
೧. ಆಶ್ರಮದ ಅನೇಕ ಸೇವೆಗಳನ್ನು ಮಾಡಿದ್ದರಿಂದ ದಣಿಯುವುದು ಮತ್ತು ‘ಪ.ಪೂ. ಡಾಕ್ಟರರು ಇಷ್ಟೆಲ್ಲ ಹೇಗೆ ನಿರ್ವಹಿಸುತ್ತಿರಬಹುದು ?’, ಎನ್ನುವ ಪ್ರಶ್ನೆ ಬರುವುದು
ಗೋವಾದ ಫೋಂಡಾದ ಸುಖ ಸಾಗರ ಆಶ್ರಮದಲ್ಲಿದ್ದಾಗ ದೈನಿಕ ‘ಸನಾತನ ಪ್ರಭಾತ’ದ ಎಲ್ಲ ಕಾರ್ಯ ಕಲಾಪಗಳನ್ನು ನಿರ್ವಹಿಸುವುದು, ಆಶ್ರಮದ ವ್ಯವಸ್ಥಾಪನೆ ಹಾಗೂ ಪ್ರಸಾರ ಕಾರ್ಯದಲ್ಲಿ ಬರುವ ಅಡಚಣೆಗಳನ್ನು ನಿವಾರಿಸುವುದು ಈ ಎಲ್ಲ ಸೇವೆಗಳು ಪೂರ್ಣಗೊಳ್ಳುವ ವರೆಗೆ ಮತ್ತು ಅದರಲ್ಲಿ ನಿತ್ಯವೂ ಎದುರಾಗುವ ಹೊಸ ಸಮಸ್ಯೆಗಳು ಬಗೆ ಹರಿಯುವಷ್ಟರಲ್ಲಿ ನಾನು ದಣಿದು ಹೋಗುತ್ತಿದ್ದೆ. ನಾನು ಎಷ್ಟು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೆನೋ ಅಷ್ಟೇ ಹೊಸ ಸಮಸ್ಯೆಗಳು ಎದುರಾಗುತ್ತಿದ್ದವು. ಇದರಿಂದಾಗಿ ನನ್ನ ಮನಸ್ಸಿನ ಸ್ಥಿತಿ ಬಹಳ ಹದಗೆಟ್ಟು ಅದು ಶಾರೀರಿಕ ಸ್ತರದಲ್ಲಿಯೂ ವ್ಯಕ್ತವಾಗುತ್ತಿತ್ತು. ನಾನು ಸತತವಾಗಿ ನಾಮಜಪ ಮಾಡಲು ಪ್ರಯತ್ನಿಸುತ್ತಿದ್ದೆ. ಆಗ ನನ್ನ ಮನಸ್ಸಿನಲ್ಲಿ ‘ಪ.ಪೂ. ಡಾಕ್ಟರರು ಇಷ್ಟೆಲ್ಲ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿರಬಹುದು ?’, ಎನ್ನುವ ಪ್ರಶ್ನೆ ಬಂದಿತು.

೨. ಪ.ಪೂ. ಡಾಕ್ಟರರಿಗೆ ‘ಇಷ್ಟೆಲ್ಲ ಕಾರ್ಯದ ವ್ಯಾಪ್ತಿ ಇದ್ದರೂ ಅವರ ಮನಸ್ಥಿತಿ ಹೇಗಿರುತ್ತದೆ ?’, ಎಂದು ಕೇಳುವುದು
ನನ್ನ ಧಾವಂತದ ಬಗ್ಗೆ ಯೋಚಿಸಿದಾಗ ಗಮನಕ್ಕೆ ಬಂದ ಅಂಶವೆಂದರೆ ‘ನಾನು ಇವುಗಳಲ್ಲಿನ ಅನೇಕ ವಿಷಯಗಳನ್ನು ಅಂತಿಮಗೊಳಿಸಲು ಪ.ಪೂ. ಡಾಕ್ಟರರ ಬಳಿ ಹೋಗಿ ಕೇಳುತ್ತೇನೆ. ಅವರು ಮಾತ್ರ ಆ ಎಲ್ಲದಕ್ಕೂ ಬಹಳ ಶಾಂತವಾಗಿಯೇ ಉತ್ತರ ಕೊಡುತ್ತಾರೆ’. ನಿತ್ಯವೂ ಎದುರಾಗುವ ಹೊಸ ಸಮಸ್ಯೆಗಳಿಂದಾಗಿ ‘ಅವರ ಮನಸ್ಥಿತಿ ಹೇಗಿರಬಹುದು ?’, ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು. ನಾನು ಪ.ಪೂ. ಡಾಕ್ಟರರನ್ನು ಕೇಳಿದೆ, “ಇದೆಲ್ಲವನ್ನೂ ಮಾಡುವಾಗ ನನ್ನ ಮನಸ್ಥಿತಿ ಬಹಳ ಅಸ್ವಸ್ಥವಾಗಿರುತ್ತದೆ, ಹಾಗಾದರೆ ನಿಮ್ಮ ಮನಸ್ಥಿತಿ ಹೇಗಿರುತ್ತದೆ ? ನೀವು ಯಾವ ಭಾವದಲ್ಲಿರುತ್ತೀರಿ ? ನಿಮ್ಮ ಬಳಿಯಂತೂ ನನಗಿಂತಲೂ ಹೆಚ್ಚಿನ ಜವಾಬ್ದಾರಿಗಳಿವೆ.’ ಆಗ ಪ.ಪೂ. ಡಾಕ್ಟರರು ಹೇಳಿದರು, “ನಾನು ಇದ್ದೇನೆ’ ಎಂಬ ಅರಿವಿನ ಸ್ಥಿತಿಯಲ್ಲಿರುತ್ತೇನೆ.” (‘ನಾನು ಇದ್ದೇನೆ’ ಎಂಬ ಈ ಅರಿವು ಎಂದರೆ ‘ವಿಶುದ್ಧ ಅಹಂನ’ ಸ್ಥಿತಿಯಾಗಿದೆ. ಸಾಮಾನ್ಯ ವ್ಯಕ್ತಿಯು ಜಾಗೃತ ಅವಸ್ಥೆಯಲ್ಲಿ ‘ನಾನು ಇದನ್ನು ಮಾಡುತ್ತೇನೆ’, ನಾನು ಅದನ್ನು ಮಾಡುತ್ತೇನೆ’ ಎಂಬ ಮಾಯೆಯಲ್ಲಿನ ಅನೇಕ ಅಹಂಕಾರದ ಅರಿವಿನೊಂದಿಗೆ ಬದುಕುತ್ತಿರುತ್ತಾನೆ. ವಿಶುದ್ಧ ಅಹಂನ ಸ್ಥಿತಿಯಲ್ಲಿರುವ ಸಂತರಲ್ಲಿ ಜಾಗೃತ ಅವಸ್ಥೆಯಲ್ಲಿ ಈ ಅರಿವುಗಳು ಇರುವುದಿಲ್ಲ. ಇಂತಹ ಸಂತರು ವ್ಯಾವಹಾರಿಕ ಮಟ್ಟದಲ್ಲಿ ಅಗತ್ಯವಿದ್ದಾಗ ಮಾತ್ರ ಆ ಅರಿವುಗಳನ್ನು ಕಾರ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುತ್ತಾರೆ.)ಇಂದು ಇದನ್ನು ಬರೆಯುವಾಗ ‘ಸಂತರಿಗೆ ನಾನು ಮೇಲಿನಂತೆ ಪ್ರಶ್ನೆ ಕೇಳುವುದು ಎಷ್ಟು ಅಜ್ಞಾನದ ಸಂಕೇತವಾಗಿತ್ತು !’,ಎನ್ನುವುದು ನನ್ನ ಗಮನಕ್ಕೆ ಬಂದಿತು.
೩. ಪ.ಪೂ. ಡಾಕ್ಟರರು ಸಂತರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಸಾಧಕರಿಗೆ ಮನಮುಕ್ತವಾಗಿ ಹೇಳುವುದು
ನಾಶಿಕದ ಸಂತರಾದ ಪೂ. ಪತ್ಕಿ ಮಹರಾಜರಿಗೆ ಪ.ಪೂ. ಡಾಕ್ಟರ, ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ಮತ್ತು ಪ.ಪೂ. ಬೇಜನ ದೇಸಾಯಿ ಅವರೊಂದಿಗೆ ಉತ್ತಮ ಪರಿಚಯವಿತ್ತು. ಹಿಂದೆ ಪ.ಪೂ. ಡಾಕ್ಟರರು ಪ್ರಸಾರ ಕಾರ್ಯಕ್ಕೆ ಅಥವಾ ಪ.ಪೂ ಬಾಬಾರವರ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ದಾರಿಯಲ್ಲಿ ನಾಶಿಕದ ಪೂ. ಪತ್ಕಿ ಮಹಾರಾಜ ಅವರ ಮನೆಯಲ್ಲಿ ಉಳಿಯುತ್ತಿದ್ದರು.
೩ ಅ. ಒಮ್ಮೆ ಪ.ಪೂ. ಬೇಜನ್ ದೇಸಾಯಿ ಅವರ ಒಂದು ಸಮಾರಂಭಕ್ಕಾಗಿ ಪ.ಪೂ. ಡಾಕ್ಟರರು ನಾಶಿಕಕ್ಕೆ ಹೋಗಿದ್ದರು. ಸಮಾರಂಭ ಮುಗಿದ ನಂತರ ಪ.ಪೂ. ಬೇಜನ್ ದೇಸಾಯಿ, ಪ.ಪೂ. ಡಾಕ್ಟರ್ ಮತ್ತು ಪೂ. ಪತ್ಕಿ ಮಹಾರಾಜರು ಬೇಜನ್ ದೇಸಾಯಿ ಅವರ ಮನೆಗೆ ಹೋದರು. ಆಗ ಮಧ್ಯಾಹ್ನ ಕಳೆದಿತ್ತು. ಎಲ್ಲರೂ ದಣಿದಿದ್ದರು. ಪ.ಪೂ. ಬೇಜನ ದೇಸಾಯಿ ಅವರು ಉಳಿದ ಇಬ್ಬರಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಮನೆಗೆ ತಲುಪಿದ ತಕ್ಷಣ ಪ.ಪೂ. ದೇಸಾಯಿ ಅವರು ಸುಖಾಸನದಲ್ಲಿ ಕುಳಿತು, ತಮ್ಮ ಮುಂದಿದ್ದ ಮೇಜಿನ ಮೇಲೆ ಕಾಲುಗಳನ್ನು ಇರಿಸಿದರು. ಆಗ ತಕ್ಷಣ ಪೂ. ಪತ್ಕಿ ಮಹಾರಾಜರು ಅಲ್ಲಿಗೆ ಹೋಗಿ ಹತ್ತಿರದ ಆಸನದಲ್ಲಿ ಕುಳಿತು ಪ.ಪೂ. ಬೇಜನ್ ದೇಸಾಯಿ ಅವರ ಕಾಲುಗಳನ್ನು ತಮ್ಮ ಮಂಡಿಯ ಮೇಲೆ ಇಟ್ಟುಕೊಂಡು ಒತ್ತಲು ಆರಂಭಿಸಿದರು. ಆಗ ಪ.ಪೂ. ಡಾಕ್ಟರರು ತಕ್ಷಣ ನುಡಿದರು, “ಇದು ನಿಮಗೆ ಹೇಗೆ ಹೊಳೆಯುತ್ತದೆ ? ನನಗೆ ಏಕೆ ಹೊಳೆಯುವುದಿಲ್ಲ ?” ಆಗ ಪೂ. ಪತ್ಕಿ ಮಹಾರಾಜರು ಹೇಳಿದರು, ‘ಅದು ಹೃದಯದಿಂದ ಬರಬೇಕು”. ಈ ಎಲ್ಲ ಪ್ರಸಂಗದ ಚಿತ್ರೀಕರಣವಾಯಿತು.
೩ ಆ. ಪ.ಪೂ. ಡಾಕ್ಟರರು ನಾಶಿಕನಿಂದ ಹಿಂದಿರುಗಿದ ನಂತರ ನನಗೆ ಈ ಪ್ರಸಂಗವನ್ನು ಹೇಳಿದರು. ಮುಂದೆ ಸುಮಾರು ೧೦-೧೫ ವರ್ಷಗಳ ನಂತರ ಪೂ. ಪತ್ಕಿ ಮಹಾರಾಜರು ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಬಂದರು. ಆಗ ಪ.ಪೂ. ಡಾಕ್ಟರರು ಮೇಲೆ ಉಲ್ಲೇಖಿಸಿದ ಪ್ರಸಂಗದ ಚಿತ್ರೀಕರಣವನ್ನು ಅವರಿಗೆ ಉಡುಗೊರೆಯಾಗಿ ನೀಡಿದರು. ‘ಮೇಲೆ ನಡೆದ ಪ್ರಸಂಗ ಮತ್ತು ಆ ಪ್ರಸಂಗದ ಚಿತ್ರೀಕರಣವನ್ನು ತಾವೇ ಹೇಳುವುದು, ಅಷ್ಟೇ ಅಲ್ಲ, ಅದರ ಚಿತ್ರೀಕರಣವನ್ನು ಆ ವ್ಯಕ್ತಿಗೆ ಉಡುಗೊರೆಯಾಗಿ ಕೊಡುವುದು’, ಇದರಿಂದ ಪ.ಪೂ.ಡಾಕ್ಟರರ ಮನಸ್ಸಿನ ನಿರ್ಮಲತೆಯು ಸ್ಪಷ್ಟವಾಗಿ ಕಂಡುಬರುತ್ತದೆ.
– ಆಧುನಿಕ ವೈದ್ಯರು ಡಾ. ದುರ್ಗೇಶ ಸಾಮಂತ (ವಯಸ್ಸು ೬೫ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ