
ಪ್ರಾರಂಭದಲ್ಲಿ ದೇವಸ್ಥಾನಗಳನ್ನು ನಿರ್ವಹಿಸಲು ಅರ್ಚಕರು ಮತ್ತು ಅವರ ಸಹಾಯಕರು ಮಾತ್ರ ಸಾಕಾಗುತ್ತಿದ್ದರು; ಆದರೆ ಆಧುನಿಕ ಕಾಲದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಧಾರ್ಮಿಕತೆಯ ಕಾರಣದಿಂದ, ಸಮಾಜದ ದೇವತೆಗಳ ಪ್ರತೀಕಗಳಾದ ಈ ದೇವಾಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜನಸಂದಣಿ ಸೇರುವುದು ಕಂಡುಬರುತ್ತದೆ. ಈ ದೇವಸ್ಥಾನಗಳಲ್ಲಿ ಭಕ್ತರು ಶ್ರದ್ಧೆಯಿಂದ ಬಂದು ದರ್ಶನ ಪಡೆಯುತ್ತಾರೆ. ದೊಡ್ಡ ಪ್ರಮಾಣದಲ್ಲಿ ದಾನಧರ್ಮವನ್ನೂ ಮಾಡುತ್ತಾರೆ. ಅನೇಕ ದೇವಾಲಯಗಳಲ್ಲಿ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಬಡವರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಗೋಶಾಲೆಗಳು ಮತ್ತು ವಿವಿಧ ರೀತಿಯ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಹೀಗಾಗಿ, ದೇವಾಲಯಗಳು ಕೇವಲ ಧಾರ್ಮಿಕ ಸ್ಥಳಗಳಾಗಿ ಉಳಿಯದೆ, ಅವು ಸಮಾಜವನ್ನು ಒಗ್ಗೂಡಿಸುವ ಮತ್ತು ಕಟ್ಟಿಹಾಕುವ ಕೇಂದ್ರಗಳಾಗಿವೆ. ಆಧುನಿಕ ಕಾಲದಲ್ಲಿ ದೇವಾಲಯದ ನಿರ್ವಹಣೆ ಸರಿಯಾಗಿ ನಡೆಯಲು ಕೆಲವು ವಿಷಯಗಳು ಮತ್ತು ನಿಯಮಗಳನ್ನು ಅನುಸರಿಸುವುದು ಅವಶ್ಯಕವಾಗಿದೆ. ದೊಡ್ಡ ಪ್ರಮಾಣದಲ್ಲಿ ಬರುವ ದಾನಧರ್ಮವನ್ನು ಸರಿಯಾಗಿ ವಿನಿಯೋಗಿಸುವುದು ಮತ್ತು ಅದರ ಸರಿಯಾದ ಲೆಕ್ಕಪತ್ರವನ್ನು ಇಡುವುದು ಸಹ ಅಗತ್ಯವಾಗಿದೆ.
ಮಂದಿರ ವಿಶ್ವಸ್ಥರ ಜವಾಬ್ದಾರಿ !
- ವಿಶ್ವಸ್ಥರು ದೇವಸ್ಥಾನದ ಆಡಳಿತವನ್ನು ಸೇವಕರಾಗಿ ನಿರ್ವಹಿಸಬೇಕು.
- ‘ದೇವಸ್ಥಾನದ ಮಾಲೀಕನು ಸ್ವತಃ ಭಗವಂತನೇ ಆಗಿದ್ದಾನೆ ಎಂಬುದನ್ನು ವಿಶ್ವಸ್ಥರು ಗಮನದಲ್ಲಿಡಬೇಕು.
- ದೇವಸ್ಥಾನಗಳ ಕುರಿತು ಕಾನೂನಿನ ಮಾಹಿತಿ ಇರಬೇಕು, ಇದಕ್ಕಾಗಿ ವಿಶ್ವಸ್ಥರು ‘ದೇವಸ್ಥಾನಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಅಧ್ಯಯನ ಮಾಡಬೇಕು. ದೇವಸ್ಥಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಘಟನೆಯ ಮಾಹಿತಿಯೂ ಧರ್ಮದರ್ಶಿಗಳಿಗೆ ಇರಬೇಕು.
– ಶ್ರೀ. ದಿಲೀಪ ದೇಶಮುಖ, ಮಾಜಿ ಧರ್ಮದಾಯ ಆಯುಕ್ತ
ದೇವಾಲಯಕ್ಕೆ ಬರುವ ಭಕ್ತರಿಗೆ ಸೌಕರ್ಯಗಳು ದೊರೆಯ ಬೇಕು. ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಉಂಟಾಗುವ ಅಪಾರ ಜನಸಂದಣಿಯನ್ನು ನಿಭಾಯಿಸಲು, ಜನಸಂದಣಿಯ ನಿರ್ವಹಣೆ ಸರಿಯಾಗಿ ಆಗುವುದು ಅವಶ್ಯಕವಾಗಿದೆ. ಈ ಎಲ್ಲ ಕಾರಣಗಳಿಂದಾಗಿ, ಪ್ರಸ್ತುತ ಭಾರತದಲ್ಲಿ ‘ದೇವಾಲಯ ನಿರ್ವಹಣೆಯು ಅತ್ಯಂತ ಮಹತ್ವದ ವಿಷಯವಾಗಿದೆ.
ಭಕ್ತರ ಜವಾಬ್ದಾರಿ !
- ದೇವಸ್ಥಾನದ ಆವರಣದಲ್ಲಿ ಅಲ್ಲಿನ ಪಾವಿತ್ರ್ಯವನ್ನು ಕಾಪಾಡುವುದು ಭಕ್ತರ ಕರ್ತವ್ಯವಾಗಿದೆ.
- ದೇವಸ್ಥಾನದಲ್ಲಿನ ಎಲ್ಲ ಆಚಾರ-ವಿಚಾರಗಳನ್ನು ಪಾಲಿಸಬೇಕು.
- ಹಬ್ಬ-ಉತ್ಸವಗಳ ಸಮಯದಲ್ಲಿ ದೇವಸ್ಥಾನದಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸೇವಾಭಾವದಿಂದ ಪಾಲ್ಗೊಳ್ಳಬೇಕು. ಧರ್ಮದಾನ ಮಾಡಬೇಕು.
- ಮುಂದಿನ ಪೀಳಿಗೆಗೆ ದೇವಸ್ಥಾನಗಳ ಪರಂಪರೆಯ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸಬೇಕು.
- ಚೈತನ್ಯ, ಶಕ್ತಿ, ಆನಂದ ಮತ್ತು ಶಾಂತಿಯನ್ನು ನೀಡುವ ದೇವಸ್ಥಾನ ಸಂಸ್ಕೃತಿಯನ್ನು ರಕ್ಷಿಸಲು ಪ್ರಯತ್ನಿಸಬೇಕು.
- ದೇವಸ್ಥಾನಗಳ ರಕ್ಷಣೆ ಮಾಡಿ ಧರ್ಮ ಕರ್ತವ್ಯವನ್ನು ಪಾಲಿಸಬೇಕು !
ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಂರಕ್ಷಿಸುವ ಕೇಂದ್ರಗಳೆಂದರೆ ದೇವಾಲಯಗಳು ! ಇದರಿಂದಾಗಿಯೇ, ‘ಧಾರ್ಮಿಕ ಕಾರ್ಯವು ಉದ್ದೇಶವಾಗಿರದೆ, ಅದು ಸಮಾಜವನ್ನು ಒಗ್ಗೂಡಿಸಿ ಕಟ್ಟಿಹಾಕುವ ಸಾಧನವಾಗಿದೆ ಎಂದು ಪರಿಗಣಿಸಬೇಕಾಗುತ್ತದೆ. ದೇವಾಲಯದ ನಿರ್ವಹಣೆಯು ಸರ್ವಸಮಾವೇಶಕ ಪ್ರಕ್ರಿಯೆಯಾಗಿದೆ. ಇದು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿದೆ. ಈ ಕಾರಣದಿಂದ ದೇವಾಲಯಗಳು ಜೀವನದ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿವೆ.
– ಡಾ. ಮೇಧಾ ಕಾನೇಟ್ಕರ್, ಪ್ರಾಧ್ಯಾಪಕಿ, ಸಿ.ಪಿ. ಬೇರಾರ್ ಮಹಾವಿದ್ಯಾಲಯ, ನಾಗಪುರ (ಸೌಜನ್ಯ: ದೀಪಾವಳಿ, ಮಂದಿರ ವಿಶೇಷಾಂಕ ೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !