ಹಿಂದೂಗಳ ನರಮೇಧ ನಡೆಸುವ ಪಾಕಿಸ್ತಾನದ ಬೊಬ್ಬೆ!

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತ ಸರಕಾರವು ಕಾಶ್ಮೀರದಲ್ಲಿ ಜನಸಂಖ್ಯಾಶಾಸ್ತ್ರೀಯ ಬದಲಾವಣೆಯನ್ನು ಮಾತ್ರ ಮಾಡುತ್ತಿಲ್ಲ, ಜೊತೆಗೆ ಉರ್ದು ಭಾಷೆ ಮತ್ತು ಮುಸ್ಲಿಮರ ಸಂಸ್ಕೃತಿಯನ್ನೂ ಕೊನೆಗೊಳಿಸಲು ಪ್ರಯತ್ನಿಸುತ್ತಿದೆ. ಉರ್ದು ಭಾಷೆಯು ಇಡೀ ಭಾರತೀಯ ಉಪಖಂಡದಲ್ಲಿ ಮತ್ತು ವಿಶೇಷವಾಗಿ ಮುಸ್ಲಿಮರ ಹಂಚಿಕೆಯ ಗುರುತಾಗಿದೆ. ಭಾರತವು ಇದರ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಜಗತ್ತು ಈ ಬಗ್ಗೆ ಗಮನ ಹರಿಸಬೇಕು. ಪಾಕಿಸ್ತಾನವು ಯಾವಾಗಲೂ ಇದಕ್ಕಾಗಿ ಧ್ವನಿ ಎತ್ತುತ್ತಲೇ ಇರುತ್ತದೆ; ಆದರೆ ಜಗತ್ತು ಕೂಡ ಇದರ ಬಗ್ಗೆ ಮೌನವಾಗಿರುವಂತಿಲ್ಲ. ಕಾಶ್ಮೀರದಲ್ಲಿ ಭಾರತದ ಹಸ್ತಕ್ಷೇಪ ಕಾನೂನುಬಾಹಿರವಾಗಿದೆ ಎಂದು ಪಾಕಿಸ್ತಾನ ಮತ್ತೊಮ್ಮೆ ಆರೋಪಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹಿರ್ ಅಂದ್ರಾಬಿ ಅವರು ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ಕಾಶ್ಮೀರದ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಅವರು ಮೇಲಿನ ಉತ್ತರ ನೀಡಿದ್ದಾರೆ.
ಮುಸಲ್ಮಾನರು ಹಂದಿಗಳಂತೆ ಮಕ್ಕಳನ್ನು ಹೆರುತ್ತಾರೆ ಎಂಬ ಭಾಜಪ ನಾಯಕಿಯ ಹೇಳಿಕೆಗೆ ಖಂಡನೆ!
ಉತ್ತರ ಪ್ರದೇಶದ ಭಾಜಪ ನಾಯಕಿ ಗೀತಾ ತ್ಯಾಗಿ ಅವರ ‘ಮುಸಲ್ಮಾನರು ಜಿಹಾದ್ ಮಾಡುತ್ತಾರೆ ಮತ್ತು ಹಂದಿಗಳಂತೆ ಮಕ್ಕಳನ್ನು ಹೆರುತ್ತಾರೆ’ ಎಂಬ ಕಥಿತ ಹೇಳಿಕೆಯ ಕುರಿತು ಪತ್ರಕರ್ತರು ತಾಹಿರ್ ಅವರನ್ನು ಪ್ರಶ್ನಿಸಿದಾಗ, ಇಂತಹ ಪದಗಳ ಬಳಕೆ ಅತ್ಯಂತ ತಪ್ಪು ಮತ್ತು ಖಂಡನೀಯ ಎಂದರು. ಗೀತಾ ತ್ಯಾಗಿ ಅವರು ಭಾರತದ ಪ್ರಸ್ತುತ ಆಡಳಿತ ಪಕ್ಷ ಭಾಜಪಗೆ ಸೇರಿದವರಾಗಿದ್ದಾರೆ. ಈ ಹೇಳಿಕೆ ಅವರದ್ದು ಮಾತ್ರವಲ್ಲ, ಬದಲಾಗಿ ಭಾಜಪ ಮತ್ತು ಸಂಘದ ಮುಸ್ಲಿಮರ ಬಗೆಗಿನ ವಿಚಾರಗಳನ್ನು ತೋರಿಸುತ್ತದೆ. ಇದು ಸ್ಪಷ್ಟವಾಗಿ ದ್ವೇಷದ ಭಾಷಣವಾಗಿದೆ ಮತ್ತು ಭಾರತೀಯ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲು ಜಾಗತಿಕ ಸಂಸ್ಥೆಗಳು ಮುಂದೆ ಬರಬೇಕು.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ