೂ ಘೋಷಿಸಬೇಕಾಗಿದೆ; ಏಕೆಂದರೆ ಇಂದು ನಾವು ಆಹಾರ ಧಾನ್ಯಕ್ಕಿಂತಲೂ ಹೆಚ್ಚಾಗಿ ತಂತ್ರಜ್ಞಾನಕ್ಕೆ ಬೇಕಾದ ಇಂಧನಕ್ಕಾಗಿ ಅನ್ಯ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ ಯುದ್ಧಕಾಲದಲ್ಲಿ ನಮಗೆ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಯಾವ ರೀತಿ ನಾಗರಿಕರು ಒಗ್ಗಟ್ಟಿನಿಂದ ಇರಬೇಕು ಮತ್ತು ದೇಶದ ಸಂಪನ್ಮೂಲಗಳನ್ನು ಮಿತವ್ಯಯದಿಂದ ಹಾಗೂ ಜವಾಬ್ದಾರಿ ಯುತವಾಗಿ ಬಳಸಬೇಕು ಎಂದು ಕರೆ ನೀಡಿದ್ದರೋ, ಅಂತಹದ್ದೇ ಕರೆಯನ್ನು ಅನುಕರಿಸುವ ಸಮಯ ಇಂದು ಒದಗಿ ಬಂದಿದೆ.
೨. ಯುದ್ಧಕಾಲವನ್ನು ಎದುರಿಸಲು ಪೂರ್ವಸಿದ್ಧತೆಎಂದು ಇಂದೇ ಕೃತಿ ಮಾಡುವುದು ಅವಶ್ಯಕ !
ಇಂದು ನಮಗೆಲ್ಲರಿಗೂ ನಿಷ್ಕಾಳಜಿಯಿಂದ ವರ್ತಿಸುವ ಅಭ್ಯಾಸವಾಗಿರುವುದರಿಂದ ಸಮಸ್ಯೆಯ ಗಾಂಭೀರ್ಯ ನಮ್ಮ ಗಮನಕ್ಕೆ ಬರುತ್ತ್ತಿಲ್ಲ ಆದ್ದರಿಂದ ’ಇಂದು ಇದೆಯಲ್ಲ, ಇಂದು ಅನುಭವಿಸೋಣ, ನಾಳೆಯದ್ದನ್ನು ನಾಳೆ ನೋಡೋಣ’ ಎಂದು ನಾವು ಯೋಚಿಸುತ್ತೇವೆ. ಶ್ರೀಮಂತ ವ್ಯಕ್ತಿ ಹೇಳುತ್ತಾನೆ, ’ನನ್ನ ಬಳಿ ಸಾಕಷ್ಟು ಇದೆ, ನಾನು ಇತರರ ಬಗ್ಗೆ ಯಾಕೆ ಯೋಚಿಸಲಿ ?’ ಬಡ ವ್ಯಕ್ತಿ ಹೇಳುತ್ತಾನೆ, ’ನನ್ನ ಸ್ಥಿತಿಯಲ್ಲಿ ಏನು ಬದಲಾವಣೆ ಆಗಲಿದೆ ?’ ಈ ಸಂಪೂರ್ಣ ವಿಚಾರ ಪ್ರಕ್ರಿಯೆಯಲ್ಲಿ ನಮ್ಮ ಮನೋಭಾವವು ಸ್ವಾರ್ಥ ಅಥವಾ ಸ್ವಕೇಂದ್ರೀಕೃತವಾಗಿರುವುದರಿಂದ ಸಮಷ್ಟಿಯ ವಿಚಾರವು ನಮ್ಮ ಮನಸ್ಸಿಗೆ ಬರುವುದಿಲ್ಲ; ಒಂದು ವೇಳೆ ಬಂದರೂ ಅದು ಬಹಳ ಅಲ್ಪ ಕಾಲ ಮಾತ್ರ ಇರುತ್ತದೆ. ಆದರೆ ಸಂತ-ಮಹಾತ್ಮರು ಕೃಪಾಳುಗಳಾಗಿರುವುದರಿಂದ, ಅವರಿಗೆ ಎಲ್ಲ ಜೀವಿಗಳ ಬಗ್ಗೆ ಕಾಳಜಿ ಇರುತ್ತದೆ. ಆದ್ದರಿಂದಲೇ ಅವರು ಯುದ್ಧದ ಕುರಿತು ಅತ್ಯಂತ ಕಳಕಳಿಯಿಂದ ಜಾಗೃತಿ ಮೂಡಿಸುತ್ತಾರೆ ಅಥವಾ ಆಪತ್ಕಾಲದ ಮುನ್ಸೂಚನೆಯನ್ನು ನೀಡಿ ಅದಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ತಿಳಿಸುತ್ತಾರೆ. ಹಾಗಾಗಿ ಅವರ ಆಜ್ಞಾಪಾಲನೆಯೆಂದಾದರೂ ನಾವು ಈಗಿನಿಂದಲೇ ಕೃತಿಯನ್ನು ಆರಂಭಿಸಬೇಕು.
ಒಂದು ಕ್ಷಣ ಯೋಚಿಸಿ ನೋಡಿ. ೨-೩ ದಿನ ಊಟವೇ ಸಿಗದಿದ್ದರೆ ಏನಾಗಬಹುದು ? ಚಹಾ ಕುಡಿಯದಿದ್ದರೆ ನಮಗೆ ದಿನವಿಡೀ ತಲೆನೋವಿನಿಂದ ತೊಂದರೆಯಾಗುತ್ತದೆ. ನಾಳೆ ಯುದ್ಧಕಾಲದಲ್ಲಿ ನಮ್ಮ ಮನೆಗೆ ಹಾಲು ಬರದಿದ್ದರೆ ಮುಂದೇನು ?ನಾಳೆ ಪೆಟ್ರೋಲ್ ಅಥವಾ ಡೀಸೆಲ್ ಸಿಗದಿದ್ದರೆ ನಡೆಯುವ ಶಕ್ತಿ ನಮ್ಮಲ್ಲಿದೆಯೇ ? ಅಥವಾ ಇಂದು ಸೈಕಲ್ ತುಳಿಯುವ ಪ್ರಸಂಗ ಬಂದರೆ ನಮ್ಮ ಮಂಡಿಗಳು ಅದಕ್ಕೆ ಸಿದ್ಧವಾಗಿವೆಯೇ ?ಈ ವಿಚಾರಗಳಿಂದ ನಮಗೆ ಪೂರ್ವಸಿದ್ಧತೆಯ ಮಹತ್ವ ತಿಳಿಯುತ್ತದೆ. ಉಳಿತಾಯದ ಅಭ್ಯಾಸವಿಲ್ಲದಿದ್ದರೆ ಯುದ್ಧಕಾಲದಲ್ಲಿ ನಮಗೆ ಹೆಚ್ಚಿನ ತೊಂದರೆಯಾಗಬಹುದು. ಇಂದು ಯಾವುದೋ ಒಂದು ಕಾರಣದಿಂದ ಕೇವಲ ಒಂದು ದಿನ ಮೊಬೈಲ್ ಕೆಟ್ಟು ಹೋದರೆ ಅಥವಾ ಸೇವಾಸಂಸ್ಥೆಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಮೊಬೈಲ್ ಸೇವೆ ಸ್ಥಗಿತಗೊಂಡರೆ, ನಮ್ಮ ಸ್ಥಿತಿ ಹುಚ್ಚು ಹಿಡಿದಂತೆ ಆಗುತ್ತದೆ. ಒಂದು ವೇಳೆ ಸತತವಾಗಿ ಕೆಲವು ದಿನಗಳ ವರೆಗೆ ಇದೇ ಅನುಭವವು ಎದುರಾದರೆ ಗತಿ ಏನು ? ಈ ದೃಷ್ಟಿಯಿಂದ ಮುಂಬರುವ ಪ್ರಸಂಗದ ಅಭ್ಯಾಸವೆಂದು ಇಂತಹ ವಸ್ತುಗಳ ಮಿತವಾದ ಬಳಕೆ, ಉಳಿತಾಯ ಮತ್ತು ನಮ್ಮ ದೈಹಿಕ ಶಕ್ತಿಯನ್ನು ಬಳಕೆ; ಇಂತಹ ಕೃತಿಗಳ ಮೂಲಕ ನಾವು ಇಂಧನ ಉಳಿತಾಯದ ಮಾರ್ಗವನ್ನು ಅನುಸರಿಸಬೇಕು.
ಮನೆಯಲ್ಲಿ ಇಂಧನ ಉಳಿತಾಯವನ್ನು ಹೇಗೆ ಮಾಡುವುದು ?

ದೇಶಸೇವೆಯೆಂದು ನಾವು ನಮ್ಮ ವೈಯಕ್ತಿಕ ಸ್ತರದಲ್ಲಿ ಇಂಧನ ಉಳಿತಾಯವನ್ನು ಹೇಗೆ ಮಾಡಬಹುದು ಎಂಬುದರ ಕುರಿತು ನಾವೆಲ್ಲರೂ ಖಂಡಿತವಾಗಿಯೂ ಚಿಂತನೆ ಮಾಡಬೇಕು . ಇಲ್ಲಿ ಉದಾಹರಣೆಗಾಗಿ ಕೆಲವು ಕೃತಿಗಳನ್ನು ನೀಡಲಾಗಿದೆ
೧. ಮನೆಯಲ್ಲಿ ನಾವು ಪ್ರತಿದಿನ ವಿವಿಧ ಪದಾರ್ಥಗಳನ್ನು ತಯಾರಿಸುತ್ತಿರಬಹುದು; ಆದರೆ ಅಡುಗೆಯಲ್ಲಿ ಸ್ವಲ್ಪ ಸಮಯದ ವರೆಗೆ ಕೇವಲ ಎರಡೇ ಪದಾರ್ಥಗಳನ್ನು ಬೇಯಿಸಲು ಸಾಧ್ಯವೇ ? ಉದಾಹರಣೆಗೆ : ರೊಟ್ಟಿ-ಪಲ್ಯ ಅಥವಾ ಅನ್ನ-ಸಾರು ಮತ್ತು ಸಾಯಂಕಾಲ ಕೇವಲ ಖಿಚಡಿ ಅಥವಾ ಪರಾಠಾಗಳು. ಇದರಿಂದ ಗೃಹಬಳಕೆಯ ಗ್ಯಾಸ್ ಉಳಿತಾಯವಾಗುವುದು.
೨. ನಾವು ವಾಸಿಸುತ್ತಿರುವ ಮಹಡಿಯ ವರೆಗೆ (ಸುಮಾರು ನಾಲ್ಕನೇ ಮಹಡಿಯ ವರೆಗಾದರೂ) ಹೋಗಲು ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳನ್ನು ಉಪಯೋಗಿಸಬಹುದು. ಇದರಿಂದ ದೇಶದ ವಿದ್ಯುತ್ ಶಕ್ತಿ ಉಳಿಯುವುದು ಮತ್ತು ನಮ್ಮ ಆರೋಗ್ಯವು ಚೆನ್ನಾಗಿ ಇರುವುದು.
೩. ಹತ್ತಿರದ ಸ್ಥಳಗಳಿಗೆ ಹೋಗಲು ವಾಹನವನ್ನು ಬಳಸುವ ಬದಲು ಕಾಲ್ನಡಿಗೆ ಅಥವಾ ಸೈಕಲ್ ಬಳಸಬಹುದು. ಇದರಿಂದ ಇಂಧನ ಉಳಿತಾಯವಾಗುವುದು.
೪. ಮೊಬೈಲ್ ಫೋನ್‌ಅನ್ನು ಅತ್ಯಗತ್ಯವಿದ್ದಾಗ ಮಾತ್ರ ಬಳಸಿದರೆ, ಅದರಿಂದ ಸಮಯ ಮತ್ತು ಇಂಧನ ಶಕ್ತಿಯೂ ಉಳಿಯುವುದು. ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ ಸ್ನಾನಕ್ಕೆ ಅತಿಯಾದ ಬಿಸಿ ನೀರು ಬೇಕಾಗುವುದಿಲ್ಲ; ಅಲ್ಲಿಯೂ ವಿದ್ಯುತ್ ಅಥವಾ ಗ್ಯಾಸ್ ಅನ್ನು ಉಳಿಸಬಹುದು.
೫. ಈ ರೀತಿ ಮನೆಯಲ್ಲಿ ಬೆಂಕಿಕಡ್ಡಿ ಪೆಟ್ಟಿಗೆ, ವಿದ್ಯುತ್, ನೀರು ಮುಂತಾದ ವಿವಿಧ ಸಂಪನ್ಮೂಲಗಳನ್ನು ಮಿತವ್ಯಯದಿಂದ ಬಳಸಬಹುದು.
೬. ಶರೀರಕ್ಕೆ ಹಾನಿಕರವಾಗಿರುವ ತಂಪು ಪಾನೀಯಗಳ ಸೇವನೆಯನ್ನು ಸಂಪೂರ್ಣ ನಿಲ್ಲಿಸಬಹುದು.
ಇಂತಹ ಇತರ ಕೆಲವು ವಿಷಯಗಳ ಅಭ್ಯಾಸ ಮಾಡಿ, ಯಾವುದನ್ನು ನಿಲ್ಲಿಸಬಹುದು ಅಥವಾ ಯಾವುದನ್ನು ಮಿತವಾಗಿ ಬಳಸಬಹುದು ಎಂಬುದನ್ನು ನಾವು ನೋಡಬಹುದು.
– ಶ್ರೀ. ಯೋಗೇಶ ಜಲತಾರೆ, ಸಂಪಾದಕರು, ’ಸನಾತನ ಪ್ರಭಾತ’ ಮಾಧ್ಯಮ ಸಮೂಹ.
೩. ಇಂಧನ ಉಳಿತಾಯದ ಲಾಭದ ಲೆಕ್ಕಾಚಾರವನ್ನು ಅಧ್ಯಯನ ಮಾಡಿದರೆ ಅದರ ಫಲಿತಾಂಶ ತಿಳಿಯುವುದು !
’ಹನಿ ಹನಿ ಕೂಡಿದರೆ ಹಳ್ಳ’ ಎಂಬ ಗಾದೆ ಮಾತನ್ನು ನಾವು ಬಾಲ್ಯದಿಂದಲೂ ಕೇಳಿರುತ್ತೇವೆ. ಇದರಿಂದ ಪ್ರತಿದಿನ ಸ್ವಲ್ಪ ಸ್ವಲ್ಪ ಉಳಿತಾಯ ಮಾಡಿದರೆ ದೊಡ್ಡ ಸಂಗ್ರಹವಾಗುತ್ತದೆ ಎಂಬುದು ನಮಗೆ ತಿಳಿಯುತ್ತದೆ. ಈ ದೃಷ್ಟಿಯಿಂದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ನೀಡಿದ ’ಒಂದು ಹೊತ್ತಿನ ಉಪವಾಸ’ದ ಉದಾಹರಣೆಯನ್ನೇ ನೋಡೋಣ. ವಾರದಲ್ಲಿ ಒಂದು ಹೊತ್ತು ನಾವು ಊಟ ಮಾಡದಿದ್ದರೆ, ನಮಗೆ ಶಾರೀರಿಕ ದೃಷ್ಟಿಯಿಂದ ಮತ್ತು ದೇಶಕ್ಕೆ ಆಹಾರದ ಉಳಿತಾಯದ ಮಾಧ್ಯಮದಿಂದ ಲಾಭವಾಗುವುದು. ಉದಾಹರಣೆಗೆ ಒಬ್ಬ ವ್ಯಕ್ತಿಯು ಒಂದು ಹೊತ್ತಿನ ಊಟದಲ್ಲಿ ೨ ರೊಟ್ಟಿಗಳನ್ನು ತಿನ್ನುತ್ತಾನೆ ಎಂದು ಭಾವಿಸೋಣ. ಭಾರತದ ಸುಮಾರು ೫೦ ಲಕ್ಷ ರಾಷ್ಟ್ರಪ್ರೇಮಿ ನಾಗರಿಕರು ಒಂದು ಹೊತ್ತು ಊಟ ಮಾಡದಿದ್ದರೆ, ಒಂದು ಬಾರಿಗೆ ೧ ಕೋಟಿ ರೊಟ್ಟಿಗಳ ಉಳಿತಾಯವಾಗುವುದು !
ಓದುಗರು ತಿಳುವಳಿಕೆಯುಳ್ಳವರಾಗಿರುವುದರಿಂದ ಇತರ ಪದಾರ್ಥಗಳಾದ ಅನ್ನ, ಪಲ್ಯ, ಸಾರು ಇವುಗಳ ಉಳಿತಾಯದ ಪ್ರಮಾಣವನ್ನು ಇಲ್ಲಿ ನೀಡಿಲ್ಲ. ಆರೋಗ್ಯದ ದೃಷ್ಟಿಯಿಂದ ವಾರದಲ್ಲಿ ಒಂದು ದಿನ ಉಪವಾಸ ಮಾಡಬೇಕು ಎಂದು ಆಯುರ್ವೇದವೇ ಹೇಳುತ್ತದೆ. ಆದ್ದರಿಂದ ಈ ಉಪವಾಸದಿಂದ ನಮ್ಮ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂಬುದು ಖಚಿತ. ಇದರೊಂದಿಗೆ ಉಪವಾಸ ಮಾಡುವುದರಿಂದ ಸಂಯಮ ಬೆಳೆಯುವುದು ಎಂಬುದು ಹೆಚ್ಚುವರಿ ಲಾಭ.
೨೭ ಮಾರ್ಚ್ ೨೦೨೬ ರಂದು ’ಗೋವಾ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್’ನ ಅಧ್ಯಕ್ಷರಾದ ನರಹರ ಠಾಕೂರ್ ಅವರು ಗೋವಾದಲ್ಲಿ ಲಭ್ಯವಿರುವ ಪೆಟ್ರೋಲ್ ದಾಸ್ತಾನಿನ ಬಗ್ಗೆ ಮಾಹಿತಿ ನೀಡುತ್ತಾ ಹೀಗೆಂದರು, ”ನನ್ನ ಪೆಟ್ರೋಲ್ ಪಂಪ್‌ನಲ್ಲಿ ಮಾರ್ಚ್ ೨೬ ರಂದು ಬೆಳಗ್ಗೆ ೬ ಸಾವಿರ ಲೀಟರ್ ಪೆಟ್ರೋಲ್ ಇತ್ತು, ಅದು ಮುಂದಿನ ಕೇವಲ ೨ ಗಂಟೆಗಳಲ್ಲಿ ಖಾಲಿಯಾಯಿತು; ಆದರೆ ತಕ್ಷಣವೇ ಪೂರೈಕೆಯಾಯಿತು.” ಕಲ್ಪನೆ ಮಾಡಿ… ಗೋವಾದಂತಹ ಸಣ್ಣ ರಾಜ್ಯದ ಒಂದು ಪೆಟ್ರೋಲ್ ಪಂಪ್‌ನಲ್ಲಿ ಕೇವಲ ೨ ಗಂಟೆಗಳಲ್ಲಿ ಇಷ್ಟು ಪೆಟ್ರೋಲ್ ಮಾರಾಟವಾಗುತ್ತದೆ ಎಂದಾದರೆ, ಇಡೀ ರಾಜ್ಯದಲ್ಲಿ ಮತ್ತು ನಂತರ ಇಡೀ ಭಾರತ ದೇಶದಲ್ಲಿ ಎಷ್ಟು ಪೆಟ್ರೋಲ್ ಮಾರಾಟವಾಗುತ್ತಿರಬಹುದು ? ಮೇಲೆ ಉಲ್ಲೇಖಿಸಿದಂತೆ ದೇಶದ ೫೦ ಲಕ್ಷ ರಾಷ್ಟ್ರಪ್ರೇಮಿ ನಾಗರಿಕರು ವಾರಕ್ಕೆ ಕೇವಲ ೧ ಲೀಟರ್ ಪೆಟ್ರೋಲ್ ಉಳಿಸಲು ನಿರ್ಧರಿಸಿದರೆ, ಪ್ರತಿ ವಾರ ೫೦ ಲಕ್ಷ ಲೀಟರ್ ಪೆಟ್ರೋಲ್‌ಅನ್ನು ದೇಶದ ಇತರ ಅಗತ್ಯ ಕೆಲಸಗಳಿಗೆ ಬಳಸಲು ಸಾಧ್ಯವಾಗುವುದಿಲ್ಲವೇ ? ಆದ್ದರಿಂದ ನಾವು ಮಾಡುವ ಸಣ್ಣ ಉಳಿತಾಯದ ಪರಿಣಾಮಗಳು ದೊಡ್ಡದಾಗಿರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ನಾವು ಪ್ರತಿಯೊಂದು ಕಡೆಯೂ ಸಾಧ್ಯವಿದ್ದಷ್ಟು ಇಂಧನವನ್ನು ಉಳಿಸಬೇಕು.
೪. ಎಲ್ಲಕ್ಕಿಂತ ಮಹತ್ವದ್ದು, ಅಂದರೆ ಮನಸ್ಸಿನ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಬೇಕು !
ಮನ ಏವಂ ಮನುಷ್ಯಾನಾಂ ಕಾರಣಂ ಬಂಧಮೋಕ್ಷಯೋಃ | ಬಂಧನಂ ವಿಷಯಾಸಕ್ತಂ ಮುಕೈ ನಿರ್ವಿಷಯಂ ಮನಃ ||
– ತ್ರಿಪುರಾತಾಪಿನ್ಯುಪನಿಷತ್, ಉಪನಿಷತ್ ೫, ಶ್ಲೋಕ ೩
ಅರ್ಥ : ಮನುಷ್ಯನು ಬಂಧನದಲ್ಲಿರುವುದು ಅಥವಾ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವಲ್ಲಿ ಮನಸ್ಸೇ ಕಾರಣವಾಗಿರುತ್ತದೆ.
ಇದರಿಂದ ನಾವು ಮನಸ್ಸಿನ ಶಕ್ತಿಯನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂಬುದು ತಿಳಿಯುತ್ತದೆ. ನಾವು ಕೇವಲ ಯುದ್ಧದ ಬಗ್ಗೆ ಯೋಚಿಸಿ ಚಿಂತೆಗೀಡಾಗುತ್ತಿದ್ದರೆ, ’ಮುಂದೆ ಏನಾಗಬಹುದು ?’ ಎಂದು ಭಯಪಡುತ್ತಿದ್ದರೆ, ನಾವು ನಮ್ಮ ಮನಸ್ಸಿನ ಶಕ್ತಿಯನ್ನು ವ್ಯರ್ಥ ಮಾಡುತ್ತಿದ್ದೇವೆ ಎಂದರ್ಥ. ’ಯುದ್ಧದ ಸಂಕಟ ಎದುರಿಗಿದೆ’ ಎಂಬುದನ್ನು ಗಮನದಲ್ಲಿಟ್ಟುಕೊಂಡು ವಿವೇಕಬುದ್ಧಿಯನ್ನು ಜಾಗೃತವಾಗಿರಿಸಿ, ಆ ನಿಟ್ಟಿನಲ್ಲಿ ಅಗತ್ಯವಿರುವ ಪೂರ್ವಸಿದ್ಧತೆ ಹಾಗೂ ಕಠಿಣ ಕಾಲವನ್ನು ಧೈರ್ಯದಿಂದ ಎದುರಿಸಲು ಮನಸ್ಸನ್ನು ಸಿದ್ಧಗೊಳಿಸುತ್ತಿದ್ದರೆ, ನಾವು ಮನಸ್ಸಿನ ಶಕ್ತಿಯನ್ನು ಸರಿಯಾಗಿ ಬಳಸುತ್ತಿದ್ದೇವೆ. ಆದ್ದರಿಂದ, ಯುದ್ಧಕಾಲದಲ್ಲಿ ಮನಸ್ಸಿನ ಶಕ್ತಿಯನ್ನು ನಕಾರಾತ್ಮಕ ವಿಚಾರಗಳಿಗಾಗಿ ವ್ಯಯ ಮಾಡದೆ, ’ದೇವರು, ದೇಶ ಮತ್ತು ಧರ್ಮಕ್ಕಾಗಿ ನಾನು ಏನು ಮಾಡಬಲ್ಲೆ ?’ ಎಂದು ಯೋಚಿಸಿದರೆ ಆ ಶಕ್ತಿಯು ಸರಿಯಾದ ದಿಕ್ಕಿನಲ್ಲಿ ಬಳಕೆಯಾಗುತ್ತಿದೆ ಎಂದು ನಾವು ತಿಳಿಯಬಹುದು. ಈ ದೃಷ್ಟಿಯಿಂದ ಸಮಾಜದಲ್ಲಿ ಜಾಗೃತಿ ಮೂಡಿಸಿ ಜನರನ್ನು ಸಾಧನೆಗೆ ಪ್ರೇರೇಪಿಸುವುದು; ಸಮಾಜವನ್ನು ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಸಿದ್ಧಗೊಳಿಸುವುದು; ಎಲ್ಲಿ ಸಂಕಟವಿದೆಯೋ ಅಲ್ಲಿಗೆ ಧಾವಿಸಿ ಸಹಾಯ ಮಾಡುವುದು; ಇಂತಹ ಕಾರ್ಯಗಳನ್ನು ನಾವು ಮಾಡಬಹುದು. ಈ ಪ್ರತಿಕೂಲ ಕಾಲದಲ್ಲಿಯೂ ದೇಶ ಮತ್ತು ದೇಶವಾಸಿಗಳಿಗೆ ಅನುಕೂಲವಾಗಲಿ; ದೇಶದ ಗಡಿಯಲ್ಲಿರುವ ಸೈನಿಕರ ರಕ್ಷಣೆಯಾಗಲು ಯಜ್ಞ-ಯಾಗಾದಿಗಳಂತಹ ಆಧ್ಯಾತ್ಮಿಕ ಸ್ತರದ ಉಪಾಯ, ಸಮಷ್ಟಿ ಕಲ್ಯಾಣಕ್ಕಾಗಿ ನಿರಂತರ ಪ್ರಾರ್ಥನೆ ಮತ್ತು ನಾಮಜಪ ಮಾಡುವುದು, ಯುದ್ಧಕಾಲದಲ್ಲಿ ಜನರಿಗೆ ಆಧಾರ ನೀಡುವುದು ಹಾಗೂ ಯಾರದಾದರೂ ಮನೆಯಲ್ಲಿ ಏನಾದರೂ ಆಪತ್ತು ಎದುರಾದರೆ, ಅವರ ಮನೋಸ್ಥೈರ್ಯ ಕುಂದದಂತೆ ಅವರಿಗೆ ಆಧ್ಯಾತ್ಮಿಕ ದೃಷ್ಟಿಕೋನ ನೀಡಿ ಸ್ಥಿರವಾಗಿರಿಸುವುದು; ಇಂತಹ ವಿವಿಧ ಮಾಧ್ಯಮಗಳ ಮೂಲಕ ನಾವು ಸಾಧನಾನಿರತರಾಗಿದ್ದರೆ ಮನಸ್ಸಿನ ಶಕ್ತಿಯು ವ್ಯಯವಾಗದೆ ವೃದ್ಧಿಯಾಗುವುದು, ಇದರಲ್ಲಿ ಯಾವುದೇ ಸಂಶಯವಿಲ್ಲ.
– ಶ್ರೀ. ಯೋಗೇಶ ಜಲತಾರೆ, ಸಂಪಾದಕರು, ’ಸನಾತನ ಪ್ರಭಾತ’ ಮಾಧ್ಯಮ ಸಮೂಹ. (೨೮.೩.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !