ಇರಾನ್ ಒಪ್ಪಂದ ಮಾಡಿಕೊಳ್ಳದಿದ್ದರೆ ಮತ್ತಷ್ಟು ದಾಳಿ ಮಾಡುವ ಎಚ್ಚರಿಕೆ ನೀಡಿದ ಟ್ರಂಪ್

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಸೈನ್ಯವು ಕದನ ವಿರಾಮವನ್ನು ಉಲ್ಲಂಘಿಸಿ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ ನಡೆಸಿದೆ, ಎಂದು ಇರಾನ್ ಸರಕಾರಿ ಮಾಧ್ಯಮ ‘ಪ್ರೆಸ್ ಟಿವಿ’ ವರದಿ ಮಾಡಿದೆ.
‘ಪ್ರೆಸ್ ಟಿವಿ’ಯ ಪ್ರಕಾರ, ಅಮೆರಿಕದ ಸೈನ್ಯವು ಜಾಸ್ಕ್ ಸಮೀಪದ ಇರಾನಿನ ಕಡಲ ಗಡಿಯಿಂದ ಹಾರ್ಮುಜ್ ಜಲಸಂಧಿಯ ಕಡೆಗೆ ಹೋಗುತ್ತಿದ್ದ ತೈಲ ಟ್ಯಾಂಕರ್ ಅನ್ನು ಗುರಿಯಾಗಿಸಿದೆ ಎಂದು ಖಾತಮ್ ಅಲ್-ಅಂಬಿಯಾ ಪ್ರಧಾನ ಕಚೇರಿಯ ವಕ್ತಾರರು ತಿಳಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡುತ್ತಾ, ‘ಒಂದು ವೇಳೆ ಇರಾನ್ ಒಪ್ಪಂದ ಮಾಡಿಕೊಳ್ಳದಿದ್ದರೆ, ನಾವು ಇನ್ನೂ ಹೆಚ್ಚಿನ ದಾಳಿ ಮಾಡುತ್ತೇವೆ’, ಎಂದು ಗುಡುಗಿದ್ದಾರೆ. ಇನ್ನೊಂದೆಡೆ, ಟ್ರಂಪ್ ಅವರು ‘ಇರಾನ್ ಅಮೆರಿಕದ ಯುದ್ಧ ನೌಕೆಗಳ ಮೇಲೆ ದಾಳಿ ಮಾಡಿದೆ’ ಎಂದು ಆರೋಪಿಸಿದ್ದಾರೆ. ಇದಾದ ನಂತರ ಎರಡೂ ದೇಶಗಳ ನಡುವೆ ಗುಂಡಿನ ಚಕಮಕಿ ನಡೆಯಿತು ಮತ್ತು ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ ಹಾಗೂ ಅವರ ಅನೇಕ ಸಣ್ಣ ಪುಟ್ಟ ನೌಕೆಗಳನ್ನು ಮುಳುಗಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಇರಾನ್‌ಗೆ ಪರಮಾಣು ಬಾಂಬ್ ಹೊಂದುವ ಹಕ್ಕನ್ನು ನಾವು ನೀಡುವುದಿಲ್ಲ ಮತ್ತು ಇರಾನ್ ಕೂಡ ಈ ಬಗ್ಗೆ ಸಹಮತಿ ವ್ಯಕ್ತಪಡಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ಹಾರ್ಮುಜ್‌ನಲ್ಲಿ ಸಿಲುಕಿರುವ ೧,೫೦೦ ನೌಕೆ!
ವಿಶ್ವಸಂಸ್ಥೆಯ ಕಡಲ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್ಸೆನಿಯೊ ಡೊಮಿಂಗಜ್ ಅವರು ಹಾರ್ಮುಜ್ ಬಿಕ್ಕಟ್ಟಿನಿಂದಾಗಿ ಕೊಲ್ಲಿ ಪ್ರದೇಶದಲ್ಲಿ ಅಂದಾಜು ೧, ೫೦೦ ನೌಕೆಗಳು ಸಿಲುಕಿಕೊಂಡಿವೆ ಎಂದು ತಿಳಿಸಿದ್ದಾರೆ. ಈ ನೌಕೆಗಳ ಜೊತೆಗೆ ಸುಮಾರು ೨೦,೦೦೦ ಸಿಬ್ಬಂದಿಗಳು ಅಂದರೆ ನಾವಿಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ